GPF Statement: ಸಾಮಾನ್ಯ ಭವಿಷ್ಯ ನಿಧಿ ಚಂದಾದಾರರಿಗೆ ಮುಖ್ಯ ಮಾಹಿತಿ-2025

GPF Statement: ಸಾಮಾನ್ಯ ಭವಿಷ್ಯ ನಿಧಿ ಚಂದಾದಾರರಿಗೆ ಮುಖ್ಯ ಮಾಹಿತಿ-2025

 

GPF: ಸಾಮಾನ್ಯ ಭವಿಷ್ಯ ನಿಧಿ ಚಂದಾದಾರರು ಅವರ ಸಾಮಾನ್ಯ ಭವಿಷ್ಯ ನಿಧಿ ಖಾತೆಯ ಭಾಗಶಃ ಹಿಂಪಡೆಯುವಿಕೆ ಮತ್ತು ಅಂತಿಮ ಹಿಂಪಡೆಯುವಿಕೆಯ ಅಧಿಕರಣದ ಪ್ರತಿಗಳನ್ನು ವೆಬ್ ಪೋರ್ಟಲ್‌ನಲ್ಲಿ ವೀಕ್ಷಿಸಲು ಮತ್ತು ಪ್ರತಿಯನ್ನು ಪಡೆಯಲು ಅವಕಾಶವನ್ನು ಕಲ್ಪಿಸಿರುವ ಕುರಿತು.

ಸಾಮಾನ್ಯ ಭವಿಷ್ಯ ನಿಧಿ ಖಾತೆಯನ್ನು ಹೊಂದಿರುವ ಚಂದಾದಾರರು ತಮ್ಮ ಸಾಮಾನ್ಯ ಭವಿಷ್ಯ ನಿಧಿಯ ಅಧಿಕರಣಗಳನ್ನು ನೋಡುವ ಹಾಗೂ ಡೌನ್ಹೋಡ್ ಮಾಡಿಕೊಳ್ಳುವ ಸೌಲಭ್ಯವನ್ನು ಪ್ರಸ್ತುತ ಅಸ್ತಿತ್ವದಲ್ಲಿರುವ AG (A&E) 3 Public Portal ຜ – (https://agopublic.kar.nic.in) ದಿನಾಂಕ:01.09.2024 ರಿಂದ ಲಭ್ಯಪಡಿಸಲಾಗಿರುತ್ತದೆ. ಈ ಸಂಬಂಧ ಮಹಾಲೇಖಪಾಲರ ಕಛೇರಿಯು ಸಾಮಾನ್ಯ ಭವಿಷ್ಯ ನಿಧಿ ಖಾತೆಯ ಚಂದಾದಾರರ ಭಾಗಶಃ ಹಿಂಪಡೆಯುವಿಕೆ ಮತ್ತು ಅಂತಿಮ ಹಿಂಪಡೆಯುವಿಕೆಯ ಅಧಿಕರಣದ ಇ-ಸಹಿಯುಳ್ಳ ಚಂದಾದಾರರ ಪ್ರತಿಯನ್ನು ಮೇಲ್ಕಂಡ ವೆಬ್ ಪೋರ್ಟಲ್‌ನಲ್ಲಿ ಅಪ್ಲೋಡ್ ಮಾಡಲಾಗುತ್ತಿದ್ದು, ಅದನ್ನು ಚಂದಾದಾರರು/ಚಂದಾದಾರರ ಕಾನೂನುಬದ್ಧ ವಾರಸುದಾರರು ಲಾಗಿನ್ ಆಗಿ ನೋಡಲು ಹಾಗೂ ಡೌನ್ಹೋಡ್ ಮಾಡಲು ಅವಕಾಶವನ್ನು ಕಲ್ಪಿಸಲಾಗಿರುತ್ತದೆ.

ಅಧಿಕರಣದ ಭೌತಿಕ ಪ್ರತಿಗಳನ್ನು ಚಂದಾದಾರರಿಗೆ ಹಿಂದಿನಂತೆ ಮೊದಲ ಮೂರು ತಿಂಗಳುಗಳ ಅವಧಿಗೆ ರವಾನಿಸಲಾಗುತ್ತಿದ್ದು, ಈ ಸೌಲಭ್ಯದ ಯಶಸ್ವಿ ಅನುಷ್ಠಾನದ ನಂತರ ಅವುಗಳನ್ನು ರವಾನಿಸುವುದನ್ನು ಸ್ಥಗಿತಗೊಳಿಸಲಾಗುವುದು.

ಪ್ರಸ್ತುತ ಅಸ್ತಿತ್ವದಲ್ಲಿರುವ ಸಾಮಾನ್ಯ ಭವಿಷ್ಯ ನಿಧಿಯ ಅಂಶಿಕ/ಪೂರ್ಣ ಹಿಂಪಡೆಯುವಿಕೆಯ ಅರ್ಜಿಗಳ ಸ್ವೀಕೃತಿ ಹಾಗೂ ಪ್ರಸ್ತುತ ಹಂತದ ಮಾಹಿತಿಯನ್ನು SMS ನ ಮೂಲಕ ತಿಳಿಯಪಡಿಸುವ ಸೌಲಭ್ಯವು ಮುಂದುವರೆಯುವುದು. ಇದರಿಂದ ಮೇಲ್ಕಂಡ ವೆಬ್ ಪೋರ್ಟಲ್‌ನಲ್ಲಿ ಪತ್ರಾಂಕಿತ ಅಧಿಕಾರಿಗಳ ವೇತನ ಹಾಗೂ ರಜೆಯ ಅಧಿಕರಣಗಳನ್ನು ಮತ್ತು ಪಿಂಚಣಿ ಅಧಿಕರಣಗಳ ಜೊತೆಗೆ ಸಾಮಾನ್ಯ ಭವಿಷ್ಯ ನಿಧಿ ಹಿಂಪಡೆಯುವಿಕೆ ಅಧಿಕರಣಗಳನ್ನು ನೋಡುವ ಹಾಗೂ ಡೌಗ್ಲೋಡ್ ಮಾಡಿಕೊಳ್ಳುವ ಸೌಲಭ್ಯಗಳು

ಲಭ್ಯವಿರುವಂತಾಗುತ್ತದೆ. ಈ ವೆಬ್ ಪೋರ್ಟಲ್‌ನ್ನು ಉಪಯೋಗಿಸುವ ಕುರಿತು ಖಜಾನೆ ಅಧಿಕಾರಿಗಳಿಗೆ/ವೇತನ ಬಟವಾಡೆ ಅಧಿಕಾರಿಗಳಿಗೆ/ಸಾಮಾನ್ಯ ಭವಿಷ್ಯ ನಿಧಿಯನ್ನು ಮಂಜೂರು ಮಾಡುವ ಪ್ರಾಧಿಕಾರಗಳಿಗೆ ನೀಡಲಾಗಿರುವ ಸೂಚನೆಗಳ ಪ್ರತಿಯನ್ನು ಮಾಹಿತಿಗಾಗಿ ಇದರೊಂದಿಗೆ ಲಗತ್ತಿಸಲಾಗಿದೆ. ಸದರಿ ಸೂಚನೆಗಳಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳುವಂತೆ ತಿಳಿಸಲಾಗಿದೆ.

 

CLICK HERE TO DOWNLOAD CIRCULAR

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

error: Content is protected !!