KAAMS Attendance System:ಶಾಲಾ ಶಿಕ್ಷಣ ಇಲಾಖೆಯ ಕಚೇರಿಗಳಲ್ಲಿ “ಕರ್ತವ್ಯ” ತಂತ್ರಾಂಶ: Geo-Coordinates ಸಂಗ್ರಹಿಸಲು ಆದೇಶ

KAAMS Attendance System:ಶಾಲಾ ಶಿಕ್ಷಣ ಇಲಾಖೆಯ ಕಚೇರಿಗಳಲ್ಲಿ “ಕರ್ತವ್ಯ” ತಂತ್ರಾಂಶ: Geo-Coordinates ಸಂಗ್ರಹಿಸಲು ಆದೇಶ

KAAMS Attendance System: ಶಾಲಾ ಶಿಕ್ಷಣ ಇಲಾಖೆಯ ಕಚೇರಿಗಳಲ್ಲಿ “ಕರ್ತವ್ಯ” (KAAMS) ತಂತ್ರಾಂಶದ ಮೂಲಕ ಹಾಜರಾತಿ ದಾಖಲಿಸಲು ಕಚೇರಿಗಳ Geo-Coordinates ಸಂಗ್ರಹಿಸುವ ಕುರಿತು ಮಹತ್ವದ ಮಾಹಿತಿ. ಹಾಜರಾತಿ ವ್ಯವಸ್ಥೆಯ ಹೊಸ ನಿಯಮಗಳು ಹಾಗೂ ಸಂಪೂರ್ಣ ವಿವರಗಳನ್ನು ಇಲ್ಲಿ ತಿಳಿಯಿರಿ.

ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖ(1)ರಲ್ಲಿ ಶಾಲಾ ಶಿಕ್ಷಣ ಇಲಾಖೆಯ ಎಲ್ಲಾ ಖಾಯಂ ಅಧಿಕಾರಿಗಳು ಮತ್ತು ಸಿಬ್ಬಂದಿಗಳು. ಹಾಜರಾತಿಯನ್ನು ಕಡ್ಡಾಯವಾಗಿ ಗುರುತಿಸಲು ಮತ್ತು ಖಾಯಂ ಅಧಿಕಾರಿ ಮತ್ತು ಸಿಬ್ಬಂದಿಗಳ ಹಾಜರಾತಿಯ ದತ್ತಾಂಶದ ಏಕರೂಪತೆ, ಪಾರದರ್ಶಕತೆ ಮತ್ತು ಪರಿಶೀಲನೀಯತೆಯನ್ನು ಖಾತ್ರಿಪಡಿಸವ ಸಂಬಂಧ ಕರ್ನಾಟಕ ಅಡ್ವಾನ್ಸ್ ಅಟೆಂಡೆನ್ಸ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಕರ್ತವ್ಯ (Kartavya-KAAMS) ಮೊಬೈಲ್ ಅಪ್ಲಿಕೇಶನ್ ಅನ್ನು ತಕ್ಷಣದಿಂದ ಜಾರಿಗೊಳಿಸಲು ಅನುಮತಿ ನೀಡಿ ಆದೇಶಿಸಲಾಗಿದೆ.

ಉಲ್ಲೇಖ(2) ರಲ್ಲಿ ಶಾಲಾ ಶಿಕ್ಷಣ ಇಲಾಖೆಯ ಎಲ್ಲಾ ಕಛೇರಿಗಳ Latitude ಮತ್ತು Longitude ವಿವರಗಳನ್ನು ಸಂಗ್ರಹಿಸುವ ಸಲುವಾಗಿ ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ (KSRSAC) ವತಿಯಿಂದ ಅಭಿವೃದ್ಧಿಪಡಿಸಿ GeoEO ಮೊಬೈಲ್ ಅಪ್ಲಿಕೇಶನ್ ಅನ್ನು ಇಲಾಖೆಗೆ ಸಿದ್ಧಪಡಿಸಿರುತ್ತಾರೆ. ಸದರಿ App ಬಳಸಿ ಮೊದಲ ಹಂತದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಎಲ್ಲಾ ಕಛೇರಿಗಳ ಭೌಗೋಳಿಕ ಸ್ಥಾನದ ಸರಿಯಾದ ವಿವರಗಳನ್ನು (Latitude ಮತ್ತು Longitude) App ಮೂಲಕ Capture ಮಾಡಬಹುದಾಗಿರುತ್ತದೆ.

ಶಾಲಾ ಶಿಕ್ಷಣ ಇಲಾಖೆಯಲ್ಲಿ ಕರ್ನಾಟಕ ಅಡ್ಯಾನ್ಸ್ ಅಟೆಂಡೆನ್ಸ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಕರ್ತವ್ಯ (Kartavya-KAAMS) ಸುವ್ಯವಸ್ಥಿತವಾಗಿ ಮತ್ತು ಪರಿಣಾಮಕಾರಿಯಾಗಿ  ಜಾರಿಗೊಳಿಸುವ ಸಂಬಂಧ ಕಛೇರಿಗಳ ನಿಖರವಾದ Latitude ಮತ್ತು Longitude ಅವಶ್ಯಕವಾಗಿರುತ್ತದೆ.

ಆದುದರಿಂದ ಎಲ್ಲಾ ಅನುಷ್ಠಾನಾಧಿಕಾರಿಗಳು ತಮ್ಮ ವ್ಯಾಪ್ತಿಯ ಎಲ್ಲಾ ಕಛೇರಿ ಮುಖ್ಯಸ್ಥರು ಅತ್ಯಂತ ಜವಾಬ್ದಾರಿಯುತವಾಗಿ ನಿಖರವಾದ ಅಕ್ಷಾಂಶ ಮತ್ತು ರೇಖಾಂಶವನ್ನು ಗುರುತಿಸಲು ಸಿದ್ಧಪಡಿಸಿರುವ App ನಲ್ಲಿ ನಿಖರವಾದ ಮಾಹಿತಿಯನ್ನು ದಿನಾಂಕ: 16/03/2026 ರೊಳಗೆ ದಾಖಲಿಸಲು ಸೂಚಿಸುವುದು. ಈ ಸಂಬಂಧ ಸಂಸ್ಥೆಯವರು ಮಾರ್ಗದರ್ಶನಕ್ಕಾಗಿ ನೀಡಿರುವ ಕೈಪಿಡಿ (ಪ್ರತಿ ಲಗತ್ತಿಸಿದೆ) ಮತ್ತು ವೀಡಿಯೋವನ್ನು ಬಳಸಿಕೊಳ್ಳಲು ತಿಳಿಸಿದೆ.

KAAMS Attendance System

 

CLICK HERE TO DOWNLOAD

CLICK HERE TO GEO EO – USER MANUAL

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!