Invitation to apply for state scholarships for the 2025-2026 academic year: 2025-2026 ಶೈಕ್ಷಣಿಕ ವರ್ಷದ ರಾಜ್ಯ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ.

Invitation to apply for state scholarships for the 2025-2026 academic year: 2025-2026 ಶೈಕ್ಷಣಿಕ ವರ್ಷದ ರಾಜ್ಯ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ.

Invitation to apply for state scholarships for the 2025-2026 academic year:  2025-2026 ಶೈಕ್ಷಣಿಕ ವರ್ಷದ ಮೆಟ್ರಿಕ್‌ ಪೂರ್ವ ಮತ್ತು ಮೆಟ್ರಿಕ್ ನಂತರದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ರಾಜ್ಯ ವಿದ್ಯಾರ್ಥಿವೇತನ ಅರ್ಜಿ ಪ್ರಾರಂಭ

 

ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು ಏನೇನು ಬೇಕು

1. ವಿದ್ಯಾರ್ಥಿ ಆಧಾರ್ ಕಾರ್ಡ್

2. ಸ್ಯಾಟ್ಸ್ ಸಂಖ್ಯೆ

3. ಜಾತಿ ಪ್ರಮಾಣಪತ್ರ

4. ಆದಾಯ ಪ್ರಮಾಣಪತ್ರ

 

ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು

1. ವಿದ್ಯಾರ್ಥಿ ಆಧಾರ್ ಕಾರ್ಡ್
2. ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ
3. ಜಾತಿ ಪ್ರಮಾಣಪತ್ರ
4. ಆದಾಯ ಪ್ರಮಾಣಪತ್ರ
5. ಯುಎಸ್‌ಎನ್ (ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಖ್ಯೆ) ಸಂಖ್ಯೆ
6. ಕೌನ್ಸೆಲಿಂಗ್ ಪ್ರತಿ

NOTE:

1. ” MANAGEMENT ಸೀಟಿನ ಮೂಲಕ ಸೀಟು ಪಡೆದ ವಿದ್ಯಾರ್ಥಿಗಳು ರಾಜ್ಯ ವಿದ್ಯಾರ್ಥಿವೇತನ ಯೋಜನೆಗೆ ಅರ್ಹರಲ್ಲ.”

2 ವಿದ್ಯಾರ್ಥಿಗಳ ವಾರ್ಷಿಕ ಆದಾಯ ₹2.5 ಲಕ್ಷ ಮೀರಬಾರದು. ಒಮ್ಮೆ ಅರ್ಜಿಯನ್ನು ಅಂತಿಮವಾಗಿ ಸಲ್ಲಿಸಿದ ನಂತರ ಅರ್ಜಿಯನ್ನು ಡಿಲೀಟ್ ಅಥವಾ ಯಾವುದೇ ಬದಲಾವಣೆಗಳನ್ನು ಮಾಡಲು ಸಾಧ್ಯವಿಲ್ಲ, ಆದ್ದರಿಂದ ವಿದ್ಯಾರ್ಥಿಗಳು ವಿವರಗಳನ್ನು ಸರಿಯಾಗಿ ನಮೂದಿಸಿ.

SSP ಯಲ್ಲಿ 2025-26 ನೇ ಸಾಲಿನಲ್ಲಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ಮೊದಲು ಬಳಕೆದಾರರ ಕೈಪಿಡಿಯನ್ನು ಸಂಪೂರ್ಣವಾಗಿ ಓದಿದ ನಂತರ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.

ಸೂಚನೆಗಳು :-

1. ಅರ್ಜಿ ಸಲ್ಲಿಸುವಾಗ ಯಾವುದೇ ತಪ್ಪಾದ ಮಾಹಿತಿಯನ್ನು ಸಲ್ಲಿಸಿದ್ದಲ್ಲಿ ಸದರಿ ಅರ್ಜಿಯನ್ನು ಸಂಬಂಧಿಸಿದ ಪ್ರಾಯೋಜಕ ಇಲಾಖೆಯಿಂದ (Sponsoring Department) ತಿರಸ್ಕರಿಸಬಹುದು.

2. SSP ತಂತ್ರಾಶದಲ್ಲಿ ನಿಮ್ಮ ಖಾತೆ ತೆರೆಯಲು ಆಧಾರ್ ಸಂಖ್ಯೆ ಮತ್ತು ಆಧಾರ್‌ನಲ್ಲಿರುವಂತೆ ಹೆಸರು ನಮೂದಿಸುವುದು ಕಡ್ಡಾಯವಾಗಿರುತ್ತದೆ. ಖಾತೆ ತೆರೆಯುವ ಸಮಯದಲ್ಲಿ ವಿದ್ಯಾರ್ಥಿಯು ನಮೂದಿಸಿರುವ ಮೊಬೈಲ್ ಸಂಖ್ಯೆಗೆ OTP ಯನ್ನು ಕಳುಹಿಸಲಾಗುವುದು.

3. SSP ತಂತ್ರಾಶದಲ್ಲಿ ನಿಮ್ಮ ಖಾತೆ ಈಗಾಗಲೆ ತೆರೆದಿದ್ದಲ್ಲಿ ನೀವು ನಿಮ್ಮ SSP ID ಮತ್ತು Password ನಮೂದಿಸಿ ಅರ್ಜಿ ಸಲ್ಲಿಸಲು ಮುಂದುವರೆಯಬಹುದು.

4. ಸ್ಟೆಪ್ -1 ರಲ್ಲಿ ಕೆಳಲಾಗುತ್ತಿರುವ 10 ನೇ ತರಗತಿ/SSLC/ICSE/CBSE/NIOS & Kamataka open schooling ನೋಂದಣಿ ಸಂಖ್ಯೆ, ಜಾತಿ / ಆದಾಯ / EWS ಮತ್ತು ವಿಕಲಚೇತನ (UDID) ಪ್ರಮಾಣಪತ್ರಗಳನ್ನು ಕಡ್ಡಾಯವಾಗಿ ವಿದ್ಯಾರ್ಥಿಯ ಹೆಸರಿನಲ್ಲಿಯೇ ಪಡೆದು ಅರ್ಜಿ ಸಲ್ಲಿಸತಕ್ಕದ್ದು.

5. ಸೈಪ್-2 ರಲ್ಲಿ ಕೇಳಲಾಗುತ್ತಿರುವ ಶೈಕ್ಷಣಿಕ ಮಾಹಿತಿಯನ್ನು ಸಂಬಂಧಪಟ್ಟ ವಿಶ್ವವಿದ್ಯಾಲಯ / ಶೈಕ್ಷಣಿಕ ಮಂಡಳಿ / UUCMS / KEA ಯವರಿಂದ ಪಡೆದು ಪ್ರದರ್ಶಿಸಲಾಗುತ್ತಿದ್ದು ಸದರಿ ಮಾಹಿತಿಯಲ್ಲಿ ಏನಾದರು ತಪ್ಪುಗಳು ಇದ್ದಲ್ಲಿ ಅರ್ಜಿ ಸಲ್ಲಿಸುವ ಮೊದಲು ಸಂಬಂಧಪಟ್ಟ ವಿಶ್ವವಿದ್ಯಾಲಯ / ಶೈಕ್ಷಣಿಕ ಮಂಡಳಿ / UUCMS ರವರನ್ನು ಕಾಲೇಜು ವಿದ್ಯಾರ್ಥಿವೇತನ ಸಬಲೀಕರಣ (Scholarship Empowerment Officer of the college) ಅಧಿಕಾರಿಗಳ ಮೂಲಕ ಸಂಪರ್ಕಿಸಿ ತಪ್ಪಾದ ಮಾಹಿತಿಯನ್ನು ಸರಿಪಡಿಸಿಕೊಂಡು ನಂತರ ಅರ್ಜಿ ಸಲ್ಲಿಸುವುದು.

6. ಹಿಂದಿನ ವರ್ಷದ ಸರಿಯಾದ ಫಲಿತಾಂಶ ವಿವರಗಳನ್ನು ಸಲ್ಲಿಸುವುದು.

7. ಅರ್ಜಿ ಅಂತಿಮ ಸಲ್ಲಿಕೆಯನ್ನು ಮಾಡುವ ಮೊದಲು. ಸಲ್ಲಿಸಲಾಗಿರುವ ಎಲ್ಲಾ ವಿವರಗಳು ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಂಡು ನಂತರ ಅರ್ಜಿ ಸಲ್ಲಿಸಬೇಕು

8. ಅರ್ಜಿ ಸಲ್ಲಿಸಿದ ನಂತರ ಯಾವುದೇ ಬದಲಾವಣೆಗಳಿಗೆ ಅವಕಾಶವಿರುವುದಿಲ್ಲ ಹಾಗೂ ಅರ್ಜಿಯಲ್ಲಿ ತಪ್ಪಾದ/ ಅನ್ಯ ವಿದ್ಯಾರ್ಥಿಯ ಮಾಹಿತಿಯು ಕಂಡುಬಂದಲ್ಲಿ ಅರ್ಜಿಯನ್ನು ತಿರಸ್ಕರಿಸಲಾಗುವುದು.

9. ಅರ್ಜಿ ಸಲ್ಲಿಸುವ ಮೊದಲು e KYC ಅನ್ನು ಮಾಡುವುದು ಕಡ್ಡಾಯವಾಗಿದೆ. e-KYC ಮಾಡಲು ” e-KYC ” ಮೆನು ಮೇಲೆ ಕ್ಲಿಕ್ ಮಾಡಿ, e-KYC ಮಾಡಿದ ನಂತರ ಅರ್ಜಿ ಸಲ್ಲಿಸಲು ಮುಂದುವರೆಯಿರಿ. CLICK FOR E-KYC ಕ್ಲಿಕ್ ಮಾಡಿದ ನಂತರ ನಿಮ್ಮ ಆದಾರ್ ಸಂಖ್ಯೆಯನ್ನು ನಮೂದಿಸಬೇಕು. ತಮ್ಮ ಆದಾರ್ ಸಂಖ್ಯೆಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಗೆ ಬಂದಿರುವ OTP ಯನ್ನು ನಮೂದಿಸಿ E-KYC ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.

NOTE: ಹಿಂದಿನ ವರ್ಷಗಳಲ್ಲಿ E-KYC ಮಾಡದ ವಿದ್ಯಾರ್ಥಿಗಳು ಮಾತ್ರ E-KYC ಕಡ್ಡಾಯವಾಗಿ ಮಾಡಬೇಕು.

10. ಸಮಾಜ ಕಲ್ಯಾಣ ಇಲಾಖೆಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಅಧಾರ್ ಆಧಾರಿತ ಬಯೋಮೆಟ್ರಿಕ್ e-Kyc ದೃಢೀಕರಣ ಮಾಡುವುದು ಕಡ್ಡಾಯವಾಗಿರುತ್ತದೆ. ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಕಾಲೇಜಿನ ತಾಲ್ಲೋಕಿಗೆ ಸಂಬಂಧಪಟ್ಟ ಸಹಾಯಕ ನಿರ್ದೇಶಕರ ಕಛೇರಿ. ಸಮಾಜ ಕಲ್ಯಾಣ ಇಲಾಖೆ ಅಥವಾ ಗ್ರಾಮಾ ಒನ್ (Grama One) / ಕರ್ನಾಟಕ ಒನ್ ಕೇಂದ್ರಗಳಿಗೆ ಭೇಟಿನೀಡಿ e- Kyc ಪ್ರಕ್ರಿಯ ಪೂರ್ಣಗೊಳಿಸಬೇಕು.

11. ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ & ಹಿಂದುಳಿದ ವರ್ಗಗಳ ಇಲಾಖೆಗೆ ಅರ್ಜಿ ಸಲ್ಲಿಸುವ ಮೊದಲು NSP ಪೋರ್ಟಲ್‌ನಲ್ಲಿ ರಚಿಸಲಾದ OTR ನೋಂದಣಿ ಸಂಖ್ಯೆಯನ್ನು ಅನ್ನು SSP ತಂತ್ರಾಂಶದಲ್ಲಿ ನಮೂದಿಸುವುದು ಕಡ್ಡಾಯವಾಗಿದೆ.

 

CLICK HERE TO ONLINE APPLICATION

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!