DIGITAL NAGARIK PROGRAMME 2025-26 ರಾಜ್ಯದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಡಿಜಿಟಲ್ ನಾಗರಿಕ” ಕಾರ್ಯಕ್ರಮ ಅನುಷ್ಠಾನ.
DIGITAL NAGARIK PROGRAMME 2025-26: ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಸರ್ಕಾರದ ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ (KITS), ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು Meta ಸಂಸ್ಥೆಯ ಸಹಯೋಗದೊಂದಿಗೆ ಸುರಕ್ಷಿತ ಡಿಜಿಟಲ್ ವಾತಾವರಣವನ್ನು ಕಲ್ಪಿಸಲು 2024-25 ಮತ್ತು 2025-26ನೇ ಸಾಲಿನಲ್ಲಿ 01 ಲಕ್ಷ ಶಿಕ್ಷಕರು ಮತ್ತು 10 ಲಕ್ಷ ವಿದ್ಯಾರ್ಥಿಗಳನ್ನು ತಲುಪಲು “Digital Nagrik” ಎಂಬ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಉದ್ದೇಶಿಸಿದೆ.
ಉಲ್ಲೇಖ 2 ರ ಅನ್ವಯ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ 6 ರಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮತ್ತು ಬೋಧಿಸುತ್ತಿರುವ ಶಿಕ್ಷಕರಿಗೆ ಸುರಕ್ಷಿತ ಇಂಟರ್ನೆಟ್ ಬಳಕೆ, ಸೈಬರ್ ಸುರಕ್ಷತಾ ನಿಯಮಗಳು, ಆನ್ ಲೈನ್ ಶಿಷ್ಟಾಚಾರ, ಡಿಜಿಟಲ್ ಹಕ್ಕು- ಹೊಣೆಗಾರಿಕೆ ಹಾಗೂ ಮಾಹಿತಿ ಗೌಪ್ಯತೆ ಕುರಿತು ತರಬೇತಿ ನೀಡುವ ಉದ್ದೇಶ ಹೊಂದಿದ್ದು 2024-25 ನೇ ಸಾಲಿನಲ್ಲಿ ಬೆಂಗಳೂರು (ಉತ್ತರ, ದಕ್ಷಿಣ ಮತ್ತು ಗ್ರಾಮಾಂತರ), ಮೈಸೂರು, ಬೆಳಗಾವಿ, ದಕ್ಷಿಣ ಕನ್ನಡ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಸುಮಾರು 12 ಸಾವಿರ ಶಿಕ್ಷಕರಿಗೆ ಹಾಗೂ 85 ಸಾವಿರ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಲಾಗಿರುತ್ತದೆ.
ಪ್ರಸ್ತುತ 2025-26 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಸದರಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಹಾಗೂ ಸೂಕ್ತ ಮೇಲ್ವಿಚಾರಣೆ ಮಾಡಲು DIKSHA ನೋಡಲ್ ಅಧಿಕಾರಿಗಳನ್ನು “Digital Nagrik” ಕಾರ್ಯಕ್ರಮಕ್ಕೆ ನೋಡಲ್ ಅಧಿಕಾರಿಯನ್ನಾಗಿ ನೇಮಿಸಲು ತಿಳಿಸಿದೆ. ಸದರಿ ತರಬೇತಿ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ 6 ರಿಂದ 10 ನೇ ತರಗತಿ ಹಾಗೂ ಪಿಯುಸಿ, ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಅನುವಾಗುವಂತೆ Diksha Platform & MIP (Micro Improvement Programme) ಯಲ್ಲಿ ಅಳವಡಿಸಲಾಗಿದೆ.
DIKSHA ಮೂಲಕ ಸದರಿ MIP ಲಿಂಕ್ ಅನ್ನು ಬಳಸಿ Course ಪೂರ್ಣಗೊಳಿಸಿ Certificate ಪಡೆಯುವ ವಿಧಾನ ಹಾಗೂ ಈ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ವಹಿಸಬೇಕಾದ ಕ್ರಮಗಳ ಬಗ್ಗೆ ಎಲ್ಲಾ 6 ರಿಂದ 10 ನೇ ತರಗತಿಯ ಶಾಲಾ ಮುಖ್ಯ ಶಿಕ್ಷಕರು ಶಿಕ್ಷಕರು ಹಾಗೂ ಇತರೆ ಎಲ್ಲಾ ಭಾಗೀದಾರರಿಗೆ ತಿಳಿಸಲು ಮತ್ತು ಕಾರ್ಯಕ್ರಮದ Launch ಅನ್ನು ದಿನಾಂಕ 15.11.2025 ರ ಶನಿವಾರ 12.00 ಗಂಟೆಯಿಂದ 1.00 ಗಂಟೆಯವರೆಗೆ You Tube Live ಕಾರ್ಯಕ್ರಮ ಮುಖೇನ ನಡೆಸಲಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಲು ತಿಳಿಸಿದೆ. (ಕಾರ್ಯಕ್ರಮ ಅನುಷ್ಠಾನಿಸುವ ವಿಧಾನ ವುಳ್ಳ Flow chart ಅನ್ನು ಇದರೊಂದಿಗೆ ಅನುಬಂಧಿಸಿದೆ)
You Tube Live ಕಾರ್ಯಕ್ರಮದ ಲಿಂಕ್ ಡಯಟ್ ಗಳ ಇ-ಮೇಲ್ ಗೆ ಕಳುಹಿಸಲಾಗುವುದು ಹಾಗೂ ಕಾರ್ಯಕ್ರಮದ ನಂತರ Digital Nagrik Course link ನ್ನು ಡಯಟ್ ಗಳ ಇ-ಮೇಲ್ ಗೆ Share ಮಾಡಲಾಗುತ್ತಿದ್ದು ಇದನ್ನು ಬಳಸಿಕೊಂಡು ಜಿಲೆಯಲ್ಲಿನ 6 ರಿಂದ 10 ನೇ ತರಗತಿ ಹಾಗೂ ಪಿಯುಸಿ ಶಿಕ್ಷಕರು ಸುರಕ್ಷಿತ ಇಂಟರ್ನೆಟ್ ಬಳಕೆ, ಸೈಬರ್ ಸುರಕ್ಷತಾ ನಿಯಮಗಳು, ಆನ್ ಲೈನ್ ಶಿಷ್ಠಾಚಾರ ಕುರಿತು ಅರಿವುವನ್ನು ಪಡೆದುಕೊಂಡು ನಂತರ ಈ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವಂತೆ ರಾಜ್ಯದ ಎಲ್ಲಾ ಡಯಟ್ ಪ್ರಾಂಶುಪಾಲರಿಗೆ ಹಾಗೂ “Digital Nagrik” ಕಾರ್ಯಕ್ರಮದ ನೋಡಲ್ ಅಧಿಕಾರಿಗಳಿಗೆ ಸೂಚಿಸಿದೆ.
CLICK HERE TO DOWNLOAD MEMORANDUM WITH FLOW CHART