GPF annual accounts statements from 2021-2022 to 2023-2024 is available in the website,You can check your GIF statement

GPF annual accounts statements from 2021-2022 to 2023-2024 is available in the website

ನಿಮ್ಮ 3 ವರ್ಷಗಳ GPF ಸಾಮಾನ್ಯ ಭವಿಷ್ಯ ನಿಧಿಯ Statement ಡೌನ್‌ಲೋಡ್ ಮಾಡಬಹುದು.

ಒಂದಿಷ್ಟು ಸೂಚನೆಗಳು:

1.ಒಂದು ವೇಳೆ ಸಾಮಾನ್ಯ ಭವಿಷ್ಯ ನಿಧಿ ವಾರ್ಷಿಕ ಲೆಕ್ಕ ತಃಖ್ಯೆಯಲ್ಲಿ ಪ್ರಸಕ್ತ ವರ್ಷದಲ್ಲಿ ಸಾ.ಭ.ನಿ. ಖಾತೆಗೆ ಜಮಾ ಮಾಡಿದ ಅಥವಾ ಹಿಂತೆಗೆದ ಮೊತ್ತಕ್ಕೂ, ಸಾ.ಭ.ನಿ. ಲೆಕ್ಕ ತಖ್ಯೆಯಲ್ಲಿ ನಮೂದಿಸಿದ ವಿವರಗಳಿಗೂ ವ್ಯತ್ಯಾಸವಿದ್ದಲ್ಲಿ, ದಯವಿಟ್ಟು ಜಮಾ ಮಾಡಿದ ಅಥವಾ ಹಿಂತೆಗೆದ ಮೊತ್ತದ ವಿವರಗಳನ್ನು ತಕ್ಷಣವೇ ಈ ಕಛೇರಿಗೆ ಕಳುಹಿಸತಕ್ಕದ್ದು.

2.ನಿಮ್ಮ ಸಾ.ಭ.ನಿ. ಖಾತೆಯಲ್ಲಿ, ಖಾತೆಗೆ ಜಮಾ ಆಗದ ಕಂತುಗಳು (ಮಿಸ್ಸಿಂಗ್ ಕ್ರೆಡಿಟ್ಸ್) ಇದ್ದಲ್ಲಿ, ಜಮಾ ಮಾಡಿದ ವಿವರಗಳನ್ನು ಈ ಕಛೇರಿಗೆ ಮುಂದಿನ ಕ್ರಮಕ್ಕಾಗಿ ಕಳುಹಿಸಿಕೊಡತಕ್ಕದ್ದು.

3.ಪ್ರಸಕ್ತ ವರ್ಷದಲ್ಲಿ ಅಥವಾ ವರ್ಷದ ಕೆಲವು ತಿಂಗಳುಗಳಲ್ಲಿ ಸಾ.ಭ.ನಿ. ಖಾತೆಗೆ ವಂತಿಗೆಯನ್ನು ಜಮಾ ಮಾಡದೆ ಇದ್ದಲ್ಲಿ, ಜಮಾ ಮಾಡಿರದ ಅವಧಿಯ ಮಾಹಿತಿಯನ್ನು ಈ ಕಛೇರಿಗೆ ತಿಳಿಸುವುದು.

4.ನಿಮ್ಮ ಸಾ.ಭ.ನಿ. ಖಾತೆಯ ಕುರಿತು ಯಾವುದೇ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಿಮ್ಮ ಸಾಮಾನ್ಯ ಭವಿಷ್ಯ ನಿಧಿ ವಾರ್ಷಿಕ ಲೆಕ್ಕ ತ:ಖ್ಯೆಯಲ್ಲಿ ನಮೂದಿಸಿದ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸತಕ್ಕದ್ದು.

5.ಸಾಮಾನ್ಯ ಭವಿಷ್ಯ ನಿಧಿ ವಾರ್ಷಿಕ ಲೆಕ್ಕ ತ:ಖ್ಯೆಯು ಕರ್ನಾಟಕ ಸರ್ಕಾರದ ಇ-ಗವರ್ನೆನ್ಸ್, ಡಿ.ಪಿ.ಎ.ಆರ್.ನ ಹೆಚ್.ಆರ್.ಎಂ.ಎಸ್. ವೆಬ್ ಸೈಟ್ ನ – ಡಿಡಿಒ ಲಾಗ್‌ಇನ್ ನಲ್ಲೂ ಲಭ್ಯವಿರುತ್ತದೆ.

(HOME > MIS Report > Download GPF Statement)

6.ನಿಮ್ಮ ಸಾ.ಭ.ನಿ. ಖಾತೆಯ ಅಂತಿಮ ಹಿಂತೆಗೆತದ ಅರ್ಜಿಯನ್ನು ಸರಿಯಾದ ಸಮಯಕ್ಕೆ ಇತ್ಯರ್ಥಗೊಳಿಸುವ ಸಲುವಾಗಿ ನಿವೃತ್ತಿಗೆ ಮೂರು ತಿಂಗಳುಗಳಷ್ಟು ಮುಂಚಿತವಾಗಿ ಹಣ ಸೆಳೆಯುವ ಮತ್ತು ಬಟವಾಡೆ ಅಧಿಕಾರಿಗಳ ಮೂಲಕ ಕಳುಹಿಸತಕ್ಕದ್ದು. ಅರ್ಜಿಯಲ್ಲಿ ದಯವಿಟ್ಟು ನಿಮ್ಮ ಮೊಬೈಲ್ ದೂರವಾಣಿ ಸಂಖ್ಯೆಯನ್ನು ನಮೂದಿಸಿ.

7.ಸರ್ಕಾರಿ ಸ್ವಾಯತ್ತ ಸಂಸ್ಥೆಗಳಲ್ಲಿ ನಿಯೋಜನೆಯಲ್ಲಿ ಸೇವೆ ಸಲ್ಲಿಸುತ್ತರುವ ಅಧಿಕಾರಿ / ನೌಕರರು ತಮ್ಮ ಸಂಬಳದಿಂದ ಕಡಿತಗೊಳಿಸಲ್ಪಟ್ಟ ಸಾ.ಭ.ನಿ. ವಂತಿಗೆಯು ತಕ್ಷಣವೇ ಸ್ವಾಯತ್ತ ಸಂಸ್ಥೆಯ ಮೂಲಕ ಸಾ.ಭ.ನಿ. ಖಾತೆಗೆ ಜಮಾ ಆಗಿರುವುದನ್ನು ಖಾತ್ರಿಪಡಿಸಿಕೊಳ್ಳತಕ್ಕದ್ದು. ಖಜಾನೆಗೆ ಸಲ್ಲಿಸುವ ಚಲನ್ ಜೊತೆಗೆ ಸಾ.ಭ.ನಿ. ವಂತಿಗೆ ವಿವರಣೆ ಪಟ್ಟಿಯನ್ನು ಲಗತ್ತಸತಕ್ಕದ್ದು ಹಾಗೂ ಚಲನ್ ಮತ್ತು ಸಾ.ಭ.ನಿ. ವಂತಿಗೆ ವಿವರಣೆ ಪಟ್ಟಿಯ ಒಂದು ಪ್ರತಿಯನ್ನು ಈ ಕಛೇರಿಗೆ ಕಳುಹಿಸತಕ್ಕದ್ದು.

8.ಹಣ ಸೆಳೆಯುವ ಮತ್ತು ಬಟವಾಡೆ ಅಧಿಕಾರಿಗಳು ಸಾ.ಭ.ನಿ. ಖಾತೆಯಿಂದ ಮುಂಗಡವನ್ನು ಮಂಜೂರು ಮಾಡುವ ಮೊದಲು ಪ್ರಸಕ್ತ ವರ್ಷದ ಮಾರ್ಚ್ ತಿಂಗಳ ನಂತರ ಈಗಾಗಲೇ ಮಂಜೂರಾಗಿರುವ ಮುಂಗಡ / ಅಂಶಿಕ ಹಿಂತೆಗೆತದ ವಿವರಗಳನ್ನು ಗಣನೆಗೆ ತೆಗೆದುಕೊಂಡು ಮಂಜೂರು ಮಾಡತಕ್ಕದ್ದು.

9.ಈ ಕಛೇರಿಗೆ ಸಲ್ಲಿಸುವ ಸಾ.ಭ.ನಿ.ಗೆ ಸಂಬಂಧಿಸಿದ ಎಲ್ಲಾ ಪತ್ರ / ಅಂಶಿಕ ಹಿಂತೆಗೆತದ ಅರ್ಜಿ / ಅಂತಿಮ ಹಿಂತೆಗೆತದ ಅರ್ಜಿಗಳಲ್ಲಿ ವಂತಿಗೆದಾರರ / ಹಣ ಸೆಳೆಯುವ ಮತ್ತು ಬಟವಾಡೆ ಅಧಿಕಾರಿಗಳ ದೂರವಾಣಿ ಸಂಖ್ಯೆಯನ್ನು ನಮೂದಿಸತಕ್ಕದ್ದು.

10.ಪ್ರತೀ ತಿಂಗಳೂ ಈ ಕಛೇರಿಗೆ ಸಲ್ಲಿಸುವ ಸಾ.ಭ.ನಿ. ವಂತಿಗೆ ವಿವರಣೆ ಪಟ್ಟಿಯಲ್ಲಿ ನಿಮ್ಮ ಸಾ.ಭ.ನಿ. ಖಾತೆಯ ಶ್ರೇಣಿ, ಸಂಖ್ಯೆ ಮತ್ತು ಹೆಸರನ್ನು ಸರಿಯಾಗಿ ನಮೂದಿಸಲ್ಪಟ್ಟಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

CLICK HERE DOWNLOAD GPF STATEMENTS

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

error: Content is protected !!