ITBP RECRUITMENT-2024- VARIOUS POST’S
ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ ಫೋರ್ಸ್ (ITBP) ತನ್ನ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರಿಸಿದ್ದು, ಭಾರತದಾದ್ಯಂತ ಖಾಲಿ ಇರುವ ಸಬ್ ಇನ್ ಸ್ಪೆಕ್ಟರ್ (ಟೆಲಿಕಮ್ಯೂನಿಕೇಷನ್), ಹೆಡ್‌ಕಾನ್ ಸ್ಟೆಬಲ್ (ಟೆಲಿಕಮ್ಯೂನಿಕೇಷನ್), ಕಾನ್ ಸ್ಟೆಬಲ್ (ಟೆಲಿಕಮ್ಯೂನಿಕೇಷನ್) ಹುದ್ದೆಗಳನ್ನು ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳಿಗಾಗಿ ತಾತ್ಕಾಲಿಕ ಅವಧಿಗಾಗಿ ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿದೆ. ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಐಟಿಬಿಪಿ ಪೇ ಸ್ಕೆಲ್ 3ರ ಪ್ರಕಾರ 21,700-1,12,400. ವೇತನವನ್ನು ನಿಗದಿಪಡಿಸಲಾಗಿದೆ.
ಒಟ್ಟು ಹುದ್ದೆಗಳ ಸಂಖ್ಯೆ: 526
ಹುದ್ದೆಗಳ ವಿವರ
ಸಬ್ ಇನ್‌ಸ್ಪೆಕ್ಟರ್ (ಟೆಲಿಕಮ್ಯೂನಿಕೇಷನ್)
ಪುರುಷರು: 78
ಮಹಿಳೆಯರು-14
ಹೆಡ್‌ಕಾನ್‌ಸ್ಟೆಬಲ್ (ಟೆಲಿಕಮ್ಯೂನಿಕೇಷನ್)
ಪುರುಷರು: 325
ಮಹಿಳೆಯರು-58
ಕಾನ್‌ಸ್ಟೆಬಲ್ (ಟೆಲಿಕಮ್ಯೂನಿಕೇಷನ್)
ಪುರುಷರು: 44
ಮಹಿಳೆಯರು-07
ವಿದ್ಯಾರ್ಹತೆ:
ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ 10ನೇ ತರಗತಿ, ಮೆಟ್ರಿಕ್ಯೂಲೆಷನ್/ಡಿಪ್ಲೊಮಾ, ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ಅಥವಾ ಮಾಹಿತಿ ತಂತ್ರಜ್ಞಾನ ಅಥವಾ ಕಂಪ್ಯೂಟರ್ ಸೈನ್ಸ್ ಅಥವಾ ಎಲೆಕ್ಟ್ರಾನಿಕ್ಸ್ ಆ್ಯಂಡ್ ಇನ್‌ಸ್ಟ್ರುಮೆಂಟೇಷನ್‌ನಲ್ಲಿ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು.
ವಯೋಮಿತಿ:
ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18- ಗರಿಷ್ಠ 25 ವರ್ಷದೊಳಗಿರಬೇಕು. ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ/ಮಾಜಿ ಸೈನಿಕ ಅಭ್ಯರ್ಥಿಗಳಿಗೆ 3 ವರ್ಷ ವಯೋಸಡಿಲಿಕೆ ಅನ್ವಯವಾಗಲಿದೆ.
ವೇತನ ಶ್ರೇಣಿ:
ಸಬ್ ಇನ್‌ಸ್ಪೆಕ್ಟರ್ ಹುದ್ದೆಗೆ 35,400-1, 12,400, ಹೆಡ್‌ಕಾನ್‌ಸ್ಟೆಬಲ್ ಹುದ್ದೆಗೆ 25,500 – 81,100ರೂ., ಕಾನ್‌ಸ್ಟೆಬಲ್ ಹುದ್ದೆಗೆ 21,700 – 69,100. ವೇತನವನ್ನು ನಿಗದಿಪಡಿಸಲಾಗಿದೆ.
ಆಯ್ಕೆ ಪ್ರಕ್ರಿಯೆ:
ದೈಹಿಕ ಸಹಿಷ್ಣುತಾ ಪರೀಕ್ಷೆ (ಪಿಇಟಿ), ದೈಹಿಕ ಗುಣಮಟ್ಟದ ಪರೀಕ್ಷೆ (ಪಿಎಸ್‌ಟಿ), ಲಿಖಿತ ಪರೀಕ್ಷೆ, ದಾಖಲೆ ಪರಿಶೀಲನೆ ಮೆರಿಟ್‌ಸ್ಟ್, ವಿವರವಾದ ವೈದ್ಯಕೀಯ ಪರೀಕ್ಷೆ, ವೈದ್ಯಕೀಯ ಪರೀಕ್ಷೆಯ ಪರಿಶೀಲನೆ ನಡೆಸುವ ಮೂಲಕ ಅಭ್ಯರ್ಥಿಗಳನ್ನು ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ITBP- ಪರೀಕ್ಷೆ ಮಾದರಿ:
ದೈಹಿಕ ಗುಣಮಟ್ಟದ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಲಿಖಿತ ಪರೀಕ್ಷೆಗೆ ಹಾಜರಾಗಬೇಕು. ಸಬ್ ಇನ್‌ಸ್ಪೆಕ್ಟರ್ ಹುದ್ದೆಗೆ 100 ಅಂಕದ ಎರಡು ಪ್ರಶ್ನೆ ಪತ್ರಿಕೆ ಇರಲಿದೆ. ಹೆಡ್ ಕಾನ್‌ಸ್ಟೆಬಲ್ ಮತ್ತು ಕಾನ್‌ಸ್ಟೆಬಲ್ ಹುದ್ದೆಗೆ 100 ಅಂಕದ ಒಂದೆ ಪ್ರಶ್ನೆಪತ್ರಿಕೆ ಇರಲಿದೆ. ಜನರಲ್ ಇಂಗ್ಲಿಷ್, ಜನರಲ್ ಅವೇರ್‌ನೆಸ್, ರೀಸನಿಂಗ್ ಎಬಿಲಿಟಿ, ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಎಲೆಕ್ಟ್ರಾನಿಕ್ಸ್, ಕಮ್ಯೂನಿಕೇಷನ್, ಮಾಹಿತಿ ತಂತ್ರಜ್ಞಾನ, ಕಂಪ್ಯೂಟರ್ ಸೈನ್ಸ್, ಎಲೆಕ್ಟಿಕಲ್, ಇನ್‌ಸ್ಟ್ರುಮೆಂಟೇಷನ್ ಆ್ಯಂಡ್ ಕಂಟ್ರೋಲರ್ ವಿಷಯಗಳನ್ನು ಒಳಗೊಂಡಿರಲಿದೆ. ಪರೀಕ್ಷೆಯನ್ನು ಒಎಂಆರ್ ಅಥವಾ ಸಿಬಿಟಿ ಮಾದರಿಯಲ್ಲಿ ನಡೆಸಲಾಗುತ್ತದೆ.
ಅರ್ಜಿ ಶುಲ್ಕದ ವಿವರ:
ಸಬ್ ಇನ್‌ಸ್ಪೆಕ್ಟರ್ ಹುದ್ದೆಗೆ 200ರೂ., ಹೆಡ್ ಕಾನ್‌ಸ್ಟೆಬಲ್ ಮತ್ತು ಕಾನ್‌ಸ್ಟೆಬಲ್ ಹುದ್ದೆಗೆ 100ರೂ. ಅರ್ಜಿ ಶುಲ್ಕವನ್ನು ಜನರಲ್/ಒಬಿಸಿ/ಇಡಬ್ಲ್ಯುಎಸ್ ವರ್ಗದ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಪಾವತಿಸಬೇಕು. ಎಸ್ಸಿ/ ಎಸ್ಟಿ/ಮಾಜಿ ಸೈನಿಕ/ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ವಿಧಿಸಿಲ್ಲ.
ಅರ್ಜಿ ಸಲ್ಲಿಕೆ ಮಾಹಿತಿ:
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ವೆಬ್‌ಸೈಟ್ recruitment.itbpolice.nic.ind ఫిటి ನೀಡುವ ಮೂಲಕ ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು. ಬೇರೆ ಯಾವುದೇ ಹಂತದಲ್ಲಿ ಸಲ್ಲಿಸಿದ ಅರ್ಜಿಯನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ, ಮೊಬೈಲ್ ಸಂಖ್ಯೆ, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಛಾಯಾಚಿತ್ರ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಿ. ಅಧಿಕೃತ ಅಧಿಸೂಚನೆಯಿಂದ ಅರ್ಜಿಯನ್ನು ಡೌನ್‌ಲೋಡ್ ಮಾಡಿ ಮತ್ತು ನಿಗದಿತ ನಮೂನೆಯಲ್ಲಿ ಅರ್ಜಿ ಭರ್ತಿ ಮಾಡಿ.
1 thought on “ITBP JOBS-2024: Various Posts Recruitment in ITBP, Apply Soon, Direct Link Given.”