Karnataka Education Recruitment Rules 2026 Update: ಕರ್ನಾಟಕ ಶಿಕ್ಷಣ ಇಲಾಖೆ ನೇಮಕಾತಿ ತಿದ್ದುಪಡಿ ನಿಯಮಗಳು 2026 – ಸಂಪೂರ್ಣ ವಿವರಗಳು
Karnataka Education Recruitment Rules 2026 Update: ಕರ್ನಾಟಕ ಶಿಕ್ಷಣ ಇಲಾಖೆ ನೇಮಕಾತಿ ತಿದ್ದುಪಡಿ ನಿಯಮಗಳು 2026 – ಸಂಪೂರ್ಣ ವಿವರ ಇಲ್ಲಿದೆ.
ಅಧಿಸೂಚನೆ:
ಕರ್ನಾಟಕ ರಾಜ್ಯ ನಾಗರೀಕ ಸೇವೆಗಳ ಅಧಿನಿಯಮ, 1978 (1990ರ ಕರ್ನಾಟಕ ಅಧಿನಿಯಮ 14) ರ ಕಲಂ-3ನೇ ಪ್ರಕರಣದ (2)ನೇ ಉಪ ಪ್ರಕರಣದ (ಎ) ಖಂಡವನ್ನು 8ನೇ ಪ್ರಕರಣದೊಡನೆ ಓದಿಕೊಂಡಂತೆ ಮತ್ತು ತನ್ಮೂಲಕ ಅಗತ್ಯಪಡಿಸಲಾದಂತೆ ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಸಾರ್ವಜನಿಕ ಶಿಕ್ಷಣ ಇಲಾಖೆ) (ನೇಮಕಾತಿ) (ತಿದ್ದುಪಡಿ) ನಿಯಮಗಳು, 2026ರ ಕರಡನ್ನು ದಿನಾಂಕ21.01.2026ರಂದು ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆಯ ಭಾಗ-IVA (ಸಂಖ್ಯೆ: 89) ರಲ್ಲಿ ಪ್ರಕಟಿಸಿ, ಪ್ರಕಟಣೆಯ ದಿನಾಂಕದಿಂದ ಹದಿನೈದು ದಿನಗಳೊಳಗಾಗಿ ಅದರಿಂದ ಬಾಧಿತರಾಗುವ ಸಂಭವವಿರುವ ಎಲ್ಲಾ ವ್ಯಕ್ತಿಗಳಿಂದ ಆಕ್ಷೇಪಣೆ ಮತ್ತು ಸಲಹೆಗಳನ್ನು ಆಹ್ವಾನಿಸಲಾಗಿರುವುದರಿಂದ;
ಸದರಿ ವಿಶೇಷ ಸಂಚಿಕೆಯ ರಾಜ್ಯ ಪತ್ರವನ್ನು ದಿನಾಂಕ: 21.01.2026 ರಂದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿರುವುದರಿಂದ;
ಮತ್ತು ಸದರಿ ಕರಡು ತಿದ್ದುಪಡಿ ನಿಯಮಗಳ ಬಗ್ಗೆ ಸಾರ್ವಜನಿಕರಿಂದ ಸ್ವೀಕೃತವಾಗಿರುವ ಆಕ್ಷೇಪಣೆ ಮತ್ತು ಸಲಹೆಗಳನ್ನು ರಾಜ್ಯ ಸರ್ಕಾರವು ಪರಿಗಣಿಸಲಾಗಿದೆ.
ಈಗ ಕರ್ನಾಟಕ ನಾಗರಿಕ ಸೇವೆಗಳು ಅಧಿನಿಯಮ 1978 (1990ರ ಕರ್ನಾಟಕ ಅಧಿನಿಯಮ 14)ರ 8ನೇ ಪ್ರಕರಣದೊಂದಿಗೆ ಓದಿಕೊಂಡು 3ನೇ ಪ್ರಕರಣದ (1)ನೇ ಉಪ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಸಾರ್ವಜನಿಕ ಶಿಕ್ಷಣ ಇಲಾಖೆ) (ನೇಮಕಾತಿ) ನಿಯಮಗಳು, 1967ಕ್ಕೆ ಮತ್ತಷ್ಟು ತಿದ್ದುಪಡಿ ಮಾಡಲು ಕರ್ನಾಟಕ ಸರ್ಕಾರವು ಈ ಕೆಳಕಂಡ ನಿಯಮಗಳನ್ನು ರಚಿಸಿದೆ ಎಂದರೆ:-
1. ಶೀರ್ಷಿಕೆ ಮತ್ತು ಪ್ರಾರಂಭ:
(1) ಈ ನಿಯಮಗಳನ್ನು ಕರ್ನಾಟಕ ಶಿಕ್ಷಣ ಇಲಾಖೆ
ಸೇವೆಗಳು (ಸಾರ್ವಜನಿಕ ಶಿಕ್ಷಣ ಇಲಾಖೆ) (ನೇಮಕಾತಿ) (ತಿದ್ದುಪಡಿ) ನಿಯಮಗಳು, 2026 ಎಂದು ಕರೆಯತಕ್ಕದ್ದು.
(2) ಈ ನಿಯಮಗಳು ಕರ್ನಾಟಕ ರಾಜ್ಯಪತ್ರದಲ್ಲಿ ಅಂತಿಮವಾಗಿ ಪ ದಿನಾಂಕದಿಂದ ಜಾರಿಯಾಗತಕ್ಕದ್ದು.
‘ಪ್ರಾಥಮಿಕ ಶಾಲಾ ಶಿಕ್ಷಕರು (1 ರಿಂದ 5ನೇ ತರಗತಿ) ಮತ್ತು ಪದವೀಧರ ಪ್ರಾಥಮಿಕ ಶಿಕ್ಷಕರು (6 ರಿಂದ 8ನೇ ತರಗತಿ) ವೃಂದದಿಂದ ಅನುಕ್ರಮವಾಗಿ 2:1ರ ಅನುಪಾತದಲ್ಲಿ ಮುಂಬಡ್ತಿ ಮೂಲಕ ಪ್ರತಿ 3ನೇ ರಿಕ್ತ ಸ್ಥಾನವನ್ನು ಪದವೀಧರ ಪ್ರಾಥಮಿಕ ಶಿಕ್ಷಕರಿಂದ ತುಂಬತಕ್ಕದ್ದು.
ಪ್ರಾಥಮಿಕ ಶಾಲಾ ಶಿಕ್ಷಕರು (1 ರಿಂದ 5ನೇ ತರಗತಿ) ಮತ್ತು ಪದವೀಧರ ಪ್ರಾಥಮಿಕ ಶಿಕ್ಷಕರು (6 ರಿಂದ 8ನೇ ತರಗತಿ) ವೃಂದದಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು ಹಾಗೂ ಸರ್ಕಾರಿ ಪ್ರೌಢಶಾಲೆಗಳಲ್ಲಿನ ಸಹಶಿಕ್ಷಕರುಗಳಿಗೆ ಗ್ರೇಡ್-11 ವೃಂದಗಳಿಗೆ ಮುಂಬಡ್ತಿ ಹೊಂದಲು ಅವಕಾಶವಿದ್ದು, ಮುಂಬಡ್ತಿಗೆ ಅರ್ಹರಿರುವ ಈ ಎರಡೂ ವೃಂದಗಳ ಶಿಕ್ಷಕರಿಂದ ಮುಂಬಡ್ತಿ ನೀಡುವ ಮೊದಲು ಹಿಂದಕ್ಕೆ ಪಡೆಯಲಾಗದ ಅಭಿಮತವನ್ನು ಪಡೆಯತಕ್ಕದ್ದು.
ಟಿಪ್ಪಣಿ: 1 ರಿಂದ 5 ನೇ ತರಗತಿಗೆ ಭೋಧಿಸುವ ಪ್ರಾಥಮಿಕ ಶಾಲಾ ಶಿಕ್ಷಕರು ಎನ್.ಸಿ.ಟಿ.ಇ. ಮಾರ್ಗಸೂಚಿಗಳಲ್ಲಿ ನಿರ್ದಿಷ್ಟಪಡಿಸಿದಂತೆ ಮತ್ತು ಪದವೀಧರ ಪ್ರಾಥಮಿಕ ಶಿಕ್ಷಕರ ಹುದ್ದೆಗೆ ಜಾರಿಯಲ್ಲಿರುವ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಇರುವಂತೆ ಅಗತ್ಯ ವಿಷಯಗಳಲ್ಲಿ ಪದವಿಯನ್ನು ಹೊಂದಿದ್ದಲ್ಲಿ, 6 ಮತ್ತು 7ನೇ ತರಗತಿಗೆ ಬೋಧಿಸಲು ಅರ್ಹರಾಗತಕ್ಕದ್ದು.
2) ಅಂಕಣ (4) ರಲ್ಲಿನ ನಮೂದುಗಳ ಬದಲಿಗೆ ಈ ಕೆಳಕಂಡ ನಮೂದುಗಳನ್ನು ಪ್ರತಿಸ್ಥಾಪಿಸತಕ್ಕದ್ದು.
(i) ಪ್ರಾಥಮಿಕ ಶಾಲಾ ಶಿಕ್ಷಕರು (1 ರಿಂದ 5ನೇ ತರಗತಿ) ಆಗಿದ್ದಲ್ಲಿ ಸದರಿ ವೃಂದದಲ್ಲಿ 12 ವರ್ಷಗಳಿಗೆ ಕಡಿಮೆ ಇಲ್ಲದಂತೆ ಸೇವೆ ಸಲ್ಲಿಸಿರತಕ್ಕದ್ದು,
(ii) ಪದವೀಧರ ಪ್ರಾಥಮಿಕ ಶಿಕ್ಷಕರು (6 ರಿಂದ 8ನೇ ತರಗತಿ) ಆಗಿದ್ದಲ್ಲಿ, ಸದರಿ ವೃಂದದಲ್ಲಿ 12 ವರ್ಷಗಳಿಗೆ ಕಡಿಮೆ ಇಲ್ಲದಂತೆ ಸೇವೆ ಸಲ್ಲಿಸಿರತಕ್ಕದ್ದು;
ಪರಂತು, ಪ್ರಾಥಮಿಕ ಶಾಲಾ ಶಿಕ್ಷಕರು (1 ರಿಂದ 5ನೇ ತರಗತಿ) ಮತ್ತು ಪದವೀಧರ ಪ್ರಾಥಮಿಕ ಶಿಕ್ಷಕರು (6 ರಿಂದ 8ನೇ ತರಗತಿ) ವೃಂದದಿಂದ ಮೇಲಿನ ಅನುಪಾತದ ಪ್ರಕಾರ ಅವಶ್ಯಕ ಸಂಖ್ಯೆಯಲ್ಲಿ ಮುಂಬಡ್ತಿಗೆ ಅರ್ಹ ಶಿಕ್ಷಕರು ಲಭ್ಯವಿಲ್ಲದಿದ್ದರೆ,
ಯಾವುದೇ ಕಾರಣದಿಂದ ಅನುಕ್ರಮವಾಗಿ ಸದರಿ ವೃಂದಗಳಲ್ಲಿ ಜೇಷ್ಠತೆಯನುಸಾರ ಅರ್ಹರಿರುವ ಶಿಕ್ಷಕರು ಮುಂಬಡ್ತಿ ಪಡೆಯಲು ನಿರಾಕರಿಸಿದಲ್ಲಿ ಅಥವಾ ಮುಂಬಡ್ತಿ ವರ್ತುಲದಲ್ಲಿ ಮುಂಬಡ್ತಿಗೆ ಪರಿಗಣಿಸಲು ನಿಯಮಾನುಸಾರ ಅರ್ಹರಿಲ್ಲದಿದ್ದಲ್ಲಿ ಆಡಳಿತಾತ್ಮಕ ಹಿತದೃಷ್ಟಿಯಿಂದ ಇನ್ನೊಂದು ವೃಂದದಲ್ಲಿನ ಜೇಷ್ಠತೆಯನುಸಾರ ಅರ್ಹರಿರುವ ಶಿಕ್ಷಕರನ್ನು ಮುಂಬಡ್ತಿಗೆ ಪರಿಗಣಿಸತಕ್ಕದ್ದು. ಆದಾಗ್ಯೂ, ಈ ರೀತಿ ಅನುಕ್ರಮವಾಗಿ ಆಯಾ ವೃಂದಕ್ಕೆ ಮುಂಬಡ್ತಿಯಲ್ಲಿ ನಷ್ಟವಾದ ಹುದ್ದೆಗಳನ್ನು ಮುಂದಿನ ಮುಂಬಡ್ತಿಗಳಲ್ಲಿ ಸರಿದೂಗಿಸತಕ್ಕದ್ದು.
ಟಿಪ್ಪಣಿ: 1 ರಿಂದ 5 ನೇ ತರಗತಿಗೆ ಭೋಧಿಸುವ ಪ್ರಾಥಮಿಕ ಶಾಲಾ ಶಿಕ್ಷಕರು ಎನ್.ಸಿ.ಟಿ.ಇ. ಮಾರ್ಗಸೂಚಿಗಳಲ್ಲಿ ನಿರ್ದಿಷ್ಟಪಡಿಸಿದಂತೆ ಮತ್ತು ಪದವೀಧರ ಪ್ರಾಥಮಿಕ ಶಿಕ್ಷಕರ ಹುದ್ದೆಗೆ ಜಾರಿಯಲ್ಲಿರುವ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಇರುವಂತೆ ಅಗತ್ಯ ವಿಷಯಗಳಲ್ಲಿ ಪದವಿಯನ್ನು ಹೊಂದಿದ್ದಲ್ಲಿ, 6 ಮತ್ತು 7ನೇ ತರಗತಿಗೆ ಬೋಧಿಸಲು ಅರ್ಹರಾಗತಕ್ಕದ್ದು.

CLICK HERE TO DOWNLOAD NOTIFICATION