Job Alert: Application Invitation for All India Institute of Speech and Hearing Instructor Recruitment-2024. Interested candidates apply through direct link.

 

ವಾಕ್‌ಶ್ರವಣ ಸಂಸ್ಥೆಯಲ್ಲಿ ಬೋಧಕರ ಹುದ್ದೆಗಳಿಗೆ ಅರ್ಜಿ ಆಹ್ವಾನ.

ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ್ ಸಂಸ್ಥೆಯು ಕೇಂದ್ರದ ಆರೋಗ್ಯವ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಾಯತ್ತ ಸಂಸ್ಥೆಯಾಗಿದೆ. ಪ್ರಸ್ತುತ ಈ ಸಂಸ್ಥೆಯು ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್, ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳನ್ನು ನೇರ ನೇಮಕಾತಿಯ ಮೂಲಕ ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿದೆ. ಒಟ್ಟು 22 ಹುದ್ದೆ ಗಳಿದ್ದು, ಈ ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತಿ, ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಯಾವ ವಿಷಯಗಳಲ್ಲಿ ಖಾಲಿ ಹುದ್ದೆಗಳು:

ಆಡಿಯೋಲಾಜಿ, ಸ್ವಿಚ್/ ಲ್ಯಾಂಗ್ವೇಜ್ ಪ್ಯಾಥಾಲಜಿ/ ಸ್ಪಿಚ್ ಸೈನ್ಸ್, ಇಎನ್‌ಟಿ, ಎಲೆಕ್ಟ್ರಾನಿಕ್ಸ್‌ ಆ್ಯಂಡ್ ಅಕೌಂಟ್ಸ್, ಸ್ಪೆಷಲ್ ಎಜುಕೇಶನ್, ಕ್ಲಿನಿಕಲ್ ಸೈಕಲಾಜಿ ವಿಷಯಗಳಲ್ಲಿ ಹುದ್ದೆಗಳು ಖಾಲಿ ಇವೆ.

ಹುದ್ದೆಗಳ ಮಾಹಿತಿ:

ಪ್ರೊಫೆಸರ್- 03
ಅಸೋಸಿಯೇಟ್ ಪ್ರೊಫೆಸರ್-12
ಅಸಿಸ್ಟೆಂಟ್ ಪ್ರೊಫೆಸರ್-07

ಅರ್ಜಿ ಶುಲ್ಕದ ವಿವರ:

ಜನರಲ್, ಒಬಿಸಿ, ಇಡಬ್ಲ್ಯುಎಸ್ ಅಭ್ಯರ್ಥಿಗಳು 600., SC/ST ಅಭ್ಯರ್ಥಿಗಳು 250 ರೂ. ಅರ್ಜಿ ಶುಲ್ಕವನ್ನು ಪಾವತಿಸಬೇಕು. ಮಹಿಳಾ ಮತ್ತು ಅಂಗವಿಕಲ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ.

ವಿದ್ಯಾರ್ಹತೆ ಏನು?

ಅಭ್ಯರ್ಥಿಗಳು ಶೇ 50 ಎಸ್ಸಿ, ಎಂಎ, ಪಿಎಚ್‌ಡಿ, ಎಂಬಿ ಬಿಎಸ್, ಎಂಇ/ಎಂಟೆಕ್ ಇನ್ ಎಲೆಕ್ಟ್ರಾನಿಕ್ಸ್/ಕಮ್ಯೂನಿಕೇಷನ್ / ಇನ್‌ಸ್ಟ್ರುಮೆಂಟೇಷನ್‌ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಶೇ.55 ಅಂಕದೊಂದಿಗೆ ಪೂರ್ಣಗೊಳಿಸಿರಬೇಕು. ಹುದ್ದೆಗಳಿಗೆ ಅನುಗುಣವಾಗಿ ಕೆಲಸದ ಅನುಭವ ಹೊಂದಿರಬೇಕು.

ವಯೋಮಿತಿ ಮಾಹಿತಿ:

ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗರಿಷ್ಠ 40-50 ವರ್ಷದೊಳಗಿರಬೇಕು.

ವೇತನ ಎಷ್ಟು?

ಪ್ರೊಫೆಸರ್ ಹುದ್ದೆಗೆ 123100-215900 ರೂ.,

ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗೆ 78,800 – 2,09,200,ರೂ
ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ 67,700 – 2,08,700 ರೂ. ವೇತನವನ್ನು ನಿಗದಿಪಡಿಸಲಾಗಿದೆ.

ಆಯ್ಕೆ ಪ್ರಕ್ರಿಯೆ ಹೇಗಿರಲಿದೆ?

ಪ್ರೊಫೆಸರ್ ಹುದ್ದೆಗೆ ಟೀಚಿಂಗ್ ಸ್ಕಿಲ್ ಟೆಸ್ಟ್ (70%), ಸಂದರ್ಶನ (30%),

ಅಸೋಸಿಯೇಟ್ ಪ್ರೊಫೆಸ‌ರ್ ಮತ್ತು ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ ಲಿಖಿತ ಪರೀಕ್ಷೆ (80%), ಟೀಚಿಂಗ್/ಕೌಶಲ ಪರೀಕ್ಷೆ (10%), ಸಂದರ್ಶನ (10%) ನಡೆಸುವ ಮೂಲಕ ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

 

ಪ್ರಮುಖ ದಿನಾಂಕಗಳು:

Date of commencement of offline application : 02.09.2024

Last date of receipt of hard copy of duly : submitted online applications along with all self-attested copies. (compulsory) at this Institute- 45 days from the date of publication in the Employment Newspaper at 5.30 P.M. on that day.

ಅರ್ಜಿ ಸಲ್ಲಿಕೆ ಹೇಗೆ?

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು www.aiishmysore.in ಗೆ ಭೇಟಿ ನೀಡಿ ಅರ್ಜಿ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಅರ್ಜಿಯಲ್ಲಿ ಕೇಳಿರುವ ಎಲ್ಲ ಮಾಹಿತಿಗಳನ್ನು ನಮೂದಿಸುವ ಮೂಲಕ, ಅಗತ್ಯ ದಾಖಲೆಗಳೊಂದಿಗೆ the Chief Administrative Officer, All India Institute of Speech and Hearing, Manasagangothri,Mysore-570006 ಈ ವಿಳಾಸಕ್ಕೆ ಅರ್ಜಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ aiishmysore.in

ಅಧಿಸೂಚನೆಗಾಗಿ – CLICK HERE


2 thoughts on “Job Alert: Application Invitation for All India Institute of Speech and Hearing Instructor Recruitment-2024. Interested candidates apply through direct link.”

Leave a Comment