IBPS PO Exam Pattern Revision-2025: ಐಬಿಪಿಎಸ್ ಪರೀಕ್ಷಾ ಮಾದರಿಯಲ್ಲಿ ಬದಲಾವಣೆ,ಹೇಗಿರಲಿದೆ ಹೊಸ ಪರೀಕ್ಷಾ ಮಾದರಿ? ಪ್ರಾಥಮಿಕ ಮತ್ತು ಮುಖ್ಯ ಪರೀಕ್ಷೆಯಲ್ಲಿ ಬದಲಾವಣೆ ಪ್ರಶ್ನೆಗಳ ಸಂಖ್ಯೆಯೂ ಕಡಿಮೆ
IBPS PO Exam Pattern Revision-2025: ಪದವೀಧರರು ಉತ್ತಮ ಕ್ಷೇತ್ರದಲ್ಲಿ ವೃತ್ತಿಜೀವನ ಕಂಡುಕೊಳ್ಳಲು ಎದುರು ನೋಡುತ್ತಾರೆ. ಜಾಬ್ ಸೆಕ್ಯೂರಿಟಿ ಬಗ್ಗೆ ಯೋಚಿಸುವವರಿಗೆ ಬ್ಯಾಂಕ್ ಉದ್ಯೋಗಗಳು ಬೆಸ್ಟ್. ಬ್ಯಾಂಕಿಂಗ್ ಉದ್ಯಮದ ಸ್ಥಿರತೆ ಮತ್ತು ಬೆಳವಣಿಗೆಯ ದರದಿಂದ ಇತರ ಕ್ಷೇತ್ರಗಳ ಅಭ್ಯರ್ಥಿಗಳು ಇದಕ್ಕೆ ಆಕರ್ಷಿತರಾಗಿದ್ದಾರೆ. ಇದು ಈ ಕ್ಷೇತ್ರದ ಸ್ಪರ್ಧಾತ್ಮಕತೆಯನ್ನು ಹಾಗೂ ಪರೀಕ್ಷೆಗಳ ಗುಣಮಟ್ಟವನ್ನು ಹೆಚ್ಚಿಸಿದೆ.
ಇದೀಗ, ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (IBPS) ಈ ವರ್ಷ ನಡೆಸುವ ಪ್ರೊಬೇಷನರಿ ಆಫೀಸರ್ (PO) ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಯ ಪರೀಕ್ಷಾ ಮಾದರಿಯನ್ನು ಬದಲಾಯಿಸಿದೆ. 2025ರ ಐಬಿಪಿಎಸ್ ಪಿಒ ಪರೀಕ್ಷೆ ನೋಂದಣಿ ಈಗಾಗಲೇ ಪ್ರಾರಂಭವಾಗಿದ್ದು, ಈ ಪ್ರಕ್ರಿಯೆ ಜುಲೈ 21 ರ ವರೆಗೆ ನಡೆಯಲಿದೆ.
ಇಲ್ಲಿಯವರೆಗೂ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸದ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ibps.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.
IBPS PO Exam Pattern Revision-2025 PO ನೇಮಕಾತಿಯನ್ನು ಪ್ರಿಲಿಮ್ಸ್ ಮೇನ್ಸ್ ಮತ್ತು ಸಂದರ್ಶನ ಎಂಬ ಮೂರು ಹಂತಗಳಲ್ಲಿ ನಡೆಸಲಾಗುತ್ತದೆ. ಈ ಹುದ್ದೆಗಳಿಗೆ ಆಯ್ಕೆಯಾಗಲು ಅಭ್ಯರ್ಥಿಯು ಪ್ರತಿ ಹಂತದಲ್ಲೂ ಅರ್ಹತೆ ಪಡೆಯಬೇಕು. ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಪ್ರೊಬೆಷನರಿ ಅಧಿಕಾರಿ ಹುದ್ದೆಗೆ ಆಯ್ಕೆಯಾಗಲು ಅಭ್ಯರ್ಥಿ ಪ್ರತಿಯೊಂದು ಹಂತದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಈ ಪರೀಕ್ಷೆಯ ಪರೀಕ್ಷಾ ಮಾದರಿ ಮತ್ತು ಪಠ್ಯಕ್ರಮವನ್ನು ತಿಳಿದುಕೊಳ್ಳುವುದು ಅವಶ್ಯಕ.
ಏನೆಲ್ಲಾ ಬದಲಾವಣೆ ತರಲಾಗಿದೆ?
ಐಬಿಪಿಎಸ್ ಪಿಒ ಪ್ರಾಥಮಿಕ ಪರೀಕ್ಷೆಗಳಿಗೆ, ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ ವಿಷಯಕ್ಕೆ ಕಳೆದ ವರ್ಷಕ್ಕೆ ಹೋಲಿಸಿದರೆ ಅಂಕಗಳ ಸಂಖ್ಯೆಯನ್ನು 35 ರಿಂದ 30ಕ್ಕೆ ಇಳಿಸಲಾಗಿದ್ದರೆ, ರೀಸನಿಂಗ್ ಎಬಿಲಿಟಿಗೆ ಸಂಬಂಧಿಸಿದ ಅಂಕಗಳನ್ನು 30ರಿಂದ 40ಕ್ಕೆ ಹೆಚ್ಚಿಸಲಾಗಿದೆ. ಇನ್ನು ಮುಖ್ಯ ಪರೀಕ್ಷೆಗೆ ಸಂಬಂಧಿಸಿದಂತೆ, ರೀಸನಿಂಗ್ ಮತ್ತು ಕಂಪ್ಯೂಟರ್ ಆಪ್ಟಿಟ್ಯೂಡ್ ಪ್ರಶ್ನೆಗಳ ಸಂಖ್ಯೆಯನ್ನು 45ರಿಂದ 40ಕ್ಕೆ ಇಳಿಸಲಾಗಿದೆ. ಅಲ್ಲದೆ, ಪರೀಕ್ಷೆಯ ಅವಧಿಯನ್ನೂ 50 ನಿಮಿಷಗಳಿಗೆ ಇಳಿಸಲಾಗಿದೆ. 2024ರಲ್ಲಿ ಪರೀಕ್ಷೆ ಅವಧಿ 60 ನಿಮಿಷ ಇದ್ದಿತು.
ಪರೀಕ್ಷಾ ಮಾದರಿಯ ಪರಿಷ್ಕರಣೆಯ ನಂತರ, ಸಾಮಾನ್ಯ, ಆರ್ಥಿಕತೆ, ಬ್ಯಾಂಕಿಂಗ್ ಅರಿವಿನ ವಿಷಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಅಲ್ಲದೆ, ಇವು ಕಡಿಮೆ ಪ್ರಶ್ನೆಗಳನ್ನು ಹೊಂದಿರಲಿವೆ. 50 ಅಂಕಗಳಿಗಿದ್ದ ಈ ವಿಷಯಗಳು ಇನ್ನು, 35 ಪ್ರಶ್ನೆಗಳನ್ನು ಹೊಂದಿರಲಿವೆ. 2024ರಲ್ಲಿದ್ದ ಪರೀಕ್ಷಾ ಸಮಯವನ್ನು 35 ನಿಮಿಷಗಳಿಂದ 25 ನಿಮಿಷಗಳಿಗೆ ಇಳಿಸಲಾಗಿದೆ.
ದತ್ತಾಂಶ ವಿಶ್ಲೇಷಣೆ ಮತ್ತು ವ್ಯಾಖ್ಯಾನ ವಿಭಾಗವನ್ನು (Data Analysis and Interpretation) 60 ಅಂಕಗಳಿಂದ ಇದೀಗ 50 ಅಂಕಗಳಿಗೆ ಇಳಿಸಲಾಗಿದೆ.
ಪೂರ್ವಭಾವಿ ಪರೀಕ್ಷೆಗಳಿಗೆ, ಒಟ್ಟಾರೆ ಮಾದರಿಯನ್ನು ಮಾತ್ರ ಬದಲಾಯಿಸಲಾಗಿದೆ. ಅಂಕಗಳ ರಚನೆ ಮತ್ತು ಪರೀಕ್ಷಾ ಸಮಯವನ್ನು ಒಂದೇ ರೀತಿ ಇಡಲಾಗಿದೆ.
ಮುಖ್ಯ ಪರೀಕ್ಷೆಯ ಒಟ್ಟು ವಸ್ತುನಿಷ್ಠ ಪ್ರಶ್ನೆಗಳ ಸಂಖ್ಯೆಯನ್ನು 155 ರಿಂದ 145ಕ್ಕೆ ಇಳಿಸಲಾಗಿದೆ. ಅಲ್ಲದೆ, ಒಟ್ಟು ಪರೀಕ್ಷಾ ಸಮಯವನ್ನು 180 ನಿಮಿಷಗಳಿಂದ 160 ನಿಮಿಷಗಳಿಗೆ ಇಳಿಸಲಾಗಿದೆ.


ಹೇಗಿರುತ್ತೆ ಸಂದರ್ಶನ?
IBPS ಪ್ರೊಬೆಷನರಿ ಅಧಿಕಾರಿ ಸಂದರ್ಶನವು ನಿಗದಿತ ಪಠ್ಯಕ್ರಮವನ್ನು ಹೊಂದಿಲ್ಲ. ಆದಾಗ್ಯೂ, ಸಂದರ್ಶನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಅಭ್ಯರ್ಥಿಗಳು ಪ್ರಚಲಿತ ವಿದ್ಯಮಾನಗಳ ಸಾಮಾನ್ಯ ಅರಿವು ಮತ್ತು ಮೂಲಭೂತ ಆರ್ಥಿಕ ಜ್ಞಾನದೊಂದಿಗೆ ಚೆನ್ನಾಗಿ ಸಿದ್ಧರಾಗಿರಬೇಕು.
ಸಂದರ್ಶನವು ಒಟ್ಟು 100 ಅಂಕಗಳನ್ನು ಹೊಂದಿರುತ್ತದೆ. ಇಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಉತ್ತೀರ್ಣರಾಗಲು ಕನಿಷ್ಠ 40 ಅಂಕಗಳನ್ನು ಪಡೆಯಬೇಕು, ಆದರೆ ಎಸ್‌ಸಿ, ಎಸ್.ಟಿ, ಒಬಿಸಿ ಮತ್ತು ಪಿಡಬ್ಲ್ಯುಡಿ ವರ್ಗದ ಅಭ್ಯರ್ಥಿಗಳು ಕನಿಷ್ಠ 35 ಅಂಕಗಳನ್ನು ಪಡೆಯಬೇಕು. ಮುಖ್ಯ ಪರೀಕ್ಷೆ ಮತ್ತು ಸಂದರ್ಶನದ ಅಂಕಗಳನ್ನು ಒಟ್ಟುಗೂಡಿಸಿ ಅಂತಿಮ ಆಯ್ಕೆಯನ್ನು ಮಾಡಲಾಗುತ್ತದೆ. ಮುಖ್ಯ ಪರೀಕ್ಷೆಗೆ ಶೇ.80ರಷ್ಟು ಮೌಲ್ಯ ಹೊಂದಿದ್ದರೆ, ಸಂದರ್ಶನಕ್ಕೆ ಶೇ.20ರಷ್ಟು ಮೌಲ್ಯ ನೀಡಲಾಗುತ್ತದೆ.
ಸಂದರ್ಶನದ ಸಮಯದಲ್ಲಿ, ಸಮಿತಿ ಸದಸ್ಯರು ನಿಮ್ಮ ಶಿಕ್ಷಣ, ನಿಮ್ಮ ಹಿಂದಿನ ಕೆಲಸದ ಅನುಭವ, ಯಾವುದಾದರೂ ಇದ್ದರೆ ಮತ್ತು ಬ್ಯಾಂಕಿಂಗ್ ಅನ್ನು ವೃತ್ತಿಯಾಗಿ ಆಯ್ಕೆ ಮಾಡಲು ಕಾರಣ ಏನೆಂಬುದರ ಕುರಿತು ಪ್ರಶ್ನೆಗಳನ್ನು ಕೇಳಬಹುದು. ಪ್ರಮುಖ ಬ್ಯಾಂಕಿಂಗ್ ನಿಯಮಗಳು, ಇತ್ತೀಚಿನ ಆರ್ಥಿಕ ಪ್ರವೃತ್ತಿಗಳು, ಹಣಕಾಸು ಮಾರುಕಟ್ಟೆ ಮತ್ತು ಭಾರತೀಯ ರಿಸರ್ವ್ ಬ್ಯಾಂಕಿನ ಪಾತ್ರದ ಬಗ್ಗೆ ನಿಮ್ಮ ತಿಳವಳಿಕೆಯನ್ನು ಅವರು ಪರಿಶೀಲಿಸಬಹುದು.
ಹೆಚ್ಚಿನ ಅಂಕಗಳನ್ನು ಗಳಿಸಲು, ಅಭ್ಯರ್ಥಿಗಳು ಪ್ರಶ್ನೆಗಳಿಗೆ ಉತ್ತರಿಸುವಾಗ ಉತ್ತಮ ಸಂವಹನ ಕೌಶಲ್ಯ, ಸ್ಪಷ್ಟ ಚಿಂತನೆ ಮತ್ತು ಆತ್ಮವಿಶ್ವಾಸವನ್ನು ತೋರಿಸಬೇಕು.
ಈಗ ನೀವು ಎಷ್ಟು ಚೆನ್ನಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಮತ್ತು ಸಮಸ್ಯೆಗಳನ್ನು ಪರಿಹರಿಸಬಹುದು ಎಂಬುದನ್ನು ಪರೀಕ್ಷಿಸಲು ಸಮಿತಿಯು ಸಾಂದರ್ಭಿಕ ಅಥವಾ ನಡವಳಿಕೆಯ ಪ್ರಶ್ನೆಗಳನ್ನು ಸಹ ಕೇಳಬಹುದು.
ಡಿಜಿಟಲ್ ಬ್ಯಾಂಕಿಂಗ್, ಹಣಕಾಸು ಸೇರ್ಪಡೆ ಮತ್ತು ಸರ್ಕಾರಿ ಯೋಜನೆಗಳಂತಹ ಬ್ಯಾಂಕಿಂಗ್ ವಲಯದಲ್ಲಿನ ಇತ್ತೀಚಿನ ಬದಲಾವಣೆಗಳ ಬಗ್ಗೆ ತಿಳಿದುಕೊಂಡಿರುವುದು ಅತಿ ಉತ್ತಮ.
ಸಂದರ್ಶನ ಸಮಿತಿಯು ಸಾಮಾನ್ಯವಾಗಿ ಹಿರಿಯ ಅಧಿಕಾರಿಗಳು ಮತ್ತು ಬ್ಯಾಂಕಿಂಗ್ ತಜ್ಞರನ್ನು ಒಳಗೊಂಡಿರುತ್ತದೆ. ಅವರು ನಿಮ್ಮ ವ್ಯಕ್ತಿತ್ವ, ಜ್ಞಾನ ಮತ್ತು ನೀವು ಪ್ರೊಬೆಷನರಿ ಅಧಿಕಾರಿಯ ಪಾತ್ರಕ್ಕೆ ಸೂಕ್ತರೇ ಎಂಬುದನ್ನು ಆಧರಿಸಿ ನಿಮ್ಮನ್ನು ನಿರ್ಣಯಿಸುತ್ತಾರೆ.
ಸಂದರ್ಶನ ಕಷ್ಟ ಎನ್ನುವವರು ಅಣಕು ಸಂದರ್ಶನಗಳೊಂದಿಗೆ ಅಭ್ಯಾಸ ಮಾಡುವುದರಿಂದ ನೀವು ನಿಮ್ಮನ್ನು ಹೇಗೆ ತಯಾರಿ ಮಾಡಿಕೊಳ್ಳಬೇಕೆಂಬುದನ್ನು ತಿಳಿಯಲು ಸಹಾಯ ಮಾಡುತ್ತದೆ. ಅಲ್ಲದೆ, ಒತ್ತಡದಲ್ಲಿ ಶಾಂತವಾಗಿರುವುದು ಹೇಗೆ ಎಂದು ಕಲಿಸುತ್ತದೆ.
IBPS ಪ್ರಿಲಿಮ್ಸ್‌ಗೆ ಪ್ರಮುಖ ವಿಷಯಗಳು:
ಇಂಗ್ಲಿಷ್ ಭಾಷೆ: ಓದುವ ಗ್ರಹಿಕೆ, ಕ್ಲೋಜ್ ಟೆಸ್ಟ್, ದೋಷ ಗುರುತಿಸುವಿಕೆ, ಪದ ವಿನಿಮಯ, ನುಡಿಗಟ್ಟು ಬದಲಿ
ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ (ಪರಿಮಾಣಾತ್ಮಕ ಸಾಮರ್ಥ್ಯ): ಸರಳೀಕರಣ,ವರ್ಗ ಸಮೀಕರಣ, ಸಂಖ್ಯೆ/ತಪ್ಪು ಸರಣಿ, ದತ್ತಾಂಶ ವ್ಯಾಖ್ಯಾನ (ಡೇಟಾ ಇಂಟಪ್ರಿಟೇಶನ್), ಅಂಕಗಣಿತ
ರೀಸನಿಂಗ್ ಎಬಿಲಿಟಿ (ತಾರ್ಕಿಕ ಸಾಮರ್ಥ್ಯ): ಒಗಟುಗಳು, ಆಸನ ವ್ಯವಸ್ಥೆ, ಸಿಲಾಜಿಸಂ, ನಿರ್ದೇಶನ ಮತ್ತು ದೂರ, ರಕ್ತ ಸಂಬಂಧಗಳು.
ಐಬಿಪಿಎಸ್ ಪಿಒ ಪ್ರಮುಖ ದಿನಾಂಕಗಳು:
▪️ಅರ್ಜಿ ಮತ್ತು ಶುಲ್ಕ ಪಾವತಿ ಕೊನೇ ದಿನ: ಜುಲೈ 21
▪️ಹಂತಗಳು-ನೇಮಕಾತಿ ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನ
▪️ಪೂರ್ವಭಾವಿ ಪರೀಕ್ಷೆಗಳು-ಆಗಸ್ಟ್ 17, 23, 24
▪️ಸೆಪ್ಟೆಂಬರ್ ಪ್ರಾಥಮಿಕ ಫಲಿತಾಂಶ ಘೋಷಣೆ:
▪️ಮುಖ್ಯ ಪರೀಕ್ಷೆ- ಅಕ್ಟೋಬರ್ 12
▪️ಪರೀಕ್ಷಾ ವಿಧಾನ- ಆನ್‌ಲೈನ್
▪️60 ನಿಮಿಷಗಳು ಪೂರ್ವಭಾವಿ ಪರೀಕ್ಷೆಯ ಅವಧಿ-
▪️ಮುಖ್ಯ ಪರೀಕ್ಷೆ: 190 ನಿಮಿಷಗಳು
▪️ಋಣಾತ್ಮಕ ಅಂಕಗಳು: 0.25. ಅಂಕಗಳು
▪️ಸಂದರ್ಶನ ಸುತ್ತು: ಡಿಸೆಂಬರ್ 2025/ಜನವರಿ 2026
▪️ತಾತ್ಕಾಲಿಕ ಸೀಟು ಹಂಚಿಕೆ: ಜನವರಿ/ಫೆಬ್ರವರಿ 2026
ಮುಖ್ಯ ಪರೀಕ್ಷೆಗೆ ಓದಬೇಕಾದ ಪ್ರಮುಖ ವಿಷಯಗಳು
▪️ರೀಸನಿಂಗ್ ಆ್ಯಂಡ್ ಕಂಪ್ಯೂಟರ್ ಆಪ್ಟಿಟ್ಯೂಡ್:
ಒಗಟುಗಳು, ಆಸನ ವ್ಯವಸ್ಥೆ, ತಾರ್ಕಿಕ ತಾರ್ಕಿಕತೆ, ಇನ್ಸುಟ್-ಔಟ್ಟುಟ್, ಕೋಡಿಂಗ್-ಡಿಕೋಡಿಂಗ್, ಕಂಪ್ಯೂಟರ್ ಬೇಸಿಕ್ಸ್
▪️ಡೇಟಾ ಅನಾಲೆಸಿಸ್ ಆ್ಯಂಡ್ ಇಂಟರ್‌ಪ್ರಿಟೇಶನ್:
ಕೇಪ್ಲೆಟ್ ಡಿಐ, ಟೇಬಲ್ ಡಿಐ, ಪೈ ಚಾರ್ಟ್‌ಗಳು, ಬಾರ್ ಗ್ರಾಫ್‌ಗಳು, ಅರ್ಥಮೆಟಿಕ್ ಡಿಐ, ಸಂಖ್ಯಾ ಸರಣಿ, ಅಂಕಗಣಿತ, ದತ್ತಾಂಶ ಸಮರ್ಪಕತೆ.
▪️ಜನರಲ್/ಎಕನಾಮಿಕ್ ಅವೇರ್‌ನೆಸ್:
ಪ್ರಚಲಿತ ವಿದ್ಯಮಾನಗಳು, ಬ್ಯಾಂಕಿಂಗ್ ಆ್ಯಂಡ್ ಎಕಾನಾಮಿಕ್ ಅವೇರ್‌ನೆಸ್, ಸ್ಟಿಕ್ ಜಿಕೆ, ಕ್ರೀಡೆ, ನಿಯಂತ್ರಕ ಸಂಸ್ಥೆಗಳು/ಬ್ಯಾಂಕಿಂಗ್. ಯೋಜನೆ, ವಿಜ್ಞಾನ ಮತ್ತು ತಂತ್ರಜ್ಞಾನ,
▪️ಇಂಗ್ಲಿಷ್ ಭಾಷೆ:
ರೀಡಿಂಗ್ ಕಾಂಪ್ರಹೆನ್ಸನ್ (ವಿಭಿನ್ನ ಪ್ರಕಾರ), ಕ್ಲೋಜ್ ಪರೀಕ್ಷೆ, ದೋಷ, ಪದ ವಿನಿಮಯ, ಇತರೆ.
ಹೆಚ್ಚಿನ ಮಾಹಿತಿಗಾಗಿ – CLICK HERE