HRMS:Important Information for Govt and Aided Employees on HRMS SOFTWARE Dated: 16-12-2024

HRMS:ಸರ್ಕಾರಿ ಮತ್ತು ಅನುದಾನಿತ ಶಾಲಾ  ನೌಕರರುಗಳಿಗೆ ಮುಖ್ಯ ಮಾಹಿತಿ 

ಮೇಲ್ಕಂಡ ವಿಷಯ ಹಾಗೂ ಉಲ್ಲೇಖಗಳಿಗೆ ಸಂಬಂಧಿಸಿದಂತೆ ಹೆಚ್.ಆರ್.ಎಂ.ಎಸ್ ತಂತ್ರಾಂಶದಲ್ಲಿ ವೇತನ ಬಟವಾಡೆ ಅಧಿಕಾರಿಗಳಿಗೆ ತಮ್ಮ ಹಂತದಲ್ಲಿಯೇ ಕೆಲವೊಂದು ಮಾಹಿತಿಗಳನ್ನು ಅಳವಡಿಸಿಕೊಳ್ಳಲು OPTION ನೀಡಲಾಗಿದ್ದರೂ ಸಹ ಈ ಕೆಳಕಂಡ ಬದಲಾವಣೆಗಳಿಗಾಗಿ ಹೆಚ್.ಆ‌ರ್.ಎಂ.ಎಸ್. ಶಾಖೆಗೆ ಪ್ರಸ್ತಾವನೆಗಳನ್ನು ಸಲ್ಲಿಸಲಾಗುತ್ತಿದೆ. ಸದರಿ ವಿಷಯಕ್ಕೆ ಸಂಬಂಧಪಟ್ಟಂತೆ ಈ ಕೆಳಕಂಡ ಅಂಶಗಳನ್ನು ಗಮನಿಸಲಾಗಿದೆ.

1.ಹೆಚ್.ಆರ್.ಎಂ.ಎಸ್. ಶಾಖೆಗೆ ಪ್ರಸ್ತಾವನೆಗಳನ್ನು ಸಲ್ಲಿಸುವಾಗ ಡಿ.ಡಿ.ಓ ಕೋಡ್ ಮತ್ತು ಕೆ.ಜಿ.ಐ.ಡಿ ಸಂಖ್ಯೆ, ಕಾರ್ಯನಿರ್ವಾಹಕರ ಪೋನ್ ನಂಬರ್,ಮೇಲ್ ಐಡಿ ಮಾಹಿತಿಗಳನ್ನು ನಮೂದಿಸುತ್ತಿಲ್ಲ. ಈ ಮಾಹಿತಿಗಳಿಲ್ಲದೇ ಯಾವುದೇ ಸಮಸ್ಯೆಗಳನ್ನು ನಮ್ಮ ಹಂತದಲ್ಲಿ ಪರಿಶೀಲಿಸಲು ಸಾಧ್ಯವಾಗುವುದಿಲ್ಲ.

2.HRMS ಶಾಖೆಗೆ ಬಂದ ಪತ್ರಗಳನ್ನು ನಮ್ಮ ಹಂತದಲ್ಲಿ ಪರಿಶೀಲಿಸಿ ಬ್ಯಾಕ್ ಎಂಡ್ ನಲ್ಲಿ Complaint lodge ಮಾಡಲಾಗುತ್ತಿದೆ. ಈ ರೀತಿ ಕ್ರಮವಹಿಸಿರುವ ಮಾಹಿತಿಗಳನ್ನು ವೇತನ ಬಟವಾಡ ಅಧಿಕಾರಿಗಳು ತಮ್ಮ ಹಂತದಲ್ಲಿಯೇ ನೋಡಿಕೊಳ್ಳಲು Backend Complaint Status option ನೀಡಲಾಗಿದೆ. ಈ Option ನಲ್ಲಿ ನಿಮ್ಮ ಸಮಸ್ಯೆಗಳಿಗೆ ಕ್ರಮವಾಗಿರುವ ಬಗ್ಗೆ, ಮತ್ತು ವೇತನ ಬಟವಾಡ ಅಧಿಕಾರಿಗಳು ಸದರಿ ಆ ಸಮಸ್ಯೆಗಳಿಗೆ ಯಾವ ರೀತಿ ಕ್ರಮವಹಿಸಬೇಕು ಎಂಬುದನ್ನು ಸ್ಪಷ್ಟವಾಗಿ ನಮೂದಿಸಿರುತ್ತಾರೆ. ವೇತನ ಬಟವಾಡೆ ಅಧಿಕಾರಿಗಳು ಈ Option ನಲ್ಲಿ ಪರಿಶೀಲಿಸಿಕೊಳ್ಳದೇ ಪದೇ ಪದೇ ಹಳೆ ಪ್ರಸ್ತಾವನೆಗಳನ್ನು ಶಾಖೆಗೆ ಸಲ್ಲಿಸಲಾಗುತ್ತಿರುವುದರಿಂದ ಪ್ರಕರಣಗಳ ಇತ್ಯರ್ಥಕ್ಕೆ ವಿಳಂಬವಾಗುತ್ತಿದೆ.

3.HRMS ಸಮಸ್ಯೆಗಳಿಗೆ ಸಂಬಂಧಿಸಿದ ಮಾಹಿತಿಗಾಗಿ/ ಸಮಸ್ಯೆಗಳ ನಿವಾರಣೆಗಾಗಿ ವಿಷಯ ನಿರ್ವಾಹಕರುಗಳು/ ವೇತನ ಬಟವಾಡೆ ಅಧಿಕಾರಿಗಳು ಶಾಖೆಗೆ ಭೇಟಿ ನೀಡದೆ ಶಿಕ್ಷಕರುಗಳನ್ನು/ಇತರರನ್ನು ಕಳುಹಿಸುತ್ತಿರುವುದರಿಂದ ತಾಂತ್ರಿಕ ಸಮಸ್ಯೆಗಳು ಅವರಿಗೆ ಅರ್ಥವಾಗದೇ ಕಛೇರಿಯ ಸಮಯ ವ್ಯರ್ಥವಾಗುತ್ತಿದೆ.

4.HRMS ಶಾಖೆಗೆ ಪ್ರಸ್ತಾವನೆಗಳನ್ನು ಸಲ್ಲಿಸುವಾಗ ವಾಸ್ತವವಾಗಿ ಆಗುತ್ತಿರುವ ಸಮಸ್ಯೆಗಳನ್ನು ವೇತನ ಬಟವಾಡೆ ಅಧಿಕಾರಿಗಳು ಮೊದಲು ಅರ್ಥ ಮಾಡಿಕೊಂಡು ಅದಕ್ಕೆ ನಿರ್ದಿಷ್ಟ ಬದಲಾವಣೆಗಳು ಆಗಬೇಕೆಂಬುದನ್ನು ಸರಿಯಾಗಿ ನಮೂದಿಸಿ ಸಮಸ್ಯೆಗಳಿಗೆ ಸಂಬಂಧಿಸಿದ ಹೆಚ್.ಆರ್.ಎಂ.ಎಸ್ Screenshot & ಆದೇಶಗಳನ್ನು ಕಡ್ಡಾಯವಾಗಿ ಲಗತ್ತಿಸಬೇಕು.

5.10/15/20/25/30 ವರ್ಷಗಳ Time Bond Request/DOB/DOJ/Payscale/NAME/DESIGNATION/GROUP/ SALARYBILL, ARREARS BILL & FA BILL REVERT/UNAPPROVE LEAVE ENCASHMENT/ ASSIGN NEW DDO/ REAPPOINTMENT IN SERVICE OUT/PP-SFN/PH/EXIT APPROVAL/ENABLE EMP ADDITION ಈ ಮಾಹಿತಿಗಳನ್ನು ಡಿ.ಡಿ.ಓಗಳು Hrms Online ಮುಖಾಂತರ Request ನೀಡಬೇಕು ಈ ಸಮಸ್ಯೆಗಳಿಗೆ ಪತ್ರ ವ್ಯವಹಾರ ಮಾಡುವ ಅಗತ್ಯವಿಲ್ಲ. ಇದರ ಹೊರತಾಗಿಯೂ ಶಾಖೆಗೆ ಪತ್ರ ಸಲ್ಲಿಸುತ್ತಿದ್ದರೆ ಆಯುಕ್ತರ ಕಛೇರಿಯ HRMS ವಿಭಾಗದಿಂದ ಯಾವುದೇ ರೀತಿಯ ಕ್ರಮವಹಿಸಲಾಗುವುದಿಲ್ಲ.

ನೌಕರರು ವಯೋನಿವೃತ್ತಿ/ನಿಧನ ಹೊಂದಿದ ಸಂದರ್ಭಗಳಲ್ಲಿ ವೇತನ ಬಟವಾಡೆ ಅಧಿಕಾರಿಗಳು ಆ ನೌಕರರ ವಿವರಗಳನ್ನು Exit ಮಾಡಬೇಕು. ಆದರೆ ಡಿ.ಡಿ.ಓ ಗಳೂ ಈ ರೀತಿ ಮಾಡದೇ ನಿಧನ ಹೊಂದಿದ ನೌಕರರುಗಳಿಗೆ ವೇತನ ಸೆಳೆದಿರುವ ಪ್ರಕರಣಗಳು ವರದಿಯಾಗುತ್ತಿದ್ದು, ಈ ರೀತಿ ಹಣ ಸೆಳದಿದ್ದಲ್ಲಿ ಸಂಬಂಧಿಸಿದ ವೇತನ ಬಡವಾಡೆ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಿ ಶಿಸ್ತುಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು.

7.ಕೆ.ಜಿ.ಐ.ಡಿ ಮಾಹಿತಿಗಳ ಬದಲಾವಣೆಗಳಿಗೆ ವೇತನ ಬಟವಾಡೆ ಅಧಿಕಾರಿಗಳು ಮೊದಲು ಕೆ.ಜಿ.ಐ.ಡಿ ಕೇಂದ್ರ ಕಛೇರಿ, 17ನೇ ಮಹಡಿ ವಿ.ವಿ. ಟವರ್, ಬೆಂಗಳೂರು ಇವರನ್ನು ಸಂಪರ್ಕಿಸಿ ಕೆ.ಜಿ.ಐ.ಡಿ ಮಾಸ್ಟರ್ ಟೇಬಲ್ ನಲ್ಲಿ ಕೆ.ಜಿ.ಐ.ಡಿ ಸಂಖ್ಯೆಯನ್ನು ತಿದ್ದುಪಡಿ ಮಾಡಿಸಬೇಕು. ನಂತರ ಡಿ.ಡಿ.ಓಗಳು ತಮ್ಮ ಲಾಗಿನ್‌ನಲ್ಲಿ -PAYROLL OPTION ಹೋಗಿ INSURANCE DETAILS ನಲ್ಲಿ ಮಾಸ್ಟರ್ ಟೇಬಲ್ ನಲ್ಲಿ ಅಪ್‌ಡೇಟ್ ಆದ ಕೆ.ಜಿ.ಐ.ಡಿ ಸಂಖ್ಯೆಯನ್ನು ನಮೂದಿಸಿ ನಂತರ ಹೆಚ್.ಆರ್.ಎಂ.ಎಸ್ ತಂತ್ರಾಂಶದಲ್ಲಿ ಚಾಲ್ತಿಯಲ್ಲಿರುವ ಕೆ.ಜಿ.ಐ.ಡಿ ಸಂಖ್ಯೆಯ ರೆಸಿಪಿಯಂಟ್ ಐಡಿಯನ್ನು ಕೆ-2 ನಲ್ಲಿ ಸಮಸ್ಯೆ ದಾಖಲಿಸಿ DEACTIVATE ಮಾಡಿಸಿಕೊಳ್ಳಿ. ಈ ಎಲ್ಲಾ ಪ್ರತಿಗಳನ್ನು ಕಡ್ಡಾಯವಾಗಿ ಲಗತ್ತಿಸಿ ಕೆ.ಜಿ.ಐ.ಡಿ ಸಂಖ್ಯೆ ಬದಲಾವಣೆಗೆ ಹೆಚ್.ಆರ್.ಎಂ.ಎಸ್ ಶಾಖೆಗೆ ಪ್ರಸ್ತಾವನೆ ಸಲ್ಲಿಸಬೇಕು. ಕೆ.ಜಿ.ಐ.ಡಿ ಸಂಖ್ಯೆ ಬದಲಾವಣೆಯಾದ ನಂತರ ಈ ಹೊಸ ಕೆ.ಜಿ.ಐ.ಡಿ ಸಂಖ್ಯೆಗೆ ಕೆ-2 ನಲ್ಲಿ ಹೊಸ ರೆಸಿಪಿಯಂಟ್ ಐಡಿಯನ್ನು ಕ್ರಿಯೇಟ್ ಮಾಡಿಕೊಳ್ಳವುದು.

8.ಹೆಚ್.ಆ‌ರ್.ಎಂ.ಎಸ್. ಶಾಖೆಗೆ ಸರ್ಕಾರಿ ಹಾಗೂ ಅನುದಾನಿತ ಶಾಲಾ ನೌಕರರು ಪ್ರತ್ಯೇಕವಾಗಿ ಪತ್ರಗಳನ್ನು ಬರೆದು ಸಲ್ಲಿಸುತ್ತಿದ್ದು, ಸದರಿ ಸಂಬಂಧ ಕಡ್ಡಾಯವಾಗಿ ಪತ್ರ ಹಾಗೂ ಪ್ರಸ್ತಾವನೆಗಳನ್ನು ವೇತನ ಬಟವಾಡೆ ಅಧಿಕಾರಿಗಳು ಮಾತ್ರ ಸಲ್ಲಿಸತಕ್ಕದ್ದು.

9.ಹೆಚ್.ಆರ್.ಎಂ.ಎಸ್. ತಂತ್ರಾಂಶದಲ್ಲಿ ಡಿ.ಡಿ.ಓ. ಲಾಗಿನ್ ನಲ್ಲಿ ಕೆ.ಜಿ.ಐ.ಡಿ. ಮತ್ತು ಸಾಮಾನ್ಯ ಭವಿಷ್ಯ ನಿಧಿ ಸಾಲ (KGID/GPF Loan) ಕಡಿತ ಮಾಡುವ ಸಂದರ್ಭದಲ್ಲಿ ಅಡ್ವಾನ್ಸ್ ಪೇ ಎಂದು ಕಟಾಯಿಸುತ್ತಿದ್ದು ಯಾವುದೇ ಡಿಡಕ್ಷನ್ ಮಾಡುವಾಗ ಪರಿಶೀಲಿಸಿಕೊಂಡು ನಮೂದಿಸುವುದು.

ಉಲ್ಲೇಖ-2ರ ಆದೇಶದಂತೆ ಸರ್ಕಾರದ ವಿವಿಧ ಇಲಾಖೆಗಳ ವಿವಿಧ ವೃಂದ/ಹುದ್ದೆಗಳಿಗೆ ಲಭ್ಯವಿದ್ದ ವಿಶೇಷ ಭತ್ಯೆಗಳನ್ನು 1ನೇ ಜನವರಿಯಿಂದ ಜಾರಿಗೆ ಬರುವಂತೆ ಪರಿಷ್ಕರಿಸಲಾಗಿದೆ. HRMS 2.0 Arrears Module data Base ಅನ್ನು ನಿರ್ವಹಿಸುವ ಸಂದರ್ಭದಲ್ಲಿ ನೌಕರರು ಪಡೆಯುತ್ತಿರುವ ಭತ್ಯೆಗಳ ವಿವರಗಳನ್ನು ವಿಶ್ಲೇಷಿಸಿದಾಗ ಕೆಳಕಂಡ ಅಂಶಗಳು ಕಂಡು ಬಂದಿರುತ್ತವೆ.

ವಿವಿಧ ವೃಂದ/ಹುದ್ದೆಗಳಿಗೆ ಭತ್ಯೆಗಳನ್ನು ಅನ್ವಯಿಸದಿದ್ದರೂ ಸಹ ಭತ್ಯೆಗಳನ್ನು ಸೆಳೆಯಲಾಗಿರುತ್ತದೆ.

ತಪ್ಪು ವರ್ಗೀಕರಣ ಮಾಡಿ ಭತ್ಯೆಗಳನ್ನು ಸೆಳೆಯಲಾಗುತ್ತಿರುತ್ತದೆ.

ನಿಗದಿತ ದರಕ್ಕಿಂತ ಹೆಚ್ಚಿನ ಅಥವಾ ಕಡಿಮೆ ದರದಲಿ ಭತ್ಯೆಗಳನ್ನು ಸೆಳೆಯಲಾಗುತ್ತಿದೆ.

ವೃಂದ ಬದಲಾವಣೆಯಾದಾಗ ಹಾಗೂ ಮರು ನೇಮಕಗೊಂಡಾಗ ಹಿಂದಿನ ಭತ್ಯೆಗಳನ್ನು ಸೆಳೆಯಲಾಗುತ್ತಿದೆ.

ಕಡ್ಡಾಯ ಭತ್ಯೆಗಳನ್ನು ಹೊರತುಪಡಿಸಿ ಒಂದಕ್ಕಿಂತ ಹೆಚ್ಚಿನ ಭತ್ಯೆಗಳನ್ನು ಸೆಳೆಯಲಾಗುತ್ತಿದೆ.

ಮುಂದುವರೆದು ಅನ್ವಯಿಸದಿರುವ ಭತ್ಯೆಗಳನ್ನು ನಿಲ್ಲಿಸುವುದು. ಭತ್ಯೆಗಳ ವರ್ಗೀಕರಣ ಸರಿಪಡಿಸುವುದು. ಹೆಚ್ಚಿನ ದರದಲ್ಲಿ ಸೆಳೆದಿರುವ ಭತ್ಯೆಗಳನ್ನು ವೇತನದಲ್ಲಿ ಕಟಾಯಿಸಿ ಸರ್ಕಾರಕ್ಕೆ ಮರುಭರಿಸಿ, ಹೆಚ್.ಆರ್.ಎಂ.ಎಸ್. ಕೇಂದ್ರ ಕಛೇರಿಗೆ ಮಾಹಿತಿ ಸಲ್ಲಿಸಲು ತಿಳಿಸಿದೆ. DEPUTATION ALLOWANCE ಹಾಗೂ FTA ಅನ್ನು ವೇತನ ಬಿಲ್ಲಿನಲ್ಲಿ ಸೆಳೆಯುತ್ತಿರುವುದು ಕಂಡುಬಂದಿರುತ್ತದೆ. WASHING ALLOWANCE ಎಂದಿರುವುದನ್ನು UNIFORM MAINTAINANCE ALLOWANCE ಎಂದು ಮತ್ತು  PP-PSR ಎಂದಿರುವುದನ್ನು PP-SEN ಎಂದು ಎಲ್ಲಾ ಡಿ.ಡಿ.ಓಗಳು ಬದಲಾಯಿಸಿಕೊಳ್ಳುವುದು. ಶೀಘ್ರದಲ್ಲೇ HRMS- 2.0 Payroll Module ನಲ್ಲಿ ವೇತನ ಸೆಳೆಯಬೇಕಾಗಿರುವುದರಿಂದ ಎಲ್ಲಾ ವೇತನ ಬಟವಾಡೆ ಅಧಿಕಾರಿಗಳು ತಮ್ಮ ಅಧೀನದ ಸಿಬ್ಬಂದಿಗಳ ಭತ್ಯೆಗಳನ್ನು ತುರ್ತಾಗಿ ಪರಿಶೀಲಿಸಿಕೊಂಡು ಸೆಳೆಯುತ್ತಿರುವ ಭತ್ಯೆಗಳು ಸರಿಯಾಗಿದ್ದಲ್ಲಿ ಅದಕ್ಕೆ ಸಂಬಂಧಿಸಿದ ಆದೇಶಗಳನ್ನು ದೃಡೀಕರಿಸಿ ಸಲ್ಲಿಸುವುದು.

ಹೆಚ್.ಆ‌ರ್.ಎಂ.ಎಸ್. ವಿವಿಧ ವಿಷಯದ ಕುರಿತು ತಮ್ಮ ವಿಭಾಗದ ವ್ಯಾಪ್ತಿಗೊಳಪಡುವ ಎಲ್ಲಾ ವೇತನ ಬಟವಾಡೆ ಅಧಿಕಾರಿಗಳಿಗೆ ದಿನಾಂಕ: 20-12-2024 ಹಾಗೂ 21/12/024 ರಂದು ಕೆಳಕಾಣಿಸಿದಂತೆ ವಿಭಾಗವಾರು ತರಬೇತಿಯನ್ನು ಜೂಮ್ ಮೀಟಿಂಗ್ ನಲ್ಲಿ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.

 

ನೌಕರರು ವಯೋನಿವೃತ್ತಿ/ನಿಧನ ಹೊಂದಿದ ಸಂದರ್ಭಗಳಲ್ಲಿ ವೇತನ ಬಟವಾಡೆ ಅಧಿಕಾರಿಗಳು ಆ ನೌಕರರ ವಿವರಗಳನ್ನು Exit ಮಾಡಬೇಕು. ಆದರೆ ಡಿ.ಡಿ.ಓ ಗಳೂ ಈ ರೀತಿ ಮಾಡದೇ ನಿಧನ ಹೊಂದಿದ ನೌಕರರುಗಳಿಗೆ ವೇತನ ಸೆಳೆದಿರುವ ಪ್ರಕರಣಗಳು ವರದಿಯಾಗುತ್ತಿದ್ದು, ಈ ರೀತಿ ಹಣ ಸೆಳದಿದ್ದಲ್ಲಿ ಸಂಬಂಧಿಸಿದ ವೇತನ ಬಡವಾಡ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಿ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ತಿಳಿಸಲಾಗಿದೆ.

ಮೇಲ್ಕಂಡ ತರಬೇತಿಗೆ ಉಪನಿರ್ದೇಶಕರುಗಳ ಕಛೇರಿ ಹಾಗೂ ಕ್ಷೇತ್ರಶಿಕ್ಷಣಾಧಿಕಾರಿಗಳ ಕಛೇರಿಗಳಲ್ಲಿನ ನುರಿತ ಕಾರ್ಯನಿರ್ವಹಕರು ಹಾಗೂ ಅಧಿಕ್ಷಕರು/ಪತ್ರಾಂಕಿತ ವ್ಯವಸ್ಥಾಪಕರುಗಳು ಮತ್ತು ಜಿಲ್ಲೆಯ ಎಲ್ಲಾ ವೇತನ ಬಟವಾಡೆ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಲು ತಿಳಿಸಿದೆ.ಮೇಲ್ಕಂಡ ತರಬೇತಿಗೆ ಉಪನಿರ್ದೇಶಕರುಗಳ ಕಛೇರಿ ಹಾಗೂ ಕ್ಷೇತ್ರಶಿಕ್ಷಣಾಧಿಕಾರಿಗಳ ಕಛೇರಿಗಳಲ್ಲಿನ ನುರಿತ ಕಾರ್ಯನಿರ್ವಹಕರು ಹಾಗೂ ಅಧಿಕ್ಷಕರು/ಪತ್ರಾಂಕಿತ ವ್ಯವಸ್ಥಾಪಕರುಗಳು ಮತ್ತು ಜಿಲ್ಲೆಯ ಎಲ್ಲಾ ವೇತನ ಬಟವಾಡೆ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಲು ತಿಳಿಸಿದೆ.

CLICK HERE TO DOWNLOAD ORDER

Leave a Comment