Health plan: ಭಾರತದಲ್ಲಿ ಆರೋಗ್ಯ ಯೋಜನೆ ಒಂದಿಷ್ಟು ಕಿರು ನೋಟ-2025

Health plan: ಭಾರತದಲ್ಲಿ ಆರೋಗ್ಯ ಯೋಜನೆ ಒಂದಿಷ್ಟು ಕಿರು ನೋಟ

Health plan: ಭಾರತದಲ್ಲಿ ಆರೋಗ್ಯ ಯೋಜನೆ ಒಂದಿಷ್ಟು ನೋಟ: ದೇಶದ ಆರೋಗ್ಯ ವಲಯವನ್ನು ಸದೃಢವಾಗಿಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳು ಎಷ್ಟರಮಟ್ಟಿಗೆ ಫಲಪ್ರದವಾಗಿವೆ ಎಂಬುದರ ಕಿರು ನೋಟ ಇಲ್ಲಿದೆ.

Health Plan: ದಶಕಗಳ ಹಿಂದೆ ಆರೋಗ್ಯ ವ್ಯವಸ್ಥೆಯು ಸಿರಿವಂತರಿಗೆ ಮಾತ್ರ ಸೀಮಿತವಾಗಿತ್ತು ಬಡವರು ಸರ್ಕಾರ ಆಸ್ಪತ್ರೆಗಳಲ್ಲಿ ಸಿಗುವ ಔಷಧಿಗಳಿಂದಲೇ ಗುಣಮುಖರಾಗಬೇಕಿತ್ತು ಒಂದುವೇಳೆ ಸೂಕ್ತ ಔಷಧ ಸಿಗದಿದ್ದರೆ ಅವರು ಬೇರೆ ಆಸ್ಪತ್ರೆಗಳಿಗೆ ಇರಲಿಲ್ಲ ಆದರೆ ಕಳೆದ ದಶಕದಲ್ಲಿ ಆರೋಗ್ಯ ವಲಯದಲ್ಲಿ ಗಮನಾರ್ಹ  ಸುಧಾರಣೆ ಕಂಡಿದೆ ಕೇಂದ್ರ ಸರ್ಕಾರ ಜಾಲಿ ಗೊಳಿಸಲಾಗಿರುವಂತಹ ಹಲವಾರು ಉಪಕ್ರಮಗಳು ಎಲ್ಲ ವರ್ಗದವರು ಸೂಕ್ತ ಸಮಯಕ್ಕೆ ಚಿಕಿತ್ಸೆ ಪಡೆಯಲು ಸಹಕಾರಿಯಾಗಿವೆ.

ಆರೋಗ್ಯ ಕ್ಷೇತ್ರದಲ್ಲಿ ಮೂಲಸೌಕರ್ಯ ಸಂಪನ್ಮೂಲಗಳು ಹೆಚ್ಚಾಗಿದೆ ಆರೋಗ್ಯ ವಲಯದ ಈ ಕ್ರಾಂತಿಗೆ ರಾಷ್ಟ್ರೀಯ ಆರೋಗ್ಯ ಮಿಷನ್ ಮೂಲಾಧಾರವಾಗಿದೆ ಈ ಮಿಷನ್ ಅಡಿಯಲ್ಲಿ ದೇಶಾದ್ಯಂತ 1.7 ಲಕ್ಷಕ್ಕೂ ಅಧಿಕ ಆಯುಷ್ಮಾನ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಎಲ್ಲರಿಗೂ ಕೈಗಟ್ಟುಕುವ ದರವನ್ನು ಆರೋಗ್ಯ ಸೇವೆಗಳನ್ನು ಒದಗಿಸುವ ಡಿಜಿಟಲ್  ವೇದಿಕೆಗಳನ್ನು ನಿರ್ಮಿಸಲಾಗಿದೆ.

Health Plan: ಹಳ್ಳಿ ಮಟ್ಟದಿಂದ ರಾಜ್ಯಮಟ್ಟದವರೆಗೆ:

ಜನರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲು ಗ್ರಾಮ ಪಂಚಾಯಿತಿ ಅಥವಾ ಹೋಬಳಿ ಮಟ್ಟದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇವು ಸಾಂಕ್ರಾಮಿಕ ರೋಗ, ಲಸಿಕೆ, ಚುಚ್ಚುಮದ್ದುಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುತ್ತವೆ. ಜೊತೆಗೆ ಮಹಿಳೆ ಮತ್ತು ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದಂತೆ ಕ್ರಮಗಳನ್ನು ಕೈಗೊಳ್ಳುತ್ತವೆ.

ತಾಲೂಕು ಆರೋಗ್ಯ ಅಧಿಕಾರಿಗಳು, ಜಿಲ್ಲಾ ಆರೋಗ್ಯ ಅಧಿಕಾರಿಗಳು, ಆಯಾ ತಾಲೂಕು ಮತ್ತು ಜಿಲ್ಲೆಗೆ ಸಂಬಂಧಿಸಿದ ಆರೋಗ್ಯ ವ್ಯವಸ್ಥೆಯ ಮೇಲೆ ನಿಗಾವಿಸುತ್ತಾರೆ. ಜಿಲ್ಲೆಗಳು ಸಮುದಾಯ ಆರೋಗ್ಯ ಕೇಂದ್ರಗಳು ವಿಶೇಷ ಚಿಕಿತ್ಸಾಲಯಗಳು ಸೇವಾ ಪೂರೈಕೆದಾರರಾಗಿ  ಕಾರ್ಯನಿರ್ವಹಿಸುತ್ತವೆ

ಈ ಹಿಂದೆ ಗ್ರಾಮೀಣ ಭಾಗದ ಜನರು ಕ್ಯಾನ್ಸರ್, ಅಂಗಾಂಗ ಕಸಿ, ಶಸ್ತ್ರಚಿಕಿತ್ಸೆಗಳಿಗೆಲ್ಲ ದೊಡ್ಡ ದೊಡ್ಡ ನಗರಗಳಿಗೆ ಬರಬೇಕಿತ್ತು. ಆದರೆ, ಈಗ ತಾಲೂಕು ಮಟ್ಟದಲ್ಲಿಯೇ ಈ ಆಸ್ಪತ್ರೆಗಳನ್ನು ನಿರ್ಮಿಸಲಾಗಿದೆ. ಅಲ್ಲದೆ, ಈ ರೋಗಗಳಿಗೆ ಚಿಕಿತ್ಸೆ ನೀಡಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಲವಾರು ಉಪಕ್ರಮಗಳನ್ನು ಜಾರಿಗೆ ತಂದಿವೆ.

ಆರೋಗ್ಯ ವ್ಯವಸ್ಥೆಯ ನಿಯಂತ್ರಕ ಸಂಸ್ಥೆಗಳು:

▪️ಆರೋಗ್ಯ ವ್ಯವಸ್ಥೆಯನ್ನು ಮೇಲ್ವಿಚಾರಣೆ ಮಾಡಲು ಕೇಂದ್ರ ಸರಕಾರವು ವಿವಿಧ ಸಂಸ್ಥೆಗಳನ್ನು ನಿಯೋಜಿಸಿದೆ. ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯು ಔಷಧಗಳು, ವೈದ್ಯಕೀಯ ಸಾಧನಗಳು ಅಥವಾ ಉಪಕರಣಗಳು, ಸೌಂದರ್ಯ ವರ್ಧಕಗಳನ್ನು ಮೇಲ್ವಿಚಾರಣೆ ಮಾಡುತ್ತದೆ. ಅವುಗಳ ಸುರಕ್ಷತೆ ಮತ್ತು ಪರಿಣಾಮಕಾರಿತ್ವ, ಗುಣಮಟ್ಟವನ್ನು ಖಾತ್ರಿಪಡಿಸುತ್ತವೆ.

▪️’ಭಾರತೀಯ ವೈದ್ಯಕೀಯ ಮಂಡಳಿಯು ವೈದ್ಯಕೀಯ ಶಿಕ್ಷಣ ಮತ್ತು ವೃತ್ತಿಪರ ಅಭ್ಯಾಸ ಮಾನದಂಡಗಳನ್ನು ಮೇಲ್ವಿಚಾರಣೆ ಮಾಡಲಿದೆ. ರಾಷ್ಟ್ರೀಯ ವೈದ್ಯಕೀಯ ಆಯೋಗ ಕಾಯಿದೆ-2019ರ ಅಡಿಯಲ್ಲಿ ಭಾರತೀಯ ವೈದ್ಯಕೀಯ ಮಂಡಳಿಯನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಎಂದು ಬದಲಿಸಲಾಗಿದೆ. ಎನ್‌ಎಂಸಿ ಈಗ ವೈದ್ಯಕೀಯ ಶಿಕ್ಷಣ, ಪರವಾನಗಿ ಹಾಗೂ ವೃತ್ತಿಪರ ನೀತಿಶಾಸ್ತ್ರಗಳನ್ನು ನಿಯಂತ್ರಿಸುತ್ತದೆ.

▪️ಆಸ್ಪತ್ರೆಗಳು ಮತ್ತು ಆರೋಗ್ಯ ಪೂರೈಕೆದಾರರ ರಾಷ್ಟ್ರೀಯ ಮಾನ್ಯತೆ ಮಂಡಳಿಯು ಆಸ್ಪತ್ರೆಗಳ ಗುಣ ಮಟ್ಟ, ಸುರಕ್ಷತಾ ಮಾನದಂಡಗಳ ಆಧಾರದಲ್ಲಿ ಆಸ್ಪತ್ರೆಗಳಿಗೆ ಮಾನ್ಯತೆ ನೀಡುತ್ತದೆ.

▪️’ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ಆರೋಗ್ಯ ವಿಮಾ ಪಾಲಿಸಿಗಳನ್ನು ನಿಯಂತ್ರಿಸುತ್ತದೆ. ಅವು ಗ್ರಾಹಕರಿಗೆ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆಯನ್ನು ಖಾತ್ರಿಪಡಿಸುತ್ತದೆ.

Health Plan: ಇತ್ತೀಚಿನ ಬೆಳವಣಿಗೆಗಳು:

ಆಯುಷ್ಮಾನ್ ಭಾರತ್, ಏಕೀಕೃತ ಡಿಜಿಟಲ್ ಆರೋಗ್ಯ ಪರಿಸರ ವ್ಯವಸ್ಥೆಯನ್ನು ರಚಿಸುವ ಗುರಿ ಹೊಂದಿದೆ. ಸುರಕ್ಷಿತ ಮತ್ತು ಕಾನೂನುಬದ್ಧ ಆನ್‌ಲೈನ್ ವೈದ್ಯಕೀಯ ವಹಿವಾಟುಗಳನ್ನು ಖಚಿತಪಡಿಸಿಕೊಳ್ಳಲು ಇ-ಫಾರ್ಮಸಿಗಳನ್ನು ರಚಿಸಲಾಗಿದೆ. 2020ರಲ್ಲಿ ರಾಷ್ಟ್ರೀಯ ವೈದ್ಯಕೀಯ ಮಂಡಳಿ ಬಿಡುಗಡೆ ಮಾಡಿದ ಟೆಲಿಮೆಡಿಸಿನ್ ಮಾರ್ಗಸೂಚಿಗಳು ಜನರಿಗೆ ಸೂಕ್ತ ಸಮಯಕ್ಕೆ ಮೆಡಿಸಿನ್ ದೊರಕುವಂತೆ ಮಾಡುವ ಮೂಲಕ ಹೆಚ್ಚು ಜನಪ್ರಿಯತೆ ಗಳಿಸಿದೆ.

ಪ್ರಮುಖ ಸಮಸ್ಯೆಗಳು:

▪️ಆರೋಗ್ಯ ರಕ್ಷಣೆಯಲ್ಲಿ ಗಮನಾರ್ಹ ಪ್ರಗತಿಯ ಹೊರತಾಗಿಯೂ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅಸಮಾನತೆ ಇದೆ.

▪️ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶಗಳಲ್ಲಿ ಕಡಿಮೆ ಮೂಲಸೌಕರ್ಯವಿದೆ. ಉದಾಹರಣೆಗೆ ಗ್ರಾಮೀಣ ಪ್ರದೇಶಗಳಲ್ಲಿ ತಜ್ಞವೈದ್ಯರ ಅಭಾವವಿದೆ. ರೋಗಿಗಳು ಹೆಚ್ಚಿದ್ದು, ವೈದ್ಯರು ಕಡಿಮೆಯಿದ್ದಾರೆ. ಇದು ರೋಗಿಗಳ ಚಿಕಿತ್ಸೆಯ ಮೇಲೆ ಪರಿಣಾಮ ಬೀರುತ್ತದೆ.

▪️ಆಯುಷ್ಮಾನ್ ಭಾರತದಂತಹ ಉಪಕ್ರಮಗಳ ಹೊರತಾಗಿಯೂ ಜನರು ಚಿಕಿತ್ಸೆಗೆ ಹೆಚ್ಚಿನ ಹಣ ಭರಿಸುತ್ತಿದ್ದಾರೆ. 2023ರಲ್ಲಿ ಶೇ.47.1ರಷ್ಟು ಮಂದಿ ಚಿಕಿತ್ಸೆಗೆ ಎಂದು ಹಣ ವ್ಯಯಿಸಿದ್ದಾರೆ.

▪️ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿ ಆರೈಕೆಯ ಗುಣಮಟ್ಟದಲ್ಲಿ ವ್ಯತ್ಯಾಸವಿದೆ. ಸರಕಾರಿ ಆಸ್ಪತ್ರೆಗಳು ಕೈಗೆಟಕುವ ದರದಲ್ಲಿ ಚಿಕಿತ್ಸೆ ನೀಡುತ್ತಿದ್ದರೂ, ಮೂಲಸೌಕರ್ಯ, ಜನದಟ್ಟಣೆ ಹಾಗೂ ಸಿಬ್ಬಂದಿ ಕೊರತೆಯಿಂದ ಬಳಲುತ್ತಿವೆ. ಮೂಲಸೌಕರ್ಯವನ್ನು ಸುಧಾರಿಸಿದರೂ ಗುಣಮಟ್ಟ ಕಳಪೆಯಾಗಿದೆ. ಹೀಗಾಗಿ, ಸಾರ್ವಜನಿಕರು ಸರಕಾರಿ ಆಸ್ಪತ್ರೆಯ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದಾರೆ.

▪️2023-24ರ ಆರ್ಥಿಕ ವರ್ಷದಲ್ಲಿ ಔಷಧ ವಲಯದಲ್ಲಿಯೂ 16.88 ಕೋಟಿ ರೂ.ಗಿಂತಲೂ ಅಧಿಕ ಮೌಲ್ಯದ ಕಳಪೆ ಔಷಧವನ್ನು ಹಿಂಪಡೆಯಲಾಗಿದೆ.

▪️ಸಾಂಕ್ರಾಮಿಕ ರೋಗಗಳಿಂದ ಪ್ರತಿವರ್ಷ ಸುಮಾರು 58 ಲಕ್ಷ ಮಂದಿ ಮೃತಪಡುತ್ತಿದ್ದಾರೆ. ನಾಲ್ವರಲ್ಲಿ ಒಬ್ಬರು 70 ವರ್ಷ ದಾಟುವ ಮುನ್ನವೇ ಸಾಂಕ್ರಾಮಿಕ ರೋಗಕ್ಕೆ ಬಲಿಯಾಗುತ್ತಿದ್ದಾರೆ.

▪️ಇತ್ತೀಚಿನ ವರದಿಯ ಪ್ರಕಾರ, ದೇಶದ ಶೇ.23ರಷ್ಟು ಮಹಿಳೆಯರು ಮತ್ತು ಶೇ.22.1 ರಷ್ಟು ಪುರುಷರು ಅಧಿಕ ತೂಕ ಹೊಂದಿದ್ದಾರೆ.

▪️ಸಾರ್ವಜನಿಕರ ಪ್ರಯೋಜನಕ್ಕಾಗಿ ಜಾರಿಗೆ ತಂದಿರುವ ಆಯುಷ್ಠಾನ್ ಭಾರತದಂತಹ ಯೋಜನೆಗಳು ಸಮರ್ಪಕವಾಗಿ ಜನರಿಗೆ ತಲುಪಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ಬಹುಪಾಲು ವೈದ್ಯರಿಗೂ ಈ ಯೋಜನೆಗಳ ಬಗ್ಗೆ ತಿಳಿದಿಲ್ಲ.

ಸುಧಾರಣೆಗೆ ಕ್ರಮಗಳೇನು?

ಪ್ರಾಥಮಿಕ ಆಸ್ಪತ್ರೆಗಳ ಸಂಖ್ಯೆ ಹೆಚ್ಚಿಸಬೇಕು. ಆರೋಗ್ಯ ಕಾರ್ಯಪಡೆಗೆ ತರಬೇತಿ ನೀಡಿ, ನೇಮಕಾತಿಯನ್ನು ವೇಗಗೊಳಿಸಬೇಕು. ಪ್ರಾಥಮಿಕ ಆರೋಗ್ಯ ಕಾರ್ಯಕರ್ತರು ಮತ್ತು ವೈದ್ಯಕೀಯ ಅಧಿಕಾರಿಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ವಿಶೇಷ ತರಬೇತಿ ನೀಡಬೇಕು. ವೈದ್ಯರು ಮತ್ತು ಸಿಬ್ಬಂದಿಯನ್ನು ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವಂತೆ ಪ್ರೋತ್ಸಾಹಿಸಬೇಕು.

 

ಖಾಸಗಿ ಮತ್ತು ಲಾಭರಹಿತ ಸಂಸ್ಥೆಗಳ ಸಹಯೋಗದಲ್ಲಿ ಟೆಲಿಮೆಡಿಸಿನ್ ಯೋಜನೆಯನ್ನು ಮತ್ತಷ್ಟು ಪ್ರಚುರಪಡಿಸಬಹುದು. ಜಿಲ್ಲಾಸ್ಪತ್ರೆಗಳಲ್ಲಿ ಚಿಕಿತ್ಸೆಯ ಗುಣಮಟ್ಟವನ್ನು ಹೆಚ್ಚಿಸುವುದು. ಆಯುಷ್ಮಾನ್ ಭಾರತದಂತಹ ವಿಮಾ ಯೋಜನೆಗಳನ್ನು ಸರಳೀಕರಿಸುವುದು. ಸರಕಾರವು ವಿಮಾ ಕಂತುಗಳನ್ನು ಜನರ ಕೈಗೆಟಕುವಂತೆ ಮಾಡುವುದು. ಸರಕಾರದ ವಿವಿಧ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದು.

ಪ್ರಮುಖ ಕಾಯಿದೆಗಳು:

ಆರೋಗ್ಯ ಕ್ಷೇತ್ರವನ್ನು ನಿಯಂತ್ರಿಸಲು ಸಂವಿಧಾನದಲ್ಲಿ ಕೆಲವು ಕಾಯಿದೆಗಳನ್ನು ಅಳವಡಿಸಿಕೊಳ್ಳಲಾಗಿದೆ.

▪️ಭಾರತೀಯ ವೈದ್ಯಕೀಯ ಮಂಡಳಿ ಕಾಯಿದೆ-1956,
▪️ರಾಷ್ಟ್ರೀಯ ವೈದ್ಯಕೀಯ ಆಯೋಗ ಕಾಯಿದೆ-2019
▪️ಔಷಧಗಳು ಮತ್ತು ಸೌಂದರ್ಯ ವರ್ಧಕ ಕಾಯಿದೆ-1940
▪️ಕ್ಲಿನಿಕಲ್ ಸ್ಥಾಪನೆ (ನೋಂದಣಿ ಮತ್ತು ನಿಯಂತ್ರಣ) ಕಾಯಿದೆ-2010
▪️ ಭಾರತೀಯ ನರ್ಸಿಂಗ್‌ ಮಂಡಳಿ ಕಾಯಿದೆ-1947

ಇವು ವೈದ್ಯಕೀಯ ಶಿಕ್ಷಣ, ಔಷಧ, ಚಿಕಿತ್ಸೆ ಕುರಿತು ನಿಯಮಗಳನ್ನು ರೂಪಿಸುವಲ್ಲಿ ಸಹಕಾರಿಕಾರಿಯಾಗಿವೆ.

▪️ಜನನಿ ಶಿಶು ಸುರಕ್ಷಾ ಕಾರ್ಯಕ್ರಮ (JSSK)

▪️ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮ(RKSK)

▪️ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ (RBSK)

▪️ಸಾರ್ವತ್ರಿಕ ರೋಗನಿರೋಧಕ ಕಾರ್ಯಕ್ರಮ

▪️ಮಿಷನ್ ಇಂದ್ರಧನುಷ್ (MI)

▪️ಜನನಿ ಸುರಕ್ಷಾ ಯೋಜನೆ (JSY)

▪️ಪ್ರಧಾನ ಮಂತ್ರಿ ಸುರಕ್ಷಿತ್ ಮಾತೃತ್ವ ಅಭಿಯಾನ (PMSMA)

▪️ನವಜಾತ ಶಿಶು ಸುರಕ್ಷಾ ಕಾರ್ಯಕ್ರಮ (NSSK)

▪️ರಾಷ್ಟ್ರೀಯ ಕುಟುಂಬ ಯೋಜನೆ ಕಾರ್ಯಕ್ರಮ

▪️ಲಕ್ಷ್ಯ ಕಾರ್ಯಕ್ರಮ (ಕಾರ್ಮಿಕ ಕೊಠಡಿ ಗುಣಮಟ್ಟ ಸುಧಾರಣಾ ಉಪಕ್ರಮ)

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!