Job News: Army Public Schools PGT, TGT, PRT, Teacher Recruitment Application Invitation.Notification, direct link to apply here.

 

ಈ ಕೆಳಗಿನ ಲೇಖನದಲ್ಲಿ ಉದ್ಯೋಗ ಸುದ್ದಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಒದಗಿಸಲಾಗಿದೆ. Army welfare Society (AWES) ಶಿಕ್ಷಕರ (Teaching) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಒದಗಿಸಲಾಗಿದ್ದು. ಈ ಉದ್ಯೋಗ ಪ್ರಕಟಣೆಗೆ ಬಗ್ಗ ಅಧಿಸೂಚನೆಯ ಪಿಡಿಎಫ್ ಪ್ರತಿಯನ್ನು ಕೂಡ ಈ ಕೆಳಗೆ ನೀಡಲಾಗಿದೆ. ಶಿಕ್ಷಕರ ಬಂಧುಗಳಿಗೆ ಇದೊಂದು ಸಿಹಿ ಸುದ್ದಿಯಾಗಿದ್ದು ಇದರ ಸದುಪಯೋಗವನ್ನು ಶಿಕ್ಷಕರು ಪಡೆಯಬಹುದು. ಆಸಕ್ತ ಶಿಕ್ಷಕರು ಅರ್ಜಿ ಸಲ್ಲಿಸಬಹುದು.

Army welfare Society ಯಲ್ಲಿನ ಶಿಕ್ಷಕರ ಹುದ್ದೆಗಳಿಗೆ ಸಂಬಂಧಿಸಿದಂತೆ ಒಂದಿಷ್ಟು ಮಾಹಿತಿ.

ಪ್ರಸ್ತುತವಾಗಿ ದೇಶದಲ್ಲಿ 139 ಆರ್ಮಿ ಶಾಲೆಗಳಿದ್ದು, ಶಿಕ್ಷಕರ ಕೊರತೆ ಇರುವ ಶಾಲೆಗಳಲ್ಲಿ ಬಹಳಷ್ಟು ಶಿಕ್ಷಕರನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಮುಖ್ಯವಾಗಿ ಈ ನೇಮಕಾತಿಯಲ್ಲಿ TGT, PGT,PRT
ಶಿಕ್ಷಕರ ನೇಮಕಾತಿಗಾಗಿ ಪಬ್ಲಿಕ್ ಶಾಲೆಗಳಲ್ಲಿ ಸ್ನಾತಕೋತ್ತರ ಪದವಿ ಪಡೆದ (PGT) ಶಿಕ್ಷಕರು,ತರಬೇತಿ ಪಟೆದ ಟ್ರೇನ್ಡ್ ಗ್ರಾಜುಯೇಟ್ ಟೀಚರ್ (TGT) ಮತ್ತು ಪ್ರಾಥಮಿಕ ಶಿಕ್ಷಕರ (PRT) ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು,ಅದರ ಪಿಡಿಎಫ್ ಅಧಿಸೂಚನೆ ಪ್ರಕಟ ಮಾಡಲಾಗಿದೆ.ನೇಮಕಾತಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಆನ್ಲೈನ್ ಮೂಲಕ ಜರುಗಲಿದ್ದು, ಆಸಕ್ತ ಅಭ್ಯರ್ಥಿಗಳು ನಿಗದಿ ಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಕೆ ಮಾಡಬಹುದು.ಅಧಿಸೂಚನೆಯ ಪ್ರಕಾರ, AWES ಆನ್‌ಲೈನ್ ಸ್ಟೀನಿಂಗ್ ಟೆಸ್ಟ್ (OST) 2024 ಅನ್ನು 23ನೇ ಮತ್ತು 24ನೇ ನವೆಂಬರ್ 2024 ರಂದು ನಡೆಸಲಾಗುತ್ತದೆ.ಹುದ್ದೆಗಳ ಕುರಿತಾದ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಕೆಳಗೆ ನೀಡಲಾದ ಮಾಹಿತಿಯನ್ನು ಕೊನೆವರೆಗೂ ನೋಡಿ.

ಹುದ್ದೆಗಳ ವಿವರ:

ಪ್ರಾಥಮಿಕ ಶಿಕ್ಷಕರು (PRT) ಸ್ನಾತಕೋತ್ತರ ಶಿಕ್ಷಕರು (PGT) ತರಬೇತಿ ಪಡೆದ ಪದವೀಧರ ಶಿಕ್ಷಕರು (TGT)

ನಿಗದಿಪಡಿಸಲಾದ ಅರ್ಹತೆ:

ಪ್ರಾಥಮಿಕ ಶಾಲಾ [ PRT] ಶಿಕ್ಷಕರ ಹುದ್ದೆ:

ಅಭ್ಯರ್ಥಿಗಳು ಸಂಬಂಧಪಟ್ಟ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವುದು ಅವಶ್ಯಕ.ಕನಿಷ್ಠ 50% ಅಂಕಗಳೊಂದಿಗೆ ಬಿ.ಇಡಿ ಪದವಿ ಪಡೆದಿರಬೇಕು. ಜೊತೆಗೆ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ [CTET] ಅರ್ಹತೆ ಹೊಂದಿ ಪ್ರಮಾಣಪತ್ರ ಪಡೆದಿರಬೇಕು.

ಸ್ನಾತಕೋತ್ತರ ಪದವಿ [PGT] ಶಿಕ್ಷಕರ ಹುದ್ದೆ:

ಸ್ನಾತಕೋತ್ತರ ಪದವಿಯೊಂದಿಗೆ ಶೇ 50 ರಷ್ಟು ಅಂಕಗಳೊಂದಿಗೆ ಬಿ.ಇಡಿ ಪದವಿ ಪಾಸಾಗಿರಬೇಕು.

ತರಬೇತಿ ಪಡೆದ ಪದವೀಧರ [ TGT] ಶಿಕ್ಷಕರ ಹುದ್ದೆ:

ಕನಿಷ್ಠ 55% ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ, B.Ed./M.Ed. ಪದವಿ ಪಡೆದಿರಬೇಕು.

ನಿಗದಿಪಡಿಸಿದ ವಯೋಮಿತಿ:

ಹೊಸ ಅರ್ಜಿದಾರರಿಗೆ: ಅಭ್ಯರ್ಥಿಗಳು 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು.

ಅನುಭವಿ ಅರ್ಜಿದಾರರಿಗೆ: ಅಭ್ಯರ್ಥಿಗಳು 57 ವರ್ಷ ಕಡಿಮೆ ವಯಸ್ಸಿನವರಾಗಿರಬೇಕು.

ಅರ್ಜಿ ಶುಲ್ಕದ ವಿವರ:

ಸಾಮಾನ್ಯ,OBC/ EWS ನವರಿಗೆ ₹385, SC-ST ವಿಕಲಚೇತನ ಅಭ್ಯರ್ಥಿಗಳಿಗೆ- ₹ 385 ಆನ್ಲೈನ್ ಬ್ಯಾಂಕಿಂಗ್ ಮೂಲಕ ಶುಲ್ಕ ಭರಣ ಮಾಡುವುದು.

ನೇಮಕಾತಿ ಪ್ರಕ್ರಿಯೆ ಹೇಗಿರಲಿದೆ?

PRT, TGT ಮತ್ತು PGT ಹುದ್ದೆಗಳಿಗೆ [OST] ಸ್ಕ್ರೀನಿಂಗ್ ಪರೀಕ್ಷೆ ಮೂಲಕ ನಡೆಯಲಿದೆ.

ಸಂದರ್ಶನ:

[OST] ಸ್ಕ್ರೀನಿಂಗ್ ಪರೀಕ್ಷೆಯಿಂದ ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು.

Teaching aptitude test: TAT-
ಸಂದರ್ಶನದಲ್ಲಿ ಪಾಸಾದ ಅಭ್ಯರ್ಥಿಗಳು ನಂತರ ಟೀಚಿಂಗ್ ಆಪ್ಟಿಟ್ಯೂಡ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ.

ಮಹತ್ವದ ದಿನಾಂಕಗಳು:

ಆಧಿಸೂಚನೆ ಪ್ರಕಟವಾದ ದಿನಾಂಕ:10-09-2024
ಅರ್ಜಿ ಸಲ್ಲಿಕೆಗೆ ಆರಂಭಿಕ ದಿನಾಂಕ:10-09-2024.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ:25-10-2024
ಶುಲ್ಕ ಪಾವತಿಗೆ ಕೊನೆ ದಿನಾಂಕ:25-10-2024

ಅವಶ್ಯಕ ದಾಖಲೆಗಳು:

ವಿದ್ಯಾರ್ಹತೆ ಪ್ರಮಾಣಪತ್ರಗಳು,ಇತ್ತೀಚಿನ ಭಾವಚಿತ್ರ,ಸಹಿ,ಹುಟ್ಟಿದ ದಿನಾಂಕದ ಪುರಾವೆ (10 ನೇ ಅಂಕಪಟ್ಟಿ / ಜನನ ಪ್ರಮಾಣಪತ್ರ)
ಜಾತಿ ಪ್ರಮಾಣಪತ್ರ,ವಿಕಲಚೇತನ ಪ್ರಮಾಣಪತ್ರ, ಆಧಾರ್ ಕಾರ್ಡ್ ಇತ್ಯಾದಿ.

ಸದರಿ ನೇಮಕಾತಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ತಿಳಿಸಲಾದ ಮಾಹಿತಿಯನ್ನು ಚೆನ್ನಾಗಿ ಓದಿ ಅರ್ಜಿ ಸಲ್ಲಿಸುವುದು ಮುಖ್ಯವಾದ ಅಂಶವಾಗಿದೆ. ಆದ್ದರಿಂದ ಅಭ್ಯರ್ಥಿಗಳು ಈ ಕೆಳಗೆ ನೀಡಲಾದ ಪಿಡಿಎಫ್ ನಲ್ಲಿ ಅಧಿಸೂಚನೆ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

CLICK HERE TO DOWNLOAD- NOTIFICATION

CLICK HERE TO ONLINE APPLICATION

CLICK HERE TO OFFICIAL WEBSITE

1 thought on “Job News: Army Public Schools PGT, TGT, PRT, Teacher Recruitment Application Invitation.Notification, direct link to apply here.”

Leave a Comment