Indian Army Nursing Course-2025 : ಸೇನೆಯಿಂದ ನರ್ಸಿಂಗ್ ಕೋರ್ಸ್ಗೆ ಅಧಿಸೂಚನೆ ಪ್ರಕಟ | ಮಹಿಳೆಯರಿಗೆ ಮಾತ್ರ ಅವಕಾಶ/ ವಿಜ್ಞಾನದಲ್ಲಿ ಪಿಯು ತೇರ್ಗಡೆ ಅರ್ಹತೆ
Indian Army Nursing Course-2025 : ಭಾರತೀಯ ಸೇನೆಯು ಬಿಎಸ್ಸಿ(ನರ್ಸಿಂಗ್) ಕೋರ್ಸ್ ಗೆ ಅಧಿಸೂಚನೆ ಪ್ರಕಟಿಸಿದೆ. ಮಹಿಳಾ ಅಭ್ಯರ್ಥಿಗಳು ಮಾತ್ರ ಇವುಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಅಭ್ಯರ್ಥಿಗಳು 2025ರ ಸಾಲಿನಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸಿದ ನೀಟ್ (ಯುಜಿ) ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.
ಈ ಕೋರ್ಸ್ ಮೂಲಕ ಸೇನೆಗೆ ಆಯ್ಕೆಯಾದವರು ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆ (ಎಎಫ್.ಎಂಎಸ್) ನಡೆಸುವ ಆರು ಕಾಲೇಜುಗಳಲ್ಲಿ ನಾಲ್ಕು ವರ್ಷಗಳ ನರ್ಸಿಂಗ್ ಕೋರ್ಸ್ ಪಡೆಯಲು ಅರ್ಹರಾಗುತ್ತಾರೆ. ಈ ಮೂಲಕ ಯಶಸ್ವಿಯಾಗಿ ಕೋರ್ಸ್ ಪೂರ್ಣಗೊಳಿಸಿದವರಿಗೆ ಸೇನೆಯ ವಿವಿಧ ವಿಭಾಗಗಳಲ್ಲಿ ವೈದ್ಯಕೀಯ ಸೇವೆ ಸಲ್ಲಿಸುವ ಅವಕಾಶವೂ ಸಿಗುತ್ತದೆ. ಆಸಕ್ತರು ಜೂ.30ರೊಳಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.
ಅರ್ಹತೆಗಳೇನು?:
ಈ ಕೋರ್ಸ್ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವಿಜ್ಞಾನದಲ್ಲಿ ದ್ವಿತೀಯ ಪಿಯುಸಿ ಪೂರ್ಣಗೊಳಿಸಿರಬೇಕು. ಪಿಯುಸಿ ‘ಯಲ್ಲಿ ಫಿಸಿಕ್ಸ್, ಕೆಮಿಸ್ಟ್ರಿ ಮತ್ತು ಬಯಾಲಜಿ ವಿಷಯಗಳನ್ನು ಆಯ್ಕೆ ಮಾಡಿಕೊಂಡಿರಬೇಕು. ಕನಿಷ್ಠ ಶೇಕಡಾ 50 ಅಂಕಗಳೊಂದಿಗೆ ತೇರ್ಗಡೆ ಹೊಂದುವುದು ಕಡ್ಡಾಯ. ಎನ್ಸಿಸಿ ಪ್ರಮಾಣ ಪತ್ರಗಳಿದ್ದರೆ, ಎನ್ಸಿಸಿ ‘ಸಿ’ ಸರ್ಟಿಫಿಕೇಟ್ ಅನ್ನು ಪರಿಗಣಿಸಲಾಗುತ್ತದೆ. ಅಭ್ಯರ್ಥಿಗಳು 2000ನೇ ಅಕ್ಟೋಬರ್ 1 ಮತ್ತು 2008 ಸೆಪ್ಟೆಂಬರ್ 30ರ ನಡುವೆ ಜನಿಸಿದವರಾಗಿರಬೇಕು. ಅಭ್ಯರ್ಥಿಗಳ ಎತ್ತರ 152 ಸೆಂ.ಮೀ. ಇರಬೇಕು.
ತರಬೇತಿ ನೀಡುತ್ತಿರುವ ವಿವಿಗಳು:
ದಿಲ್ಲಿ ವಿಶ್ವವಿದ್ಯಾಲಯ, ರಾಜೀವ್ ಗಾಂಧಿ ಆರೋಗ್ಯ ವಿವಿ, ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ವಿವಿ.. ಮಹಾರಾಷ್ಟ್ರ ಆರೋಗ್ಯ ವಿವಿ (ಮುಂಬಯಿ ಮತ್ತು ಪುಣೆ) ಹಾಗೂ ಪಶ್ಚಿಮ ಬಂಗಾಳ ಆರೋಗ್ಯ ವಿವಿ.
ಇತ್ತ ಗಮನಿಸಿ:
ತರಬೇತಿ ವೇಳೆ ಅಭ್ಯರ್ಥಿಗಳಿಗೆ ಆಹಾರ, ವಸತಿ ಸೌಲಭ್ಯವನ್ನು ಸೇನೆ ವತಿಯಿಂದಲೇ ನೀಡಲಾಗುತ್ತದೆ.
ಆರು ವಿವಿಧ ವಿವಿಗಳಲ್ಲಿ ನಿರ್ದಿಷ್ಟ ಸಂಖ್ಯೆಯ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತಿದ್ದು, ಈ ಬಾರಿ ಒಟ್ಟು 220 ಯುವತಿಯರಿಗೆ ಅವಕಾಶ ಸಿಗಲಿದೆ.
ಎಸ್ಸಿ/ಎಸ್ಟಿ ಸೇರಿದಂತೆ ಮೀಸಲಾತಿಗೆ ಒಳಪಡುವವರು ಸಂಬಂಧಿಸಿದ ಅಧಿಕಾರಿಗಳಿಂದ ಪ್ರಮಾಣ ಪತ್ರ ಹೊಂದಿರುವುದು ಕಡ್ಡಾಯ.
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳು ನೀಟ್ ಯುಜಿಯಲ್ಲಿ ಪಡೆದ ಅಂಕಗಳು ಅರ್ಹತೆಯ ಪ್ರಮುಖ ಮಾನದಂಡ. ಇದರ ಹೊರತಾಗಿ ಅಭ್ಯರ್ಥಿಗಳಿಗೆ ಸೈಕಾಲಜಿಕಲ್ ಅಸೆಸ್ಮೆಂಟ್,ಸಂದರ್ಶನ ಮತ್ತು ವೈದ್ಯಕೀಯ ಪರೀಕ್ಷೆ ಇರುತ್ತದೆ. ವೈದ್ಯಕೀಯ ಪರೀಕ್ಷೆ ದಿಲ್ಲಿಯ ಆರ್ಮಿ ಕಂಟೋ ನೈಂಟ್ನಲ್ಲಿರುವ ಬೇಸ್ ಹಾಸ್ಪಿಟಲ್ನಲ್ಲಿ ನಡೆಯುತ್ತದೆ. ಇದಕ್ಕೆ ಸಂಬಂಧಿಸಿದ ಪ್ರವೇಶಪತ್ರವನ್ನು ಸೇನಾ ವೆಬ್ಸೈಟ್ನಲ್ಲಿಯೇ ಪ್ರಕಟಿಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಸೇನೆಯ ವೆಬ್ಸೈಟ್ ಗೆ (https://joinindianarmy.nic.in) ಭೇಟಿ ನೀಡಬಹುದು.
ಅರ್ಜಿ ಸಲ್ಲಿಸಲು ಜೂ.30ರ ಗಡುವು ನೀಡಲಾಗಿದೆ.
ಅರ್ಜಿ ಶುಲ್ಕ : 200 ರೂ.
ಸಹಾಯವಾಣಿ: 01121411793
BSC nursing
Yes