Face Recognition Attendance: ಶಾಲೆಗಳಲ್ಲಿ ಫೇಸ್‌ ರೆಕಗ್ನಿಷನ್‌ ಇ-ಹಾಜರಾತಿ ವ್ಯವಸ್ಥೆ ಅಧಿಕೃತ ಆದೇಶ ಪ್ರಕಟ.

Face Recognition Attendance: ಶಾಲೆಗಳಲ್ಲಿ ಫೇಸ್‌ ರೆಕಗ್ನಿಷನ್‌ ಇ-ಹಾಜರಾತಿ ವ್ಯವಸ್ಥೆ ಅಧಿಕೃತ ಆದೇಶ ಪ್ರಕಟ.

Face Recognition Attendance: ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲಾ ವಿದ್ಯಾರ್ಥಿಗಳ ಇ-ಹಾಜರಾತಿಯನ್ನು ಖಚಿತಪಡಿಸುವ Facial Recognition ತಂತ್ರಾಂಶ ಆಧಾರಿತ “ನಿರಂತರ” ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಕುರಿತು.

 

ಪ್ರಸ್ತಾವನೆ:-

ಮೇಲೆ ಓದಲಾದ ಕ್ರಮಾಂಕ (1)ರಲ್ಲಿ 2025-26ನೇ ಸಾಲಿನಲ್ಲಿ ಸರ್ಕಾರವು ಮಂಡಿಸಿರುವ ಆಯವ್ಯಯ ಘೋಷಣೆಯ ಕಂಡಿಕೆ 112ರಲ್ಲಿ ಈ ಕೆಳಕಂಡಂತೆ ಘೋಷಣೆ ಮಾಡಲಾಗಿದೆ.

“ನಿರಂತರ’ ಕಾರ್ಯಕ್ರಮದಡಿ Face Recognition ತಂತ್ರಜ್ಞಾನದ ಮೂಲಕ ಮಕ್ಕಳ ಹಾಜರಾತಿಯನ್ನು ಖಚಿತಪಡಿಸುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು.”

ಮೇಲೆ ಓದಲಾದ ಕ್ರಮಾಂಕ (2) ರಲ್ಲಿ, ‘ನಿರಂತರ’ ಕಾರ್ಯಕ್ರಮದಡಿ Face Recognition ತಂತ್ರಜ್ಞಾನದ ಮೂಲಕ ಮಕ್ಕಳ ಹಾಜರಾತಿಯನ್ನು ಖಚಿತಪಡಿಸುವ ವ್ಯವಸ್ಥೆಯನ್ನು ಜಾರಿಗೊಳಿಸಲು ಲೆಕ್ಕ ಶೀರ್ಷಿಕೆ 4202-01-201-1-04- ಪ್ರಾಥಮಿಕ ಶಾಲೆಗಳು ಮತ್ತು ಪ್ರೌಢಶಾಲೆಗಳಿಗೆ ಮೂಲಭೂತ ಸೌಕರ್ಯ (177-ಐಟಿ ವೆಚ್ಚ 500.00 ಲಕ್ಷಗಳು) ಒಟ್ಟು 500.00 ಲಕ್ಷಗಳನ್ನು ನಿಗದಿಪಡಿಸಲಾಗಿರುತ್ತದೆ.

ಮೇಲೆ ಓದಲಾದ ಕ್ರಮಾಂಕ (3) ರಲ್ಲಿ, Centre for E-Governance, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ) ರವರು ಆಯುಕ್ತರ ಕಛೇರಿ, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ರವರ ಇ-ಆಫೀಸ್ ಕಡತ ಸಂಖ್ಯೆ DPI-CPIOSATS(OTH)/25/2024-SATS ರಲ್ಲಿ Mobile-Based Al-Driven 
Facial Recognition Attendance System Draft RFP” ಕುರಿತು ಸಮಗ್ರವಾದ ಅಭಿಪ್ರಾಯ ನೀಡಿದ್ದು, ಸದರಿ ಅಭಿಪ್ರಾಯಗಳನ್ನು ಅಳವಡಿಸಿ “Draft RFP” ಅನ್ನು ಪರಿಷ್ಕರಿಸಲಾಗಿರುತ್ತದೆ.

ಮೇಲೆ ಓದಲಾದ ಕ್ರಮಾಂಕ (4) ರಲ್ಲಿ ಆಯವ್ಯಯ ಘೋಷಣೆಯ ಕಂಡಿಕೆ 112 – ‘ನಿರಂತರ’-Mobile-Based Al-Driven Facial Recognition Attendance System ಕಾರ್ಯಕ್ರಮದ ಕ್ರಿಯಾಯೋಜನೆಯನ್ನು ಅನುಷ್ಠಾನಗೊಳಿಸಲು ಸರ್ಕಾರದ ಅನುಮೋದನೆ ಕೋರಿ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಇವರು ಈ ಮುಂದಿನಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ನಿರಂತರ- Mobile-Based Al-Driven Facial Recognition Attendance System ಯೋಜನೆಯಿಂದ ಇಲಾಖೆಗೆ ಆಗುವ ಪ್ರಯೋಜನಗಳನ್ನು ಈ ಕೆಳಕಂಡಂತೆ ನೀಡಿರುತ್ತಾರೆ:-

ಎಲ್ಲಾ ಹಂತದಲ್ಲಿನ ವಿದ್ಯಾರ್ಥಿಗಳ ಹಾಜರಾತಿಯನ್ನು ಕಡಿಮೆ ಸಮಯದಲ್ಲಿ ಹೊಂದಬಹುದಾಗಿದೆ ಹಾಗೂ ವಿದ್ಯಾರ್ಥಿಗಳ ಹಾಜರಾತಿಯಲ್ಲಿ ನಿಖರತೆ ದೊರಕುತ್ತದೆ.

ಪ್ರಸ್ತುತ ಹಾಜರಾತಿ ದಾಖಲೆಯಲ್ಲಿನ ವ್ಯವಸ್ಥೆಯಲ್ಲಿನ ನ್ಯೂನ್ಯತೆ ಸರಿಪಡಿಸಿ ನಿಖರ ಹಾಜರಾತಿಯನ್ನು ದಿನಂಪ್ರತಿ ಆಧಾರದ ಮೇಲೆ ಪಡೆಯಬಹುದಾಗಿದೆ.

ಯಾವುದೇ ಶಾಲೆಯ ಹಾಜರಾತಿಯಲ್ಲಿ ಅಸಾಧಾರಣ ಕೊರತೆಯನ್ನು ದಿನಂಪ್ರತಿ ಆಧಾರದಲ್ಲಿ ಮೇಲ್ವಿಚಾರಿಸಬಹುದಾಗಿದೆ.

ವಿವಿಧ ಪೋತ್ಸಾಹದಾಯಕ ಯೋಜನೆಗಳ ಅನುಷ್ಠಾನಕ್ಕೆ ನಿಖರ ಮಾಹಿತಿ ಲಭ್ಯವಾಗುತ್ತದೆ. ಇದರಿಂದ ಅನಗತ್ಯ ಅಥವಾ ಹೆಚ್ಚುವರಿ ಅನುಧಾನ ಹಂಚಿಕೆಯನ್ನು ತಡೆಗಟ್ಟಬಹುದು.

ದಿನಂಪ್ರತಿ ಆಧಾರದಲ್ಲಿ ನಿಖರವಾದ తాలా ಹಾಜರಾತಿಯ ವರದಿಯನ್ನು ಹೊಂದುವುದರಿಂದ ಆಯಾ ಸಂಬಂಧಿತ ಶಾಲೆಗಳಲ್ಲಿನ ಶೈಕ್ಷಣಿಕ ವ್ಯವಸ್ಥೆಯನ್ನು ಸುಧಾರಿಸಬಹುದಾದ ನಿಟ್ಟಿನಲ್ಲಿ ಯೋಜನೆ ರೂಪಿಸಲು ಸಹಕಾರಿಯಾಗಿದೆ.

ಸದರಿ ಕಾರ್ಯಕ್ರಮಕ್ಕೆ ಒಟ್ಟಾರೆ 52,686 ಶಾಲೆಗಳು ಒಳಪಡುತ್ತವೆ (46,460 ಸರ್ಕಾರಿ ಶಾಲೆಗಳು ಮತ್ತು 6,226 ಅನುದಾನಿತ ಶಾಲೆಗಳು) ಹಾಗೂ ಒಟ್ಟಾರೆ 52,55,738 ವಿದ್ಯಾರ್ಥಿಗಳ ಹಾಜರಾತಿಯನ್ನು Mobile-Based Al-Driven Facial Recognition ಮೂಲಕ ಸೆರಹಿಡಿಯಬಹುದಾಗಿದೆ. (ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆ 40,74,525 ಅನುದಾನಿತ ಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆ – 11,81,213 ) ಎಂದು ಅಂದಾಜಿಸಲಾಗಿದೆ.

ಈ ವ್ಯವಸ್ಥೆಯು ನೈಜ ಸಮಯದಲ್ಲಿ ವಿದ್ಯಾರ್ಥಿಗಳ ಮುಖದ ಡೇಟಾವನ್ನು ಗುರುತಿಸುತ್ತದೆ ಮತ್ತು ಸುಧಾರಿತ ವೆಕ್ಟರ್-ಆಧಾರಿತ ಮುಖ ಗುರುತಿಸುವಿಕೆ ಎಂಜಿನ್ ಅನ್ನು ಬಳಸುತ್ತದೆ (Advanced Vector-Based Facial Recognition Engine) ಸೆರೆಹಿಡಿಯಲಾದ ವಿದ್ಯಾರ್ಥಿಗಳ ಮುಖದ ಡೇಟಾವನ್ನು ಮೊಬೈಲ್ ಅಪ್ಲಿಕೇಶನ್ ಮೂಲಕ ಸೆರೆಹಿಡಿದು ವಿಶಿಷ್ಟ ID ಗೆ ಎನ್‌ಕ್ರಿಪ್ಟ್ ಮಾಡಲಾಗುವುದಾಗಿ ಹಾಗೂ ಸೆರೆಹಿಡಿಯಲಾದ ವಿದ್ಯಾರ್ಥಿಯ ಚಿತ್ರವನ್ನು ಪುನರ್ನಿಮಿ್ರಸಲು ರಿವರ್ಸ್-ಇಂಜಿನಿಯರಿಂಗ್ ಮಾಡಲಾಗುವುದಿಲ್ಲ ಎಂದು ತಿಳಿಸಿ, ಗರಿಷ್ಠ ಗೌಪ್ಯತೆ ಮತ್ತು ಸುರಕ್ಷತೆಯನ್ನು ಕಾಪಾಡುತ್ತದೆ ಎಂದು ತಿಳಿಸಿರುತ್ತಾರೆ.

ಸದರಿ ಯೋಜನೆಯ ಸಾಫ್ಟ್‌ವೇರ್ ಅಪ್ಲಿಕೇಷನ್ ಹಾಗೂ ದತ್ತಾಂಶವನ್ನು KSDC, ವಿಕಾಸಸೌಧದಲ್ಲಿ ಹೋಸ್ಟ್ ಮಾಡುವುದಾಗಿ ತಿಳಿಸಿ, ಯೋಜನೆಯು ಫಲಾನುಭವಿ ಆಧಾರಿತ ಯೋಜನೆಯಲ್ಲಿ ಬರುವುದಾಗಿ ಹಾಗೂ ರಾಜ್ಯ ವಲಯದಿಂದ ನಿರ್ವಹಿಸಲ್ಪಡುವುದಾಗಿ ತಿಳಿಸಲಾಗಿದೆ.

ಮೇಲೆ ಓದಲಾದ ಕ್ರಮಾಂಕ (5) ರಲ್ಲಿ, ದಿನಾಂಕ: 21.05.2025 ರಂದು Technical Advisory Panel (TAP) ಸಭೆಯನ್ನು ಏರ್ಪಡಿಸಲಾಗಿದ್ದು, ಸದರಿ ಸಭೆಯಲ್ಲಿ “Mobile-Based Al-Driven Facial Recognition Attendance System Revised Draft RFP” ಕುರಿತು ಸಮಗ್ರವಾದ ಅಭಿಪ್ರಾಯಗಳನ್ನು ನೀಡಿರುತ್ತಾರೆ.

ಸದರಿ ಪ್ರಸ್ತಾವನೆಯಲ್ಲಿ ಕಾರ್ಯಕ್ರಮದ ತಾಂತ್ರಿಕ ನಿರ್ದಿಷ್ಟತೆಗಳ ವಿವರಗಳು ಬಾಕಿ ಇದು ತಾಂತ್ರಿಕ ನಿರ್ದಿಷ್ಟತೆಗಳೊಂದಿಗೆ ಕಾರ್ಯಕ್ರಮದ ಪ್ರಸ್ತಾವನೆಯನ್ನು ಮುಂದಿನ ದಿನಗಳಲ್ಲಿ ಜರುಗುವ TAP ಸಭೆಯಲ್ಲಿ ಪ್ರಸ್ತುತ ಪಡಿಸಲು ತಿಳಿಸಿರುತ್ತಾರೆ. ಅಸ್ಸಾಂ ಹಾಗೂ ತೆಲಂಗಾಣ ರಾಜ್ಯಕ್ಕೆ ಆಯುಕ್ತರ ಕಛೇರಿ, ಶಾಲಾ ಶಿಕ್ಷಣ ಇಲಾಖೆಯಿಂದ ಒಂದು ತಂಡವನ್ನು ಕಳುಹಿಸಿ, ಸದರಿ ರಾಜ್ಯಗಳಲ್ಲಿ ಮೇಲ್ಕಂಡ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದ್ದು, ಸಾಧಕ-ಭಾದಕಗಳನ್ನು ಅಧ್ಯಯನ ಮಾಡಿ ಮುಂದಿನ TAP ಸಭೆಯಲ್ಲಿ ವರದಿಯನ್ನು ಪ್ರಸ್ತುತ ಪಡಿಸಲು ತಿಳಿಸಲಾಗಿದೆ.

ಮೇಲ್ಕಂಡ ಪ್ರಸ್ತಾವನೆಯ ಎಲ್ಲಾ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಆದೇಶದ ವಿವರ ಹೀಗಿದೆ.

2025-26ನೇ ಸಾಲಿನಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಸಂಬಂಧಿಸಿದ ಆಯವ್ಯಯ ಕಂಡಿಕೆ -112 ರಲ್ಲಿ “ನಿರಂತರ* ಕಾರ್ಯಕ್ರಮದಡಿ Mobile-Based Al-Driven Facial Recognition Attendance System ತಂತ್ರಜ್ಞಾನದ ಮೂಲಕ ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲಾ ವಿದ್ಯಾರ್ಥಿಗಳ ಹಾಜರಾತಿಯನ್ನು ದಾಖಲಿಸುವ ವ್ಯವಸ್ಥೆಯನ್ನು 2025-26ನೇ ಶೈಕ್ಷಣಿಕ ಸಾಲಿನಿಂದಲೇ ಈ ಕೆಳಕಂಡ ಷರತ್ತು ಮತ್ತು ನಿಬಂಧನೆಗಳ ಪಾಲನೆಗೆ ಒಳಪಟ್ಟು ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಇವರಿಗೆ ಅನುಮತಿಸಿ ಆದೇಶಿಸಿದೆ.

ಷರತ್ತುಗಳು ಮತ್ತು ನಿಬಂಧನೆಗಳು:-

1. ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಇವರು ಸದರಿ ಯೋಜನೆಯ ಅನುಷ್ಠಾನಾಧಿಕಾರಿಯಾಗಿ ಕಾರ್ಯನಿರ್ವಹಿಸತಕ್ಕದ್ದು.

2. ಇಲಾಖೆಯ TAP ಸಭೆಯಲ್ಲಿ ನಿರ್ಧರಿಸುವ ಅಂಶಗಳನ್ನಯ ಹಾಗು Request for Proposal (RFP) ಅನುಮೋದನೆಯ ನಂತರ Mobile-Based Al-Driven Facial Recognition Attendance System Request for Proposal (RFP) KTPP ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ರವರು ಪಾರದರ್ಶಕವಾಗಿ ಟೆಂಡರ್ ಆಹ್ವಾನಿಸಲು ನಿಯಮಾನುಸಾರ ಕ್ರಮ ಕೈಗೊಳ್ಳತಕ್ಕದ್ದು.

3. “ನಿರಂತರ” ಕಾರ್ಯಕ್ರಮದ ಅನುಷ್ಠಾನ ಸಂಬಂಧ ಪರಿಶೀಲಿಸಿ, ನಿಯಮಗಳಂತೆ ಅಗತ್ಯವಿದ್ದಲ್ಲಿ ಸಚಿವ ಸಂಪುಟದ ಅನುಮೋದನೆಗೆ ಪ್ರಸ್ತಾವನೆ ಸಲ್ಲಿಸತಕ್ಕದ್ದು.

4. “ನಿರಂತರ” ಕಾರ್ಯಕ್ರಮವನ್ನು TAP ಸಭೆಯಲ್ಲಿ ಅನುಮೋದನೆಗೊಳ್ಳುವ Request for Proposal (RFP) ಯಲ್ಲಿನ ನಿಗಧಿತ ಕಾಲಮಿತಿಯೊಳಗೆ ಅನುಷ್ಠಾನಗೊಳಿಸಲು ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಇವರು ಕ್ರಮವಹಿಸತಕ್ಕದ್ದು.

5. ಸದರಿ ಕಾರ್ಯಕ್ರಮದಲ್ಲಿ ದೈನಂದಿನ ಮಕ್ಕಳ ಹಾಜರಾತಿಯನ್ನು SATS ತಂತ್ರಾಂಶದೊಂದಿಗೆ ಸಂಯೋಜಿಸಿ, SATS ತಂತ್ರಾಂಶದಲ್ಲಿ ಪ್ರದರ್ಶನಗೊಳ್ಳುವಂತೆ ನಿಯಮಗಳಂತೆ ಕ್ರಮವಹಿಸತಕ್ಕದ್ದು.

ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 493 ವೆಚ್ಚ-8/2025, ದಿನಾಂಕ: 17.06.2025ರಲ್ಲಿ ನೀಡಿರುವ ಸಹಮತಿ ಮೇರೆಗೆ ಮತ್ತು ಸರ್ಕಾರದ ಆದೇಶ ಸಂಖ್ಯೆ: FD 01 TFP 2025 ದಿನಾಂಕ:02-04-2025ರಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿಯವರಿಗೆ ಪ್ರತ್ಯಾಯೋಜಿಸಿರುವ ಅಧಿಕಾರದನ್ವಯ ಹೊರಡಿಸಿದೆ.

 

CLICK HERE TO DOWNLOAD ORDER

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!