Government Employees:ಒಂದೇ ಸ್ಥಳದಲ್ಲಿ ವಾಸಿಸುವ ಸರ್ಕಾರಿ ನೌಕರ/ಳ ಪತಿ/ಪತ್ನಿಯವರಿಗೆ ಮನೆ ಬಾಡಿಗೆ ಭತ್ಯೆ ದೊರೆಯುತ್ತದೆಯೇ?
Government Employees:
ಕಂಡಿತ ಮನೆ ಬಾಡಿಗೆ ಭತ್ಯೆ ದೊರೆಯುವುದಿಲ್ಲ. ಯಾಕೆ ಎಂಬ ಬಗ್ಗೆ ತಿಳಿಯುವ ಮೊದಲು ನಾವು ಕೆಲವೊಂದು ಮಾಹಿತಿಗಳನ್ನು ತಿಳಿದುಕೊಳ್ಳಬೇಕು.
2011ರ ಅಧಿಕಾರಿ ವೇತನ ಸಮಿತಿಯ ಶಿಫಾರಸ್ಸುಗಳ ಆಧಾರದ ಸರ್ಕಾರಿ ನೌಕರನ ವೇತನ ಶ್ರೇಣಿ ಮತ್ತು ಭತ್ಯೆಗಳನ್ನು ಸರ್ಕಾರಿ ಆದೇಶ ಸಂಖ್ಯೆ.ಎಫ್‌ಡಿ 7 ಎಸ್‌ಆರ್‌ಪಿ 2012, ದಿನಾಂಕ, 21.04.2012 ರನ್ವಯ ಪರಿಷ್ಕರಿಸಲಾಗಿರುತ್ತದೆ.
L ಕರ್ನಾಟಕ ರಾಜ್ಯ ಸರ್ಕಾರ ಸರ್ಕಾರಿ ನೌಕರರಿಗೆ ನೀಡುವ ಮನೆ ಬಾಡಿಗೆ ಭತ್ಯೆಯನ್ನು ಹೇಗೆ ವರ್ಗೀಕರಿಸಿದೆ?
ಮನೆ ಬಾಡಿಗೆ ಭತ್ಯೆ ಉದ್ದೇಶಕ್ಕಾಗಿ ನಗರಗಳು /ಪಟ್ಟಣಗಳು ಮತ್ತು ಇತರ ಪ್ರದೇಶಗಳನ್ನು 2001ರ ಜನಗಣತಿ ಅಂಕಿ ಅಂಶಗಳ ಆಧಾರದ ಮೇಲೆ ನಾಲ್ಕು ವರ್ಗಗಳಾಗಿ ಪುನರ್ ವರ್ಗೀಕರಿಸಿ, ದಿನಾಂಕ: 01.04.2012ರಿಂದ ಜಾರಿಗೆ ಬರುವಂತೆ ಮನೆ ಬಾಡಿಗೆ ಭತ್ಯೆ ದರಗಳನ್ನು ಈ ಕೆಳಕಂಡಂತೆ ಪರಿಷ್ಕರಿಸಿ ಆದೇಶಿಸಿರುತ್ತದೆ.
1.25 ಲಕ್ಷ ಮತ್ತು ಅದಕ್ಕೂ ಹೆಚ್ಚು ಮೂಲ ವೇತನದ ಶೇಕಡ 25ರಷ್ಟು
2.5 ಲಕ್ಷದಿಂದ 25 ಲಕ್ಷದವರೆಗೆ – ಮೂಲ ವೇತನದ ಶೇಕಡ 16ರಷ್ಟು
3.50,000 ರಿಂದ 5 ಲಕ್ಷದವರೆಗೆ – ಮೂಲ ವೇತನದ ಶೇಕಡ 10ರಷ್ಟು
4.50,000ಕ್ಕಿಂತ ಕಡಿಮೆ – ಮೂಲ ವೇತನದ ಶೇಕಡ 7ರಷ್ಟು
ಮನೆ ಬಾಡಿಗೆ ಭತ್ಯೆಯ ಉದ್ದೇಶಕ್ಕಾಗಿ ಯಾವಾಗ ಜನಸಂಖ್ಯೆಯನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುತ್ತದೆ?
ನಗರಗಳು, ಪಟ್ಟಣಗಳು ಮತ್ತು ಇತರ ಪ್ರದೇಶಗಳನ್ನು ವರ್ಗೀಕರಿಸುವಾಗ ಮಹಾನಗರ ಪಾಲಿಕೆ, ನಗರಸಭೆ ಮತ್ತು ಪುರಸಭೆಗಳ ಮೂಲ ಪ್ರದೇಶ ವ್ಯಾಪ್ತಿಯ 2001ರ ಜನಗಣತಿಯ ಜನಸಂಖ್ಯೆಯನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗಿದೆ.
III. ಮನೆ ಬಾಡಿಗೆ ಭತ್ಯೆಯ ಉದ್ದೇಶಕ್ಕಾಗಿ ಯಾವಾಗ ಜನಸಂಖ್ಯೆಯನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ?
ಮನೆ ಬಾಡಿಗೆ ಭತ್ಯೆಯ ನಿರ್ಧಾರಣೆಯ ಉದ್ದೇಶಕ್ಕೆ. ಯಾವುದೇ ನಿರ್ದಿಷ್ಟ ಮಹಾನಗರ ಪಾಲಿಕೆ, ನಗರಸಭೆ ಮತ್ತು ಪುರಸಭೆಗಳ ಜನಸಂಖ್ಯೆಗೆ ಅವುಗಳ ನಗರ ಸಮುಚ್ಚಯ/ಪ್ರದೇಶಗಳ ಜನಸಂಖ್ಯೆಯನ್ನು ಸೇರಿಸಿರುವುದಿಲ್ಲ.
IV. ಮನೆ ಬಾಡಿಗೆ ಭತ್ಯೆಯ ದರಗಳ ನಿರ್ಧರಣೆ ಹೇಗಿರುತ್ತದೆ?
1.ಮಹಾನಗರ ಪಾಲಿಕೆ. ನಗರಸಭೆ ಅಥವಾ ಪುರಸಭೆ ಮೂಲ ಪ್ರದೇಶ ವ್ಯಾಪ್ತಿಗೆ ಅನ್ವಯವಾಗುವ ಮನೆ ಬಾಡಿಗೆ ಭತ್ಯೆಯ ದರಗಳನ್ನು ಸಂಬಂಧಿತ ಮಹಾನಗರ ಪಾಲಿಕೆ, ನಗರಸಭೆ ಅಥವಾ ಪುರಸಭೆಗಳ ನಗರ ಸಮುಚ್ಚಯ ವ್ಯಾಪ್ತಿಯ ಪ್ರದೇಶಗಳಿಗೂ ಸಹ ವಿಸ್ತರಿಸತಕ್ಕದ್ದು.
2.ಪಟ್ಟಣ / ನಗರಗಳ ಜನಸಂಖ್ಯೆಯು 2001ರ ಜನಗಣತಿ ಆಧಾರದ ಮೇಲಿರುತ್ತದೆ. ಮತ್ತು ಮಹಾ ನಗರ ಪಾಲಿಕೆ, ನಗರ ಸಭೆ ಅಥವಾ ಪುರಸಭೆಗಳ ಪ್ರದೇಶ ವ್ಯಾಪ್ತಿ ಹಾಗೂ ನಗರ ಸಮುಚ್ಚಯಗಳನ್ನು ಘೋಷಿಸಿದ್ದಲ್ಲಿ, ಆ ನಗರ ಸಮುಚ್ಚಯ ಪ್ರದೇಶಗಳ ವ್ಯಾಪ್ತಿಯು ನಗರಾಭಿವೃದ್ಧಿ ಇಲಾಖೆ ಅಧಿಸೂಚಿಸಿದಂತಿರತಕ್ಕದ್ದು.
V. ಒಂದೇ ಸ್ಥಳದಲ್ಲಿ ವಾಸಿಸುವ ಸರ್ಕಾರಿ ನೌಕರಳ – ಪತಿ/ಪತ್ನಿಯವರಿಗೆ ಮನೆ ಬಾಡಿಗೆ ಭತ್ಯೆ ದೊರೆಯುತ್ತದೆಯೇ?
ಕಂಡಿತ ಇಲ್ಲ, ಸರ್ಕಾರಿ ಆದೇಶ ಸಂಖ್ಯೆ:ಎಫ್‌ಡಿ 10 ಎಸ್‌ಆರ್‌ಪಿ 2000. ದಿನಾಂಕ: 09.04.2003ರ ಸರ್ಕಾರಿ ಆದೇಶದಲ್ಲಿನ “ಸರ್ಕಾರಿ ನೌಕರನ ಪತ್ನಿಗೆ ಅದೇ ಸ್ಥಳದಲ್ಲಿ ರಾಜ್ಯ ಸರ್ಕಾರ/ಕೇಂದ್ರ ಸರ್ಕಾರ/ರಾಜ್ಯ ಅಥವಾ ಕೇಂದ್ರ ಸಾರ್ವಜನಿಕ ಉದ್ಯಮಗಳು/ಸ್ಥಳೀಯ ಸಂಸ್ಥೆಗಳು/ಅರೆ ಸರ್ಕಾರಿ ಸಂಸ್ಥೆಗಳು/ಅನುದಾನ ಪಡೆಯುವ ಸಂಸ್ಥೆಗಳು/ಸಹಕಾರಿ ಸಂಘಗಳು ಬಾಡಿಗೆ ರಹಿತ ವಾಸದ ಮನೆ/ಬಾಡಿಗೆ ವಾಸದ ಮನೆ ಹಂಚಿಕೆ ಮಾಡಿದ್ದಲ್ಲಿ, ಆ ಮನೆಯಲ್ಲಿ ಅವನು/ಅವಳು ವಾಸಿಸುತ್ತಿರಲಿ. ಇಲ್ಲದಿರಲಿ ಅಥವಾ ಅವನು/ಅವಳೂ ತಾನು ಬಾಡಿಗೆಗೆ ತೆಗೆದುಕೊಂಡ ಮನೆಯಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿರಲಿ, ಆ ಸರ್ಕಾರಿ ನೌಕರನು/ನೌಕರಳು ಮನೆ ಬಾಡಿಗೆ ಭತ್ಯೆ ಪಡೆಯಲು ಅರ್ಹರಾಗುವುದಿಲ್ಲ”
ಕಂಡಿತ ಇಲ್ಲ, ಸರ್ಕಾರಿ ಆದೇಶ ಸಂಖ್ಯೆ ಎಫ್‌ಡಿ 10 ಎಸ್‌ಆರ್‌ಪಿ 2000, ದಿನಾಂಕ: 09.04.2003ರ ಸರ್ಕಾರಿ ಆದೇಶದಲ್ಲಿನ “ಸರ್ಕಾರಿ ನೌಕರಳ ಪತಿಗೆ ಅದೇ ಸ್ಥಳದಲ್ಲಿ ರಾಜ್ಯ ಸರ್ಕಾರ/ಕೇಂದ್ರ ಸರ್ಕಾರ/ರಾಜ್ಯ ಅಥವಾ ಕೇಂದ್ರ ಸಾರ್ವಜನಿಕ ಉದ್ಯಮಗಳು/ಸ್ಥಳೀಯ ಸಂಸ್ಥೆಗಳು/ಅರೆ ಸರ್ಕಾರಿ ಸಂಸ್ಥೆಗಳು/ಅನುದಾನ ಪಡೆಯುವ ಸಂಸ್ಥೆಗಳು/ಸಹಕಾರಿ ಸಂಘಗಳು ಬಾಡಿಗೆ ರಹಿತ ವಾಸದ ಮನೆ/ಬಾಡಿಗೆ ವಾಸದ ಮನೆ ಹಂಚಿಕೆ ಮಾಡಿದ್ದಲ್ಲಿ, ಆ ಮನೆಯಲ್ಲಿ ಅವನು/ಅವಳು ವಾಸಿಸುತ್ತಿರಲಿ. ಇಲ್ಲದಿರಲಿ ಅಥವಾ ಅವನು/ಅವಳೂ ತಾನು ಬಾಡಿಗೆಗೆ ತೆಗೆದುಕೊಂಡ ಮನೆಯಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿರಲಿ, ಆ ಸರ್ಕಾರಿ ನೌಕರನು/ನೌಕರಳು ಮನೆ ಬಾಡಿಗೆ ಭತ್ಯೆ ಪಡೆಯಲು ಅರ್ಹರಾಗುವುದಿಲ್ಲ” ಎಂಬ ನಿಬಂಧನೆ ಮುಂದುವರೆದು ಅನ್ವಯಿಸುತ್ತದೆ.
ಆದರೆ,
ನೌಕರನ ಪತಿ ಮತ್ತು ಪತ್ತಿಯು ಬೇರೆ ಬೇರೆ ಸ್ಥಳಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಲ್ಲಿ ಅವರುಗಳು ಅವರ ಅರ್ಹತೆಯ ಮೇರೆಗೆ ಲಭ್ಯವಿರುವ ದರಗಳಲ್ಲಿ ಮನೆ ಬಾಡಿಗೆ ಭತ್ಯೆ ಪಡೆಯಲು ಅರ್ಹರಿರುತ್ತಾರೆ. (ಸ್ಥಳ ಎಂದರೆ, ಮೇಲೆ ವಿವರಿಸಿದಂತೆ ಸರ್ಕಾರವೇ ಗುರುತಿಸಿರುವ ಪ್ರದೇಶವಾಗಿರುತ್ತದೆ)
VI. ಬಾಡಿಗೆ ರಹಿತ ವಸತಿಗೃಹ ಒದಗಿಸಿದ್ದರೆ ಮನೆ ಬಾಡಿಗೆ ಭತ್ಯೆ ಪಡೆಯಲು ಅರ್ಹರೇ?
ಸರ್ಕಾರಿ ನೌಕರನಿಗೆ ಬಾಡಿಗೆ ರಹಿತ ವಸತಿಯನ್ನು ಒದಗಿಸಿದ್ದರೆ. ಆ ಸರ್ಕಾರಿ ನೌಕರನು ಮನೆ ಬಾಡಿಗೆ ಭತ್ಯೆಯನ್ನು ಪಡೆಯಲು ಅರ್ಹನಾಗಿರುವುದಿಲ್ಲ.
VIL ಮನೆ ಬಾಡಿಗೆಯನ್ನು ವಾಸಸ್ಥಳ ಪರಿಗಣಿಸಿ ನೀಡಬೇಕೆ?
ಮನೆ ಬಾಡಿಗೆ ಭತ್ಯೆಯನ್ನು, ಸರ್ಕಾರಿ ನೌಕರನ ವಾಸಸ್ಥಳವನ್ನು ಪರಿಗಣಿಸದೆ, ಕರ್ತವ್ಯದ ಸ್ಥಳಕ್ಕೆ ಸಂಬಂಧಿಸಿದಂತೆ ಸಂದಾಯ ಮಾಡತಕ್ಕದ್ದು.
VIIL ಮನೆ ಬಾಡಿಗೆಯನ್ನು ಮಂಜೂರಿಸುವ ಸಂದರ್ಭ ಗಡಿ ಪ್ರದೇಶಗಳನ್ನು ಹೇಗೆ ಪರಿಗಣಿಸಬೇಕು?
ಮಹಾನಗರ ಪಾಲಿಕೆ, ನಗರಸಭೆ ಅಥವಾ ಪುರಸಭೆಗಳಿಗೆ ಅನ್ವಯವಾಗುವ ಮನೆ ಬಾಡಿಗೆ ಭತ್ಯೆಯ ದರಗಳು, ನಗರಾಭಿವೃದ್ಧಿ ಇಲಾಖೆಯು ಅಧಿಸೂಚಿಸಿರುವ, ಸಂಬಂಧಿತ ಮಹಾನಗರ ಪಾಲಿಕೆ. ನಗರಸಭೆ ಅಥವಾ ಪುರಸಭೆಗಳ ಗಡಿ ಪ್ರದೇಶಗಳ ಹೊರಗಿನ ಪ್ರದೇಶಗಳಿಗೆ ಅನ್ವಯಿಸತಕ್ಕದ್ದಲ್ಲ.
ಹಾಗೂ, ಸಂದರ್ಭಾನುಸಾರ ನಿರ್ದಿಷ್ಟ ಮಹಾನಗರ ಪಾಲಿಕೆ, ನಗರಸಭೆ ಅಥವಾ ಪುರಸಭೆಗಳ ನಗರ ಸಮುಚ್ಚಯ ಪ್ರದೇಶಗಳ ವ್ಯಾಪ್ತಿಯನ್ನು ನಗರಾಭಿವೃದ್ಧಿ ಇಲಾಖೆಯು ಅಧಿಸೂಚಿಸಿದ್ದಲ್ಲಿ, ಅಂತಹ ನಗರ ಸಮುಚ್ಚಯ ಪ್ರದೇಶಗಳ ಹೊರಗಿನ ಪ್ರದೇಶಗಳಿಗೆ ಸಂಬಂಧಿತ ಪ್ರದೇಶಗಳ ಮನೆ ಬಾಡಿಗೆ ಭತ್ಯೆಯ ದರಗಳು ಅನ್ವಯಿಸತಕ್ಕದ್ದಲ್ಲ.
IX. ಮನೆ ಬಾಡಿಗೆ ಭತ್ಯೆಯನ್ನು ಯಾವೆಲ್ಲ ಸಂದರ್ಭದಲ್ಲಿ ಹೇಗೆ ಕ್ರಮಬದ್ಧಗೊಳಿಸಬೇಕು?
ರಜೆ, ಅಮಾನತ್ತು. ಕೆಲಸಕ್ಕೆ ಸೇರುವ ಕಾಲ ಮತ್ತು ತರಬೇತಿ ಅವಧಿಯಲ್ಲಿ ದೊರೆಯಬಹುದಾದ ಮನೆ ಬಾಡಿಗೆ ಭತ್ಯೆಯನ್ನು ಕರ್ನಾಟಕ ಸರ್ಕಾರಿ ಸೇವಾ ನಿಯಮಗಳ ಉಪಬಂಧಗಳ ಮೇರೆಗೆ ಕ್ರಮಬದ್ಧಗೊಳಿಸತಕ್ಕದ್ದು.
ಯಾವ ಸರ್ಕಾರಿ ನೌಕರನಿಗೆ ಬಾಡಿಗೆ ಆಧಾರದ ಮೇಲೆ ಸರ್ಕಾರದ ವಸತಿ ಗೃಹ ಸೌಲಭ್ಯವನ್ನು ಒದಗಿಸಲಾಗಿದೆಯೋ, ಆ ಸರ್ಕಾರಿ ನೌಕರನು ಸಂದಾಯ ಮಾಡತಕ್ಕ ಲೈಸೆನ್ಸ್ ಫೀ-ಯು ಕರ್ನಾಟಕ ಸೇವಾ ನಿಯಾಮವಳಿಗಳ ಅನುಬಂಧ-IV ರ ಉಪಬಂಧಗಳ ರೀತ್ಯ ಸಕ್ಷಮ ಪ್ರಾಧಿಕಾರಿ ನಿಗದಿಗೊಳಿಸಿದ ಲೈಸೆನ್ಸ್ ಫೀ, ಅಥವಾ ಈ ಆದೇಶ ಉಪಬಂಧಗಳ ರೀತ್ಯ ದೊರೆಯತಕ್ಕ ಮನೆ ಬಾಡಿಗೆ ಭತ್ಯೆ, ಅವುಗಳಲ್ಲಿ ಯಾವುದು ಹೆಚ್ಚೇ. ಅದಾಗಿರುತ್ತದೆ.
X. ಮನೆ ಬಾಡಿಗೆ ಭತ್ಯೆ ನಿಯಮಗಳು ಯಾರಿಗೆ ಅನ್ವಯವಾಗುತ್ತವೆ.
ಈ ಆದೇಶಗಳು ಕರ್ನಾಟಕ ನಾಗರಿಕ ಸೇವಾ ನಿಯಮಗಳ ಉಪಬಂಧಗಳ ವ್ಯಾಪ್ತಿಯೊಳಗೆ ಬರುವ ಪೂರ್ಣಕಾಲಿಕ ಮತ್ತು ಕಾಲಿಕ ವೇತನ ಶ್ರೇಣಿಯಲ್ಲಿನ ಎಲ್ಲಾ ರಾಜ್ಯ ಸರ್ಕಾರಿ ನೌಕರರಿಗೂ ಅನ್ವಯಿಸುತ್ತದೆ.
ಈ ಆದೇಶಗಳು (ಅ) ಕಾಲಿಕ ವೇತನ ಶ್ರೇಣಿಯಲ್ಲಿರುವ ವರ್ಕ್ ಛಾರ್ಜ್ ನೌಕರರು (ಆ) ಕಾಲಿಕ ವೇತನ ಶ್ರೇಣಿಯಲ್ಲಿರುವ ಅನುದಾನಿತ ಶಿಕ್ಷಣ ಸಂಸ್ಥೆಗಳ ಪೂರ್ಣಕಾಲಿಕ ನೌಕರರು ಮತ್ತು ವಿಶ್ವವಿದ್ಯಾನಿಲಯಗಳ ಬೋಧಕೇತರ ಸಿಬ್ಬಂದಿ ಮತ್ತು (ಇ) ಯುಜಿಸಿ/ಐಸಿಎಆರ್/ಎಐಸಿಟಿಇ/ ಎನ್‌ಜಿಪಿಸಿ ವೇತನ ಶ್ರೇಣಿಯಲ್ಲಿ ವೇತನ ಪಡೆಯುವ ಸಿಬ್ಬಂದಿಗೆ ಅನ್ವಯಿಸುತ್ತವೆ.
ಮಾಹಿತಿ ಕೃಪೆ:ಶಶಿಕುಮಾರ್. ಪಿ. ಎಂ. ಸಚಿವಾಲಯ