Opportunity to study in IITs at PUC level
ಪಿಯುಸಿ ಹಂತದಲ್ಲಿ ಓದುತ್ತಿರುವವರು ಉನ್ನತ ವ್ಯಾಸಂಗಕ್ಕೆ ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಪ್ರವೇಶದ ಕನಸನ್ನು ಕಾಣುತ್ತಾರೆ. ಅದರಲ್ಲಂತೂ ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿರುವವರು ಐಐಟಿ, ಐಐಐಟಿ, ಎನ್‌ಐಟಿಗಾಗಿಯೇ ಪ್ರವೇಶ ಪರೀಕ್ಷೆಗೆ ತಯಾರಾಗಿರುತ್ತಾರೆ. ಆದರೆ, ತೀವ್ರ ಪೈಪೋಟಿ ಹಾಗೂ ಸೀಮಿತ ಸೀಟುಗಳ ಕಾರಣ ಎಲ್ಲರಿಗೂ ತಮ್ಮ ಕನಸು ಈಡೇರಿಸಿಕೊಳ್ಳಲು ಸಾಧ್ಯವಾಗದು. ಆದರೆ, ಪಿಯುಸಿ ಹಂತದಲ್ಲೇ ಐಐಟಿಯಲ್ಲಿ ಕಲಿಯುವ ಅವಕಾಶ ವಿದ್ಯಾರ್ಥಿಗಳಿಗಿದೆ.
ದೇಶದ ಪ್ರತಿಷ್ಠಿತ ಹಾಗೂ ಎನ್‌ಐಆರ್‌ಎಫ್‌ನಲ್ಲಿ ಅಗ್ರಸ್ಥಾನ ಪಡೆದಿರುವ ಮದ್ರಾಸ್‌ನ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ- ಮದ್ರಾಸ್) ಪ್ರಥಮ ಹಾಗೂ ದ್ವಿತೀಯ ಪಿಯು (11 ಹಾಗೂ 12ನೇ ತಗರತಿ) ಕಲಿಯುತ್ತಿರುವ ವಿದ್ಯಾರ್ಥಿಗಳಿಗಾಗಿಯೇ ಆನ್‌ಲೈನ್ ಸರ್ಟಿಫಿಕೇಟ್ ಕೋರ್ಸ್ ಆರಂಭಿಸಿದೆ. ವಿಶೇಷವೆಂದರೆ, ಕೇವಲ 500 ರೂ. ಪಾವತಿಸಿ ಈ ಕೋರ್ಸ್ ಪೂರೈಸಬಹುದು.
ಪಾಲ್ಗೊಳ್ಳುವುದು ಹೇಗೆ?
ಐಐಟಿ ಮದ್ರಾಸ್‌ನ ಸೆಂಟರ್ ಫಾರ್ ಔಟ್ ರೀಚ್ ಅ್ಯಂಡ್ ಡಿಜಿಟಲ್ ಎಜುಕೇಷನ್ (ಸಿಒಡಿಇ- ಕೋಡ್) ಯೋಜನೆ ಮೂಲಕ ಆನ್‌ಲೈನ್ ಡಿಜಿಟಲ್ ಶಿಕ್ಷಣವನ್ನು ನೀಡುತ್ತಿದೆ. ಇದೇ ಯೋಜನೆಯಡಿಯಲ್ಲಿ ಸ್ಕೂಲ್ ಕನೆಕ್ಟ್ ಪ್ರೋಗ್ರಾಂ ನಡೆಸಲಾಗುತ್ತಿದೆ. ಈ ಯೋಜನೆ ಯಡಿಯಲ್ಲಿ ನೋಂದಾಯಿತವಾಗಿರುವ ಶಾಲೆಗಳ ಮಕ್ಕಳು ಸರ್ಟಿಫಿಕೇಟ್ ಕೋರ್ಸ್‌ಗಳಿಗೆ ನೋಂದಣಿ ಮಾಡಿಕೊಳ್ಳಬಹುದು. ಶಾಲೆಗಳ ಮೂಲಕವೇ ನೋಂದಣಿ ಮಾಡಿಕೊಳ್ಳಲು ಸೂಚಿಸಲಾಗಿದೆ.
ಯಾವ ಕೋರ್ಸ್ ಲಭ್ಯಪಡಿಸಲಾಗಿದೆ.?
ಪ್ರಸ್ತುತ ಪ್ರಥಮ ಹಾಗೂ ದ್ವಿತೀಯ ಪಿಯು ವಿದ್ಯಾರ್ಥಿಗಳಿಗಾಗಿ ಡೇಟಾ ಸೈನ್ಸ್ ಮತ್ತು ಕೃತಕ ಬುದ್ಧಿಮತ್ತೆ, ಎಲೆಕ್ಟ್ರಾನಿಕ್ಟ್ ಸಿಸ್ಟಮ್ಸ್ ವಿಷಯದಲ್ಲಿ ಕೋರ್ಸ್ ನಡೆಸಲಾಗುತ್ತಿದೆ. ಆಸಕ್ತಿಯಿರುವ ವಿದ್ಯಾರ್ಥಿಗಳು ನೋಂದಾಯಿಸಿಕೊಳ್ಳಲು ಅ.4 ಕೊನೆಯ ದಿನಾಂಕವಾಗಿದೆ. ಅ.21ರಿಂದ ಆನ್‌ಲೈನ್ ತರಗತಿಗಳು ನಡೆಯಲಿವೆ. ಡೇಟಾ ಸೈನ್ಸ್ ಹಾಗೂ ಕೃತಕ ಬುದ್ಧಿಮತ್ತೆ ವಿಷಯಕ್ಕೆ ಯಾವುದೇ ವಿಭಾಗದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಆದರೆ, ಎಲೆಕ್ಟ್ರಾನಿಕ್ ಸಿಸ್ಟಮ್ಸ್ ಕೋರ್ಸ್‌ಗೆ ಗಣಿತ ಹಾಗೂ ಭೌತಶಾಸ್ತ್ರದ ವಿದ್ಯಾರ್ಥಿಗಳು ಮಾತ್ರ ಹಾಜರಾಗುವ ಅವಕಾಶವಿದೆ. ಒಟ್ಟು 8 ವಾರಗಳ ಕಾಲ ಆನ್‌ಲೈನ್ ರೆಕಾರ್ಡೆಡ್ ವಿಡಿಯೋ ಮೂಲಕ ತರಗತಿಗಳು ನಡೆಯಲಿವೆ. ಪ್ರತಿ ಸೋಮವಾರ ಒಂದು ಗಂಟೆಯ ಹೊಸ ವಿಡಿಯೋ ಅಪ್ಲೋಡ್ ಆಗಲಿದ್ದು, ವಿದ್ಯಾರ್ಥಿಗಳು ಯಾವ ಸಮಯದಲ್ಲಾದರೂ ತರಗತಿ ಕೇಳಬಹುದು. ತಿಂಗಳಿಗೊಮ್ಮೆ ವಾರಾಂತ್ಯದಲ್ಲಿ ಪರಸ್ಪರ ಸಂವಾದಕ್ಕೆ ಅವಕಾಶವಿರುವ ಬೋಧನೆ ಮಾಡಲಾಗುತ್ತದೆ. 2 ವಾರಗಳಿಗೊಮ್ಮೆ ಅಸೈನ್‌ಮೆಂಟ್‌ಗಳನ್ನು ಕೂಡ ನೀಡಲಾಗುತ್ತದೆ.
ಈ ಕೋರ್ಸ್ ಪ್ರಯೋಜನೆಗಳೇನು?
1. ದೇಶದ ಅಗ್ರ ತಂತ್ರಜ್ಞಾನ ಸಂಸ್ಥೆಯಲ್ಲಿ ಕಲಿಕಾನುಭವ
2. ಪ್ರಥಮ, ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಅವಕಾಶ
3. ಭವಿಷ್ಯಕ್ಕಾಗಿ ಹೆಚ್ಚಿನ ತಿಳಿವಳಿಕೆಯೊಂದಿಗೆ ನಿರ್ಧಾರ ಆಯ್ಕೆ.
4. ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಯೋಜನೆ.
5. 4ರಿಂದ 8 ವಾರದ ಲಘು ಅವಧಿಯ ಕೋರ್ಸ್‌ಗಳು
6. ವೃತ್ತಿಪರ ಅವಕಾಶಗಳನ್ನು ಕಂಡುಕೊಳ್ಳಲು ಸಹಾಯಕ.
7. ಆನ್‌ಲೈನ್ ಮೂಲಕ ಡೇಟಾ ಸೈನ್ಸ್, ಎಐ, ಎಲೆಕ್ಟ್ರಾನಿಕ್ ಸಿಸ್ಟಮ್ಸ್ ಕಲಿಕೆ
ನೋಂದಣಿ ಶುಲ್ಕದ ಮಾಹಿತಿ:
▶500 ರೂ. ಶುಲ್ಕ, ಕಾಲೇಜುಗಳ ಮೂಲಕವೇ ನೋಂದಣಿಗೆ ಸೂಚನೆ.
ಸ್ಕೂಲ್ ಕನೆಕ್ಟ್ ಪ್ರೋಗ್ರಾಂ
ಇದುವರೆಗೆ ನಡೆಸಲಾದ ಕೋರ್ಸ್ ಗಳಲ್ಲಿ 450ಕ್ಕೂ ಹೆಚ್ಚು ಶಾಲೆಗಳು ಪಾಲ್ಗೊಂಡಿದ್ದು, 11 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದಿದ್ದಾರೆ. ಮುಂದಿನ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳನ್ನು ನೋಂದಾಯಿಸಲು ಶಾಲೆಗಳು ಮೊದಲು ನೋಂದಣಿ ಮಾಡಿಕೊಳ್ಳಬೇಕಿದ್ದು, ಇದಕ್ಕೆ ಸೆ.30 ಕೊನೆಯ ದಿನವಾಗಿದೆ ಎಂದು ಐಐಟಿ ಮದ್ರಾಸ್ ತಿಳಿಸಿದೆ. ಸಹಭಾಗಿತ್ವ ಹೊಂದಿದ ಶಾಲೆಗಳಿಗಾಗಿಯೇ ವಿಶೇಷ ಕೋರ್ಸ್‌ಗಳನ್ನು ಐಐಟಿ ಮದ್ರಾಸ್ ನಡೆಸುತ್ತದೆ. ವಿಜ್ಞಾನ ಮಾತ್ರವಲ್ಲದೆ, ವಿವಿಧ ವಿಷಯಗಳಲ್ಲಿ ಕೋರ್ಸ್ ಗಳನ್ನು ಕಲಿಯಬಹುದು.
ಪ್ರಮುಖ ದಿನಾಂಕಗಳು:
ಆನ್ಲೈನ್ ಮೂಲಕ ವಿದ್ಯಾರ್ಥಿಗಳ ನೋಂದಣಿಗೆ ಕೊನೆ ದಿನಾಂಕ: 04-10-2024.
ಅರ್ಜಿ ಸಲ್ಲಿಕೆಗೆ ಬಳಸಬೇಕಾದ ಲಿಂಕ್: CLICK HERE
ಶಾಲೆಗಳ ನೋಂದಣಿಗೆ ಅಂತಿಮ ದಿನಾಂಕ:30-09-2024
ಶಾಲೆಗಳ ನೋಂದಣಿಗೆ – CLICK HERE
Nothing
Nice concept
Concept super
Good things
What are the work
I’m pu student
ಅಧ್ಯಯನ ಮಾಡಿ….ಚೆನ್ನಾಗಿ ಫಲಿತಾಂಶ ಪಡೆಯಿರಿ
Ok sir
Sir nim hathra swllpa question kelbhuda
Ok sir thanks
Nim hathra questions
Kelbhuda sir
ಕೇಳಿ
Sir iti exams andare enu
Swllpa adara bhage information Kodi