Indian Postal Group Insurance: ಐನೂರು ಚಿಲ್ಲರೆ ರೂಪಾಯಿ ಪ್ರೀಮಿಯಂ ಕಟ್ಟಿದರೆ ₹10 ಲಕ್ಷ ವಿಮೆ

Indian Postal Group Insurance: ಅಂಚೆ ಇಲಾಖೆಯಿಂದ ಸಮೂಹ ವಿಮೆ, ಕಡಿಮೆ ಪ್ರೀಮಿಯಂನಲ್ಲಿ ಹೆಚ್ಚು ವಿಮೆ ಕವರೇಜ್

Indian Postal Group Insurance: ಅಪಘಾತ ಯಾವುದೇ ಸಂದರ್ಭದಲ್ಲಿ ಸಂಭವಿಸಬಹುದು. ಅಂತಹ ಸಂದರ್ಭದಲ್ಲಿ ಆಪಘಾತಕ್ಕೆ ಒಳಪಟ್ಟವರು ಹಾಗೂ ಆವರ ಕುಟುಂಬಸ್ಥರು ಆರ್ಥಿಕವಾಗಿ ಹಾಗೂ ಭಾವನಾತ್ಮಕವಾಗಿ ಅನುಭವಿಸುವ ಸಂಕಟ ಪದಗಳಲ್ಲಿ ಹೇಳತೀರದು. ಇದನ್ನು ಮನಗಂಡ ಭಾರತೀಯ ಅಂಚೆ ಇಲಾಖೆ ಈ ಸಮಸ್ಯೆಗೆ ಪರಿಹಾರವಾಗಿ, ತನ್ನ ಅಂಗಸಂಸ್ಥೆಯಾದ ಇಂಡಿಯಾ ಪೋಸ್ಟ್ ಪೇಮೆಂಟ್ (IPPG) ಬ್ಯಾಂಕಿನ ಮೂಲಕ ಮೊದಲು ಟಾಟಾ ಎವಿಜಿ ಹಾಗು ಬಜಾಜ್ ಅಲಯನ್ಸ್ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡು ‘ಸಮೂಹ ಅಪಘಾತ ವಿಮೆಯನ್ನು ಪರಿಚಯಿಸಿತು. ಇದು ದೇಶದ ಎಲ್ಲ ಜನ ಸಾಮಾನ್ಯರಿಗೂ ಕಡಿಮೆ ಪ್ರೀಮಿಯಂನೊಂದಿಗೆ ಹೆಚ್ಚು ಪ್ರಯೋಜನ ನೀಡುತ್ತದೆ.

ಪ್ರಸ್ತುತ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಈ ಸೇವೆಗಾಗಿ ಆದಿತ್ಯ ಬಿರ್ಲಾ ಹೆಲ್ತ್ ಇನ್ಸೂರೆನ್ಸ್ ಸ್ಟಾರ್ ಹೆಲ್ತ್ ಇನ್ಸೂರೆನ್ಸ್, ನೀವಾ ಭೂಪ ಹೆಲ್ತ್ ಇನ್ಸೂರೆನ್ಸ್, ರಾಯಲ್ ಸುಂದರಂ ಹಾಗು ರಿಲಯನ್ ಇನ್ಸೂರೆನ್ಸ್ ಕಂಪನಿಗಳೊಂದಿಗೆ ಒಡಂಬಡಿಣೆ ಮಾಡಿಕೊಂಡು ಗ್ರಾಹಕರಿಗೆ ಹಲವು ಆಯ್ಕೆಗಳನ್ನು ನೀಡುತ್ತಿದೆ.

ಆಂಚಿ ಇಲಾಖೆಯ ಈ ಸಮೂಹ ವಿಮೆ ಪರಿಣಾಮಕಾರಿಯಾಗಿದೆ. ಗ್ರಾಹಕರು 10 ಅಥವಾ 15 ಲಕ್ಷ ರೂ.ಗಳ ವಿಮೆ ಕವರೇಜ್‌ ಗೆ ಐನೂರು  ರೂಪಾಯಿ ಪ್ರೀಮಿಯಂ ಕಟ್ಟಿದರೆ ಸಾಕಾಗುತ್ತದೆ.

ಆಂಚೆ ಇಲಾಖೆಯ ಈ ಸಮೂಹ ವಿಮೆಯಲ್ಲಿ ಏನೆಲ್ಲ ಲಾಭಗಳಿವೆ?

  • ವಿಮಾದಾರರು ಅಪಘಾತದಲ್ಲಿ ಮರಣ ಹೊಂದಿದರೆ ವಿಮಾದಾರ ಆಯ್ಕೆ ಮಾಡಿಕೊಂಡಂತೆ 10-15 ಲಕ್ಷ ರೂ. ಪರಿಹಾರ ಮೊತ್ತವನ್ನು ನಾಮಿನಿದಾರರಿಗೆ ನೀಡಲಾಗುತ್ತದೆ.

ಈ ವಿಮೆ ಮಾಡಿಸಲು ಅರ್ಹತೆ ಏನು?

  • 18ರಿಂದ 65 ವರ್ಷ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕಿನ ಖಾತೆದಾರು ಮಾತ್ರ ಅರ್ಹರು
  • ಶಾಶ್ವತ ಸಂಪೂರ್ಣ ಮತ್ತು ಆಂಶಿಕ ಅಂಗವಿಕಲತೆ ಪ್ರಯೋಜನಗಳು.
  • ಶಾಶ್ವತ ಸಂಪೂರ್ಣ ಅಂಗವಿಕಲತೆ ಸಂದರ್ಭದಲ್ಲಿ ವಿಮಾ ಮೊತ್ತದ ಶೇ.100ರಷ್ಟು ಪರಿಹಾರ ನೀಡಲಾಗುತ್ತದೆ.
  • ಆಸ್ಪತ್ರೆಯಲ್ಲಿ ದಾಖಲಾಗುವ ವೆಚ್ಚಕ್ಕೆ 60,000 ರಿಂದ 1,00,000 ರೂ.ವರೆಗೆ ನೀಡಲಾಗುತ್ತದೆ. ಅಪಘಾತದಿಂದ ಉಂಟಾಗುವ ಚಿಕಿತ್ಸಾ ವೆಚ್ಚದ ಹೊರೆ ಕಡಿಮೆ ಮಾಡುವುದು ಇದರ ಉದ್ದೇಶ.
  • ತುರ್ತು ಸ್ಥಳಾಂತರ ವೆಚ್ಚ 5,000 ರೂ.ವರೆಗೆ ಪಾವತಿಸಲಾಗುತ್ತದೆ.
  • ಕುಟುಂಬದ ಮಕ್ಕಳ ಶಿಕ್ಷಣಕ್ಕೆ 1 ಲಕ್ಷ ರೂ.ವರೆಗೆ (ಗರಿಷ್ಠ 2 ಮಕ್ಕಳಿಗೆ) ಪ್ರಾಯೋಜಿಸಲಾಗಿದೆ.
  • ಆಸ್ಪತ್ರೆ ದಿನ ಭತ್ಯೆ ಪ್ರತಿ ದಿನ 1000 ರೂ. ಹತ್ತು ದಿನಗಳವರೆಗೆ ನೀಡಲಾಗುತ್ತದೆ.
  • ಕುಟುಂಬದ ಸಂಚಾರ ಭತ್ಯೆಯಾಗಿ ಅಪಘಾತದ ಸಂದರ್ಭದಲ್ಲಿ ವೈದ್ಯಕೀಯ ಚಿಕಿತ್ಸೆಗೆ ಸಂಬಂಧಿಸಿದಂತೆ ಕುಟುಂದ ಸದಸ್ಯರು ಭೇಟಿ ನೀಡಲು 25,000 ರೂ.ವರೆಗೆ ನೀಡಲಾಗುತ್ತದೆ.
  • ಮೃತದೇಹ ಹಸ್ತಾಂತರ ಹಾಗೂ ಅಂತ್ಯ ಕ್ರಿಯಾ ವೆಚ್ಚ 5000 ರೂ.ವರೆಗೆ ನೀಡಲಾಗುತ್ತದೆ.
  • ಅವಘಾತದಿಂದ ಕೋಮಾಗೆ ಒಳಗಾದರೆ 1 ಲಕ್ಷ ರೂ. ಒಮ್ಮೆ ಪಾವತಿಸಲಾಗುತ್ತದೆ.
  • ಭಯೋತ್ಪಾದನೆ ಸಂಬಂಧಿತ ಅಪಘಾತಕ್ಕೂ ಈ ವಿಮೆ ಅನ್ವಯಿಸುತ್ತದೆ.
  • ಅನಿಯಮಿತ ವೈದ್ಯಕೀಯ ಟೆಲಿಕನ್ಸಲ್ಟೇಶನ್ ಪಡೆಯಲು ಅನುಕೂಲವಿದೆ.

ಯಾವುದಕ್ಕೆಲ್ಲ ವಿಮೆ ರಕ್ಷೆ ಇರಲಿದೆ?

ಅಪಘಾತ ಎಂದರೆ ರಸ್ತೆ ಅಪಘಾತ, ಹಾವು ಕಚ್ಚುವುದು, ಗ್ಯಾಸ್ ಸಿಲಿಂಡರ್ ಸ್ಫೋಟ, ಕಾಲು ಜಾರಿ ಬೀಳುವುದು, ಎತ್ತರದ ಕಟ್ಟಡ ಹಾಗೂ ಎತ್ತರದ ಮರದ ಮೇಲಿನಿಂದ ಬೀಳುವುದು, ವಿದ್ಯುತ್ ಅವಘಡ ಹಾಗೂ ಇನ್ನಿತರ ದುರ್ಘಟನೆಗಳು ವಿಮೆ ವ್ಯಾಪ್ತಿಯಲ್ಲಿ ಬರುತ್ತವೆ.

ವಿಮೆ ಪಡೆಯುವುದು ಹೇಗೆ?

ಆಧಾರ್ ಆಧಾರಿತ ಇ-ಕೆವೈಸಿ ಮೂಲಕ ನಿಮಿಷದಲ್ಲಿ ಅಂಚೆ ಕಚೇರಿ, ಇಲ್ಲವೇ ಪೋಸ್ಟ್ ಮ್ಯಾನ್ / ಪೋಸ್ಟ್ ವುಮೆನ್ ಗಳ ಮೂಲಕ ಮನೆ ಬಾಗಿಲಲ್ಲೆ ವಿಮೆಗೆ ನೊಂದಣಿ ಮಾಡಿಕೊಳ್ಳಬಹುದು. ನಿಮಗೆ ಬೇಕಾಗಿರುವುದು ಆಧಾರ್ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆ ಮಾತ್ರ.

ಹೆಚ್ಚಿನ ಮಾಹಿತಿಗಾಗಿ – CLICK HERE

 

ವಿವಿಧ ಕಂಪನಿಗಳ ಸಮೂಹ ಅಪಘಾತ ವಿಮೆ ಪ್ರಯೋಜನಗಳ ಬಲ್ಲಿರಾ? ಇಲ್ಲಿ ಕ್ಲಿಕ್ ಮಾಡಿ ನೋಡಿ- CLICK HERE

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

error: Content is protected !!