Important Essay-2024: ವಿಸ್ತಾರವಾಗುತ್ತಿರುವ ಹಿಮಸರೋವರಗಳು!

ESSAYವಿಸ್ತಾರವಾಗುತ್ತಿರುವ ಹಿಮದ ಸರೋವರಗಳು!

ESSAY: ಹಿಮಾಲಯ ಪರ್ವತ ಪ್ರದೇಶದಲ್ಲಿ ಇಲ್ಲಿಯವರೆಗೆ ಗುರುತಿಸಿರುವ ಹಿಮಸರೋವರಗಳ (Glacial) ಪೈಕಿ ಶೇ 27 ಕ್ಕಿಂತ ಹೆಚ್ಚು ಹಿಮ ಸರೋವರಗಳು ಗಮನಾರ್ಹ ವಿಸ್ತರಣೆ ಕಂಡಿವೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ವರದಿ ಮಾಡಿದೆ.

1984 ರಿಂದ 2023ರವರೆಗೆ ನಡೆಸಿದ ದೀರ್ಘಾವಧಿಯ ಉಪಗ್ರಹ ಅಧರಿತ ಮೇಲ್ವಿಚಾರಣಾ ವರದಿಯನ್ವಯ ISRO ಈ ಮಾಹಿತಿ ನೀಡಿದೆ. ISRO ಹಿಮಾಲಯ ಪ್ರದೇಶದಲ್ಲಿರುವ 10 ಹೆಕ್ಟೇ‌ರ್ ಗಿಂತ ದೊಡ್ಡದಾದ 2,431 ಹಿಮಸರೋವರಗಳ ಗಾತ್ರದಲ್ಲಿನ ಹೆಚ್ಚಳವನ್ನು ವಿಶ್ಲೇಷಿಸಿ ಈ ನಿರ್ಣಯಕ್ಕೆ ಬಂದಿದೆ. ಒಟ್ಟಾರೆ 676 ಹಿಮಸರೋವರಗಳು ವಿಸ್ತರಣೆಗೊಳ್ಳುತ್ತಿದ್ದು, ಇವುಗಳ ಪೈಕಿ 130 ಹಿಮಸರೋವರಗಳು ಭಾರತದ ವ್ಯಾಪ್ತಿಗೊಳಪಟ್ಟಿವೆ.

ಈ 130 ಹಿಮಸರೋವರಗಳ ಪೈಕಿ 65 ಸಿಂಧೂ ನದಿ ಜಲಾನಯನ ಪ್ರದೇಶದಲ್ಲಿ, 7 ಗಂಗಾ ನದಿ ಜಲಾನಯನ ಪ್ರದೇಶದಲ್ಲಿ ಮತ್ತು 58 ಬ್ರಹ್ಮಪುತ್ರಾ ನದಿ ಜಲಾನಯನ ಪ್ರದೇಶದಲ್ಲಿವೆ. ಹಿಮಸರೋ ವರಗಳ ವಿಸ್ತರಣೆಯು ಮಾನವ-ಪ್ರೇರಿತ ಹವಾಮಾನ ಬದಲಾವಣೆ ಹಾಗೂ ತಾಪಮಾನ ಹೆಚ್ಚಳದಿಂದ ಉಂಟಾಗುತ್ತಿದೆ ಎಂದು ISRO ತಿಳಿಸಿದೆ.

ವಿಸ್ತರಿಸುತ್ತಿರುವ ಒಟ್ಟಾರೆ 676 ಹಿಮಸರೋವರಗಳ ಪೈಕಿ 601 ಹಿಮಸರೋವರಗಳು ಈಗಾಗಲೇ ತಮ್ಮ ಮೂಲ ಗಾತ್ರದ ಎರಡು ಪಟ್ಟು ಹೆಚ್ಚು ಗಾತ್ರಕ್ಕೆ ಬೆಳೆದಿವೆ.

10 ಹಿಮಸರೋವರಗಳು ತಮ್ಮ ಮೂಲ ಗಾತ್ರದ 1.5 ಪಟ್ಟು ಅಥವಾ ಅದಕ್ಕಿಂತ ಹೆಚ್ಚಿನ ಗಾತ್ರಕ್ಕೆ ಬೆಳೆದಿವೆ. 65 ಹಿಮಸರೋವರ- ಗಳು ತಮ್ಮ ಮೂಲ ಗಾತ್ರಕ್ಕಿಂತ 1.5 ಪಟ್ಟು ವಿಸ್ತರಿಸಿವೆ.

ಈ 676 ಹಿಮಸರೋವರಗಳ ಪೈಕಿ 314 ಹಿಮಸರೋವರಗಳು 4000 ಮೀ.ನಿಂದ 5000 ಮೀ. ಎತ್ತರದಲ್ಲಿ ನೆಲೆಗೊಂಡಿವೆ. ಇನ್ನುಳಿದವು 2965 ಮೀಟರ್‌ನಿಂದ 4000 ಮೀ. ಎತ್ತರದಲ್ಲಿವೆ.

676 ಹಿಮಸರೋವರಗಳ ಪೈಕಿ 307 ಹಿಮಸರೋವರಗಳು ಈಗಾಗಲೇ ಹಿಮದ ಕರಗುವಿಕೆಯಿಂದ ಹೊರಬಂದ ನೀರಿನಿಂದ ತುಂಬಿದ ಜಲಸಂಗ್ರಹ (moraine-dammed) ತಾಣಗಳಾಗಿವೆ.

265 ಹಿಮಸರೋವರಗಳು ಪೂರ್ಣಕರಗುವಿಕೆ ಅಥವಾ ಸವಕಳಿಯ ಸ್ಥಿತಿಯಲ್ಲಿದ್ದು ಅರ್ಧಕ್ಕಿಂತ ಹೆಚ್ಚಿನ ಪ್ರಮಾಣದ ನೀರು ಹಾಗೂ ಅರ್ಧಕ್ಕಿಂತ ಕಡಿಮೆ ಪ್ರಮಾಣದ ಮಂಜುಗಡ್ಡೆಗಳಿಂದ ತುಂಬಿಕೊಂಡಿರುವ (erosion-dammed) ತಾಣಗಳಾಗಿವೆ.

96 ಹಿಮಸರೋವರಗಳು ಅರೆಕರಗುವಿಕೆ ಅಥವಾ ಅರೆಸವಕಳಿಯ ಸ್ಥಿತಿಯಲ್ಲಿದ್ದು ಅರ್ಧಕ್ಕಿಂತ ಹೆಚ್ಚಿನ ಪ್ರಮಾಣದ ಮಂಜುಗಡ್ಡೆ ಹಾಗೂ ಅರ್ಧಕ್ಕಿಂತ ಕಡಿಮೆ ಪ್ರಮಾಣದ ನೀರಿನಿಂದ ತುಂಬಿಕೊಂಡಿರುವ (partially erosion-dammed) ತಾಣಗಳಾಗಿವೆ.

ಇನ್ನುಳಿದ 8 ಹಿಮಸರೋವರಗಳು ಮೇಲ್ನೋಟಕ್ಕೆ ಮಂಜುಗಡ್ಡೆ ಯಿಂದ ತುಂಬಿರುವ (ice-dammed) ತಾಣಗಳಾಗಿ ಕಾಣುತ್ತಿವೆ. ಆದರೆ, ಅವು ತಮ್ಮ ಮೂಲ ಗಾತ್ರಕ್ಕಿಂತ ಗಮನಾರ್ಹವಾಗಿ ವಿಸ್ತರ- ಣೆಗೊಳಪಟ್ಟಿವೆ. ಇದು ಅವುಗಳಲ್ಲಿ ಮಂಜುಗಡ್ಡೆ ಕರಗುವಿಕೆ ಪ್ರಕ್ರಿಯೆ ವ್ಯಾಪಕವಾಗಿ ನಡೆದಿರುವುದನ್ನು ಸೂಚಿಸುತ್ತಿದೆ.

ವಿಷಮ ಹವಾಮಾನದ ಕಾರಣದಿಂದ ಹಿಮಸರೋವರಗಳ ಸ್ಥಿತಿಗತಿಯ ನೇರ ಅಧ್ಯಯನ ಅಸಾಧ್ಯ. ಹೀಗಾಗಿ, ಉಪಗ್ರಹ ಆಧಾರಿತ ಅವಲೋಕನೆ, ವಿಶ್ಲೇಷಣೆಯೇ ಹಿಮಸರೋವರಗಳ ವಾಸ್ತವಿಕ ಸ್ಥಿತಿಗತಿ, ವಿಸ್ತರಣೆಯ ಪ್ರಮಾಣ, ಸಂಭವನೀಯ GLOF ಅಪಾಯಗಳನ್ನು ಅರಿತುಕೊಳ್ಳಲು ಉತ್ತಮ ಕ್ರಮವಾಗಿದೆ.

ಹಿಮಾಲಯದ ಪ್ರದೇಶದಲ್ಲಿನ ನದಿಗಳಿಗೆ ಸಿಹಿನೀರಿನ ಮೂಲ ಆಗಿರುವ ಹಿಮಸರೋವರಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಸಾಮಾನ್ಯ ಸಂದರ್ಭಗಳಲ್ಲಿ ಇವು ತಮ್ಮ ಕೆಳಭಾಗದಲ್ಲಿರುವ ಲಕ್ಷಾಂತರ ಜನರ ಜೀವ-ಜೀವನ ಬೆಂಬಲಿಸುತ್ತವೆ. ಆದರೆ, GLOF ನಂಥ ಅಪಾಯಕರ ಸನ್ನಿವೇಶದಲ್ಲಿ ವರಸ್ವರೂಪಿಯಾದ ಈ ಹಿಮಸ- ರೋವರಗಳೇ ಜನರ ಜೀವ-ಜೀವನಕ್ಕೆ ಎರವಾಗುತ್ತವೆ.

ಈ ಹಿನ್ನೆಲೆಯಲ್ಲಿ (Glacial Lake Outburst Flood) ಸಂಬಂಧಿತ ಅಪಾಯಗಳನ್ನು ತಗ್ಗಿಸಲು ಮತ್ತು ಹಿಮಾಲಯ ಪ್ರದೇಶದ ಸೂಕ್ಷ್ಮ ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸಲು ನಿರ್ಣಾಯಕ ಕ್ರಮಗಳನ್ನು ವಹಿಸಬೇಕು ಎಂದು ISRO ವರದಿ ಆಗ್ರಹಿಸಿದೆ.

GLOF’ ಎಂಬುದು, ಹಿಮಸರೋವರದಲ್ಲಿನ ಮಂಜುಗಡ್ಡೆಯ ನೈಸರ್ಗಿಕ ಅಣೆಕಟ್ಟು ತೀವ್ರ ಒತ್ತಡದಿಂದ ಸ್ಫೋಟಗೊಂಡು ಒಮ್ಮಿಂದೊಮ್ಮೆ ಅಪಾರ ಪ್ರಮಾಣದ ನೀರು ಪ್ರವಾಹೋಪಾದಿಯಲ್ಲಿ ಹೊರಹೊಮ್ಮುವ ಅಪಾಯಕಾರಿ ಸ್ಥಿತಿಯಾಗಿದೆ.

GLOF ಅಪಾಯ ಕಟ್ಟಿಟ್ಟ ಬುತ್ತಿ!

ಹಿಮಸರೋವರಗಳ ವಿಸ್ತರಣೆಯು GLOF ಉಂಟು ಮಾಡಿ ದಿಢೀ‌ರ್ ಪ್ರವಾಹಕ್ಕೆ ಕಾರಣವಾಗಿ ಕೆಳ ಭಾಗದಲ್ಲಿರುವ ಜನಸಮು- ದಾಯಕ್ಕೆ ಗಮನಾರ್ಹ ಅಪಾಯ ಉಂಟುಮಾಡುತ್ತದೆ. ಹಿಮಗಡ್ಡೆ- ಗಳಿಂದ ನಿರ್ಮಿತವಾದ ನೈಸರ್ಗಿಕ ಅಣೆಕಟ್ಟುಗಳ ಕರಗುವಿಕೆಯಿಂದ

ಹಿಮ ಸರೋವರಗಳು ಹಠಾತ್ತನೆ ದೊಡ್ಡ ಪ್ರಮಾಣದ ನೀರು ಹೊರ- ಹೊಮ್ಮಿಸುತ್ತವೆ ಆಗ ಈ ದಿಢೀರ್ ಪ್ರವಾಹಗಳು ಸಂಭವಿಸುತ್ತವೆ.

ಈ ರೀತಿಯ ಅವಾಂತರಕ್ಕೆ ಉದಾಹರಣೆಯಾಗಿ ಸಿಕ್ಕಿಂನಲ್ಲಿ 2023 ಅಕ್ಟೋಬರ್ 4 ರಂದು ಚುಂಗ್‌ಥಾಂಗ್‌ನಿಂದ ಉತ್ತರಕ್ಕೆ 50 ಕಿ.ಮೀ. ದೂರದಲ್ಲಿ 5,200 ಮೀಟರ್‌ಗಳಷ್ಟು ಎತ್ತರದಲ್ಲಿರುವ ಲೊನಾಕ್ ಹಿಮಸರೋವರ ಇಂಥ ದಿಢೀರ್ ಪ್ರವಾಹಕ್ಕೆ ಕಾರಣವಾಗಿ ಅವಾಂತರ ಉಂಟು ಮಾಡಿದ್ದನ್ನು ನಾವು ಸ್ಮರಿಸಬಹುದು. ಲೊನಾಕ್ ಹಿಮಸರೋವರದಲ್ಲಿ ಉಂಟಾದ ಈ ಹಠಾತ್ ಸ್ಫೋಟಕ ಪ್ರವಾಹದಿಂದ ಅಲ್ಲಿಂದ ಉಗಮವಾಗುವ ಲಾಚೆನ್ ನದಿಯಲ್ಲಿ ತೀವ್ರ ಪ್ರಮಾಣದ ನೀರು ರಭಸವಾಗಿ ಹರಿದು ಬಂದಿತು. ಉಕ್ಕೇರಿದ ಹಠಾತ್ ಪ್ರವಾಹ ಅಪಾರ ಹಾನಿಗೆ ಕಾರಣವಾಗಿದ್ದು, ಕೇವಲ 10 ನಿಮಿಷಗಳಲ್ಲಿ ಚುಂಗ್ಲಾಂಗ್ ಅಣೆಕಟ್ಟು ಒಡೆಯಲು ಕಾರಣವಾಯಿತು. ಮುಂದಿನ ಅರ್ಧ ಗಂಟೆಯಲ್ಲಿ ಲಾಚೆನ್ ನದಿ ಇನ್ನೊಂದು ಉಪನದಿ ಲಾಚುಂಗ್ ಅನ್ನು ಸಂಧಿಸಿ ಮುಖ್ಯ ನದಿ ತೀಸ್ತಾವನ್ನು ಎರಡೂ ನದಿಗಳಲ್ಲಿಯೂ ದಿಢೀರ್ ಪ್ರವಾಹ ಉಂಟಾಗಲು ಕಾರಣವಾಯಿತು.

ಪ್ರವಾಹದಿಂದ ಹಲವಾರು ಸೇತುವೆಗಳು, NH-10 ರ ಭಾಗಗಳು ಪ್ರವಾಹದಲ್ಲಿ ಕೊಚ್ಚಿ ಹೋದವು. ಮಂಗನ್, ಗ್ಯಾಂಗ್ಟಾಕ್, ಪಕ್ಯೋಂಗ್‌ ಮತ್ತು ನಾಮ್ಮಿ ಜಿಲ್ಲೆಗಳ ಸಾವಿರಾರು ಹಳ್ಳಿ ಮತ್ತು ಪಟ್ಟಣಗಳು ಈ ದಿಢೀರ್ ಪ್ರವಾಹದಿಂತ ಬಾಧಿತವಾದವು. ಪ್ರವಾಹಕ್ಕೆ ಸಿಲುಕಿ ಭಾರತೀಯ ಸೇನೆಯ 22 ಯೋಧರು ಸೇರಿದಂತೆ 40ಕ್ಕೂ ಹೆಚ್ಚು ಜನರು ಸಾವಿಗೀಡಾದರು. 70ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದು, ಇಲ್ಲಿಯವರೆಗೂ ಅವರ ಸುಳಿವಿಲ್ಲ. ಇಂಥದರಲ್ಲಿ NDRF 2000 ಕ್ಕೂ ಹೆಚ್ಚು ಜನರನ್ನು ರಕ್ಷಿಸಿತು.

2017 ರಲ್ಲಿ ನಿರ್ಮಿಸಿದ್ದ 817 ಮೀಟರ್ ಎತ್ತರದ ಚುಂಗ್ಲಾಂಗ್ ಅಣೆಕಟ್ಟೆಯಲ್ಲಿ ‘ರನ್‌ ಆಫ್ ದ ರಿವರ್’ ತಂತ್ರಜ್ಞಾನ ಆಧರಿಸಿ 1200 MW ಜಲ ವಿದ್ಯುತ್ ಉತ್ಪಾದಿಸಲಾಗುತ್ತಿತ್ತು. ಈ ಅಣೆಕಟ್ಟೆಯಿಂದ ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳಕ್ಕೆ ವಿದ್ಯುತ್ ಪೂರೈಸಲಾಗುತ್ತಿತ್ತು. ದಿಢೀ‌ರ್ ಪ್ರವಾಹದಿಂದ ಕೋಟ್ಯಂತರ ರೂಪಾಯಿ ವೆಚ್ಚದ ಈ ಯೋಜನೆ ನೀರುಪಾಲಾಗಿ ಮರು ನಿರ್ಮಾಣದ ಹೊರೆ ಹೆಚ್ಚಿತು.

 

ಹಿಮಾಚಲ ಪ್ರದೇಶ ರಾಜ್ಯದ ವ್ಯಾಪ್ತಿಗೊಳಪಟ್ಟು 4068 ಮೀಟರ್ ಎತ್ತರದಲ್ಲಿ ನೆಲೆಗೊಂಡಿರುವ ಸಿಂಧೂ ನದಿ ಜಲಾನಯನ ಪ್ರದೇ ಶದಲ್ಲಿರುವ ‘ಫೆಪಾಂಗ್‌ ಘಾಟ್’ ಹಿಮಸರೋವರವನ್ನು ISRO ಪ್ರತ್ಯೇಕ ‘ಕೇಸ್ ಸ್ಟಡಿ’ ಆಗಿ ಅಭ್ಯಸಿಸಿದ್ದು, ಅದು ಗಣನೀಯ ಬದಲಾ- ವಣೆಗಳಿಗೆ ಒಳಪಟ್ಟಿರುವುದನ್ನು ಎತ್ತಿ ತೋರಿಸಿದೆ. ‘ಫೆಪಾಂಗ್ ಘಾಟ್’ ಸರೋವರ 1989 ರಲ್ಲಿ 36.49 ಹೆಕ್ಟೇರ್‌ಗಳಷ್ಟು ಪ್ರದೇಶದಲ್ಲಿ ವ್ಯಾಪಿಸಿತ್ತು. 2022 ರವರೆಗೆ ಈ ಸರೋವರದ ವ್ಯಾಪ್ತಿ 101.30 ಹೆಕ್ಟೇರ್‌ಗಳಿಗೆ ವಿಸ್ಕೃತಗೊಂಡಿದ್ದು, ವರ್ಷಕ್ಕೆ ಸರಿಸುಮಾರು 1.96 ಹೆಕ್ಟೇರ್‌ಗಳಷ್ಟು ವಿಸ್ತರಿಸಿ, ಶೇ 178 ರಷ್ಟು ಗಾತ್ರವನ್ನು ಹೆಚ್ಚಿಸಿಕೊಂಡಿದೆ ಎಂದು ಮಾಹಿತಿ ನೀಡಿದೆ.

ಪ್ರಪಂಚದಾದ್ಯಂತ ಭವಿಷ್ಯದ ಹಿಮನದಿ ಸರೋವರದ ಸ್ಫೋಟಗಳಿಂದ ಉಂಟಾಗುವ ಅಪಾಯವನ್ನು ನಿರ್ಣಯಿಸಲು, ವಿಜ್ಞಾನಿಗಳು ಭೌಗೋಳಿಕತೆ, ಮಾನವ ಅಭಿವೃದ್ಧಿ, ಹವಾಮಾನ, ಜನಸಂಖ್ಯೆ ಮತ್ತು 1,089 ಗ್ಲೇಶಿಯಲ್ ಬೇಸಿನ್‌ಗಳ ಸಂಭವನೀಯ ಪ್ರವಾಹ ತಡೆಗಟ್ಟುವಿಕೆ ಮತ್ತು ಪ್ರತಿಕ್ರಿಯೆಯ ಪ್ರಯತ್ನಗಳನ್ನು ಪರಿಗಣಿಸಿದ್ದಾರೆ.

ಕಳೆದ 30 ವರ್ಷಗಳಲ್ಲಿ ಪ್ರಪಂಚದಾದ್ಯಂತ ಹಿಮನದಿ ಸರೋವರಗಳ ಸಂಖ್ಯೆಯು ವೇಗವಾಗಿ ಹೆಚ್ಚುತ್ತಿದೆ – ಮತ್ತು ಈ ಪೂಲ್‌ಗಳು ಪ್ರದೇಶ ಮತ್ತು ಪರಿಮಾಣದಲ್ಲಿ ದೊಡ್ಡದಾಗುತ್ತಿವೆ. ಅದೇ ಸಮಯದಲ್ಲಿ, ಹೆಚ್ಚಿನ ಜನರು-ಅವರ ಕಟ್ಟಡಗಳು ಮತ್ತು ಫಾರ್ಮ್‌ಗಳ ಜೊತೆಗೆ-ಗ್ಲೇಶಿಯಲ್ ಸರೋವರಗಳ ಕೆಳಭಾಗದಲ್ಲಿ ದುರ್ಬಲ ಪ್ರದೇಶಗಳನ್ನು ಹೊಂದಿವೆ

ಇದರ ಪರಿಣಾಮವಾಗಿ, ಲಕ್ಷಾಂತರ ಜನರು ಈಗ ಹಿಮ ಸರೋವರದ 30 ಮೈಲುಗಳ ಒಳಗೆ ವಾಸಿಸುತ್ತಿದ್ದಾರೆ. ನೇಪಾಳ , ಪಾಕಿಸ್ತಾನ ಮತ್ತು ಕಝಾಕಿಸ್ತಾನ್‌ನಂತಹ ಏಷ್ಯಾದ ಎತ್ತರದ ಪರ್ವತಗಳಲ್ಲಿ ನೆಲೆಗೊಂಡಿರುವ ಸಮುದಾಯಗಳು ಹೆಚ್ಚಿನ ಅಪಾಯವನ್ನು ಹೊಂದಿವೆ . ಈ ಪ್ರದೇಶದಲ್ಲಿ, ಒಂದು ಮಿಲಿಯನ್ ನಿವಾಸಿಗಳು ಹಿಮ ಸರೋವರದಿಂದ ಕೇವಲ ಆರು ಮೈಲುಗಳಷ್ಟು ವಾಸಿಸುತ್ತಿದ್ದಾರೆ, ಅಲ್ಲಿ ಪ್ರಕೋಪವನ್ನು ಮುಂಚಿತವಾಗಿ ಎಚ್ಚರಿಸುವ ಸಾಧ್ಯತೆ ಕಡಿಮೆಯಾಗಿದೆ ಎಂದು ಅಧ್ಯಯನವು ಕಂಡುಕೊಳ್ಳುತ್ತದೆ. ಜನಸಂಖ್ಯೆಯು ಕಡಿಮೆ ದುರ್ಬಲವಾಗಿರುವ ಪೆಸಿಫಿಕ್ ವಾಯುವ್ಯ ಪ್ರದೇಶಗಳಲ್ಲಿ ಮತ್ತು ಕಡಿಮೆ ಜನರು ಹಿಮನದಿ ಸರೋವರಗಳ ಬಳಿ ವಾಸಿಸುವ ಗ್ರೀನ್‌ಲ್ಯಾಂಡ್‌ನಂತಹ ಪ್ರದೇಶಗಳಲ್ಲಿ ಅಪಾಯವು ಕಡಿಮೆಯಾಗಿದೆ.

“ಬೆಚ್ಚಗಾಗುತ್ತಿರುವ ಜಗತ್ತಿನಲ್ಲಿ, ನಾವು ಖಂಡಿತವಾಗಿಯೂ ಹೆಚ್ಚು ಮತ್ತು ದೊಡ್ಡ ಹಿಮದ ಸರೋವರಗಳನ್ನು ನಿರೀಕ್ಷಿಸುತ್ತೇವೆ” ಎಂದು ಸಂಶೋಧನೆಯಲ್ಲಿ ಭಾಗಿಯಾಗದ ಕೆನಡಾದ ಕ್ಯಾಲ್ಗರಿ ವಿಶ್ವವಿದ್ಯಾಲಯದ ಭೂವಿಜ್ಞಾನಿ ಡಾನ್ ಶುಗರ್ ಅಸೋಸಿಯೇಟೆಡ್ ಪ್ರೆಸ್ ‘ಸೆಥ್ ಬೋರೆನ್‌ಸ್ಟೈನ್‌ಗೆ ಇಮೇಲ್‌ನಲ್ಲಿ ಹೇಳುತ್ತಾರೆ. “ಆದರೆ ಈ ಸರೋವರಗಳು ಒಡ್ಡಬಹುದಾದ ಅಪಾಯವು ಜನರು ಎಲ್ಲಿ ವಾಸಿಸುತ್ತಿದ್ದಾರೆ ಮತ್ತು ಅವರ ದುರ್ಬಲತೆಗಳು ಏನಾಗಬಹುದು ಎಂಬುದರ ಮೇಲೆ ವಿಮರ್ಶಾತ್ಮಕವಾಗಿ ಅವಲಂಬಿತವಾಗಿರುತ್ತದೆ.”

ಈಗಾಗಲೇ, ಹಿಮ ಸರೋವರದ ಸ್ಫೋಟಗಳು ಮಾರಣಾಂತಿಕ ಮತ್ತು ವಿನಾಶಕಾರಿ. ಆದರೆ ಶಾಖ-ಬಲೆಹಿಡಿಯುವ ಹಸಿರುಮನೆ ಅನಿಲ ಹೊರಸೂಸುವಿಕೆಯಿಂದಾಗಿ ತಾಪಮಾನವು ಹೆಚ್ಚುತ್ತಲೇ ಇರುವುದರಿಂದ, ಹಿಮನದಿಗಳು ಇನ್ನಷ್ಟು ವೇಗವಾಗಿ ಕರಗುವ ಸಾಧ್ಯತೆಯಿದೆ. ಇದರರ್ಥ, ಹಿಮ ಸರೋವರದ ಸ್ಫೋಟದ ಸಂದರ್ಭದಲ್ಲಿ, ಅದು ಹೆಚ್ಚಿನ ಪ್ರಮಾಣದ ನೀರನ್ನು ಹೊರಹಾಕುತ್ತದೆ.

ಹೆಚ್ಚಿನ ಮಾಹಿತಿಗಾಗಿ- CLICK HERE

Leave a Comment