Application invitation for recruitment of various posts
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಬಳ್ಳಾರಿಯಲ್ಲಿ ಖಾಲಿ ಇರುವ 45 ಶುತ್ತೂಷಕಿ, 12 ಕಿರಿಯ ಆರೋಗ್ಯ ಸಹಾಯಕರು, 1 ಅಪ್ತ ಸಮಾಲೋಚಕರು ಸೇರಿ ವಿವಿಧ ವೃಂದದ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. 10ನೇ ತರಗತಿ, 12ನೇ ತರಗತಿ, ಬಿಎಸ್ಸಿ ನರ್ಸಿಂಗ್, ಡಿಪ್ಲೊಮಾ, ಸ್ನಾತಕೋತ್ತರ ಪದವೀಧರರು ಅ.4ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ ಮತ್ತು ವೇತನ ಮಾಹಿತಿ:
ಶುಶ್ರೂಷಕಿ: 45, ವೇತನ:14,186-170,59 ರೂ
ಕಿರಿಯ ಆರೋಗ್ಯ ಸಹಾಯಕ-12 ವೇತನ:14,044-16,886
ಆಡಿಯೋ ಮೆಟ್ರಿಕ್ ಅಸಿಸ್ಟೆಂಟ್-01 ವೇತನ- 15,000ರೂ,
ಇನ್‌ಸ್ಟ್ರಕ್ಟರ್ ಫಾರ್ ಹಿಯರಿಂಗ್ ಇಂಪೈರ್ಡ್ ಚಿಲ್ಡ್ರನ್-01, ವೇತನ- 15,000.ರೂ
ಜಿಲ್ಲಾ ಸಂಯೋಜಕರು-01 , ವೇತನ- 30,000ರೂ
ಆಪ್ತ ಸಮಾಲೋಚಕರು-01, ವೇತನ-14,558 – 17,059ರೂ
ಬ್ಲಾಕ್ ಎಪಿಡೆಮಿಯಾಲಜಿಸ್ಟ್-01, ವೇತನ-30,000ರೂ
ವಿದ್ಯಾರ್ಹತೆ:
ಅಭ್ಯರ್ಥಿಗಳು ಹುದ್ದೆಗೆ ಅನುಸಾರವಾಗಿ ಎಸ್‌ಎಸ್‌ಎಲ್‌ಸಿ, ವಿಜ್ಞಾನ ವಿಷಯದಲ್ಲಿ (ಡಿಪ್ಲೊಮಾ, ಪಿಯುಸಿ, ಪದವಿ), ಹಿಯರಿಂಗ್ ಲ್ಯಾಂಗ್ಲೆಜ್ ಆ್ಯಂಡ್ ಸ್ಪೇಚ್ ಡಿಪ್ಲೊಮಾ, ಬಿಎಸ್ಸಿ ನರ್ಸಿಂಗ್ ಅಥವಾ ಜಿಎನ್‌ಎಂ, ವೈದ್ಯಕೀಯ ಪದವಿ,ಎಂಎಸ್ಸಿ,ಎಂಪಿಎಚ್, ಎಂಬಿಎ ಪೂರ್ಣಗೊಳಿಸಿರಬೇಕು. ಹುದ್ದೆಗಳಿಗೆ ಅನುಗುಣವಾಗಿ ಕೆಲಸದ ಅನುಭವಹೊಂದಿರಬೇಕು.
ವಯೋಮಿತಿ:
ಅಭ್ಯರ್ಥಿಗಳು 35- 45 ವರ್ಷದೊಳಗಿರಬೇಕು. ಎಸ್ಸಿ/ಎಸ್ಟಿ/ಕ್ಯಾಟಗರಿ 1 ಅಭ್ಯರ್ಥಿಗಳಿಗೆ 5 ವರ್ಷ, ಕ್ಯಾಟಗರಿ 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ 3 ವರ್ಷ ವಯೋಸಡಿಲಿಕೆ ಅನ್ವಯವಾಗಲಿದೆ.
ಆಯ್ಕೆ ಪ್ರಕ್ರಿಯೆ ಹೇಗಿರಲಿದೆ?
ರೋಸ್ಟರ್ ಹಾಗೂ ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಕೆ ಹೇಗೆ?
ಅ.3 ರಂದು ಜಿಲ್ಲಾ RCH ಅಧಿಕಾರಿಗಳ ಕಚೇರಿ, ಜಿಲ್ಲಾ ಆಸ್ಪತ್ರೆ ಆವರಣ, ಅನಂತಪುರ ರಸ್ತೆ, ಬಳ್ಳಾರಿ ಈ ವಿಳಾಸದಲ್ಲಿ ಅರ್ಜಿ ನಮೂನೆಯನ್ನು ಪಡೆದುಕೊಳ್ಳಬೇಕು. ಅದನ್ನು ಭರ್ತಿ ಮಾಡಿದ ನಂತರ ಅಗತ್ಯ ದಾಖಲೆಗಳೊಂದಿಗೆ ನೇರ ಸಂದರ್ಶನಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಸಭಾಂಗಣ, ಬಳ್ಳಾರಿ ಈ ವಿಳಾಸಕ್ಕೆ ಅ.4 ರಂದು ಹಾಜರಾಗಬೇಕು.
ಪ್ರಮುಖ ದಿನಾಂಕಗಳು:
ತಾತ್ಕಾಲಿಕ ಮೆರಿಟ್ ಪಟ್ಟಿ ಪ್ರಕಟಣೆ:19-10-2024
ಆಕ್ಷೇಪಣೆ ಸಲ್ಲಿಕೆಗೆ ಕೊನೆಯ ದಿನಾಂಕ::23-10-2024
ಹೆಚ್ಚಿನ ಮಾಹಿತಿಗಾಗಿ- CLICK HERE
No comment