Intelligence Bureau Recruitment-2025|ಗುಪ್ತಚರ ಅಧಿಕಾರಿಗಳ 3717 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ.
Intelligence Bureau Recruitment-2025: ಇಂಟಲಿಜೆನ್ಸ್ ಬ್ಯೂರೋದಿಂದ ನೇಮಕಾತಿ ಕೇಂದ್ರ ಗೃಹ ಸಚಿವಾಲಯದಲ್ಲಿ ಸೇವೆಗೆ ಅವಕಾಶ.
ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳನ್ನು ಕೇಂದ್ರ ಗೃಹ ಸಚಿವಾಲಯ ಅಧೀನದ ಇಂಟಲಿಜೆನ್ಸ್ ಬ್ಯೂರೋದಲ್ಲಿ (ಗುಪ್ತಚರ ಇಲಾಖೆ) ಗುಪ್ತಚರ ಅಧಿಕಾರಿಗಳಾಗಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಅಸಿಸ್ಟೆಂಟ್ ಸೆಂಟ್ರಲ್ ಇಂಟಲಿಜೆನ್ಸ್ ಆಫೀಸರ್ ಗ್ರೇಡ್-11/ಎಕ್ಸಿಕ್ಯೂಟಿವ್ (ಎಸಿಐಒ) ಗ್ರೂಪ್ ಸಿ ವೃಂದದ (ನಾನ್ ಗೆಜೆಟೆಡ್. ನಾನ್ ಮಿನಿಸ್ಟಿಯಲ್) ಹುದ್ದೆಗಳು ಇವಾಗಿವೆ. ಒಟ್ಟು 3,717 ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಯಾವುದೇ ವಿಭಾಗದ ಪದವೀಧರರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.
ವೇತನ ಶ್ರೇಣಿ:
ಏಳನೇ ಹಂತದ ವೇತನಶ್ರೇಣಿಯಾದ 44,900-1,42,400 ರೂ ನಿಗದಿಪಡಿಸಲಾಗಿದೆ. ಜತೆಗೆ, ಇತರ ಭತ್ಯೆಗಳು ಅನ್ವಯಿಸುತ್ತವೆ.
ಶೈಕ್ಷಣಿಕ ಅರ್ಹತೆ:
ಪದವೀಧರರು ಅರ್ಜಿ ಸಲ್ಲಿಸಬಹುದು. ಕಂಪ್ಯೂಟರ್ ಜ್ಞಾನ ಹೊಂದಿರುವುದು ಅಪೇಕ್ಷಣೀಯ ಅರ್ಹತೆಯಾಗಿದೆ.
ವಯೋಮಿತಿ:
2025ರ ಆ.10ಕ್ಕೆ ಅನ್ವಯವಾಗುವಂತೆ 18ರಿಂದ 27 ವರ್ಷದವರಾಗಿರಬೇಕು. ಎಸ್‌ಸಿ/ಎಸ್‌ಟಿಗೆ 5 ವರ್ಷ, ಒಬಿಸಿಗೆ ಮೂರು, ಕ್ರೀಡಾಪಟುಗಳಿಗೆ 5 ವರ್ಷ ವಿನಾಯ್ತಿ ಇರಲಿದೆ.
Intelligence Bureau Recruitment-2025: ಗಮನಿಸಬೇಕಾದ ಮುಖ್ಯ ಅಂಶ:
ಈ ಹುದ್ದೆಗಳು ಅಖಿಲ ಭಾರತ ಮಟ್ಟದ ವರ್ಗಾವಣೆಗೆ ಒಳಪಟ್ಟಿವೆ. ದೇಶದ ಯಾವುದೇ ಭಾಗದಲ್ಲಿ ಸೇವೆ ಸಲ್ಲಿಸಲು ಆಸಕ್ತಿಯಿರುವ ಅಭ್ಯರ್ಥಿಗಳಾಗಿರಬೇಕು. ಅಂಗವಿಕಲರಿಗೆ ಅವಕಾಶವಿಲ್ಲ. ಹುದ್ದೆಗಳ ಸಂಖ್ಯೆಯು ತಾತ್ಕಾಲಿಕವಾಗಿದ್ದು, ವ್ಯತ್ಯಾಸವಾಗಬಹುದು. ಶೈಕ್ಷಣಿಕ ಅರ್ಹತೆ, ಜಾತಿ/ ಪ್ರವರ್ಗ ಪ್ರಮಾಣಪತ್ರ ಮೊದಲಾದವುಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಅನ್ವಯಿಸಿ ಪಡೆದಿರಬೇಕು. ಮಾಜಿ ಸೈನಿಕರಿಗೆ ಮೀಸಲಾದ ಸ್ಥಾನಗಳಿಗೆ ಆ ಅಭ್ಯರ್ಥಿಗಳು ಇಲ್ಲದಿದ್ದಲ್ಲಿ ಇತರರಿಂದ ಭರ್ತಿ ಮಾಡಿಕೊಳ್ಳಲಾಗುತ್ತದೆ. ಒಟ್ಟು ಮೂರು ಹಂತದ ಪರೀಕ್ಷೆ/ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
Intelligence Bureau Recruitment-2025: ಮೀಸಲಾತಿ ವಿವರ:
▪️ಸಾಮಾನ್ಯ: 1,537
▪️ಆರ್ಥಿಕ ಹಿಂದುಳಿದ: 442
▪️ಇತರ ಹಿಂದುಳಿದ: 946
▪️SC: 566
▪️ST: 226
▪️ಒಟ್ಟು: 3,717
ಅರ್ಹತಾ ಅಂಕಗಳು:
ಮೊದಲ ಹಂತದ ಪರೀಕ್ಷೆಯಲ್ಲಿ ಅರ್ಹತೆ ಪಡೆಯಲು ಸಾಮಾನ್ಯ ವರ್ಗದವರು 35, OBC -34, ಎಸ್/ಎಸ್‌ಟಿ- 33, ಆರ್ಥಿಕ ದುರ್ಬಲ ವರ್ಗದವರು 35 ಅಂಕಗಳನ್ನು ಗಳಿಸಬೇಕು. ಒಟ್ಟು ಹುದ್ದೆಯ 10 ಪಟ್ಟು ಅಭ್ಯರ್ಥಿಗಳನ್ನು ಎರಡನೇ ಹಂತದ ಪರೀಕ್ಷೆಗೆ ಆಯ್ಕೆ ಮಾಡಲಾಗುತ್ತದೆ. ಇನ್ನು ಸಂದರ್ಶನ ಹಂತಕ್ಕೆ 1:5ರ ಅನುಪಾತದಲ್ಲಿ ನಿಯೋಜಿಸಲಾಗುತ್ತದೆ. ಮೂರು ಹಂತಗಳಲ್ಲಿ ಪಡೆದ ಅಂಕಗಳನ್ನು ಆಧರಿಸಿ ಅಂತಿಮ ಆಯ್ಕೆಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
Intelligence Bureau Recruitment-2025: ಪರೀಕ್ಷೆ ಸ್ವರೂಪ ಹೇಗಿರಲಿದೆ?
▪️ಒಂದನೇ ಹಂತದ ಪರೀಕ್ಷೆಯಲ್ಲಿ ವಸ್ತುನಿಷ್ಠ ಮಾದರಿಯ ಬಹು ಆಯ್ಕೆಯ 100 ಪ್ರಶ್ನೆಗಳಿದ್ದು, ಉತ್ತರಿಸಲು ಒಂದು ತಾಸು ಸಮಯ ನೀಡಲಾಗಿರುತ್ತದೆ. ಇದರಲ್ಲಿ ಪ್ರಚಲಿತ ವಿದ್ಯಮಾನ, ಸಾಮಾನ್ಯ ಜ್ಞಾನ, ನ್ಯೂಮರಿಕಲ್ ಆಪ್ಟಿಟ್ಯೂಡ್, ರೀಸನಿಂಗ್/ಲಾಜಿಕಲ್ ಆಪ್ಟಿಟ್ಯೂಡ್, ಇಂಗ್ಲಿಷ್ ಭಾಷಾ ಪ್ರಶ್ನೆಗಳಿರುತ್ತವೆ. ಪ್ರತಿ ಪ್ರಶ್ನೆಗೆ ಒಂದು ಅಂಕವಿದ್ದು, ತಪ್ಪು ಉತ್ತರಕ್ಕೆ 1/4 ಅಂಕ ಕಳೆಯಲಾಗುತ್ತದೆ.
▪️ಎರಡನೇ ಹಂತದಲ್ಲಿ 20 ಅಂಕಗಳಿಗೆ ಪ್ರಬಂಧ ರಚನೆ, ಇಂಗ್ಲಿಷ್ ಕಾಂಪ್ರಹೆನ್ಸನ್ (10 ಅಂಕ), ಪ್ರಚಲಿತ ವಿದ್ಯಮಾನ, ಆರ್ಥಶಾಸ್ತ್ರ, ರಾಜಕೀಯ-ಸಾಮಾಜಿಕ ವಿಷಯಗಳಿಗೆ ಸಂಬಂಧಿಸಿದ 2 ದೀರ್ಘ ಉತ್ತರ ಬಯಸುವ ಪ್ರಶ್ನೆಗಳಿದ್ದು, 20 ಅಂಕ ಇರಲಿದೆ.
▪️ಮೂರನೇ ಹಂತದಲ್ಲಿ 100 ಅಂಕಗಳಿಗೆ ಸಂದರ್ಶನ ನಡೆಸಲಾಗುತ್ತದೆ.
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗಿರಲಿದೆ?
ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಿದ್ದು, ಇತ್ತೀಚಿನ ಫೋಟೋ, ಸಹಿ, ಭಾವಚಿತ್ರವಿರುವ ಗುರುತಿನ ಚೀಟಿ, ಅಂಕಪಟ್ಟಿಗಳು, ಜಾತಿ ಪ್ರಮಾಣಪತ್ರ ಮೊದಲಾದವುಗಳನ್ನು ಅಪ್‌ಲೋಡ್ ಮಾಡಬೇಕಿರುತ್ತದೆ. ಎಲ್ಲ ಅಭ್ಯರ್ಥಿಗಳಿಗೆ 550 ರೂ. ಶುಲ್ಕ ಪಾವತಿಸಬೇಕಿದ್ದು, ಸಾಮಾನ್ಯ ಅಭ್ಯರ್ಥಿಗಳಿಗೆ 100 ರೂ. ಪರೀಕ್ಷೆ ಶುಲ್ಕ ಇರಲಿದೆ. ಎಸ್‌ಸಿ/ಎಸ್‌ಟಿ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕದಿಂದ ವಿನಾಯ್ತಿ ನೀಡಲಾಗಿದೆ.
ಪರೀಕ್ಷಾ ನಗರಗಳು:
ದೇಶದ 148 ನಗರಗಳಲ್ಲಿ ಪರೀಕ್ಷೆ ನಡೆಯಲಿದ್ದು ರಾಜ್ಯದ ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿಯಲ್ಲೂ ಪರೀಕ್ಷಾ ಕೇಂದ್ರಗಳು ಇರಲಿವೆ. ಅರ್ಜಿ ಸಲ್ಲಿಸುವಾಗಲೇ 5 ಪರೀಕ್ಷಾ ಕೇಂದ್ರಗಳನ್ನು ಆದ್ಯತೆ ಮೇರೆಗೆ ಆಯ್ದುಕೊಳ್ಳಬಹುದು.
ಮಹತ್ವದ ದಿನಾಂಕಗಳು:
ಅರ್ಜಿ ಸಲ್ಲಿಕೆಗೆ ಕೊನೆಯ ದಿನ: ಆ.10, 2025
ಶುಲ್ಕ ಪಾವತಿಗೆ ಕೊನೆಯ ದಿನ: ಆ.12,2025
ಮಾಹಿತಿ ಲಿಂಕ್: CLICK HERE
ಅಧಿಸೂಚನೆ ಲಿಂಕ್: CLICK HERE
ಇದನ್ನೂ ನೋಡಿ….Aadhaar update: 7 ವರ್ಷ ಮೀರಿದ ಮಕ್ಕಳ ಬಯೋಮೆಟ್ರಿಕ್ ನೀಡದಿದ್ದರೆ ‘ಆಧಾರ್’ ರದ್ದು!
Interested
I want to apply