Income Tax No 2 Bill 2025 The Taxation Laws Amdt Bill 2025 The Mines and Minerals Devp and Regulation Amendment Bill 2025:
Income Tax No 2 Bill 2025 The Taxation Laws Amdt Bill 2025 The Mines and Minerals Devp and Regulation Amendment Bill 2025:
ಜನಸ್ನೇಹಿ ತೆರಿಗೆ ಕಾಯಿದೆ
ಆದಾಯ ತೆರಿಗೆ ವ್ಯವಸ್ಥೆಯ ಸರಳೀಕರಣ, ಸುಲಭ ತೆರಿಗೆ ಪಾವತಿ ಸೇರಿ ಹಲವು ಮಾರ್ಪಾಡುಗಳು ಇರುವ ನೂತನ ಆದಾಯ ತೆರಿಗೆ ವಿಧೇಯಕಕ್ಕೆ ಸೋಮವಾರ ಲೋಕಸಭೆಯಲ್ಲಿ ಅಂಗೀಕಾರ ದೊರೆತಿದೆ. ಇದು 1961ರ ಆದಾಯ ತೆರಿಗೆ ಕಾಯಿದೆಯನ್ನು ಬದಲಾಯಿಸುತ್ತಿದ್ದು, ಆರು ದಶಕಗಳಿಂದ ಇದ್ದ ನಿಯಮಗಳು ಬದಲಾಗಿವೆ. ಹಾಗಾದರೆ, ಹೊಸ ವಿಧೇಯಕದಲ್ಲಿ ಏನಿದೆ? ಯಾವ ನಿಯಮಗಳನ್ನು ಬದಲಾಯಿಸಲಾಗಿದೆ?
ಆದಾಯ ತೆರಿಗೆ ಮಸೂದೆ-2025ರಲ್ಲಿ ಬದಲಾಗಿದ್ದೇನು?
ನಿನ್ನೆ ಅನುಮೋದನೆ ಪಡೆದ ಆದಾಯ ತೆರಿಗೆ ಮಸೂದೆ-2025 ರಲ್ಲಿ ಕೆಲವು ಪದಗಳನ್ನು ಬದಲಾಯಿಸಲಾಗಿದೆ. ಹಳೆಯ ಮಸೂದೆಯಲ್ಲಿನ ‘ಹಿಂದಿನ ವರ್ಷ, ಮೌಲ್ಯಮಾಪನ ವರ್ಷ’ ಎಂಬ ಪದಗಳನ್ನು ‘ತೆರಿಗೆ ವರ್ಷ’ ಎಂದು ಬದಲಾಯಿಸಲಾಗಿದೆ.
ಹೊಸ ತೆರಿಗೆಗಳು, ಫ್ಲ್ಯಾಬ್‌ಗಳು, ಐಟಿಆರ್ ಸಲ್ಲಿಸುವ ಅಂತಿಮ ದಿನಾಂಕಗಳು ಅಥವಾ ದರಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ. ಪ್ರಮಾಣಿತ ಕಡಿತ, ಗ್ರಾಚ್ಯುಟಿ, ರಜೆ ನಗದು ಇತ್ಯಾದಿ ವಿಭಾಗಗಳು ಮತ್ತು ನಿಬಂಧನೆಗಳನ್ನು ಕೋಷ್ಟಕದಲ್ಲಿ ತರಲಾಗಿದೆ.
ಏನೆಲ್ಲಾ ಬದಲಾವಣೆ?
▪️ವಿಭಾಗಗಳು, ಅಧ್ಯಾಯಗಳು ಮತ್ತು ಪದಗಳ ಎಣಿಕೆಯಲ್ಲಿ ಭಾರೀ ಕಡಿತ
▪️ಸರಳ ತೆರಿಗೆ ವರ್ಷ ಪರಿಕಲ್ಪನೆ
▪️ತಡವಾದ ರಿಟರ್ನ್‌ಗಳಿಗೂ ಟಿಡಿಎಸ್ ಮರುಪಾವತಿಗೆ ಅನುಮತಿ
▪️LRS ಮೂಲಕ ಶಿಕ್ಷಣ
▪️ಉದ್ದೇಶದ ಹೂಡಿಕೆ ಮೇಲೆ ‘ಶೂನ್ಯ’ ಟಿಸಿಎಸ್
▪️ಕರ್ಪೊರೇಟ್ ಲಾಭಾಂಶ ಮೇಲಿನ ಕಡಿತ ಪುನಃಸ್ಥಾಪನೆ
▪️ಡಿಜಿಟಲ್ ಸ್ವತ್ತುಗಳ ಮೇಲೆ ಶೋಧ ಅಧಿಕಾರ ಮುಂದುವರಿಕೆ
ಹೊಸ ವಿಧೇಯಕದಿಂದ ಏನೆಲ್ಲ ಅನುಕೂಲ?
▪️ತೆರಿಗೆದಾರರು ತಡವಾಗಿ ಐಟಿಆರ್ ಫೈಲಿಂಗ್ ಮಾಡಿದರೂ ರೀಫಂಡ್ ಪಡೆಯಬಹುದು
▪️ತಡವಾಗಿ ಟಿಡಿಎಸ್ ಗೆ ಫೈಲಿಂಗ್ ಮಾಡಿದರೂ ಯಾವುದೇ ದಂಡ ವಿಧಿ ಸುವುದಿಲ್ಲ
▪️ಜನ ತೆರಿಗೆ ಪಾವತಿಸುವಷ್ಟು ಆದಾಯ ಹೊಂದಿಲ್ಲದಿದ್ದರೆ, ಮೊದಲೇ ‘ನಿಲ್ ಸರ್ಟಿಫಿಕೇಟ್’ ಪಡೆಯಬಹುದು
▪️ಮನೆ ಆಸ್ತಿಯಿಂದ ಸಿಗುವ ಆದಾಯಕ್ಕೆ ಶೇ.30ರಷ್ಟು ಸ್ಟಾಂಡರ್ಡ್ ಡಿಡಕ್ಷನ್ ನಿಗದಿ
▪️ಪೇಪರ್‌ಲೆಸ್ ಡಾಕ್ಯುಮೆಂಟೇಷನ್, ಸರಳ ನಿಯಮಗಳು, ಕ್ಷಿಪ್ರವಾಗಿ ವ್ಯಾಜ್ಯಗಳ ವಿಲೇವಾರಿ