Ganga Water Treaty-1996: ಏನಿದು ಜಲ ಒಪ್ಪಂದ?
Ganga Water Treaty-1996: ಭಾರತ ಪಾಕಿಸ್ತಾನಕ್ಕೆ ಬಲವಾದ ಪೆಟ್ಟು ಕೊಟ್ಟ ಬೆನ್ನಲ್ಲೆ ಬಾಂಗ್ಲಾಗೆ ಉಸಿರಾಡದ ಹಾಗೆ ಮಾಡಿಲು ಭಾರತ ಸಜ್ಜಾಗಿದೆ. ಬಾಂಗ್ಲಾ ದೇಶಕ್ಕೆ ಭಾರತ ಮತ್ತೊಂದು ಜಲ ಅಸ್ತ್ರ ಹೂಡಲು ತಯ್ಯಾರಾಗಿದೆ.
ಸಿಂಧೂ ನದಿ ಒಪ್ಪಂದದ ರದ್ದಾಯಿತು.ಈಗ ಗಂಗಾ ನದಿ ಅಸ್ತ್ರ ಮುನ್ನಲೆಗೆ…ಹೌದು ಸಿಂಧೂ ನದಿ ನೀರು ರದ್ದು ಮಾಡುವ ಮೂಲಕ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿರುವ ಭಾರತ ಈಗ ಮತ್ತೊಂದು ಜಲ ಅಸ್ತ್ರಕ್ಕೆ ಸಜ್ಜಾಗಿದೆ.
ಪಾಕಿಸ್ತಾನವನ್ನು ಹೆಡೆಮುರಿ ಕಟ್ಟಿ ಹಾಕಿದ ನಂತರ ಭಾರತ ಈಗ ಮತ್ತೊಂದು ಪ್ರಮುಖ ಹೆಜ್ಜೆಡಲು ಮುಂದಾಗಿದೆ ನೆರೆಯ ಮತ್ತೊಂದು ಅನಿಷ್ಟ ದೇಶವಾದ ಬಾಂಗ್ಲಾ ದೇಶಕ್ಕೆ ಬುದ್ದಿ ಕಲಿಸಲು ಭಾರತ ಸರ್ಕಾರ ಮುಂದಾಗಿದೆ. ಪಾಕಿಸ್ತಾನಕ್ಕೆ ಕೈ ಜೋಡಿಸಿರುವ ಬಾಂಗ್ಲಕ್ಕೆ ತಕ್ಕ ಪಾಠ ಕಲಿಸಲು ಪ್ರಧಾನಿ ಮೋದಿ ಗುಡ್ ಪ್ಲಾನ್ ಮಾಡಿದ್ದಾರೆ ಪಾಕ್ ಗೆ ಸಿಂಧು ಬಾಣ ಬಿಟ್ಟು ನರಕ ತೋರಿಸಿದರೆ ಈಗ ಬಾಂಗ್ಲಕ್ಕೆ ಗಂಗಾ ಅಸ್ತ್ರ ಬಳಸಿ ಮರ್ಮಘಾತ ನೀಡಲು ಮುಂದಾಗಿದೆ.
ಬಾಂಗ್ಲಾದೇಶದೊಂದಿಗಿನ ಗಂಗಾ ನದಿ ನೀರು ಹಂಚಿಕೆ ಒಪ್ಪಂದವನ್ನು ಪರಿಷ್ಕರಿಸಲು ಕೇಂದ್ರ ಸರ್ಕಾರ ದೊಡ್ಡ ಹೆಜ್ಜೆಯನ್ನು ಇಟ್ಟಿದೆ. ಹಾಗಾದರೆ ಏನಿದು ಗಂಗಾಜ ಜಲ ಒಪ್ಪಂದ ಇದನ್ನು ಪರಿಷ್ಕರಣೆ ಮಾಡಿದರೆ ಬಾಂಗ್ಲಾ ದೇಶದ ಮೇಲೆ ಉಂಟಾಗುವ ಪರಿಣಾಮ ಎಂತಹುದು? ಭಾರತ ಯಾಕೆ ಈ ಗಂಗಾ ನದಿ ಒಪ್ಪಂದವನ್ನು ಪರಿಷ್ಕರಣೆ ಮಾಡಲು ಸಜ್ಜಾಗಿದೆ.
ಈ ಲೇಖನದಲ್ಲಿ ಸಂಪೂರ್ಣ ಮಾಹಿತಿ ಇದೆ. ಮುಂದೆ ನೋಡಿ. ಬಾಂಗ್ಲಾದೇಶ ಈಗ ಭಾರತದ ಅಂತರ ಕಾಯ್ದುಕೊಂಡಿದೆ ಪಾಕಿಸ್ತಾನ ಹಾಗೂ ಚೀನಾಗೆ ಬೆಂಬಲಿಸುವ ಈಗಿನ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯುನಸ್ ಭಾರತದ ವಿರುದ್ಧ ನಿಲುವನ್ನು ತಾಳಿದ್ದಾರೆ. ಈ ಹಿಂದೆ ದೇಶ ಬಿಟ್ಟು ಪಲಾಯನ ಮಾಡಿದ್ದ ಶೇಖ್ ಹಸಿನಾಗೆ ಭಾರತ ಆಶ್ರಯ ನೀಡಿತು. ಶೇಖ್ ಹಸೀನ ಯಾವಾಗಲೂ ಭಾರತವನ್ನ ಬೆಂಬಲಿಸುತ್ತಿದ್ದರು. ಈಗ ಭಾರತ ಮತ್ತು ಬಾಂಗ್ಲಾದೇಶದ ಸಂಬಂಧ ಹಳಸುತ್ತಿದ್ದಂತೆ ಬಾಂಗ್ಲಕ್ಕೆ ಪಾಠ ಕಲಿಸಲು ಭಾರತ ಮುಂದಾಗಿದೆ. ಅದರ ಮೊದಲ ಭಾಗವಾಗಿ ಗಂಗಾನದಿ ಮೇಲೆ ಕಣ್ಣಿಟ್ಟಿದ್ದು, ಗಂಗಾನದಿ ಒಪ್ಪಂದವನ್ನ ಪರಿಷ್ಕರಣೆ ಮಾಡುವ ಮೂಲಕ ಬಾಂಗ್ಲಾ ದೇಶವನ್ನು ಕಟ್ಟಿ ಹಾಕಲು ಮುಂದಾಗಿದೆ.
2026 ಕ್ಕೆ ಗಂಗಾನ ನದಿ ಒಪ್ಪಂದಕ್ಕೆ 30 ವರ್ಷ. ಜಲ ಪರಿಷ್ಕರಣೆಗೆ ಮುಂದಾದ ಭಾರತ.
1996 ರಲ್ಲಿ ಸಹಿ ಹಾಕಲಾಗಿದ್ದ ಈ ಐತಿಹಾಸಿಕ ಗಂಗಾನ ನದಿ ಒಪ್ಪಂದ 2026 ಕ್ಕೆ 30 ವರ್ಷಗಳನ್ನು ಪೂರೈಸಲಿದ್ದು, ಅದರ ಅವಧಿ ಪೂರ್ಣಗೊಳ್ಳಲಿದೆ. ಒಪ್ಪಂದದ ನವೀಕರಣಕ್ಕೆ ಎರಡು ದೇಶಗಳ ಒಪ್ಪಿಗೆ ಅಗತ್ಯವಿದ್ದರೂ ತನ್ನ ಪ್ರಸ್ತುತ ಅಭಿವೃದ್ಧಿ ಅಗತ್ಯಗಳನ್ನು ಪೂರೈಸುವಂತಹ ಒಂದು ಹೊಚ್ಚ ಹೊಸ ಒಪ್ಪಂದವನ್ನು ರೂಪಿಸಲು ಕೇಂದ್ರ ಸರ್ಕಾರ ಆಸಕ್ತಿ ಹೊಂದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕಳೆದ ಮೂರು ದಶಕಗಳಲ್ಲಿ ಎರಡು ದೇಶಗಳ ಜನಸಂಖ್ಯೆ ಆರ್ಥಿಕತೆ ಮತ್ತು ಪರಿಸರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಈ ಹಿನ್ನಲೆಯಲ್ಲಿ ಭಾರತವು ಒಪ್ಪಂದದ ಪರಿಷ್ಕರಣೆಗೆ ಮುಂದಾಗಿದೆ ಎನ್ನಲಾಗಿದೆ. ಏನಿದು ಗಂಗಾನೀರು ಹಂಚಿಕೆ ಒಪ್ಪಂದ 1996ರಲ್ಲಿ ಶೇಖ್ ಹಸೀನರವರು ಬಾಂಗ್ಲಾದೇಶದ ಪ್ರಧಾನಿಯಾಗಿ ಮೊದಲ ಬಾರಿಗೆ ಅಧಿಕಾರ ವಹಿಸಿಕೊಂಡಾಗ ಈ ಒಪ್ಪಂದಕ್ಕೆ ಸಹಿ ಹಾಕಲಾಗಿ ಇದರ ಪ್ರಮುಖ ಉದ್ದೇಶಗಳನ್ನ ನಾವು ಅವಲೋಕನ ಮಾಡುವುದಾದರೆ ಕೊಲ್ಕತ್ತಾ ಬಂದರಿನ ಸಂಚಾರ ಯೋಗ್ಯತೆಯನ್ನ ಕಾಪಾಡಲು ಗಂಗೆಯ ನೀರನ್ನ ಹೂಗ್ಲಿ ನದಿಗೆ ತಿರುಗಿಸುವ ಸಲುವಾಗಿ 1975ರಲ್ಲಿ ಫರಕ್ಕ ಬ್ಯಾರೇಜ್ ನ್ನು ನಿರ್ಮಾಣ ಮಾಡಲಾಯಿತು. ಇದರಿಂದ ಬಾಂಗ್ಲಾದೇಶಕ್ಕೆ ನೀರಿನ ಕೊರತೆ ಉಂಟಾಗಿ ವಿವಾದ ಸೃಷ್ಟಿಯಾಗಿದೆ ಈ ವಿವಾದವನ್ನು ಬಗೆಹರಿಸಲು ಒಪ್ಪಂದವನ್ನು ಮಾಡಿಕೊಳ್ಳಲಾಯಿತು.
ಪ್ರತಿವರ್ಷ ಜನವರಿಯಿಂದ ಮೇ 31ರವರೆಗಿನ ಬೇಸಿಗೆ ಅವಧಿಯಲ್ಲಿ ಪಶ್ಚಿಮ ಬಂಗಾಳದ ಫರಕ್ಕ ಬ್ಯಾರೇಜ್ ನಲ್ಲಿ ಗಂಗಾ ನದಿಯ ಹರಿವನ್ನು ಹಂಚಿಕೊಳ್ಳಲು ಇದು ಒಂದು ಸ್ಪಷ್ಟ ಚೌಕಟ್ಟನ್ನು ಮಾಡಲಾಯಿತು. ಬಾಂಗ್ಲಾದೇಶದ ಗಡಿಯಿಂದ ಸುಮಾರು 10 ಕಿ. ಮೀ ದೂರದಲ್ಲಿರುವ ಪರಕ ಬ್ಯಾರೇಜ್ ನಿಂದ ಕೊಲ್ಕತ್ತಾ ಫೋರ್ಟ್ ಟ್ರಸ್ಟ್ಗೆ ನೀರುಣಿಸುವ ಫೀಡರ್ ಕಾಲುವೆಗೆ 40 ಸಾ ಕ್ಯೂಸೆಕ್ ನೀರನ್ನು ತಿರುಗಿಸಲು ಈ ಬ್ಯಾರೇಜ್ ನೆರವಾಯಿತು.
ಪ್ರಸ್ತುತ ಹಂಚಿಕೆ ಸೂತ್ರ ಮತ್ತು ಭಾರತದ ಹೊಸ ಬೇಡಿಕೆ ಜನಸಂಖ್ಯೆ ಆರ್ಥಿಕತೆ ಮತ್ತು ಪರಿಸರದಲ್ಲಿ ಸಾಕಷ್ಟು ಬದಲಾವಣೆಗಳಿಂದ ಭಾರತಕ್ಕೆ ಹೆಚ್ಚಿನ ನೀರಿನ ಅವಶ ಅವಶ್ಯಕತೆ ಇರುವುದರಿಂದ ಈಗ ಒಪ್ಪಂದ ಪರಿಷ್ಕರಣೆಗೆ ಮುಂದಾಗಿದೆ. ಪ್ರಸ್ತುತ ಒಪ್ಪಂದದ ಪ್ರಕಾರ ಅತಿ ಕಡಿಮೆ ನೀರಿನ ಹರಿವಿರುವ ಮಾರ್ಚ್ 11 ರಿಂದ ಮೇ 11ರವರೆಗಿನ ಅವಧಿಯಲ್ಲಿ ಪ್ರತಿ 10 ದಿನಗಳಿಗೊಮ್ಮೆ ಎರಡು ದೇಶಗಳಿಗೆ 35000 ಕ್ಯೂಸೆಕ್ಸ್ ನೀರನ್ನು ಹಂಚಿಕೆ ಮಾಡಲಾಗುತ್ತದೆ. ಆದರೆ ತನ್ನ ಹೆಚ್ಚುತ್ತಿರುವ ಅಗತ್ಯಗಳನ್ನು ಪೂರೈಸಲು ಭಾರತ ಇದೇ ಅವಧಿಯಲ್ಲಿ ಹೆಚ್ಚುವರಿಯಾಗಿ 30,000 ದಿಂದ 35,000 ಕ್ಯೂಸೆಕ್ಸ್ ನೀರು ಬೇಕಾಗುತ್ತದೆ. ಹೀಗಾಗಿ ಅಷ್ಟೊಂದು ನೀರನ್ನು ಬಿಡಲು ಸಾಧ್ಯವಿಲ್ಲ ಎಂದು ಹೇಳುವ ಸಾಧ್ಯತೆ ಕೂಡ ಇದೆ. ಪ್ರಸ್ತುತವಾಗಿ ಬಿಡುವ ನೀರಿಗಿಂತ ಕಡಿಮೆ ನೀರನ್ನು ಬಾಂಗ್ಲಕ್ಕೆ ಬಿಡುವ ಸಾಧ್ಯತೆ ಕೂಡ ಇದೆ.
ಭಾರತಕ್ಕೆ ಒಪ್ಪಂದದ ಪರಿಷ್ಕರಣೆ ಏಕೆ ಅಗತ್ಯ?
ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ನಡುವೆ ನೀರಿನ ಹಂಚಿಕೆಯಲ್ಲಿ ಉತ್ತಮ ಸಮತೋಲನ ಸಾಧಿಸಲು ಒಪ್ಪಂದವನ್ನು ಮರುಪರಿಶೀಲಿಸುವ ಅವಶ್ಯಕತೆ ಇದೆ ಎಂದು ಮೂಲಗಳು ಹೇಳಿವೆ ಭಾರತದ ಕೃಷಿ, ಕೈಗಾರಿಕೆ ಮತ್ತು ಕುಡಿಯುವ ನೀರಿನ ಬೇಡಿಕೆ ಗಣನೀಯವಾಗಿ ಹೆಚ್ಚಾಗಿದೆ. ಪಶ್ಚಿಮ ಬಂಗಾಳ ಬಿಹಾರ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳು ಗಂಗಾ ನದಿಯ ನೀರನ್ನ ಹೆಚ್ಚಾಗಿ ಅವಲಂಬಿಸಿವೆ. ಪಾರಕ್ ಬ್ಯಾರೇಜ್ ನ ಮುಖ್ಯ ಉದ್ದೇಶವೇ ಕೋಲ್ಕತ್ತ ಬಂದರಿಗೆ ನೀರು ಹರಿಸಿ ಹೂಳು ತುಂಬುವುದನ್ನು ತಡೆಯುವುದು ಆದರೆ ಪ್ರಸ್ತುತ ಹಂಚಿಕೆಯಾಗುತ್ತಿರುವ ನೀರು ಬಂದರಿನ ಸಂಚಾರ ಯೋಗ್ಯತೆಯನ್ನು ಕಾಪಾಡಲು ಸಾಕಾಗುತ್ತಿಲ್ಲ. ಹೂಳು ಹೆಚ್ಚಾದಂತೆ ದೊಡ್ಡ ಹಡಗುಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಇದು ಬಂದರಿನ ಆರ್ಥಿಕತೆಯ ಮೇಲೆ ನೇರ ಪರಿಣಾಮವನ್ನ ಬೀರುತ್ತದೆ.
ಹಿಮಾಲಯದ ಹಿಮನದಿಗಳು ಕರಗುತ್ತಿರುವುದು ಮತ್ತು ಮಳೆಯ ಮಾದರಿಯಲ್ಲಿನ ಬದಲಾವಣೆಗಳಿಂದಾಗಿ ಬೇಸಿಗೆಯಲ್ಲಿ ಗಂಗಾ ನದಿಯ ಹರಿವು ಕಡಿಮೆಯಾಗುತ್ತಿದೆ ಇದು ಲಭ್ಯವಿರುವ ನೀರಿನ ಪ್ರಮಾಣವನ್ನೇ ಕಡಿಮೆ ಮಾಡಿದ್ದು ಹಂಚಿಕೆಯ ಸೂತ್ರವನ್ನು ಮರು ಪರಿಶೀಲಿಸುವುದು ಅನಿವಾರ್ಯವಾಗಿದೆ. ಭಾರತಕ್ಕೆ ಹೆಚ್ಚುವರಿ ನೀರು ಬೇಕು ಎಂದರೆ ಬಾಂಗ್ಲಾದೇಶಕ್ಕೆ ಹರಿಯುವ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ಇದು ಬಾಂಗ್ಲಾದೇಶದ ಮೇಲೆ ಗಂಭೀರ ಪರಿಣಾಮಗಳನ್ನು ಬೀರಲಿದೆ. ಅದರಲ್ಲೂ ಪ್ರಮುಖವಾಗಿ ಕೃಷಿಯ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಬಾಂಗ್ಲಾದೇಶದ ನೈರುತ್ಯ ಭಾಗವು ಕೃಷಿಗಾಗಿ ಗಂಗಾ ನದಿಯ ನೀರನ್ನೇ ಸಂಪೂರ್ಣವಾಗಿ ಅವಲಂಬಿಸಿರುವದರಿಂದ ನೀರಿನ ಹರಿವು ಕಡಿಮೆಯಾದರೆ ಭತ್ತದಂತಹ ಪ್ರಮುಖ ಬೇಸಿಗೆ ಬೆಳೆಗಳಿಗೆ ಸಾಕಷ್ಟು ನೀರು ಸಿಗದೆ ಇಳುವರಿ ಕುಸಿಯುತ್ತದೆ.
ನೀರಾವರಿ ಸೌಲಭ್ಯವಿಲ್ಲದೆ ಕೃಷಿಭೂಮಿ ಒಣಗಿ ಲಕ್ಷಾಂತರ ರೈತರು ಬೀದಿಗೆ ಬೀಳುವ ಸಾಧ್ಯತೆ ಇದೆ. ಇದಲ್ಲದೆ ಕುಡಿಯುವ ನೀರು ಮೀನುಗಾರರಿಗೂ ಹೊಡೆತ ಬಿಳಲಿದೆ. ರಾಜತಾಂತ್ರಿಕವಾಗಿ ಎರಡು ದೇಶಗಳ ಸಂಬಂಧ ಹಾಳಾಗುವ ಸಾಧ್ಯತೆಯು ಇದೆ. ಒಟ್ಟಾರೆಯಾಗಿ ವಿರೋಧಿ ದೇಶಗಳಿಗೆ ತಕ್ಕ ಪಾಠ ಕಲಿಸಲು ಭಾರತ ದಿಟ್ಟ ಹೆಜ್ಜೆ ಇಟ್ಟಿದೆ. ಪಾಕಿಸ್ತಾನಕ್ಕೆ ಸಿಂಧು ನದಿ ಒಪ್ಪಂದದ ಮೂಲಕ ಪಾಠ ಕಲಿಸಿದ್ರೆ ಈಗ ಬಾಂಗ್ಲಕ್ಕೆ ಗಂಗಾ ನದಿಯ ಮೂಲಕ ಬುದ್ದಿ ಕಲಿಸಲು ಕೇಂದ್ರ ಮುಂದಾಗಿದೆ. ಗಂಗಾ ಒಪ್ಪಂದಕ್ಕೆ 2026 ಕ್ಕೆ 30 ವರ್ಷ ತುಂಬಲಿದ್ದು ಆಗ ಭಾರತ ರಾಜತಾಂತ್ರಿಕವಾಗಿ ಯಾವ ಬೇಡಿಕೆ ಇಡುತ್ತೆ ಅನ್ನೋದನ್ನ ಕಾದು ನೋಡಬೇಕು.