Evaluation: ದೇಶಾದ್ಯಂತ ಇಂದು ಪರಖ್, ರಾಜ್ಯದಲ್ಲಿ 3, 6, 9ನೇ ತರಗತಿ ಮಕ್ಕಳಿಗೆ ನಡೆಯಲಿರುವ ಸಮೀಕ್ಷೆ- 2024

ಎರಡು ವರ್ಷಕ್ಕೊಮ್ಮೆ ನಡೆಯುವ ಮೌಲ್ಯಮಾಪನ-Evaluation

ಕನ್ನಡ ಸೇರಿ 23 ಭಾಷೆಗಳಲ್ಲಿ ನಡೆಸಲಾಗುತ್ತದೆ ಸಮೀಕ್ಷೆ

ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳಿಗೆ ಅನ್ವಯ

Evaluation- ಮಕ್ಕಳಲ್ಲಿನ ಕಲಿಕಾಮಟ್ಟ ತಿಳಿಯುವ ಹಾಗೂ ಈ ಪರೀಕ್ಷೆಯ ಫಲಿತಾಂಶ ಆಧಾರದಲ್ಲಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಹೊಸ ಯೋಜನೆಗಳನ್ನು ರೂಪಿಸುವ ಉದ್ದೇಶದಿಂದ ಕೇಂದ್ರದ ಶಿಕ್ಷಣ ಇಲಾಖೆಯು ಬುಧವಾರ (ಡಿ.4) ರಂದು ಕರ್ನಾಟಕವೂ ಸೇರಿದಂತೆ ದೇಶಾದ್ಯಂತ 3, 6 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ‘ಪರಖ್- ರಾಷ್ಟ್ರೀಯ ಸರ್ವೇಕ್ಷಣ್-2024’ ನಡೆಸುತ್ತಿದೆ.

ದೇಶಾದ್ಯಂತ ಎರಡು ವರ್ಷಕ್ಕೆ ಒಮ್ಮೆ ಈ ಸರ್ವೇ ನಡೆಸಲಾಗುತ್ತದೆ. ಇಲ್ಲಿಯವರೆಗೂ ರಾಷ್ಟ್ರೀಯ ಮೌಲ್ಯಮಾಪನ ಸಮೀಕ್ಷೆ (ಎನ್ ಎಎಸ್) ಹೆಸರಿನಲ್ಲಿ ಇದನ್ನು ನಡೆಸಲಾಗುತ್ತಿತ್ತು. ಈ ಬಾರಿ ‘ಪರಖ್- ರಾಷ್ಟ್ರೀಯ ಸರ್ವೇಕ್ಷಣ್’ ಎಂದು ಸಮೀಕ್ಷೆಯಲ್ಲಿ ಕರೆಯಲಾಗುತ್ತಿದೆ. ಕಂಡುಬರುವ ಅಂಶಗಳು ಶಿಕ್ಷಣ ಇಲಾಖೆಗೆ ದೇಶಾದ್ಯಂತ ಯೋಜನೆಗಳನ್ನು ರೂಪಿಸಲು ಅನುಕೂಲವಾಗಲಿದೆ. ರಾಜ್ಯದಲ್ಲಿಯೂ ಇದರ ಸಾಧಕ- ಬಾಧಕಗಳು ಅನ್ವಯಿಸಲಿವೆ.

ಆಯ್ದ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳ 3, 6 ಮತ್ತು 9ನೇ ತರಗತಿಯ ಆಯ್ದ ಗರಿಷ್ಠ 30 ಮಕ್ಕಳಿಗೆ ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು (ಕೆಎಸ್ ಕ್ಯುಎಎಸಿ) ವತಿಯಿಂದ ಈ ಪರೀಕ್ಷೆ ನಡೆಸಲಾಗುತ್ತದೆ.

ದೇಶಾದ್ಯಂತ 23 ಭಾಷೆಗಳಲ್ಲಿ ಈ ಪರೀಕ್ಷೆ ನಡೆದರೆ, ರಾಜ್ಯದಲ್ಲಿ ಕನ್ನಡ, ಮರಾಠಿ, ತಮಿಳು ಮತ್ತು ತೆಲುಗು ಸೇರಿ 7 ಮಾಧ್ಯಮಗಳಲ್ಲಿ ನಡೆಸಲಾಗುತ್ತಿದೆ. ಭಾಷೆ, ಗಣಿತ ಮತ್ತು ಪರಿಸರ ಅಧ್ಯಯನ ವಿಷಯಗಳಿಗೆ ಪರೀಕ್ಷೆ ನಡೆಸಲಾಗುತ್ತದೆ.

23 ಲಕ್ಷ ವಿದ್ಯಾರ್ಥಿಗಳು ಭಾಗಿ

ದೇಶಾದ್ಯಂತ ಒಟ್ಟು 87,619 ಶಾಲೆಗಳನ್ನು. ಆಯ್ದುಕೊಳ್ಳಲಾಗಿದ್ದು, 782 ಜಿಲ್ಲೆಗಳಿಂದ 23 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 23 ಭಾಷೆಗಳಲ್ಲಿ ಒಂದನ್ನು ಆಯ್ದುಕೊಳ್ಳುವ ಅವಕಾಶ ಇರಲಿದೆ. ಸರ್ವೇಯಲ್ಲಿ ಮಾನಸಿಕ ಆರೋಗ್ಯ, ಅಧ್ಯಯನ ಹವ್ಯಾಸ, ಶಾಲಾ ಪರಿಸರ ಮತ್ತಿತರ ವಿಷಯಗಳ ಕುರಿತು ಪ್ರಶ್ನೆ ಕೇಳಿ ಅವಲೋಕಿಸಲಾಗುತ್ತದೆ.

Evaluation: ಒಎಂಆರ್ ಮಾದರಿ ಪ್ರಶ್ನೆಪತ್ರಿಕೆ

3ನೇ ತರಗತಿಗೆ 4,5, 6ನೇ ತರಗತಿಗೆ 51 ಮತ್ತು 9ನೇ ತರಗತಿಗೆ 60 ಪ್ರಶ್ನೆಗಳನ್ನು ನೀಡಲಾಗುತ್ತದೆ. ಪ್ರಶ್ನೆಪತ್ರಿಕೆಯು ಒಎಂಆ‌ರ್ ಮಾದರಿಯಲ್ಲಿರಲಿದೆ. ಆದರೆ, 3ನೇ ತರಗತಿ ಮಕ್ಕಳು ಬುಕ್‌ಲೆಟ್‌ನಲ್ಲಿರುವ ಉತ್ತರಗಳನ್ನು ಗುರುತಿಸಬೇಕಾಗುತ್ತದೆ. ಬೆಳಗ್ಗೆ 11ರಿಂದ ಮಧ್ಯಾಹ್ನ 1ರ ವರೆಗೆ ಎಟಿ ಮತ್ತು ಮಧ್ಯಾಹ್ನ 1.30ರಿಂದ 2.45ರವರೆಗೆ ಪರೀಕ್ಷೆ ನಡೆಯಲಿದೆ.

ಯಾವ ವಿಷಯಗಳು?

3ನೇ ತರಗತಿ- ಭಾಷೆ, ಗಣಿತ, ಪರಿಸರ ಅಧ್ಯಯನ

5ನೇ ತರಗತಿ- ಭಾಷೆ, ಗಣಿತ, ಪರಿಸರ ಅಧ್ಯಯನ

9ನೇ ತರಗತಿ- ಭಾಷೆ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ

ಶಿಕ್ಷಕರು, ಶಾಲೆಗಳಿಗೂ ಪ್ರಶ್ನಾವಳಿ

3 ಮತ್ತು 6ನೇ ತರಗತಿ ಮಕ್ಕಳಿಗೆ ಭಾಷೆ, ಗಣಿತ, ಪರಿಸರ ಅಧ್ಯಯನಯನ್ನು ಬೋಧಿಸುವ ಗರಿಷ್ಠ ಮೂರು ಶಿಕ್ಷಕರಿಗೆ ಪ್ರತ್ಯೇಕವಾಗಿ ಶಿಕ್ಷಕರ ಪ್ರಶ್ನಾವಳಿಗಳನ್ನು ನೀಡಲಾಗುತ್ತದೆ. 9ನೇ ತರಗತಿಗೆ ಭಾಷೆ, ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ಬೋಧಿಸುವ ಗರಿಷ್ಠ 4 ಶಿಕ್ಷಕರು ಈ ಪ್ರಶ್ನಾವಳಿಗಳಿಗೆ ಉತ್ತರಿಸಬೇಕಿದೆ. ಒಂದು ಒಬ್ಬ ಶಿಕ್ಷಕ ಒಂದಕ್ಕಿಂತ ಹೆಚ್ಚು ವಿಷಯ ಬೋಧಿಸುತ್ತಿದ್ದಲ್ಲಿ, ಒಂದೇ ಪ್ರಶ್ನಾವಳಿಗೆ ಉತ್ತರಿಸತಕ್ಕದ್ದು ಎಂದು ಸೂಚನೆ ನೀಡಲಾಗಿದೆ. ಶಾಲೆಗಳಿಗೆ ನೀಡುವ ಪ್ರಶ್ನಾವಳಿಗಳನ್ನು ಮುಖ್ಯ ಶಿಕ್ಷಕರು ಭರ್ತಿ ಮಾಡಬೇಕಿದೆ.

ಏನಿದು ಪರಖ್?

ಪರ್ಫಾಮೆನ್ಸ್, ಅಸೆಸ್‌ಮೆಂಟ್‌ ರಿವ್ಯೂ ಆ್ಯಂಡ್ ಅನಾಲಿಸಿಸ್ ಆಫ್ ನಾಲೆಜ್ ಫಾರ್ ಹೋಲಿಸ್ಟಿಕ್ ಡೆವಲಪ್‌ಮೆಂಟ್ -ಪಿಎಆರ್ ಎಕೆಎಚ್- ಪರಖ್) ಸಂಸ್ಥೆಯು ಸ್ವಾಯತ್ತ ಸ್ಥಾನಮಾನ ಹೊಂದಿದ್ದು, ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿಯಿಂದ (ಎನ್‌ಸಿಇಆರ್‌ಟಿ) ಸ್ಥಾಪಿತವಾಗಿದೆ. ವಿವಿಧ ರಾಜ್ಯಗಳ ಶೈಕ್ಷಣಿಕ ಮಂಡಳಿಗಳು ನಡೆಸುವ ಪರೀಕ್ಷೆ, ಮೌಲ್ಯಮಾಪನ ( Evaluation) ಪದ್ಧತಿಯನ್ನು ಏಕರೂಪಗೊಳಿಸುವ ನಿಟ್ಟಿನಲ್ಲಿ ಇತ್ತೀಚೆಗೆಷ್ಟೇ ಮಹತ್ವದ ವರದಿಯನ್ನು ನೀಡಿತ್ತು. 12ನೇ ತರಗತಿ ಮೌಲ್ಯಮಾಪನಕ್ಕೆ 10 ಹಾಗೂ 11ನೇ ತರಗತಿ ಅಂಕಗಳನ್ನು ಪರಿಗಣಿಸಬೇಕು ಎಂದು ಶಿಫಾರಸು ಮಾಡಿತ್ತು.

 

Leave a Comment