Karnataka Govt Schools SA-2 Exam 2025-26: 6ರಿಂದ 9ನೇ ತರಗತಿ ದ್ವಿತೀಯ ಸಂಕಲನಾತ್ಮಕ ಮೌಲ್ಯಾಂಕನ ಮಾರ್ಗಸೂಚಿ

Karnataka Govt Schools SA-2 Exam 2025-26: 6ರಿಂದ 9ನೇ ತರಗತಿ ದ್ವಿತೀಯ ಸಂಕಲನಾತ್ಮಕ ಮೌಲ್ಯಾಂಕನ ಮಾರ್ಗಸೂಚಿ

Karnataka Govt Schools SA-2 Exam 2025-26:  2025-26ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ ಶಾಲೆಗಳಲ್ಲಿ 6ರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ನಡೆಯುವ ದ್ವಿತೀಯ ಸಂಕಲನಾತ್ಮಕ ಮೌಲ್ಯಾಂಕನ (SA-2) ಕಾರ್ಯ ನಿರ್ವಹಣೆ ಕುರಿತು ಸಂಪೂರ್ಣ ಮಾಹಿತಿ, ಮಾರ್ಗಸೂಚಿಗಳು ಹಾಗೂ ಪ್ರಮುಖ ವಿವರಗಳನ್ನು ಇಲ್ಲಿ ತಿಳಿಯಿರಿ.

ಮೇಲ್ಕಂಡ ವಿಷಯ ಮತ್ತು ಉಲ್ಲೇಖಕ್ಕೆ ಸಂಬಂಧಿಸಿದಂತೆ, 2025-26ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮವನ್ನು ಅನುಸರಿಸುತ್ತಿರುವ ಎಲ್ಲಾ ಸರ್ಕಾರಿ ಶಾಲೆಗಳ 6 ರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ದ್ವಿತೀಯ ಸಂಕಲನಾತ್ಮಕ ಮೌಲ್ಯಾಂಕದ (Summative Assessment-2) ಮೌಲ್ಯಾಂಕನ ಕಾರ್ಯವನ್ನು ಇಲಾಖಾ ವತಿಯಿಂದ ನಡೆಸಲಾಗುತ್ತಿದೆ. ರಾಜ್ಯದ DSERT (https://kseab.karmataka.gov.in)  ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಮೌಲ್ಯಾಂಕನವನ್ನು ಮಾಡಲು ಅನುಕೂಲವಾಗುವಂತೆ ಏಕರೂಪದ ವೇಳಾಪಟ್ಟಿಯನ್ನು ತಿದ್ದುಪಡಿಸಲಾಗಿದ್ದು  ಮತ್ತು KSQAAC (https://kseab.karmataka.gov.in)  ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ.

ಈ ಮೌಲ್ಯಾಂಕನವು ಅತ್ಯಂತ ಸರಳವಾಗಿದ್ದು ವಿದ್ಯಾರ್ಥಿಗಳ ಕಲಿಕಾ ನ್ಯೂನ್ಯತೆಯನ್ನು ನೀಗಿಸಿ ಕಲಿಕಾ ಫಲಾಧಾರಿತ ಕಲಿಕೆಯ ಗುಣಮಟ್ಟವನ್ನು ಉತ್ತಮ ಪಡಿಸಲು ಕೈಗೊಳ್ಳಲಾಗಿರುವ ದೀರ್ಘಕಾಲಿಕ ಯೋಜನೆಯಾಗಿದೆ. ಹತ್ತನೇ ತರಗತಿಯಲ್ಲಿ ವಿದ್ಯಾರ್ಥಿಗಳು ಯಾವುದೇ ಒತ್ತಡ ಹಾಗೂ ಆತಂಕವಿಲ್ಲದೆ ಸುಗಮವಾಗಿ ಪರೀಕ್ಷೆಯನ್ನು ಎದುರಿಸಿ ಉತ್ತಮ ಫಲಿತಾಂಶ ಗಳಿಸುವುದು ಇದರ ಉದ್ದೇಶ. ಅಗತ್ಯ ಕಲಿಕಾ ಉಪಕ್ರಮಗಳನ್ನು ಯೋಜಿಸಿ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸುಲಭವಾಗಿ ಲಭ್ಯವಾಗುವಂತೆ ಮಾಡುವ ಮೂಲಕ ಪ್ರೌಢಶಾಲಾ ಹಂತದಲ್ಲಿ ವಿದ್ಯಾರ್ಥಿಗಳು ಶಾಲೆ ಬಿಡುವ ಪ್ರಮಾಣ ಕಡಿಮೆ ಮಾಡುವ ಉದ್ದೇಶವನ್ನು ಹೊಂದಿದೆ. ಪ್ರಸ್ತುತ ಸಾಲಿನಲ್ಲಿ ಪಾಠಾಧಾರಿತ ಮೌಲ್ಯಾಂಕನವನ್ನು ಜಾರಿಗೆ ತಂದಿದ್ದು ಇದನ್ನು ಆಧರಿಸಿ ಪ್ರತಿ ಪಾಠದ ನಂತರ ವಿದ್ಯಾರ್ಥಿಗಳಿಗೆ ಮೌಲ್ಯಾಂಕನವನ್ನು ನಡೆಸಲಾಗಿರುತ್ತದೆ. ಸದರಿ ದ್ವಿತೀಯ ಸಂಕಲನಾತ್ಮಕ ಮೌಲ್ಯಾಂಕವು ಒಟ್ಟಾರೆಯಾಗಿ ವಿದ್ಯಾರ್ಥಿಗಳ ಕಲಿಕಾ ನ್ಯೂನ್ಯತೆಯನ್ನು ತಿಳಿಯುವ ಉದ್ದೇಶ ಹೊಂದಿದೆ. ಈ ಮೌಲ್ಯಾಂಕನವನ್ನು RTE ಕಾಯ್ದೆ ಮತ್ತು ಸಂಬಂಧಿತ ನಿಯಮಗಳನ್ವಯ ನಿರ್ವಹಿಸಲಾಗುತ್ತಿದೆ.

ಇದು ವಿದ್ಯಾರ್ಥಿಗಳನ್ನು ಅನುತ್ತೀರ್ಣ ಮಾಡುವ ಮೌಲ್ಯಾಂಕನವಾಗಿರುವುದಿಲ್ಲ. ಪ್ರಸಕ್ತ ಸಾಲಿನಲ್ಲಿ ಸರ್ಕಾರಿ ಶಾಲೆಗಳಿಗೆ ದ್ವಿತೀಯ ಸಂಕಲನಾತ್ಮಕ ಮೌಲ್ಯಾಂಕನವನ್ನು ಅನುಷ್ಠಾನಗೊಳಿಸಲಾಗುತ್ತಿದ್ದು ಮುಂದಿನ ಸಾಲಿನಲ್ಲಿ ಉಳಿದ ಶಾಲೆಗಳಲ್ಲಿಯೂ ಅನುಷ್ಠಾನಗೊಳಿಸಲಾಗುವುದು. ಆದ್ದರಿಂದ, ಪರೀಕ್ಷಾ ಭಯ ಮತ್ತು ಒತ್ತಡವಿಲ್ಲದಂತೆ ಸದರಿ ಮೌಲ್ಯಾಂಕನವನ್ನು ನಡೆಸುವುದು ಶಾಲಾ ಮುಖ್ಯ ಶಿಕ್ಷಕರ ಹಾಗೂ ಶಿಕ್ಷಕರ ಜವಾಬ್ದಾರಿಯಾಗಿರುತ್ತದೆ.

ದ್ವಿತೀಯ ಸಂಕಲನಾತ್ಮಕ ಮೌಲ್ಯಾಂಕನಕ್ಕೆ ಸಂಬಂಧಿಸಿದಂತೆ ಸರಳವಾದ ಮಾದರಿ ಪ್ರಶ್ನೆಪತ್ರಿಕೆ, ಕೀ ಉತ್ತರ ಮತ್ತು ನೀಲ ನಕ್ಷೆ (Blueprint) ಯನ್ನು DSERT (https://dsert.karnataka.gov.in.) (https://kseeb.karnataka.gov.in) ವೆಬ್‌ಸೈಟ್ ನಲ್ಲಿ ಈಗಾಗಲೇ ಪ್ರಕಟಿಸಲಾಗಿರುತ್ತದೆ. ಸಿದ್ಧಪಡಿಸಿರುವ ಮೌಲ್ಯಾಂಕನ ನಿರ್ವಹಣೆ ಮಾರ್ಗಸೂಚಿ ಹಾಗೂ ವೇಳಾಪಟ್ಟಿಯನ್ನು ರಾಜ್ಯದ ಎಲ್ಲಾ ಜಿಲ್ಲಾ ಉಪನಿರ್ದೇಶಕರು (ಆಡಳಿತ ಮತ್ತು ಅಭಿವೃದ್ಧಿ) ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಗೆ ಬರುವ ಎಲ್ಲಾ ಶಾಲಾ ಮುಖ್ಯೋಪಾಧ್ಯಾಯರುಗಳಿಗೆ, ಶಿಕ್ಷಕರಿಗೆ ಮಾಹಿತಿ ನೀಡುವುದು ಹಾಗೂ ಶಾಲೆಗಳ “ಪ್ರಕಟಣಾ ಫಲಕ”ದಲ್ಲಿ (Notice Board) ಸದರಿ ವೇಳಾಪಟ್ಟಿಯನ್ನು ಪ್ರಕಟಿಸಿ, ವೇಳಾ ಪಟ್ಟಿಯಂತೆ ಮೌಲ್ಯಾಂಕನ ಕಾರ್ಯ ನಿರ್ವಹಿಸಲು ತಿಳಿಸಿದೆ.

ಮೌಲ್ಯಾಂಕನ ನಿರ್ವಹಣಾ ಮಾರ್ಗಸೂಚಿಗಳು :

▪️ದ್ವಿತೀಯ ಸಂಕಲನಾತ್ಮಕ ಮೌಲ್ಯಾಂಕನಕ್ಕೆ ಸಂಬಂಧಿಸಿದಂತೆ 6 ರಿಂದ 9 ನೇ ತರಗತಿಗಳಿಗೆ ಕನ್ನಡ ಮಾಧ್ಯಮದಲ್ಲಿ ಎಲ್ಲಾ ವಿಷಯಗಳು, ಆಂಗ್ಲ ಮಾಧ್ಯಮದಲ್ಲಿ Core ವಿಷಯಗಳು 6 ಮತ್ತು 7ನೇ ತರಗತಿಗಳಿಗೆ English Bilingual, ಉರ್ದು ಮಾಧ್ಯಮದಲ್ಲಿ ಪ್ರಥಮ ಭಾಷೆ ಉರ್ದು ಹಾಗೂ Core ವಿಷಯಗಳು, ಮರಾಠಿ ಮಾಧ್ಯಮದಲ್ಲಿ ಪ್ರಥಮ ಭಾಷೆ ಮರಾಠಿ ಹಾಗೂ Core ವಿಷಯಗಳು, 8 & 9ನೇ ತರಗತಿಯ ಪ್ರಥಮ ಹಾಗೂ ತೃತೀಯ ಭಾಷೆ ಸಂಸ್ಕೃತ, ದ್ವಿತೀಯ ಭಾಷೆ ಕನ್ನಡ ವಿಷಯಗಳಿಗೆ LBA ಆಧರಿಸಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಲಾಗಿದೆ.

ಈ ಸಂಬಂಧ ಮಾದರಿ ಪ್ರಶ್ನೆಪತ್ರಿಕೆ, ಕೀ ಉತ್ತರ ಮತ್ತು ಪಾಠಾವಾರು ಅಂಕಗಳ ಹಂಚಿಕೆ (Lesson wise weightage) ಯನ್ನು DSERT (https://dsert.karnataka.gov.in) ಮತ್ತು KSQAAC (https://kseab.karnataka.gov.in) ವೆಬ್ಸೈಟ್ನಲ್ಲಿ ಈಗಾಗಲೇ ಪ್ರಕಟಿಸಲಾಗಿದ್ದು, ಮಾದರಿ ಪ್ರಶ್ನೆ ಪತ್ರಿಕೆಯಂತೆ ದ್ವಿತೀಯ ಸಂಕಲನಾತ್ಮಕ ಪ್ರಶ್ನೆಪತ್ರಿಕೆಗಳನ್ನು ನೀಡಲಾಗುವುದು.

▪️ಉಳಿದ ವಿಷಯಗಳಿಗೆ ಶಾಲಾ ಹಂತದಲ್ಲಿಯೇ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಿಕೊಳ್ಳುವುದು.

▪️ಲಿಖಿತ ಮೌಲ್ಯಾಂಕನಕ್ಕೆ ಸಂಬಂಧಿಸಿದಂತೆ, 6 ಮತ್ತು 7ನೇ ತರಗತಿಗಳಿಗೆ 40 ಅಂಕಗಳು, 8ನೇ ತರಗತಿಗೆ 50 ಅಂಕಗಳು ಹಾಗೂ 9ನೇ ತರಗತಿಗೆ ಪ್ರಥಮ ಭಾಷೆಗೆ 100 ಅಂಕಗಳು ಉಳಿದ ಭಾಷೆಗಳು ಹಾಗೂ ಕೋರ್ ವಿಷಯಗಳಿಗೆ 80 ಅಂಕಗಳಿಗೆ ಪ್ರಶ್ನೆಪತ್ರಿಕೆ ಸಿದ್ಧಪಡಿಸಲಾಗಿದೆ.

▪️ಮೌಖಿಕ ಮತ್ತು ಆಂತರಿಕ ಮೌಲ್ಯಾಂಕನಕ್ಕೆ ಉಲ್ಲೇಖ 1ರ ಮೌಲ್ಯಾಂಕನ ಸುತ್ತೋಲೆಯಂತೆ ಕ್ರಮವಹಿಸುವುದು.

▪️ಸದರಿ ಪ್ರಶ್ನೆಪತ್ರಿಕೆಗಳನ್ನು KSQAAC ಮೂಲಕ ಸರ್ಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕರ Login ಗೆ ಕಳುಹಿಸಲಾಗುವುದು.

▪️ಸರ್ಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕರು 8 ಮತ್ತು 9ನೇ ತರಗತಿಯ ಪ್ರಶ್ನೆ ಪತ್ರಿಕೆಗಳನ್ನು ವೇಳಾ ಪಟ್ಟಿಗನುಗುಣವಾಗಿ ತಮ್ಮ ಹಂತದಲ್ಲಿಯೇ ಮುದ್ರಣ ಮಾಡಿ ಮೌಲ್ಯಾಂಕನ ಕಾರ್ಯ ನಿರ್ವಹಿಸುವುದು.

▪️ಸರ್ಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕರು ತಮ್ಮ ಶಾಲೆಗೆ ಜೋಡಣೆ ಮಾಡಿರುವ 6,7,ಮತ್ತು 8ನೇ ತರಗತಿಗಳಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರಿಗೆ ವೇಳಾ ಪಟ್ಟಿಗನುಗುಣವಾಗಿ ಪ್ರಶ್ನೆ ಪತ್ರಿಕೆಗಳ ಒಂದು ಪ್ರತಿಯನ್ನು ನೀಡುವುದು.

▪️ಪ್ರಶ್ನೆ ಪತ್ರಿಕೆಗಳನ್ನು ಪಡೆದ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು ಪ್ರಶ್ನೆ ಪತ್ರಿಕೆಯ ಗೌಪ್ಯತೆಯನ್ನು ಕಾಯ್ದುಕೊಳ್ಳುವ ಮೂಲಕ ಯಾವುದೇ ಅವಗಡಗಳಿಗೆ ಅವಕಾಶವಿಲ್ಲದಂತೆ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಪ್ರಶ್ನೆ ಪತ್ರಿಕೆಗಳನ್ನು ಮುದ್ರಿಸಿ ಮೌಲ್ಯಾಂಕನ ಕಾರ್ಯ ನಿರ್ವಹಿಸುವುದು. ಮೌಲ್ಯಾಂಕನ ಕಾರ್ಯದಲ್ಲಿ ಯಾವುದೇ ಲೋಪದೋಷಗಳು ಕಂಡುಬಂದಲ್ಲಿ ಆಯಾ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು.

▪️ರಾಜ್ಯದ ಸರ್ಕಾರಿ ಶಾಲೆಗಳಲ್ಲಿ SA-2 ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಿ Online ಮೂಲಕ Confidential Modeನಲ್ಲಿ ಕಳುಹಿಸಲಾಗುವುದು. ಪರೀಕ್ಷೆಯ ಗೌಪ್ಯತೆಯನ್ನು ಕಾಪಾಡಿಕೊಂಡು SA-2 ಪರೀಕ್ಷೆಯನ್ನು ನಡೆಸುವ ಸಂಬಂಧ ಪ್ರಶ್ನೆಪತ್ರಿಕೆ ಮತ್ತು ಪರೀಕ್ಷೆ ಬರೆಯಲು ಬಿಳಿ ಹಾಳೆಗಳನ್ನು ನೀಡುವ ಸಲುವಾಗಿ SATS ನಲ್ಲಿನ ಮಾಹಿತಿಯಂತೆ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ 6ನೇ ತರಗತಿ ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ ರೂ. 20 ರಂತೆ, 8ನೇ ತರಗತಿ ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ ರೂ. 30 ರಂತೆ ಅನುದಾನವನ್ನು ಬಿಡುಗಡೆ ಮಾಡಲಾಗುವುದು. ಪ್ರಶ್ನೆಪತ್ರಿಕೆಗಳನ್ನು ಶಾಲಾ ಹಂತದಲ್ಲಿ ಮುದ್ರಣ ಮಾಡಲು SSK ರಾಜ್ಯ ಕಛೇರಿಯಿಂದ ಬಿಡುಗಡೆ ಮಾಡುವ ಅನುದಾನವನ್ನು ನಿಯಮಾನುಸಾರ ಬಳಸಿಕೊಳ್ಳುವುದು.
ಜಿಲ್ಲಾ ಹಂತದ ಉಪನಿರ್ದೇಶಕರು ಆಡಳಿತ ಮತ್ತು ಅಭಿವೃದ್ಧಿ ರವರ ಪಾತ್ರ:

▪️ದ್ವಿತೀಯ ಸಂಕಲನಾತ್ಮಕ ಮೌಲ್ಯಾಂಕನದ ವೇಳಾಪಟ್ಟಿಯಂತೆ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಏಕಕಾಲದಲ್ಲಿ ಮೌಲ್ಯಾಂಕನ ನಡೆಸಲು ಜಿಲ್ಲೆ ಮತ್ತು ಬ್ಲಾಕ್ ಹಂತದ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡುವುದು.

▪️ಮೌಲ್ಯಾಂಕನ ಇಲ್ಲದ ದಿನಗಳಲ್ಲಿ ಶಾಲೆ ಎಂದಿನಂತೆ ನಡೆಯಲು ಕ್ರಮವಹಿಸುವುದು.

▪️ಮೌಲ್ಯಾಂಕನದ ನಂತರವೂ ಪೂರ್ಣಾವಧಿ ಶಾಲೆಯನ್ನು ನಡೆಸಲು ಕ್ರಮವಹಿಸುವುದು.

▪️ಮೌಲ್ಯಾಂಕನ ನಡೆಸಿದ ನಂತರ ಮೌಲ್ಯಮಾಪನ ಕಾರ್ಯವನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಿ ವೈಯಕ್ತಿಕ ಹಾಗೂ ಕ್ರೋಢೀಕೃತ ಅಂಕವಹಿಗಳಲ್ಲಿ ವಿದ್ಯಾರ್ಥಿಗಳ ಪ್ರಗತಿ ದಾಖಲಿಸಲು ಕ್ರಮವಹಿಸುವುದು.

▪️ಆಂತರಿಕ ಮೌಲ್ಯಾಂಕನ ಮತ್ತು ಮೌಖಿಕ ಪರೀಕ್ಷೆಗಳನ್ನು ಲಿಖಿತ ಪರೀಕ್ಷೆಯ ದಿನದಂದು ಅಥವಾ ಶಾಲಾವಧಿಯ ಇತರೆ ಸಮಯದಲ್ಲಿ ಶಾಲಾವಾರು ಅನುಕೂಲಕ್ಕನುಗುಣವಾಗಿ ನಿರ್ವಹಿಸಲು ಕ್ರಮ ವಹಿಸುವುದು.

▪️SATS ತಂತ್ರಾಂಶದಲ್ಲಿ ನಿಯಮಾನುಸಾರ ಅಂಕಗಳನ್ನು ನಮೂದಿಸಲು ಅಗತ್ಯ ಕ್ರಮಗಳನ್ನು ಕೈಗೊಂಡು ವಿಳಂಬಕ್ಕೆ ಅವಕಾಶ ನೀಡದಂತೆ ಫಲಿತಾಂಶವನ್ನು ಸಿದ್ಧಪಡಿಸಿ, ಪರೀಕ್ಷಾ ನಂತರ ನಡೆಯುವ ಸಮುದಾಯ ದತ್ತ ಶಾಲೆ ಕಾರ್ಯಕ್ರಮದಲ್ಲಿ ಪೋಷಕರ ಸಭೆಯನ್ನು ನಡೆಸಿ ಪ್ರತಿ ವಿದ್ಯಾರ್ಥಿಯ ಸಮಗ್ರ ಕಲಿಕಾ ಪ್ರಗತಿಯ ಮಾಹಿತಿಯನ್ನು ಹಂಚಿಕೊಳ್ಳಲು ಮಾರ್ಗದರ್ಶನ ನೀಡುವುದು.

▪️ಸದರಿ ಫಲಿತಾಂಶವನ್ನು ಆಧರಿಸಿ ಜಿಲ್ಲಾ ಹಂತದಲ್ಲಿ ವಿಶ್ಲೇಷಣೆ ಮಾಡಿ, ವಿಶ್ಲೇಷಣಾ ವರದಿಗನುಣವಾಗಿ ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ಕ್ರಿಯಾ ಯೋಜನೆಯನ್ನು ರೂಪಿಸಿ ಕ್ರಮವಹಿಸುವುದು.

ಬ್ಲಾಕ್/ ತಾಲ್ಲೂಕು ಹಂತದ BEO ಮತ್ತು BRC ಗಳ ಪಾತ್ರ:

▪️ಜಿಲ್ಲಾ ಹಂತಕ್ಕೆ ನೀಡಿರುವ ಎಲ್ಲಾ ಅಂಶಗಳನ್ನು ಒಳಗೊಂಡಂತೆ, CRP ಮತ್ತು ಮುಖ್ಯ ಶಿಕ್ಷಕರಿಗೆ ಮಾರ್ಗದರ್ಶನ ನೀಡುವುದು.

▪️ಬ್ಲಾಕ್ ಹಂತದ ಅಧಿಕಾರಿಗಳು SATS ತಂತ್ರಾಂಶದಲ್ಲಿ ಪ್ರತಿ ಶಾಲೆಯು ಮೌಲ್ಯಾಂಕನ ದಾಖಲಿಸಿರುವುದನ್ನು ಖಾತರಿ ಪಡಿಸಿಕೊಳ್ಳುವುದು ಹಾಗೂ ಸಮುದಾಯ ದತ್ತ ಶಾಲೆ ಕಾರ್ಯಕ್ರಮದಲ್ಲಿ ಪೋಷಕರ ಸಭೆಯನ್ನು ನಡೆಸಿ ಪ್ರತಿ ವಿದ್ಯಾರ್ಥಿಯ ಸಮಗ್ರ ಕಲಿಕಾ ಪ್ರಗತಿಯ ಮಾಹಿತಿಯನ್ನು ಹಂಚಿಕೊಳ್ಳಲು ಮಾರ್ಗದರ್ಶನ ನೀಡುವುದು.

▪️ಸದರಿ ಫಲಿತಾಂಶವನ್ನು ಆಧರಿಸಿ ತಾಲ್ಲೂಕು ಹಂತದಲ್ಲಿ ವಿಶ್ಲೇಷಣೆ ಮಾಡಿ, ವಿಶ್ಲೇಷಣಾ ವರದಿಗನುಣವಾಗಿ ಬ್ಲಾಕ್/ತಾಲ್ಲೂಕು ಶೈಕ್ಷಣಿಕ ಅಭಿವೃದ್ಧಿಗೆ ಕ್ರಿಯಾ ಯೋಜನೆಯನ್ನು ರೂಪಿಸಿ ಕ್ರಮ ವಹಿಸುವುದು.

CRP ಗಳ ಪಾತ್ರ:

▪️ಬ್ಲಾಕ್ / ತಾಲ್ಲೂಕು ಹಂತದಲ್ಲಿ ನೀಡಿದ ಮಾರ್ಗದರ್ಶನದಂತೆ ಮೌಲ್ಯಾಂಕನ ಕಾರ್ಯ ನಿರ್ವಹಿಸುವುದು.

▪️ತಮ್ಮ ವ್ಯಾಪ್ತಿಯ ಎಲ್ಲಾ ಶಾಲೆಗಳ ಮುಖ್ಯಶಿಕ್ಷಕರು ಸಂಬಂಧಿಸಿದ ಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕರಿಂದ ಪ್ರಶ್ನೆ ಪತ್ರಿಕೆಗಳನ್ನು ಸ್ವೀಕರಿಸಿ ಸಮರ್ಪಕವಾಗಿ ಮೌಲ್ಯಾಂಕನ ಕಾರ್ಯವನ್ನು ನಿರ್ವಹಿಸುತ್ತಿರುವ ಬಗ್ಗೆ, ಖಾತ್ರಿಪಡಿಸಿಕೊಳ್ಳುವುದು.

▪️SATS ತಂತ್ರಾಂಶದಲ್ಲಿ ಪ್ರತಿಯೊಬ್ಬ ಶಿಕ್ಷಕ ತನ್ನ ತರಗತಿ ಮತ್ತು ವಿಷಯಕ್ಕನುಗುಣವಾಗಿ ನಿಯಮಾನುಸಾರ ಗ್ರೇಡ್ ಗಳನ್ನು ಇಂದೀಕರಿಸಲು ಅಗತ್ಯ ಕ್ರಮಗಳನ್ನು ಕೈಗೊಂಡು ವಿಳಂಬಕ್ಕೆ ಅವಕಾಶ ನೀಡದಂತೆ ಫಲಿತಾಂಶವನ್ನು ಸಿದ್ಧಪಡಿಸಿಕೊಳ್ಳಲು ಮಾರ್ಗದರ್ಶನ ನೀಡುವುದು.

▪️ನಿಗದಿ ಪಡಿಸಿದ ದಿನಾಂಕಗಳಂದು ನಡೆಯುವ ಸಮುದಾಯದತ್ತ ಶಾಲೆ ಕಾರ್ಯಕ್ರಮದಲ್ಲಿ ಪೋಷಕರ ಸಭೆಯನ್ನು ನಡೆಸಿ ಪ್ರತಿ ವಿದ್ಯಾರ್ಥಿಯ ಸಮಗ್ರ ಕಲಿಕಾ ಪ್ರಗತಿಯ ಮಾಹಿತಿಯನ್ನು ಹಂಚಿಕೊಳ್ಳಲು ಮಾರ್ಗದರ್ಶನ ನೀಡುವುದು.

▪️ಸದರಿ ಫಲಿತಾಂಶವನ್ನು ಆಧರಿಸಿ ಕ್ಲಸ್ಟರ್ ಹಂತದಲ್ಲಿ ವಿಶ್ಲೇಷಣೆ ಮಾಡಿ, ವಿಶ್ಲೇಷಣಾ ವರದಿಗನುಣವಾಗಿ ಕ್ಲಸ್ಟರ್ ಹಂತದಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಕ್ರಿಯಾ ಯೋಜನೆಯನ್ನು ರೂಪಿಸಿ ಕ್ರಮವಹಿಸುವುದು.

ಮುಖ್ಯ ಶಿಕ್ಷಕರ ಪಾತ್ರ:

▪️ಸುತ್ತೋಲೆಯಲ್ಲಿ ನೀಡಿದ ಮಾರ್ಗಸೂಚಿಯಂತೆ ಮೌಲ್ಯಾಂಕನ ಕಾರ್ಯ ನಿರ್ವಹಿಸುವುದು.

▪️ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಉಪನಿರ್ದೇಶಕರು (ಆಡಳಿತ) ಇವರಿಂದ ಶಾಲೆಗೆ ಜೋಡಣೆಯಾಗಿರುವ

▪️ಸರ್ಕಾರಿ ಪ್ರಾಥಮಿಕ ಶಾಲೆಗಳ ಮಾಹಿತಿಯನ್ನು ಪಡೆಯುವುದು. ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಪರೀಕ್ಷಾ ದಿನದಂದು ಜೋಡಣೆಯಾಗಿರುವ ಶಾಲೆಗಳ ಸಂಖ್ಯೆಗನುಗುಣವಾಗಿ ಪ್ರಶ್ನೆ ಪತ್ರಿಕೆಗಳ ಒಂದು ಪ್ರತಿಯನ್ನು ಮಾಧ್ಯಮವಾರು ಮುದ್ರಿಸಿ ಸರ್ಕಾರಿ ಪ್ರಾಥಮಿಕ

▪️ಶಾಲಾ ಶಿಕ್ಷಕರಿಗೆ ಕೆಳಗಿನ ಕೋಷ್ಟಕದಲ್ಲಿನ ವಿವರಣೆಯಂತೆ ನೀಡಲು ಕ್ರಮವಹಿಸುವುದು.


▪️ಪ್ರಶ್ನೆ ಪತ್ರಿಕೆಯಲ್ಲಿ ಪರೀಕ್ಷಾ ಮಂಡಳಿಯಿಂದ ನೀಡಲಾಗಿರುವ ಶಾಲಾ ಸಂಕೇತವು ಮುದ್ರಣಗೊಳ್ಳುವುದರಿಂದ ಯಾವುದೇ ರೀತಿಯ ಅವಗಡಗಳು ಸಂಭವಿಸಿದಲ್ಲಿ ಸಂಬಂಧಿಸಿದ ಶಾಲೆಯ ಮುಖ್ಯೋಪಾಧ್ಯಾಯರ ಮೇಲೆ ನಿಯಮಾನುಸಾರ ಕ್ರಮವಹಿಸಲಾಗುವುದು.

▪️ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರು, ಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕರಿಂದ ಪಡೆದ ಪ್ರಶ್ನೆ ಪತ್ರಿಕೆಗಳನ್ನು ಗೌಪ್ಯತೆಯನ್ನು ಕಾಪಾಡುವ ಮೂಲಕ ತಮ್ಮ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಮುದ್ರಣ ಮಾಡಿ ಮೌಲ್ಯಾಂಕನ ಕಾರ್ಯವನ್ನು ನಿರ್ವಹಿಸುವುದು.

▪️SATS ತಂತ್ರಾಂಶದಲ್ಲಿ ಪ್ರತಿಯೊಬ್ಬ ಶಿಕ್ಷಕ ತನ್ನ ತರಗತಿ ಮತ್ತು ವಿಷಯಕ್ಕನುಗುಣವಾಗಿ ನಿಯಮಾನುಸಾರ ಗ್ರೇಡ್ ಗಳನ್ನು ಇಂದೀಕರಿಸಲು ಅಗತ್ಯ ಕ್ರಮಗಳನ್ನು ಕೈಗೊಂಡು ವಿಳಂಬಕ್ಕೆ ಅವಕಾಶ ನೀಡದಂತೆ ಫಲಿತಾಂಶವನ್ನು ಸಿದ್ಧಪಡಿಸಿಕೊಳ್ಳಲು ಮಾರ್ಗದರ್ಶನ ನೀಡುವುದು.

▪️ನಿಗದಿ ಪಡಿಸಿದ ದಿನಾಂಕಗಳಂದು ನಡೆಯುವ ಸಮುದಾಯದತ್ತ ಶಾಲೆ ಕಾರ್ಯಕ್ರಮದಲ್ಲಿ ಪೋಷಕರ ಸಭೆಯನ್ನು ನಡೆಸಿ ಪ್ರತಿ ವಿದ್ಯಾರ್ಥಿಯ ಸಮಗ್ರ ಕಲಿಕಾ ಪ್ರಗತಿಯ ಮಾಹಿತಿಯನ್ನು ಹಂಚಿಕೊಳ್ಳಲು ಮಾರ್ಗದರ್ಶನ ನೀಡುವುದು.

▪️ಸದರಿ ಫಲಿತಾಂಶವನ್ನು ಆಧರಿಸಿ ಕ್ಲಸ್ಟರ್ ಹಂತದಲ್ಲಿ ವಿಶ್ಲೇಷಣೆ ಮಾಡಿ, ವಿಶ್ಲೇಷಣಾ ವರದಿಗನುಣವಾಗಿ ಕ್ಲಸ್ಟರ್ ಹಂತದಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಕ್ರಿಯಾ ಯೋಜನೆಯನ್ನು ರೂಪಿಸಿ ಕ್ರಮವಹಿಸುವುದು.

ಶಿಕ್ಷಕರ ಪಾತ್ರ:

▪️ದ್ವಿತೀಯ ಸಂಕಲನಾತ್ಮಕ ಮೌಲ್ಯಾಂಕನ ನಡೆಸಲು ಮೇಲಾಧಿಕಾರಿಗಳ ಮಾರ್ಗದರ್ಶನದಂತೆ ಕ್ರಮ ವಹಿಸುವುದು.

▪️ಇಲಾಖಾ ವತಿಯಿಂದ ನೀಡಿರುವ ಪ್ರಶ್ನೆಪತ್ರಿಕೆಗಳನ್ನು ಹೊರತು ಪಡಿಸಿ ಉಳಿದ ವಿಷಯಗಳಿಗೆ ಶಾಲಾ ಹಂತದಲ್ಲಿಯೇ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಿಕೊಳ್ಳುವುದು.

▪️ಲಿಖಿತ ಮೌಲ್ಯಾಂಕನಕ್ಕೆ ಸಂಬಂಧಿಸಿದಂತೆ, 6 ಮತ್ತು 7ನೇ ತರಗತಿಗಳಿಗೆ 40 ಅಂಕಗಳು, 8ನೇ ತರಗತಿಗೆ 50 ಅಂಕಗಳು ಹಾಗೂ 9ನೇ ತರಗತಿಗೆ ಪ್ರಥಮ ಭಾಷೆಗೆ 100 ಅಂಕಗಳು ಉಳಿದ ಭಾಷೆಗಳು ಹಾಗೂ ಕೋರ್ ವಿಷಯಗಳಿಗೆ 80 ಅಂಕಗಳಿಗೆ ಮೌಲ್ಯಾಂಕನ ನಡೆಸುವುದು.

▪️6, 7 ಮತ್ತು 8ನೇ ತರಗತಿಗಳಿಗೆ 10 ಅಂಕಗಳಿಗೆ ಮೌಖಿಕ ಹಾಗೂ 9ನೇ ತರಗತಿಗೆ ಪ್ರಥಮ ಭಾಷೆಗೆ 25 ಅಂಕಗಳು, ಉಳಿದ ಭಾಷೆಗಳು ಹಾಗೂ ಕೋರ್ ವಿಷಯಗಳಿಗೆ 20 ಅಂಕಗಳಿಗೆ ಅಂತರಿಕ ಮೌಲ್ಯಾಂಕನವನ್ನು ಉಲ್ಲೇಖ 1ರ ಮೌಲ್ಯಾಂಕನ ಸುತ್ತೋಲೆಯಂತೆ ಕ್ರಮವಹಿಸುವುದು.

▪️ಪ್ರತಿಯೊಬ್ಬ ಶಿಕ್ಷಕರು ತನ್ನ ತರಗತಿ ಮತ್ತು ವಿಷಯಕ್ಕನುಗುಣವಾಗಿ ನಿಯಮಾನುಸಾರ ಗ್ರೇಡ್ಗಳನ್ನು SATS ತಂತ್ರಾಂಶದಲ್ಲಿ ಇಂದೀಕರಿಸಲು ಅಗತ್ಯ ಕ್ರಮಗಳನ್ನು ಕೈಗೊಂಡು ವಿಳಂಬಕ್ಕೆ ಅವಕಾಶ ನೀಡದಂತೆ ಫಲಿತಾಂಶವನ್ನು ಸಿದ್ಧಪಡಿಸಿಕೊಳ್ಳುವುದು.

▪️ನಿಗದಿ ಪಡಿಸಿದ ದಿನಾಂಕಗಳಂದು ನಡೆಯುವ ಸಮುದಾಯದತ್ತ ಶಾಲೆ ಕಾರ್ಯಕ್ರಮದಲ್ಲಿ ಪೋಷಕರ ಸಭೆಯನ್ನು ನಡೆಸಿ ಪ್ರತಿ ವಿದ್ಯಾರ್ಥಿಯ ಸಮಗ್ರ ಕಲಿಕಾ ಪ್ರಗತಿಯ ಮಾಹಿತಿಯನ್ನು ಹಂಚಿಕೊಳ್ಳಲು ಮಾರ್ಗದರ್ಶನ ನೀಡುವುದು.

▪️ಸದರಿ ಫಲಿತಾಂಶವನ್ನು ಆಧರಿಸಿ ವಿಷಯವಾರು, ತರಗತಿವಾರು, ವಿಶ್ಲೇಷಣೆ ಮಾಡಿ ವಿಶ್ಲೇಷಣಾ ವರದಿಗನುಣವಾಗಿ ಕ್ರಿಯಾಯೋಜನೆಯನ್ನು ಸಿದ್ಧಪಡಿಸಿ ಶೈಕ್ಷಣಿಕ ಅಭಿವೃದ್ಧಿಗೆ ಕ್ರಮ ವಹಿಸುವುದು.

▪️2026-27ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಪ್ರತಿ ಶಿಕ್ಷಕರು ಪ್ರತಿ ವಿದ್ಯಾರ್ಥಿಯ ಕಲಿಕಾ ಅಂತರವನ್ನು ಗುರುತಿಸಿ ಸೇತುಬಂಧ ಕಾರ್ಯಕ್ರಮ ಹಾಗೂ ಪರಿಹಾರ ಬೋಧನೆಯ ಮೂಲಕ ಎಲ್ಲಾ ವಿದ್ಯಾರ್ಥಿಗಳ ತರಗತಿ ನಿರ್ದಿಷ್ಟ ಕಲಿಕೆಯನ್ನು ಅನುಕೂಲಿಸಲು ಕ್ರಮವಹಿಸುವುದು.

ಸದರಿ ಕಾರ್ಯಕ್ಕೆ ಸಂಬಂಧಿಸಿದಂತೆ ಮೌಲ್ಯಾಂಕನ ಕಾರ್ಯದ ಎಲ್ಲಾ ಕಾರ್ಯಚಟುವಟಿಕೆಗಳ ಮೇಲುಸ್ತುವಾರಿಗೆ ಉಪನಿರ್ದೇಶಕರು (ಆಡಳಿತ) ರವರು ಒಬ್ಬರು ಶಿಕ್ಷಣಾಧಿಕಾರಿ /ವಿಷಯ ಪರಿವೀಕ್ಷಕರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಿ ಪರೀಕ್ಷಾ ಕಾರ್ಯವು ಸಮರ್ಪಕವಾಗಿ ಅನುಷ್ಠಾನಿಸಲು ಅಗತ್ಯಕ್ರಮ ಕೈಗೊಳ್ಳುವುದು.

ಉಪನಿರ್ದೇಶಕರು (ಅಭಿವೃದ್ಧಿ) ಇವರು LBA ನೋಡಲ್ ಅಧಿಕಾರಿಯನ್ನು ಸದರಿ ಕಾರ್ಯದ ನೋಡಲ್ ಅಧಿಕಾರಿಯನ್ನಾಗಿ ನೇಮಿಸುವುದು ಹಾಗೂ ಮೌಲ್ಯಾಂಕನದ ಮೌಲ್ಯಮಾಪನ ಕಾರ್ಯ, ವಿದ್ಯಾರ್ಥಿಗಳ ಸಾಧನೆಯನ್ನು SATS ತಂತ್ರಾಂಶದಲ್ಲಿ ಇಂದೀಕರಣ, ಫಲಿತಾಂಶ ಪ್ರಕಟಣೆ, ಸದರಿ ಫಲಿತಾಂಶವನ್ನು ಆಧರಿಸಿ ವಿಶ್ಲೇಷಣೆ ಮಾಡಿ, ವಿಶ್ಲೇಷಣಾ ವರದಿಗನುಣವಾಗಿ ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ಕ್ರಿಯಾ ಯೋಜನೆಯನ್ನು ರೂಪಿಸಿ ಕ್ರಮವಹಿಸುವುದು.

ಒಟ್ಟಾರೆಯಾಗಿ ಉಪನಿರ್ದೇಶಕರು (ಆಡಳಿತ) ಮತ್ತು (ಅಭಿವೃದ್ಧಿ) ತಮ್ಮ ಜಿಲ್ಲೆಯಲ್ಲಿ ಮೌಲ್ಯಾಂಕನ ಕಾರ್ಯವು ಸಮರ್ಪಕವಾಗಿ ಅನುಷ್ಠಾನಗೊಳ್ಳಲು ಅಗತ್ಯ ಕ್ರಮವಹಿಸಲು ತಿಳಿಸಿದೆ.

Karnataka Govt Schools SA-2 Exam 2025-26

 

CLICK HERE TO DOWNLOAD

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!