Disabled Employees: ಗ್ರೂಪ್-A, ಗ್ರೂಪ್-B, ಸರ್ಕಾರಿ ನೌಕರರಿಗೆ ಪ್ರಮೋಷನ್ ಆದೇಶ.
Disabled Employees: ಪ್ರಸ್ತಾವನೆ:
1. ಮೇಲೆ (1)ರಲ್ಲಿ ಓದಲಾದ ದಿನಾಂಕ:28.03 2023ರ ಸರ್ಕಾರಿ ಆದೇಶದಲ್ಲಿ ರಾಜ್ಯ ಸಿವಿಲ್ ಸೇವೆಗಳಲ್ಲಿನ ಗ್ರೂಪ್-ಡಿ ಮತ್ತು ಗ್ರೂಪ್-ಸಿ ವೃಂದಗಳಿಗೆ ಸೇರಿದ ಹುದ್ದೆಗಳಿಗೆ ನೀಡುವ ಮುಂಬಡ್ತಿಯಲ್ಲಿ ಎದ್ದುಕಾಣುವ ಅಂಗವೈಕಲ್ಯವನ್ನುಳ್ಳ ಸರ್ಕಾರಿ ನೌಕರರಿಗೆ ಶೇಕಡ 4 ರಷ್ಟು ಮೀಸಲಾತಿ ಆಸ್ಪದವನ್ನು ಕಲ್ಪಿಸಲಾಗಿರುತ್ತದೆ
2 ಮೇಲೆ (2)ರಲ್ಲಿ ಓದಲಾದ ದಿನಾಂಕ 28. 11 2023ರ ಸರ್ಕಾರಿ ಆದೇಶದ ಅನುಬಂಧ-2ರಲ್ಲಿ ಎದ್ದುಕಾಣುವ ಅಂಗ ಕಲ್ಯವನ್ನುಳ್ಳ ನೌಕರರಿಗೆ ಗ್ರೂಪ್ ಡಿ ಯಿಂದ ಗ್ರೂಪ್-ಸಿ ಮತ್ತು ಗ್ರೂಪ್ ಸಿ ಯಿಂದ ಗ್ರೂಪ್-ಸಿ ಹುದ್ದೆಗಳಿಗೆ ಮುಂಬಡ್ತಿ ನೀಡುವ ಸಂದರ್ಭದಲ್ಲಿ ನಿಗದಿಪಡಿಸಿರುವ 100 ಬಿಂದುಗಳ ರೋಸ್ಮರಿನಲ್ಲಿ 5, 30, 55, 82ನೇ ಬಿಂದುಗಳನ್ನು ಗುರುತಿಸಲಾಗಿದೆ.
3. ರಾಜ್ಯ ಸಿವಿಲ್ ಸೇವೆಗಳಲ್ಲಿನ ಗ್ರೂಪ್-ಡಿ ಯಿಂದ ಗ್ರೂಪ್-ಸಿ ಮತ್ತು ಗ್ರೂಪ್-ಸಿ ಯಿಂದ ಗ್ರೂಪ್-ಸಿ ವೃಂದಗಳಿಗೆ ಸೇರಿದ ಹುದ್ದೆಗಳಿಗೆ ನೀಡುವ ಮುಂಬಡ್ತಿಯಲ್ಲಿ ಎದ್ದುಕಾಣುವ ಅಂಗವೈಕಲ್ಯವನ್ನುಳ್ಳ ಸರ್ಕಾರಿ ನೌಕರರಿಗೆ ಕಲ್ಪಿಸಲಾಗಿರುವ ಶೇಕಡ 4 ರಷ್ಟು ಮೀಸಲಾತಿ ಆಸ್ಪದವನ್ನು ಗ್ರೂಪ್-ಸಿ ಯಿಂದ ಗ್ರೂಪ್-ಬಿ ಮತ್ತು ಗ್ರೂಪ್-ಬಿ ಯಿಂದ ಗ್ರೂಪ್-ಎ (ಕಿರಿಯ ಶ್ರೇಣಿ) 4 ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ದಿನಾಂಕ:28.03.2023ರ ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 121 ಸೆನನಿ 2020ರಲ್ಲಿ ರಾಜ್ಯ ಸಿವಿಲ್ ಸೇವೆಗಳಲ್ಲಿನ ಗ್ರೂಪ್-ಡಿ ಯಿಂದ ಗ್ರೂಪ್-ಸಿ ಮತ್ತು ಗ್ರೂಪ್-ಸಿ ಯಿಂದ ಗ್ರೂಪ್-ಸಿ ವೃಂದಗಳಿಗೆ ಸೇರಿದ ಹುದ್ದೆಗಳಿಗೆ ನೀಡುವ ಮುಂಬಡ್ತಿಯಲ್ಲಿ ಎದ್ದುಕಾಣುವ ಅಂಗವೈಕಲ್ಯವನ್ನುಳ್ಳ ಸರ್ಕಾರಿ ನೌಕರರಿಗೆ ಕಲ್ಪಿಸಲಾಗಿರುವ ಶೇಕಡ 4 ರಷ್ಟು ಮೀಸಲಾತಿ ಆಸ್ಪದವನ್ನು ದಿನಾಂಕ:28.03 2023ರ ಆದೇಶದಲ್ಲಿನ ಎಲ್ಲಾ ಷರತ್ತು ಮತ್ತು ಉಪಬಂಧಗಳಲ್ಲಿ ಯಾವುದೇ ಬದಲಾವಣೆ ಇಲ್ಲದೆ (ಅನುಬಂಧವನ್ನು ಹೊರತುಪಡಿಸಿ) ಗ್ರೂಪ್-ಸಿ ಯಿಂದ ಗ್ರೂಪ್-ಬಿ ಮತ್ತು ಗ್ರೂಪ್-ಬಿ ಯಿಂದ ಗ್ರೂಪ್-ಎ (ಕಿರಿಯ ಶ್ರೇಣಿ) ವೃಂದದ ಹುದ್ದೆಗಳಿಗೂ ಸಹ ವಿಸ್ತರಿಸಿ ಆದೇಶಿಸಲಾಗಿದೆ.
5. ಎದ್ದುಕಾಣುವ ಅಂಗವೈಕಲ್ಯವನ್ನುಳ್ಳ ಸರ್ಕಾರಿ ನೌಕರರಿಗೆ ಗ್ರೂಪ್-ಸಿ ಯಿಂದ ಗ್ರೂಪ್ ಬಿ ಮತ್ತು ಗ್ರೂಪ್-ಬಿ ಯಿಂದ ಗ್ರೂಪ್-ಎ (ಕಿರಿಯ ಶ್ರೇಣಿ) ವೃಂದದ ಹುದ್ದೆಗಳಿಗೆ ಮುಂಬಡ್ತಿ ನೀಡುವ ಸಂದರ್ಭದಲ್ಲಿ ದಿನಾಂಕ:28 11 2023ರ ಸರ್ಕಾರದ ಆದೇಶ ಸಂಖ್ಯೆ ಸಿಆಸುಇ 266 ಸೆನೆನಿ 2022ರ ಅನುಬಂಧ-1ರಲ್ಲಿ ನಿಗದಿಪಡಿಸಿರುವ 100 ಬಿಂದುಗಳ ರೋಸ್ಮರ್ ವರ್ತುಲದಲ್ಲಿ 5, 30, 55 ಮತ್ತು 82ನೇ ಮೀಸಲಾತಿ ಬಿಂದುಗಳನ್ನು ಪರಿಗಣಿಸತಕ್ಕದ್ದು
6. ದಿನಾಂಕ:28.11 2023ರ ರೋಸ್ಟರಿನನ್ವಯ ಗ್ರೂಪ್-ಸಿ ಯಿಂದ ಗ್ರೂಪ್ ಬಿ ಮತ್ತು ಗ್ರೂಪ್ ಬಿ ಯಿಂದ ಗ್ರೂಪ್-ಎ (ಕಿರಿಯ ಶ್ರೇಣಿ) ಹುದ್ದೆಗಳಿಗೆ ಈಗಾಗಲೇ ಮುಂಬಡ್ತಿ ನೀಡಿದ್ದಲ್ಲಿ ಯಾವ ಬಿಂದುವಿನವರೆಗೆ ಮುಂಬಡ್ತಿ ನೀಡಲಾಗಿದೆಯೋ ಆ ನಂತರದ ಬಿಂದುವಿನಿಂದ ಜಾರಿಗೊಳಿಸತಕ್ಕದ್ದು,
7. ಈ ಆದೇಶವನ್ನು ಸಚಿವ ಸಂಪುಟ ಸಭೆಯ ಪ್ರಕರಣ ಸಂಖ್ಯೆ:249/2025 ದಿನಾಂಕ:09.05.2025ರಲ್ಲಿನ ನಿರ್ಣಯದಂತೆ ಹೊರಡಿಸಿದೆ.