Education: Computerization of service details of teachers/officers/non-teaching employees in EEDS software.

Education:EEDS software:service details

 

ಇಇಡಿಎಸ್ ತಂತ್ರಾಂಶದಲ್ಲಿ ಶಿಕ್ಷಕರ/ಅಧಿಕಾರಿಗಳ/ಬೋಧಕೇತರ ನೌಕರರ ಸೇವಾವಿವರಗಳನ್ನು ಗಣಕೀಕರಿಸಿಅಂತಿಮಗೊಳಿಸುವ ಬಗ್ಗೆ.

ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯದ ಎಲ್ಲಾ ಬಟವಾಡೆ ಅಧಿಕಾರಿಗಳಾದ ಪ್ರೌಢಶಾಲಾ ಮುಖ್ಯೋಪಾಧ್ಯಾಯರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು, ಜಿಲ್ಲಾ ಉಪನಿರ್ದೇಶಕರು ಹಾಗೂ ಎಲ್ಲಾ ಕಛೇರಿ ಮುಖ್ಯಸ್ಥರುಗಳಿಗೆ ಈ ಮೂಲಕ ಸೂಚಿಸುವುದೇನೆಂದರೆ ಉಲ್ಲೇಖ-1 ರಲಿ, 2023-24ನೇ ಸಾಲಿನಲಿ ರಾಜ್ಯದಲಿ,ನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಸಹಶಿಕ್ಷಕರ ಮತ್ತು ಮುಖ್ಯ ಶಿಕ್ಷಕರ ಹಾಗೂ ತತ್ಸಮಾನ ವೃಂದದಲಿ ಕರ್ತವ್ಯ ನಿರ್ವಹಿಸುತ್ತಿರುವವರ ವಲಯ ವರ್ಗಾವಣೆ, ನಿರ್ದಿಷ್ಟಪಡಿಸಲಾದ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು ಗರಿಷ್ಠ ಅವಧಿ ಪೂರೈಸಿರುವವರ ಹಿಮ್ಮುಖ ವರ್ಗಾವಣೆ, ಶಿಕ್ಷಕರ ಕೋರಿಕೆ ವರ್ಗಾವಣೆ ಪರಸ್ಪರ ವರ್ಗಾವಣೆ ಗಳನ್ನು ಈಗಾಗಲೇ ಯಶಸ್ವಿಯಾಗಿ ನಿರ್ವಹಿಸಲಾಗಿರುತ್ತದೆ. ಅಲ್ಲದೇ ಸರ್ಕಾರದ ಆದೇಶದ ಮೂಲಕ ವರ್ಗಾವಣೆಗಳು ಜಾರಿಗೊಂಡಿರುತ್ತವೆ.

ಮೇಲ್ಕಂಡ ಅಂಶಗಳ ಹಿನ್ನೆಲೆಯಲ್ಲಿ ಉಪನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಪ್ರೌಢಶಾಲಾ ಮುಖ್ಯೋಪಾಧ್ಯಾಯರನ್ನು ಒಳಗೊಂಡಂತೆ ಎಲ್ಲಾ ಬಟವಾಡೆ ಅಧಿಕಾರಿಗಳು ತಮ್ಮ ಅಧಿಕಾರ ವ್ಯಾಪ್ತಿಯಿಂದ ಹೊರಗೆ ವರ್ಗಾವಣೆ ಪಡೆದಿರುವ ನೌಕರರುಗಳನ್ನು ತಮ್ಮ ಲಾಗಿನ್ ನಿಂದ TRANSFER OUT ಮತ್ತು RE-ASSIGN ಮಾಡುವುದು. ಮತ್ತು ತಮ್ಮ ಅಧಿಕಾರ ಪರಿಮಿತಿಯೊಳಗೆ ವರ್ಗಾವಣೆ ಪಡೆದಿರುವ/ಅಧಿಕಾರಿ/ಶಿಕ್ಷಕರುಗಳನ್ನು ಸಂಬಂಧಿಸಿದ ಬಟವಾಡೆ ಅಧಿಕಾರಿಗಳು ತಮ್ಮ ಇಇಡಿಎಸ್ ಲಾಗಿನ್‌ ನಲ್ಲಿ TRANSFER IN ಮಾಡುವುದು. ಇದರ ಜೊತೆಗೆ ತಮ್ಮ ಅಧಿಕಾರ ವ್ಯಾಪ್ತಿಯಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ/ಅಧಿಕಾರಿಗಳ/ಬೋಧಕೇತರ ಸಿಬ್ಬಂದಿ ವರ್ಗದವರ ಸೇವಾ ವಿವರಗಳನ್ನು ಅವರ ಸೇವಾ ವಹಿಯಂತೆ ಮತ್ತೊಮ್ಮೆ ಪರಿಶೀಲಿಸಿ ಈ ಕೆಳಕಂಡ ಅಂಶಗಳನ್ನೊಳಗೊಂಡಂತೆ ನಿಖರವಾದ ಸೇವಾ ವಿವರಗಳನ್ನು ಇಇಡಿಎಸ್ ತಂತ್ರಾಂಶದಲ್ಲಿ ಗಣಕೀಕರಣ ಮಾಡಿ ಅಂತಿಮಗೊಳಿಸುವ ಬಗ್ಗೆ ಆಯಾ ಬಟವಾಡೆ ಅಧಿಕಾರಿಗಳಿಗೆ ಮತ್ತೊಮ್ಮೆ ಸೂಚಿಸಲಾಗಿದೆ,

1) ಅಧಿಕಾರಿ/ಶಿಕ್ಷಕರು/ನೌಕರರ ಕ್ರಮಬದ್ಧವಾದ ಪ್ರಥಮ ಕೆ.ಜಿ.ಐ.ಡಿ ಸಂಖ್ಯೆ ನಮೂದಾಗಿರುವ ಬಗ್ಗೆ ಪರಿಶೀಲಿಸುವುದು,ತಂತ್ರಾಂಶದ ವರದಿಗಳನ್ನು ಗಮನಿಸಿದಂತೆ ಕೆಲವು ಪ್ರಕರಣಗಳಲ್ಲಿ, ಎರಡೆರಡು ಕೆ.ಜಿ.ಐ.ಡಿ ಸಂಖ್ಯೆಗಳನ್ನು ನಮೂದಿಸಿ ಸೇವಾ ವಿವರಗಳನ್ನು ಅಂತಿಮಗೊಳಿಸಿರುವುದು ಕಂಡುಬಂದಿರುತ್ತದೆ. ಇದು ಸಾಕಷ್ಟು ಗೊಂದಲಗಳಿಗೆ ಅವಕಾಶ ಮಾಡಿಕೊಡುವುದರಿಂದ ಪ್ರತಿಯೊಬ್ಬ ನೌಕರನ ಮೊದಲನೇ ಕೆ.ಜಿ.ಐ.ಡಿ ಸಂಖ್ಯೆಯಡಿ ಸೇವಾ ವಿವರಗಳನ್ನು ಅಂತಿಮಗೊಳಿಸಿ ಉಳಿದ ವಿವರಗಳನ್ನು ತಂತ್ರಾಂಶದಿಂದ ತೆಗೆದು ಹಾಕಲು ಕ್ರಮವಹಿಸುವುದು,

2) ಶಿಕ್ಷಕರ ಹೆಸರು ಕನ್ನಡ ಮತ್ತು ಅಂಗ, ಭಾಷೆಯಲ್ಲಿ ಕ್ರಮಬದ್ಧವಾಗಿರುವ ಬಗ್ಗೆ ಪರಿಶೀಲಿಸುವುದು

3) ಶಿಕ್ಷಕರ ಜನ್ಮ ದಿನಾಂಕ, ಸೇವೆಗೆ ಸೇರಿದ ದಿನಾಂಕ, ಪ್ರಸ್ತುತ ವೃಂದಕ್ಕೆ ಸೇರಿದ ದಿನಾಂಕ ಮುಂತಾದ ಅಂಶಗಳು ಕ್ರಮಬದ್ಧವಾಗಿ ನಮೂದಾಗಿರುವ ಬಗ್ಗೆ ಮತ್ತೊಮ್ಮೆ ಪರಿಶೀಲಿಸುವುದು (ನೌಕರನ ಕೆಜಿಐಡಿ ಸಂಖ್ಯೆ ಶಿಕ್ಷಕರ ಹೆಸರು ಮತ್ತು ಶಿಕ್ಷಕರ ಜನ್ಮ ದಿನಾಂಕ ಬದಲಾವಣೆಗಳಿದ್ದಲ್ಲಿ ಪೂರಕ ದೃಢೀಕೃತ ದಾಖಲೆಗಳೊಂದಿಗೆ ಸಂಬಂಧಿಸಿದ ಬಟವಾಡೆ ಅಧಿಕಾರಿಗಳ ಸ್ಪಷ್ಟ ಶಿಫಾರಸ್ಸಿನೊಂದಿಗೆ ಭೌತಿಕ ಪ್ರಸ್ತಾವನೆಯನ್ನು ಈ ಕಛೇರಿಗೆ ಸಲ್ಲಿಸಿದ್ದಲ್ಲಿ ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮ ವಹಿಸಲಾಗುವುದು.

4) ಶಿಕ್ಷಕರ ಸೇವಾ ವಿವರದಲ್ಲಿ ಯಾವುದೇ ಅಂಕಣ ಖಾಲಿ ಉಳಿಯಬಾರದಂತೆ ಎಚ್ಚರವಹಿಸುವುದು,

5) ಅನುದಾನಿತ ಶಾಲಾ ಸಿಬ್ಬಂದಿ/ಶಿಕ್ಷಕರನ್ನು ಸರ್ಕಾರಿ ಶಾಲಾ ಶಿಕ್ಷಕರು/ನೌಕರರೆಂದು ನಮೂದಾಗಿದ್ದಲ್ಲಿ ಪರಿಶೀಲಿಸಿ ಅಂತಹ ಪ್ರಕರಣಗಳನ್ನು ರದ್ದುಪಡಿಸುವುದು ಈ ಬಗ್ಗೆ, ಈಗಾಗಲೇ ಎಚ್ಚರಿಕೆ ನೀಡಲಾಗಿರುತ್ತದೆ.

6) ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪ್ರೌಢಶಾಲಾ ಶಿಕ್ಷಕರೆಂದು ತಪ್ಪಾಗಿ ನಮೂದಾಗಿದ್ದಲ್ಲಿ ಕೂಡಲೇ ಪರಿಶೀಲಿಸಿ ಸರಿಪಡಿಸುವುದು.

7) ಶಿಕ್ಷಕರು ಕಾರ್ಯನಿರ್ವಹಿಸುತ್ತಿರುವ ಆದ್ಯತಾ ವಲಯ (ಎ/ಬಿ/ಸಿ ಜೋನ್) ಪರಿಶೀಲಿಸುವುದು, ಮತ್ತು ಸಮಂಜಸವಾದ ಆದ್ಯತಾ ವಲಯಗಳನ್ನು ಇಇಡಿಎಸ್ ತಂತ್ರಾಂಶದಲ್ಲಿ ಗಣಕೀಕರಿಸಿ ಅಂತಿಮಗೊಳಿಸುವುದು

8) ಶಿಕ್ಷಕರ ವಿನಾಯಿತಿಗೆ ಸಂಬಂಧಿಸಿದ ವಿವರ ಕ್ರಮಬದ್ಧವಾಗಿ ನಮೂದಾಗಿರುವ ಬಗ್ಗೆ ಪರಿಶೀಲಿಸುವುದು,

9) .ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಶಾಲೆಯಲ್ಲಿಯೇ ಆ ಶಿಕ್ಷಕರು ಮ್ಯಾಪಿಂಗ್ ಆಗಿರುವ ಬಗ್ಗೆ ಕಡ್ಡಾಯವಾಗಿ ಪರಿಶೀಲಿಸುವುದು,

10) ಶಿಕ್ಷಕರ ಬೋಧನಾ ವಿಷಯ ನಮೂದಿಸುವುದು, ಖಾಯಂಪೂರ್ವ ಅವಧಿ ಘೋಷಣೆ ಮಾಹಿತಿ ನಮೂದಿಸುವುದು ಮತ್ತು ಪತಿ ಅಥವಾ ಪತ್ನಿ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲೆ ಮತ್ತು ಕಂದಾಯ ತಾಲೂಕನ್ನು ಕಡ್ಡಾಯವಾಗಿ ಗಣಕೀಕರಣಗೊಳಿಸುವುದು ಈ ಬಗ್ಗೆ ತಂತ್ರಾಂಶದಲ್ಲಿ ಅವಕಾಶ ಲಭ್ಯವಿರುತ್ತದೆ.

11) ನಿವೃತ್ತಿ ಹೊಂದಿದವರನ್ನು ತಂತ್ರಾಂಶದಿಂದ ಎಕ್ಸಿಟ್ ಮಾಡುವುದು,

12) ಅಮಾನತ್ತು ಶಿಸ್ತುಕ್ರಮ ದಂಡನೆ ಆಗಿರುವ ಶಿಕ್ಷಕರ/ನೌಕರರ ಮಾಹಿತಿಯನ್ನು ಅವರ ಸೇವಾ ವಿವರದಲಿ. ನಮೂದಿಸುವುದು ಹಾಗೂ ಇನ್ನಿತರ ಎಲ್ಲಾ ಪ್ರಮುಖ ಸೇವಾ ವಿವರಗಳನ್ನು ಪರಿಶೀಲಿಸಿ ಅಪ್ಲೋಟ್ ಮಾಡುವುದು

13) ಸೇವಾ ವಿವರಗಳಾದ ಸೇವೆಗೆ ಸೇರಿದ ದಿನಾಂಕ, ಶಾಲೆ ವಲಯ, ಕಾರ್ಯ ನಿರ್ವಹಿಸಿದ ಅವಧಿಯನ್ನು ಕ್ರಮ ಬದ್ಧವಾಗಿ ನಮೂದಿಸುವುದು

14) ಕೆಲವು ಶಿಕ್ಷಕರ/ನೌಕರರ ಸೇವಾ ವಿವರಗಳು ಒಂದಕ್ಕಿಂತ ಹೆಚ್ಚು ಬಾರಿ ನಮೂದಿಸಲಾಗಿದ್ದು ಒಂದನ್ನು ಮಾತ್ರ ಉಳಿಸಿಕೊಂಡು ಮತ್ತೊಂದನ್ನು ಡಿಲೀಟ್ ಮಾಡುವುದು ಯಾವುದೇ ಕಾರಣಕ್ಕೂ ಡಬಲ್ ಎಂಟ್ರಿಗೆ ಅವಕಾಶ ನೀಡಬಾರದು

15) ಶಿಕ್ಷಕರ/ನೌಕರರ ಪರೀಕ್ಷಾರ್ಥ ಸೇವೆ, ವೃಂದ, ಬೋಧನಾ ಮಾಧ್ಯಮ ನೇಮಕಾತಿ ವಿಧಾನ, ವರ್ಗಾವಣಾ ವಿಷಯ ಮುಂತಾದ ಪ್ರಮುಖ ಅಂಶಗಳನ್ನು ಸರಿಯಾಗಿ ನಮೂದಿಸುವುದು. ಇದರಲ್ಲಿ ಯಾವುದೇ ಆಸ್ಪಷ್ಯತೆಗೆ ಮತ್ತು ಗೊಂದಲಗಳಿಗೆ ಅವಕಾಶ ನೀಡಬಾರದು.

16) ಟಿ.ಜಿ.ಟಿ ಮತ್ತು ಜಿ.ಹೆಚ್.ಎಂ ಪ್ರೌಢಶಾಲಾ ವೃಂದದವರು ಪ್ರಾಥಮಿಕ ಶಾಲೆಗಳಲಿ ಕಾರ್ಯನಿರ್ವಹಿಸಿ ಪ್ರೌಢಶಾಲೆಗಳಿಗೆ ವರ್ಗಾವಣೆಯಾಗಿದ್ದಲಿ ತಂತ್ರಾಂಶದಲ್ಲಿ ಇಂದೀಕರಿಸುವುದು. ಈ ಬಗ್ಗೆ ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗಿರುತ್ತದೆ.

17) ನಿರ್ದಿಷ್ಟಪಡಿಸಿದ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ಮಾಹಿತಿಯನ್ನು ಸಂಬಂಧಿಸಿದ ಕಛೇರಿಗಳಲ್ಲಿ ವೃಂದ, ಹುದ್ದೆಗೆ ಬಂದ ದಿನಾಂಕ ಇತ್ಯಾದಿ ವಿವರಗಳನ್ನು ಕಡ್ಡಾಯವಾಗಿ ಗಣಕೀಕರಿಸುವುದು,

18) ಕೆಲವು ಪ್ರಕರಣಗಳಲ್ಲಿ ಸಹಶಿಕ್ಷಕರು ಮುಖ್ಯಶಿಕ್ಷಕರ ಹುದ್ದೆಯಲಿ ತಾತ್ಕಾಲಿಕ ಪ್ರಭಾರದಲ್ಲಿದ್ದಂತಹ ಸಂದರ್ಭದಲ್ಲಿ, ಸಹಶಿಕ್ಷಕರಾಗಿಯೇ ಅವರ ಸೇವಾ ವಿವರಗಳನ್ನು ಗಣಕೀಕರಿಸುವುದು,

19) ಇಲಾಖೆಯಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಮತ್ತು ಬೋದಕೇತರ ನೌಕರರ ಸೇವಾ ವಿವರಗಳನ್ನು ಈ ಮೇಲ್ಕಂಡ ಅಂಶಗಳಂತೆಯೇ ಪರಿಶೀಲಿಸಿ ಕರಾರುವಕ್ಕಾದ ಸೇವಾ ವಿವರಗಳನ್ನು ಅವರ ಸೇವಾ ವಹಿಯಂತೆ ಪರಿಶೀಲಿಸಿ ಯಾವುದೇ ಅಂಕಣಗಳು ಖಾಲಿ ಉಳಿಯದಂತೆ ಗಣಕೀಕರಿಸಲು ತಿಳಿಸಿದೆ. ಇದರ ಜೊತೆಗೆ ರಾಜ್ಯದ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ಸೇವಾವಿವರಗಳನ್ನು ಆಯಾ ಶಾಲಾ ವ್ಯಾಪ್ತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ಲಾಗಿನ್ ಮೂಲಕವೇ ಗಣಕೀಕರಿಸುವ ಸಂಬಂದ ಆಡಳಿತ ಮಂಡಳಿಗಳಿಂದ ಸೇವಾ ವಹಿಗಳನ್ನು ಪಡೆದು ಪರಿಶೀಲಿಸಿ ಕರಾರುವಕ್ಕಾದ ಸೇವಾ ವಿವರಗಳನ್ನು ಕಡ್ಡಾಯವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳೇ ತಮ್ಮ ಲಾಗಿನ್ ಮೂಲಕ ಗಣಕೀಕರಿಸಲು ಮತ್ತೊಮ್ಮೆ ತಿಳಿಸಿದೆ. ಕಾರ್ಯನಿರ್ವಹಿಸುತ್ತಿದ್ದು ಖಜಾನೆಯಿಂದ ವೇತನ ಸೆಳೆಯುತ್ತಿರುವ ಅನುದಾನಿತ ಶಾಲಾ ಸಿಬ್ಬಂದಿ ಯಾವುದೇ ಕಾರಣಕ್ಕೂ ಇ ಇ.ಡಿ.ಎಸ್ ತಂತ್ರಾಂಶದಿಂದ ಹೊರಗುಳಿಯಬಾರದು ಈ ಸಂಬಂಧ ಇ ಇಡಿ.ಎಸ್ ತಂತ್ರಾಂಶದಲ್ಲಿ ಗಣಕೀಕರಣಕ್ಕಾಗಿ ಅವಕಾಶ ಕಲ್ಪಿಸಲಾಗಿರುತ್ತದೆ.

ಸದರಿ ಗಣಕೀಕೃತ ಸೇವಾವಿವರಗಳನ್ನು ಶಿಕ್ಷಕರಿಗೆ ಈಗಾಗಲೇ ಕಡ್ಡಾಯಪಡಿಸಿ ಆನೈನ್ ಮೂಲಕ ಸವಲತ್ತುಗಳನ್ನು ಮಂಜೂರು ಮಾಡುವಾಗ, ಪದೋನ್ನತಿ ನೀಡುವಾಗ, ಉತ್ತಮ ಶಿಕ್ಷಕ ಪ್ರಶಸ್ತಿ ನೀಡುವಾಗ, ವರ್ಗಾವಣೆ ಸಂದರ್ಭದಲ್ಲಿ.. ಹೆಚ್ಚುವರಿ ಶಿಕ್ಷಕರ ಸ್ಥಳಾಂತರ ಸಂದರ್ಭದಲ್ಲಿ ಮತ್ತು ಕಡ್ಡಾಯ ವರ್ಗಾವಣೆ ಸಂದರ್ಭದಲ್ಲಿ ಹಾಗೂ ಇನ್ನಿತರೆ ಪ್ರಮುಖ ಸಂದರ್ಭಗಳಲ್ಲಿ ಇಲಾಖೆಯು ಪರಿಗಣಿಸುತ್ತಿರುವುದರಿಂದ ಯಾವುದೇ ವಿವಾದಕ್ಕೆ ಆಸ್ಪದ ನೀಡದಂತೆ ಸೇವಾ ವಿವರಗಳನ್ನು ಇಇಡಿಎಸ್ ತಂತ್ರಾಂಶದಲಿ ಗಣಕೀಕರಣ ಮಾಡುವುದು.

ಈ ಮೇಲಿನ ಸೂಚನೆಗಳನ್ನು ಇಲಾಖೆಯ ಬಟವಾಡೆ ಅಧಿಕಾರಿಗಳಾದ ಪ್ರೌಢಶಾಲಾ ಮುಖ್ಯೋಪಾಧ್ಯಾಯರು ಹಾಗೂ ಕ್ಷೇತ್ರಶಿಕ್ಷಣಾಧಿಕಾರಿಗಳು ಹಾಗೂ ಎಲ್ಲಾ  ಕಛೇರಿ ಮುಖ್ಯಸ್ಥರು  ತಮ್ಮ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ/ಅಧಿಕಾರಿಗಳ/ಸಿಬ್ಬಂದಿ ವರ್ಗದವರ ಸೇವಾವಹಿಗಳನ್ನು ಪರಿಶೀಲಿಸಿ ನಿಖರ ಮಾಹಿತಿಗಳನ್ನು ಇಇಡಿಎಸ್ ತಂತ್ರಾಂಶದಲ್ಲಿ, ದಿನಾಂಕ:30/09/2024 ರೊಳಗೆ ಇಂದೀಕರಿಸಿ ಮಾಡಿ ಅಂತಿಮಗೊಳಿಸಿರುವ ಬಗ್ಗೆ ತಮ್ಮ ಲಾಗಿನ್ ನಲ್ಲಿ ಅಧಿಕಾರಿಗಳೇ ಖುದು ಪರಿಶೀಲಿಸಿ ಖಚಿತಪಡಿಸಲು ಸೂಚಿಸಿದೆ.

ಮುಂದುವರೆದು ಈ ಸಂದರ್ಭದಲ್ಲಿ ಕರ್ತವ್ಯ ನಿರ್ಲಕ್ಷ್ಯತೆ ಹೊಂದಿ ನಿಖರ ಮತ್ತು ಪ್ರಮಾಣೀಕೃತ ಅಗತ್ಯ ಸೇವಾ ವಿವರಗಳನ್ನು ಇಂದೀಕರಿಸದೇ ಸೇವಾವಿವರಗಳನ್ನು ತಪ್ಪಾಗಿ ನಮೂದಿಸಿ ಮುಂದಿನ ದಿನಗಳಲ್ಲಿ ವ್ಯತ್ಯಾಸಗಳಾಗಿ ಬಾಧಿತರಿಂದ ದೂರುಗಳು ಈ ಕಛೇರಿಗೆ ಸ್ವೀಕೃತಗೊಂಡಲ್ಲಿ ಸಂಬಂಧಿಸಿದ ಬಟವಾಡೆ ಅಧಿಕಾರಿಗಳನ್ನೇ/ ಕಛೇರಿ ಮುಖ್ಯಸ್ಥರನ್ನೇ ಹೊಣೆಗಾರರನ್ನಾಗಿಸಲಾಗುವುದು ಮತ್ತು ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಶಿಪಾರಸು, ಸಲ್ಲಿಸಲಾಗುವುದು.

ಈ ಬಗ್ಗೆ, ಜಿಲ್ಲಾ ಉಪನಿರ್ದೇಶಕರು(ಆ) ರವರು ಪರಿಶೀಲನಾ ಸಭೆ ನಡೆಸಿ ಇಇಡಿಎಸ್ ತಂತ್ರಾಂಶದಲ್ಲಿ, ಶಿಕ್ಷಕರ ಮತ್ತು ಅಧಿಕಾರಿಗಳ ಹಾಗೂ ಬೋಧಕೇತರ ಸಿಬ್ಬಂದಿಗಳ ಸೇವಾ ವಿವರಗಳನ್ನು ಕರಾರುವಕ್ಕಾಗಿ ಗಣಕೀಕರಿಸಿ ಅಂತಿಮಗೊಳಿಸಿರುವ ಬಗ್ಗೆ ಖಾತರಿಪಡಿಸಿಕೊಂಡು ಧೃಢೀಕರಣ ಪತ್ರದೊಂದಿಗೆ ಈ ಕಛೇರಿಗೆ ಕಡ್ಡಾಯವಾಗಿ ವರದಿ ಸ..ಸುವುದು ಮತ್ತು ಈ ಬಗ್ಗೆ ವಿಭಾಗೀಯ ಜಂಟಿ ನಿರ್ದೇಶಕರುಗಳು ಅನುಪಾಲನೆ ಕೈಗೊಂಡು ತಮ್ಮ ಅಧಿಕಾರ ಪರಿಮಿತಿಯ ಜಿಲ್ಲೆಗಳ ಜಿಲ್ಲಾ ವಾರು ಪ್ರಗತಿ ವರದಿಯನ್ನು ಈ ಕಛೇರಿಗೆ ಸಲ್ಲಿಸಲು ತಿಳಿಸಿದೆ.

ಮುಂದುವರೆದು ಈ ಹಂತದಲಿ, ತಂತ್ರಾಂಶಕ್ಕೆ ಸಂಬಂಧಿಸಿದಂತೆ ಯಾವುದೇ ತಾಂತ್ರಿಕ ಗೊಂದಲಗಳಿದ್ದಲ್ಲಿ, ಅಥವಾ ಸಂದೇಹಗಳಿದ್ದಲ್ಲಿ ಈ ಬಗ್ಗೆ ವಿವರಗಳನ್ನು karonlineserviceshelp@gmail.com ಗೆ ಇ-ಮೇಲ್ ಮುಖೇನ ಮನವಿ ಸಲ್ಲಿಸಲು ತಿಳಿಸಿದೆ.

ಸೂಚನೆಗಳಂತೆ ಇ ಇಡಿಎಸ್ ತಂತ್ರಾಂಶದಲ್ಲಿ ಪ್ರತಿ ಮಾಹೆವಾರು ವ್ಯಾಪ್ತಿಯ ಎಲ್ಲಾ ಅಧಿಕಾರಿಗಳ/ಶಿಕ್ಷಕರ/ನೌಕರರುಗಳ ಸೇವಾವಿವರಗಳು ಸಮರ್ಪಕವಾಗಿ ಕ್ರಮಬದ್ಧವಾಗಿ ಇಂದೀಕರಿಸಿರುವುದನ್ನು ಖಚಿತಪಡಿಸಿಕೊಂಡು ನಿಯತವಾಗಿ ದೃಢೀಕರಣವನ್ನು ಆಯಾ ವಿಭಾಗೀಯ ಸಹ ನಿರ್ದೇಶಕರುಗಳಿಗೆ ತಪ್ಪದೇ ಸಲ್ಲಿಸತಕ್ಕದು ಹಾಗೂ ಪ್ರತಿಯನ್ನು ಇಇಡಿಎಸ್ ಶಾಖೆಗೆ ನೀಡುವುದು.ಈ ಕುರಿತು ಮಾಹಿತಿ.

ಸಂಪೂರ್ಣ ಮಾಹಿತಿ- CLICK HERE

Leave a Comment