Government Employees DA:ಕೇಂದ್ರ ಸರಕಾರಿ ನೌಕರರಿಗೆ ಸೆಪ್ಟೆಂಬರ್‌ನಲ್ಲಿ ತುಟ್ಟಿಭತ್ಯೆ?
Government Employees DA:ಕೇಂದ್ರ ಸರಕಾರಿ ನೌಕರರಿಗೆ ಸೆಪ್ಟೆಂಬರ್‌ನಲ್ಲಿ ತುಟ್ಟಿಭತ್ಯೆ? ಕೇಂದ್ರ ಸರಕಾರಿ ನೌಕರರು 8ನೇ ವೇತನ ಆಯೋಗದ ಸಂಬಳ ಹೆಚ್ಚಳಕ್ಕಾಗಿ ಕಾಯುತ್ತಿದ್ದಾರೆ. ಇದರ ಮಧ್ಯೆಯೇ, ಅವರಿಗೆ ಸೆಪ್ಟೆಂಬರ್ ನಲ್ಲಿ ತುಟ್ಟಿಭತ್ಯೆ ಹೆಚ್ಚಳ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಸರಕಾರಿ ನೌಕರರಿಗೆ ವರ್ಷದಲ್ಲಿ ಎರಡು ಬಾರಿ ತುಟ್ಟಿಭತ್ಯೆ ಹೆಚ್ಚಿಸಲಾಗುತ್ತದೆ. ಜನವರಿಯಿಂದ ಜೂನ್, ಜುಲೈನಿಂದ ಡಿಸೆಂಬರ್ ಅವಧಿಯ ಲೆಕ್ಕಾಚಾರದಂತೆ ಡಿಎ ಹೆಚ್ಚಿಸಲಾಗುತ್ತದೆ.
ಈಗ ಜನವರಿಯಿಂದ ಜೂನ್‌ವರೆಗಿನ ತುಟ್ಟಿಭತ್ಯೆಯನ್ನು ಸೆಪ್ಟೆಂಬರ್ ನಲ್ಲಿ ಏರಿಕೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಕಳೆದ ಮಾರ್ಚ್‌ನಲ್ಲಿ ಕೇಂದ್ರ ಸರಕಾರವು ನೌಕರರ ತುಟ್ಟಿಭತ್ಯೆಯಲ್ಲಿ ಶೇ.2ರಷ್ಟು ಜಾಸ್ತಿ ಮಾಡಿತ್ತು. ಇದರೊಂದಿಗೆ ನೌಕರರಿಗೆ ನೀಡುವ ತುಟ್ಟಿಭತ್ಯೆಯು ಶೇ.55ಕ್ಕೆ ಏರಿಕೆಯಾಗಿದೆ.
ಈಗ ಕೇಂದ್ರ ಸರಕಾರವು 7ನೇ ವೇತನ ಆಯೋಗದ ಅನ್ವಯ ಶೇ.3-4ರಷ್ಟು ಡಿಎ ಹೆಚ್ಚಿಸಲಿದೆ ಎಂದು ಹೇಳಲಾಗುತ್ತಿದೆ. ಇನ್ನು, 8ನೇ ವೇತನ ಆಯೋಗದ ವರದಿ ಶಿಫಾರಸುಗಳನ್ನು 2026ರ ಏಪ್ರಿಲ್ 1ರಿಂದ ಜಾರಿಗೊಳಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸದ್ಯ, ಆಯೋಗದ ರಚನೆಗಾಗಿ ನೌಕರರು ಕಾಯುತ್ತಿದ್ದಾರೆ.