GTTC ನೇಮಕಕ್ಕೆ ಅರ್ಹರ ಪಟ್ಟಿ ಪ್ರಕಟ
GTTC ನೇಮಕಕ್ಕೆ ಅರ್ಹತಾ ಪಟ್ಟಿ ಪ್ರಕಟ
ಸರ್ಕಾರಿ ಉಪಕರಣಾಗಾರ ಹಾಗೂ ತರಬೇತಿ ಸಂಸ್ಥೆಯ (ಜಿಟಿಟಿಸಿ) ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಹರಾದವರ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಿಡುಗಡೆ ಮಾಡಿದೆ.
ಅಧಿಕಾರಿಗಳು, ಉಪನ್ಯಾಸಕರು, ಇಂಜಿನಿಯರ್, ಇನ್‌ಸ್ಟ್ರಕ್ಟರ್, ಪೋರ್‌ಮನ್, ಟೆಕ್ನಿಷಿಯನ್, ಅಸಿಸ್ಟೆಂಟ್ ಸೇರಿ ಒಟ್ಟು 98 ಹುದ್ದೆಗಳಿಗಾಗಿ ಪರೀಕ್ಷೆ ನಡೆಸಲಾಗಿತ್ತು.
ಅಂತಿಮ ಸರಿಯುತ್ತರದ ಬಳಿಕ ಅಭ್ಯರ್ಥಿಗಳು ಪಡೆದ ಅಂಕಗಳ ವಿವರಗಳನ್ನು ನೀಡಲಾಗಿತ್ತು.
ಬಳಿಕ ಆಕ್ಷೇಪಣೆಗಳನ್ನು ಪರಿಗಣಿಸಿ ಹುದ್ದೆಗೆ ಅರ್ಹರಾದವರ ಪಟ್ಟಿಯನ್ನು ನೀಡಲಾಗಿದೆ ಎಂದು ಕೆಇಎ ತಿಳಿಸಿದೆ.