Inspiration for Education-2026: ಶಾಲಾ ಮಟ್ಟದಲ್ಲಿ ಪ್ರೇರಣಾ ಉತ್ಸವ ಮತ್ತು ವಿದ್ಯಾರ್ಥಿ ನೋಂದಣಿ
Inspiration for Education-2026: ಶಾಲಾ ಮಟ್ಟದಲ್ಲಿ ಪ್ರೇರಣಾ ಉತ್ಸವ ಮತ್ತು ವಿದ್ಯಾರ್ಥಿ ನೋಂದಣಿ ಕಾರ್ಯಕ್ರಮದ ಮೂಲಕ ಶಿಕ್ಷಣಕ್ಕೆ ಹೊಸ ಉತ್ಸಾಹ ನೀಡುವ ಈ ಉಪಕ್ರಮವು ವಿದ್ಯಾರ್ಥಿಗಳ ಆತ್ಮವಿಶ್ವಾಸ, ಭಾಗವಹಿಕೆ ಮತ್ತು ಕಲಿಕೆಗೆ ಪ್ರೇರಣೆಯನ್ನು ಹೆಚ್ಚಿಸುವುದನ್ನು ಉದ್ದೇಶಿಸಿದೆ.
PRERANA ಅನುಭವದಿಂದ ಕಲಿಕೆ ಕಾರ್ಯಕ್ರಮದ ಅನುಷ್ಠಾನದ ಜವಾಬ್ದಾರಿಯನ್ನು ಪ್ರಸ್ತುತ ನವೋದಯ ವಿದ್ಯಾಲಯ ಸಮಿತಿ (NVS)ಗೆ ವಹಿಸಲಾಗಿದೆ. DoSEL, MOE ನಿರ್ದೇಶನದ ಪ್ರಕಾರ, PRERANAದ ಮುಂದಿನ ಹಂತವು ಏಪ್ರಿಲ್ 2026 ರಿಂದ ಪ್ರಾರಂಭವಾಗಲಿದೆ. ದಿನಾಂಕ:01.12.2025 ರಿಂದ PRERANA Portal ನಲ್ಲಿ (https://prerana.education.gov.in/) ಪ್ರೇರಣದ ನೊಂದಣಿ ಪ್ರಕ್ರಿಯೆಯನ್ನು ತೆರೆಯಲಾಗಿದೆ. PRERANA ಆಯ್ಕೆ ಪ್ರಕ್ರಿಯೆಗಾಗಿ ವಿವರವಾದ SoP ಮತ್ತು PRERANA ಕಾರ್ಯಕ್ರಮದ ಪರಿಕಲ್ಪನಾ ಟಿಪ್ಪಣಿಯನ್ನು ಇದರೊಂದಿಗೆ ಲಗತ್ತಿಸಲಾಗಿದೆ.
ಗರಿಷ್ಟ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಲು ಅನುಕೂಲವಾಗುವಂತೆ ಬ್ಲಾಕ್, ಕ್ಲಸ್ಟರ್ ಹಾಗೂ ಶಾಲಾ ಹಂತಗಳಲ್ಲಿ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ನೋಂದಣಿ ಕಾರ್ಯಕೈಗೊಳ್ಳಲು ಸೂಚಿಸಿದೆ.
ಜಿಲ್ಲಾ ಹಂತದಲ್ಲಿ ಉಪನಿರ್ದೇಶಕರು (ಆಡಳಿತ ಹಾಗೂ ಅಭಿವೃದ್ಧಿ)ರವರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಶಾಲಾ ಮುಖ್ಯಶಿಕ್ಷಕರಿಗೆ ಮಾಹಿತಿ ನೀಡಿ. NVS ನೊಂದಿಗೆ PRERANA ಕಾರ್ಯಕ್ರಮವನ್ನು ಸಂಯೋಜಿಸಲು ಒಬ್ಬ ನೋಡಲ್ ಅಧಿಕಾರಿಯನ್ನು ನಿಯೋಜಿಸುವುದು. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಂಡು PRERANA ಪರಿವರ್ತನಾತ್ಮಕ ಅನುಭವ ಪಡೆಯಲು ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕ್ರಮಕೈಗೊಳ್ಳಲು ಸೂಚಿಸಿದೆ.
(ನವೋದಯ ಸಮಿತಿಯಿಂದ ನೀಡಿರುವ ಪತ್ರಗಳನ್ನು ಹೆಚ್ಚಿನ ಮಾಹಿತಿಗಾಗಿ ಇದರೊಂದಿಗೆ ಲಗತ್ತಿಸಿದ್ದು, ಅದರಂತೆ, ಕ್ರಮವಹಿಸಲು ಸೂಚಿಸಿದೆ)
