Government Employee KGID: Employees – With Under Insurance
Government Employee KGID: Employees – With Under Insurance, (KGID Premium less than 6.25% of the average payscale is treated as under Insurance)
ಸೂಚನೆಗಳು:
▪️ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕಡ್ಡಾಯ ಜೀವ ವಿಮಾ ನಿಯಮಾವಳಿಗಳ ನಿಯಮ 8 ರಂತೆ ಪ್ರತಿಯೊಬ್ಬ ರಾಜ್ಯ ಸರ್ಕಾರಿ ನೌಕರ/ಅಧಿಕಾರಿಯು, ಅವನು/ಅವಳು ಹೊಂದಿರುವ ಹುದ್ದೆಯ ವೇತನ ಶ್ರೇಣಿಯ ಸರಾಸರಿ ವೇತನದ ಕನಿಷ್ಠ ಶೇ 6.25 ರಷ್ಟು ಮಾಸಿಕ ವಿಮಾ ಕಂತಿಗೆ ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯಲ್ಲಿ ಜೀವ ವಿಮೆ ಪಡೆಯಬೇಕಿರುತ್ತದೆ
▪️ಅನ್ವಯಿಸುತ್ತಿರುವ ವೇತನ ಶ್ರೇಣಿಗೆ ಅನುಗುಣವಾಗಿ ಕಡ್ಡಾಯ ಕನಿಷ್ಠ ವಿಮಾ ಕಂತಿನ ಕೋಷ್ಠಕದಲ್ಲಿ ತಿಳಿಸಿರುವಂತೆ ಮಾಸಿಕ ವಿಮಾ ಕಂತನ್ನು ಹೊಂದಿರತಕ್ಕದ್ದು.
• ಜನ್ಮದಿನಾಂಕದಂತೆ ವಯಸ್ಸು 50 ವರ್ಷ ಮೀರದ ಸದರಿ ಸರ್ಕಾರಿ ನೌಕರ/ಅಧಿಕಾರಿಯು ವಿಮಾ ಇಲಾಖೆಯ ಆನ್ಲೈನ್ ವೆಬ್ಸೈಟ್ https://kgidonline.karnataka.gov.in ನ ಮುಖೇನ ಪ್ರಸ್ತಾವನೆ ಸಲ್ಲಿಸಿ ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯಲ್ಲಿ ಜೀವ ವಿಮೆ ಪಡೆಯಬಹುದಾಗಿದೆ.
▪️ಜನ್ಮದಿನಾಂಕ ದಂತೆ ವಯಸ್ಸು 50 ವರ್ಷ ಮೀರಿದ ನೌಕರ/ಅಧಿಕಾರಿ ಗೆ ಕಡ್ಡಾಯ ಜೀವ ವಿಮಾ ನಿಯಮಾವಳಿಗಳ ನಿಯಮ 8 ಅನ್ವಯವಾಗುವುದಿಲ್ಲ.