HEALT TIPS-01- ಗಂಟಲು ನೋವು, ಪರಿಹಾರ ಹಲವು, ಇಲ್ಲಿದೆ ಮನೆ ಮದ್ದು ಮಾಹಿತಿ.
HEALT TIPS-01- ಮಾನವನ ಅತ್ಯವಶ್ಯ ಅಂಗಗಳಲ್ಲಿ ಗಂಟಲು ಕೂಡ ಒಂದು. ಗಂಟಲು ಕಟ್ಟಿದಾಗ, ಉಗುಳು ನುಂಗುವುದೂ ಕಷ್ಟವಾದಾಗ, ಬಾವು ಉಂಟಾದಾಗ ಅಸಹನೀಯ ಯಾತನೆ ಉಂಟಾಗುತ್ತದೆ. ಗಾಯಕರಂತೂ ತಮ್ಮ ಸ್ವರ ಮಾಧುರ್ಯಕ್ಕಾಗಿ ಗಂಟಲ ಶುದ್ದತೆಗೆ ಅಧಿಕ ಪ್ರಾಶಸ್ತ್ರ ನೀಡಲೇಬೇಕು. ಇಂತಹ ಗಂಟಲು ಗೊರಗೊರ ಎಂದಾಗ, ಕಫ ತುಂಬಿದಾಗ, ನೋವಾದಾಗ, ಬಾತು ಕೊಂಡಾಗ ಏನು ಮಾಡುವುದು. ಇಲ್ಲಿದೆ ಮನೆಮದ್ದುಗಳು.
▪️ಗಂಟಲೊಳಗೆ ಬಾವು ಉಂಟಾದಾಗ ವಾಯುವಿಳಂಗದ ಬೇರಿನ ಕಷಾಯ ತಯಾರಿಸಿ ಅದರಿಂದ ಬಾಯಿ ಮುಕ್ಕಳಿಸಬೇಕು.
▪️ಹಿಪ್ಪಲಿ, ತಾರೀಕಾಯಿ, ಇಂದುಪ್ಪುಗಳನ್ನು ಸಮವಾಗಿ ಬೆರೆಸಿ ಚೂರ್ಣ ಮಾಡಿಕೊಂಡು ಬಿಸಿನೀರಿನಲ್ಲಿ ಕದಡಿ ಕುಡಿದರೆ ಸ್ವರ ಸಲೀಸಾಗುತ್ತದೆ.
▪️ಗಂಟಲು ನೋಯುತ್ತಿದ್ದರೆ ಕೊಂಚ ಉಪ್ಪನ್ನು ಅಡುಗೆ ಸೋಡಾ ಅಥವಾ ನಿಂಬೆರಸದೊಂದಿಗೆ ಬಿಸಿನೀರಿಗೆ ಬೆರೆಸಿ ಬಾಯಿಗೆ ಹಾಕಿಕೊಂಡು ಗಂಟಲವರೆಗೆ ಮುಕ್ಕಳಿಸಬೇಕು.
▪️25 ಗ್ರಾಂ ನೆಲ್ಲಿಕಾಯಿ ಚೆಟ್ಟು, 10 ಗ್ರಾಂ ಜೇಷ್ಠಮಧು ಸೇರಿಸಿ ಕಷಾಯ ಮಾಡಿ ಕುಡಿದರೆ ಗಂಟಲಿನ ಹುಣ್ಣು ಮಾಯವಾಗುತ್ತದೆ.
▪️ಹಿಪ್ಪಲಿ, ಶುಂಠಿ, ಅಣಲೆಕಾಯಿ, ಕಾಳುಮೆಣಸು ಎಲ್ಲವನ್ನೂ ಒಟ್ಟಾಗಿಸಿ ತಯಾರಿಸಿದ ಚೂರ್ಣವನ್ನು ಜೇನುತುಪ್ಪದಲ್ಲಿ ಬೆರೆಸಿ ನೆಕ್ಕಿದರೆ ಗಂಟಲಿನಲ್ಲಿ ಕುಳಿತ ಕಫ ಕಡಿಮೆಯಾಗುತ್ತದೆ.
▪️ಸರ ಗೊರಗೊರ ಎಂದರೆ ಒಂದೆಲಗದ ಗಡ್ಡೆಯನ್ನು ಅರೆದು ಜೇನುತುಪ್ಪಕ್ಕೆ ಸೇರಿಸಿ ನೆಕ್ಕಬೇಕು.
▪️ಗಂಟಲಿನಲ್ಲಿ ಕೆರೆತವೇ? ಎಕ್ಸ್ ಚೀಪಿರಿ ಎನ್ನುವ ಜಾಹೀರಾತಿಗೆ ಗುಡ್ ಬೈ ಹೇಳಿ. ಒಂದು ಲೋಟ ಬಿಸಿನೀರಿಗೆ 1/2 ಚಮಚ ಉಪ್ಪು ಸೇರಿಸಿ ಪುನರಪಿ ಮು ಕ್ಕಳಿಸಿ, ಸಾಕು, ಕೆರೆತ ಮಾಯ!
▪️ಬೆಳ್ಳುಳ್ಳಿ ಹಾಗೂ ಅತಿ ಮಧುರವನ್ನು ಸಮವಾಗಿ ಬೆರೆಸಿ ನುಣ್ಣಗೆ ಅರೆದು ನೀರಿಗೆ ಸೇರಿಸಿ ಕುಡಿದರೆ ಗಂಟಲಿನ ಕಫ ನಾಶವಾಗುತ್ತದೆ.
▪️ಇನ್ನು ಸ್ವರ ಬಿದ್ದುಹೋಗಿದ್ದರೆ ಪುದೀನ ಸೊಪ್ಪಿನ ಕಷಾಯಕ್ಕೆ ಉಪ್ಪು ಸೇರಿಸಿ ಬಾಯಿ ಮುಕ್ಕಳಿಸಬೇಕು. ಅಥವಾ ಮಾವಿನೆಲೆ ಕಷಾಯಕ್ಕೆ ಜೇನುತುಪ್ಪ ಬೆರೆಸಿ ಕುಡಿಯಬೇಕು. ಅಥವಾ ನೀಲಗಿರಿ ಎಣ್ಣೆಯನ್ನು ಕಾಯಿಸಿ ಅದರಿಂದ ಬಾಯಿ ಮುಕ್ಕಳಿಸಬೇಕು ಜತೆಗೆ ಗಂಟಲ ಹೊರಗೆ ಲೇಪಿಸಬೇಕು.
▪️ಇಷ್ಟೆಲ್ಲಾ ಮಾಡಿಯೂ ಗಂಟಲು ನೋವು ಓಡಿಹೋಗದಿದ್ದರೆ ಮತ್ತೆ ಹೇಳಿ.
ಮಾಹಿತಿ ಕೃಪೆ: ಕk. ಶ್ರೀನಿವಾಸರಾವ್, hರಪನಹಳ್ಳಿ