Digital System: ಏಕೋಪಾಧ್ಯಾಯ ಶಾಲೆಗಳಲ್ಲಿ 2,23,142 ವಿದ್ಯಾರ್ಥಿಗಳು|ಪ್ರತಿ ಶಾಲೆಗೆ ಸರಾಸರಿ 6 ಶಿಕ್ಷಕರು, 157 ಮಕ್ಕಳು

Digital System: ಏಕೋಪಾಧ್ಯಾಯ ಶಾಲೆಗಳಲ್ಲಿ 2,23,142 ವಿದ್ಯಾರ್ಥಿಗಳು|ಪ್ರತಿ ಶಾಲೆಗೆ ಸರಾಸರಿ 6 ಶಿಕ್ಷಕರು, 157 ಮಕ್ಕಳು:

Digital System: ಏಕೋಪಾಧ್ಯಾಯ ಶಾಲೆಗಳಲ್ಲಿ 2,23,142 ವಿದ್ಯಾರ್ಥಿಗಳು|ಪ್ರತಿ ಶಾಲೆಗೆ ಸರಾಸರಿ 6 ಶಿಕ್ಷಕರು, 157 ಮಕ್ಕಳು: ದೇಶಾದ್ಯಂತ ಏಕೋಪಾಧ್ಯಾಯ ಶಾಲೆಗಳ ಸಂಖ್ಯೆಯಲ್ಲಿ ಕರ್ನಾಟಕದ ಪಾಲು ದೊಡ್ಡದಿದೆ. ಅಂತೆಯೇ ಪ್ರತಿ ಶಾಲೆಯಲ್ಲಿರುವ ಶಿಕ್ಷಕರ ಸರಾಸರಿಯನ್ನು ಪರಿಗಣಿಸಿದರೂ ರಾಜ್ಯವು ಹಿಂದುಳಿದಿರುವುದು ಕಂಡುಬರುತ್ತದೆ. 2024-25ನೇ ಸಾಲಿನ ಕೇಂದ್ರ ಸರ್ಕಾರದ ಏಕೀಕೃತ ಜಿಲ್ಲಾ ಮಾಹಿತಿಯಲ್ಲಿ (ಯುಡೈಸ್ ಪ್ಲಸ್) ಈ ಅಂಶ ದಾಖಲಾಗಿದೆ. ಇದೇ ಮೊದಲ ಬಾರಿಗೆ ರಾಷ್ಟ್ರೀಯ ಶಿಕ್ಷಣ ನೀತಿಯನ್ವಯ 5+3+3+4 ವಿಂಗಡಣೆಗೆ ಅನುಗುಣವಾಗಿ ಅಂಕಿ-ಅಂಶಗಳನ್ನು ಒದಗಿಸಲಾಗಿದೆ.

ರಾಜ್ಯದ ಒಟ್ಟಾರೆ 74,859 ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರ ಸಂಖ್ಯೆ 4,52,602 ໙໖. 2 1,17,80,251 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಒಟ್ಟಾರೆಯಾಗಿ ಶಿಕ್ಷಕರು- ವಿದ್ಯಾರ್ಥಿಗಳ ಅನುಪಾತವು 1:26 ಆಗಿದೆ. ಬುನಾದಿ, ಪೂರ್ವ ಸಿದ್ಧತೆ, ಪ್ರಾಥಮಿಕ ಹಾಗೂ ಪ್ರೌಢ ಹಂತದಲ್ಲಿ ಕ್ರಮವಾಗಿ 9:1, 13:1, 17:1, 21:1 ಆಗಿದೆ.

ಪ್ರತಿ ಶಾಲೆಗೆ ಸರಾಸರಿ ಶಿಕ್ಷಕರ ಸಂಖ್ಯೆ 6 ಆಗಿದೆ ಎಂದು ಅಂಕಿ-ಅಂಶಗಳು ತಿಳಿಸುತ್ತವೆ.

ಈ ವಿಚಾರದಲ್ಲಿ ಪ್ರತಿ ಶಾಲೆಗೆ 48 ಶಿಕ್ಷಕರೊಂದಿಗೆ ಚಂಡಿಗಢ ಮೊದಲ ಸ್ಥಾನದಲ್ಲಿದೆ. 29 ಶಿಕ್ಷಕರಿರುವ ದೆಹಲಿ 2ನೇ ಸ್ಥಾನ, ನೆರೆಯ ಕೇರಳದಲ್ಲಿ 19 ಶಿಕ್ಷಕರಿದ್ದು ಮೂರನೇ ಸ್ಥಾನದಲ್ಲಿದೆ. ಆದರೆ, 4 ಶಿಕ್ಷಕರಿರುವ ಮೇಘಾಲಯ, 5 ಶಿಕ್ಷಕರಿರುವ ಜಾರ್ಖಂಡ್, ಚತ್ತೀಸ್‌ಗಡ್ ನಂತರದಲ್ಲಿ ಸ್ಥಾನದಲ್ಲಿದ್ದರೆ, ಸರಾಸರಿ 6 ಶಿಕ್ಷಕರ ಕರ್ನಾಟಕ ಕೊನೆಯಿಂದ ಮೂರನೇ ಸ್ಥಾನದಲ್ಲಿದೆ.

ರಾಜ್ಯದಲ್ಲಿ ಒಂದು ಶಾಲೆಯ ಸರಾಸರಿ ವಿದ್ಯಾರ್ಥಿಗಳ ಸಂಖ್ಯೆ 157 ಆಗಿದ್ದು, ಶೂನ್ಯ ದಾಖಲಾತಿಯ 270 ಶಾಲೆಗಳಿವೆ. ಆದರೆ, ಇವುಗಳಲ್ಲಿ 308 ಶಿಕ್ಷಕರಿದ್ದಾರೆ. ಒಬ್ಬರೇ ಶಿಕ್ಷಕರಿರುವ ಶಾಲೆಗಳ ಸಂಖ್ಯೆ 7,349 ಆಗಿದ್ದು, ಇಂಥ ಶಾಲೆಗಳಲ್ಲಿ ಒಟ್ಟಾರೆಯಾಗಿ 2,23,142 ಮಕ್ಕಳು ಕಲಿಯುತ್ತಿದ್ದಾರೆ. ಒಟ್ಟಾರೆಯಾಗಿ ಶೇ.8 ಶಾಲೆಗಳಲ್ಲಿ ಹತ್ತಕ್ಕಿಂತ ಕಡಿಮೆ ಮಕ್ಕಳಿದ್ದಾರೆ. ಇನ್ನು 20 ರೊಳಗೆ ಮಕ್ಕಳ ಸಂಖ್ಯೆ ಇರುವ ಶಾಲೆಗಳ ಪ್ರಮಾಣ ಶೇ.11.7. ಇನ್ನು ಶೇ.19.4 ಶಾಲೆಗಳಲ್ಲಿ ಮಾತ್ರ 100-200ರವರೆಗೆ ಮಕ್ಕಳಿದ್ದಾರೆ.

ಡಿಜಿಟಲ್ ವ್ಯವಸ್ಥೆ:

ರಾಜ್ಯದ 41,662 ಶಾಲೆಗಳಲ್ಲಿ ಕಂಪ್ಯೂಟ‌ರ್ ಸೌಲಭ್ಯ ಒದಗಿಸಲಾಗಿದೆ. ಆದರೆ, 37,939 ಶಾಲೆಗಳಲ್ಲಿ ಮಾತ್ರವೇ ಇವು ಸಕ್ರಿಯವಾಗಿವೆ. 37,921 ಶಾಲೆಗಳಲ್ಲಿ ಇಂಟರ್‌ನೆಟ್ ಸೌಲಭ್ಯ ಕಲ್ಪಿಸಲಾಗಿದೆ. 2931 ಶಾಲೆಗಳಲ್ಲಿ ಡಿಜಿಟಲ್ ಲೈಬ್ರರಿಗಳಿವೆ. ಒಟ್ಟಾರೆ 9,725 ಕಡೆಗಳಲ್ಲಿ ಸೌರ ಫಲಕಗಳ ಅಳವಡಿಕೆ ಮಾಡಲಾಗಿದೆ. ಬಹುತೇಕ ಎಲ್ಲ ಶಾಲೆಗಳಲ್ಲಿ   ಕುಡಿಯುವ ನೀರಿನ ಸೌಕರ್ಯವಿದ್ದು, 70,061 ಶಾಲೆಗಳಲ್ಲಿ ಕೈತೊಳೆಯುವ ವ್ಯವಸ್ಥೆ ಮಾಡಲಾಗಿದೆ. ವಿಪರ್ಯಾಸವೆಂದರೆ 21,426 ಕಡೆಗಳಲ್ಲಷ್ಟೇ ಇವು ಸಕ್ರಿಯವಾಗಿವೆ. 68,606 ಕಡೆಗಳಲ್ಲಿ ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಗಿದೆ.

 

ಅಂಗನವಾಡಿ- ಶಿಶುವಿಹಾರ:

ರಾಜ್ಯದ 11,517 ಶಾಲೆಗಳ ಆವರಣದಲ್ಲಿಯೇ ಅಂಗನವಾಡಿ ಕೇಂದ್ರಗಳಿವೆ. ಶಿಶುವಿಹಾರ ಹೊಂದಿರುವ ಶಾಲೆಗಳು 14,388 ಆಗಿದ್ದು, ಒಂದನೇ ತರಗತಿಗೆ ಸೇರ್ಪಡೆಯಾಗುವ ವಿದ್ಯಾರ್ಥಿಗಳ ಪೈಕಿ ಶೇ.80ಕ್ಕೂ ಹೆಚ್ಚು ಮಕ್ಕಳು ಶಿಶುವಿಹಾರದ ಕಲಿಕೆಯನ್ನು ಪೂರ್ಣಗೊಳಿಸಿದವರಾಗಿದ್ದಾರೆ. ಸಾವಿರಕ್ಕೂ ಅಧಿಕ ಶಾಲೆಗಳಲ್ಲಿ ಅಂಗನವಾಡಿ ಹಾಗೂ ಶಿಶುವಿಹಾರ ಒಟ್ಟಿಗೆ ತೆರೆಯಲಾಗಿದೆ.

ಮೂಲಸೌಕರ್ಯಗಳಲ್ಲಿ ಮುಂದೆ:

ರಾಜ್ಯದ ಶಾಲೆಗಳಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದ್ದು, ಉಳಿದ ರಾಜ್ಯಗಳಿಗಿಂತ ಮುಂದಿದೆ. ಬಾಲಕಿಯರಿಗಾಗಿ ಶೌಚಗೃಹಗಳಿರುವ ಶಾಲೆಗಳು 73,729 ಆಗಿದ್ದರೆ, ಬಾಲಕರಿಗಾಗಿ ಶೌಚಗೃಹವಿರುವ ಶಾಲೆಗಳು 71,273 ಆಗಿದೆ. ಒಟ್ಟು 74,142 ಶಾಲೆಗಳಲ್ಲಿ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ. ಕೇವಲ 717 ಶಾಲೆಗಳಲ್ಲಷ್ಟೇ ವಿದ್ಯುತ್‌ ಸಂಪರ್ಕ ಇಲ್ಲ ಎನ್ನಲಾಗಿದೆ. ಗ್ರಂಥಾಲಯವಿರುವ ಶಾಲೆಗಳು 73,669 ಎಂದು ತಿಳಿಸಲಾಗಿದೆ. 64,183 ಶಾಲೆಗಳಿಗೆ ಆಟದ ಮೈದಾನವಿದ್ದು, ಮಧ್ಯಾಹ್ನದ ಬಿಸಿಯೂಟಕ್ಕಾಗಿ 24,277 ಕಡೆಗಳಲ್ಲಿ ಕೈತೋಟ ಮಾಡಲಾಗಿದೆ.

ಶಾಲೆಯಿಂದ ಹೊರಗುಳಿದವರು:

ಪ್ರೌಢಶಿಕ್ಷಣ ಹಂತದಲ್ಲಿ ಶಾಲೆಯಿಂದ ಹೊರಗುಳಿಯುವವರಲ್ಲಿ ಕರ್ನಾಟಕದ ಮಕ್ಕಳೇ ಹೆಚ್ಚು ಎನ್ನುತ್ತಿದೆ ಯುಡೈಸ್ ಅಂಕಿ-ಅಂಶ. 9ರಿಂದ 12ನೇ ತರಗತಿ ಮಕ್ಕಳಲ್ಲಿ 12.3 ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಿದ್ದಾರೆ. ದೊಡ್ಡ ರಾಜ್ಯಗಳ ಪೈಕಿ ಪಶ್ಚಿಮ ಬಂಗಾಳವನ್ನು ಹೊರತುಪಡಿಸಿದರೆ ರಾಜ್ಯದಲ್ಲೇ ಈ ಪ್ರಮಾಣ ಅತ್ಯಧಿಕವಾಗಿದೆ. ಪ್ರಾಥಮಿಕ ಹಂತದಲ್ಲಿ 2.1 ಹಾಗೂ ಪೂರ್ವಸಿದ್ಧತಾ ಹಂತದಲ್ಲಿ 1.6 ಆಗಿದೆ ಎಂದು ತಿಳಿಸಲಾಗಿದೆ. ಇನ್ನು, ದೇಶದ ನಿವ್ವಳ ದಾಖಲಾತಿ ಪ್ರಮಾಣ (ಜಿಇಆರ್) 41.4 ಆಗಿದ್ದರೆ, ರಾಜ್ಯದಲ್ಲಿ ಇದಕ್ಕಿಂತ ಕೊಂಚ ಹೆಚ್ಚಾಗಿದ್ದು 41.7 ದಾಖಲಾಗಿದೆ.

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!