Karnataka GPF Amendment Rules 2026: ಪ್ರಮುಖ ಬದಲಾವಣೆಗಳ ಮಾಹಿತಿ ಇಲ್ಲಿದೆ.

Karnataka GPF Amendment Rules 2026: ಪ್ರಮುಖ ಬದಲಾವಣೆಗಳ ಮಾಹಿತಿ ಇಲ್ಲಿದೆ.

Karnataka GPF Amendment Rules 2026: 2026ರ GPF ತಿದ್ದುಪಡಿ ನಿಯಮಗಳು ಏನು ಹೇಳುತ್ತವೆ? ಕರ್ನಾಟಕ ಸರ್ಕಾರಿ ನೌಕರರಿಗೆ ಮುಖ್ಯ ಮಾಹಿತಿ ಮತ್ತು ಹೊಸ ಅಪ್ಡೇಟ್‌ಗಳನ್ನು ಇಲ್ಲಿ ಓದಿ.

ಅಧಿಸೂಚನೆ:

ಭವಿಷ್ಯ ನಿಧಿಗಳ ಅಧಿನಿಯಮ, 1925 (1925 ರ ಕೇಂದ್ರ ಅಧಿನಿಯಮ XIX) ರ 8 ನೇ ಪ್ರಕರಣವನ್ನು ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ ಅಧಿನಿಯಮ, 1978 (1990ರ ಕರ್ನಾಟಕ ಅಧಿನಿಯಮ 14)ರ 8 ರೊಂದಿಗೆ ಓದಿಕೊಂಡು ಅದೇ ಅಧಿನಿಯಮದ (3)ನೇ ಪ್ರಕರಣದ (1)ನೇ ಉಪ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು, ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ(ತಿದ್ದುಪಡಿ) ನಿಯಮಗಳು 2025 ನ್ನು ಮತ್ತಷ್ಟು ತಿದ್ದುಪಡಿ ಮಾಡಲು ಈ ಮುಂದಿನ ನಿಯಮಗಳ ಕರಡನ್ನು ರಚಿಸಿದ್ದು, ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ಅಧಿನಿಯಮ, 1978 ರ 3ನೇ ಪ್ರಕರಣದ (1)ನೇ ಉಪ-ಪ್ರಕರಣದ (ಎ) ಖಂಡದ ಮೂಲಕ ಅಗತ್ಯ ಪಡಿಸಿರುವಂತೆ ಅಧಿಸೂಚನೆ ಸಂಖ್ಯೆ: ಆಇ 8 ಮುಭನಿ 2025, ದಿನಾಂಕ:08.12.2025 ಅನ್ನು ದಿನಾಂಕ: 8 ನೇ ಜನವರಿ, 2026ರ ಅಧಿಕೃತ ರಾಜ್ಯ ಪತ್ರದ ಭಾಗ-IV-A ರಲ್ಲಿ ಪ್ರಕಟಿಸಿದ ದಿನಾಂಕದಿಂದ 15 ದಿನಗಳೊಳಗಾಗಿ ಇದರಿಂದ ಬಾಧಿತರಾಗಬಹುದಾದ ವ್ಯಕ್ತಿಗಳಿಂದ ಆಕ್ಷೇಪಣೆಗಳು ಹಾಗೂ ಸಲಹೆಗಳನ್ನು ಆಹ್ವಾನಿಸಿ ಪ್ರಕಟಿಸಲಾಗಿದೆ.

ಸದರಿ ರಾಜ್ಯ ಪತ್ರವನ್ನು ದಿನಾಂಕ: 8 ನೇ ಜನವರಿ 2026 ರಂದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿರುವುದರಿಂದ ಮತ್ತು ಯಾವುದೇ ಅಕ್ಷೇಪಣೆಗಳು ಹಾಗೂ ಸಲಹೆಗಳು ರಾಜ್ಯ ಸರ್ಕಾರದಲ್ಲಿ ಸ್ವೀಕೃತವಾಗಿಲ್ಲ.

ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ ಅಧಿನಿಯಮ, 1978 (1990 ರ ಕರ್ನಾಟಕ ಅಧಿನಿಯಮ 14) ರ (3)ನೇ ಪ್ರಕರಣದ (1)ನೇ ಉಪ-ಪ್ರಕರಣವನ್ನು ಅದೇ ಅಧಿನಿಯಮದ ಪ್ರಕರಣ 8 ರೊಂದಿಗೆ ಓದಿಕೊಂಡಂತೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಭವಿಷ್ಯ ನಿಧಿಗಳ ಅಧಿನಿಯಮ, 1925 (1925 ರ ಕೇಂದ್ರ ಅಧಿನಿಯಮ XIX)ದ 8ನೇ ಪ್ರಕರಣವನ್ನು ಓದಿಕೊಂಡು, ಕರ್ನಾಟಕ ಸರ್ಕಾರವು ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ನಿಯಮಗಳು, 2016 ನ್ನು ಮತ್ತಷ್ಟು ತಿದ್ದುಪಡಿ ಮಾಡಿ ಈ ಮೂಲಕ ಈ ಕೆಳಕಂಡ ನಿಯಮಗಳನ್ನು ರಚಿಸುತ್ತದೆ, ಎಂದರೆ:-

ನಿಯಮಗಳು:

1. ಹೆಸರು ಮತ್ತು ಪ್ರಾರಂಭಃ (1) ಈ ನಿಯಮಗಳನ್ನು ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ (ತಿದ್ದುಪಡಿ) ನಿಯಮಗಳು, 2026.

(2) ಈ ನಿಯಮಗಳು ಅಧಿಕೃತ ರಾಜ್ಯಪತ್ರದಲ್ಲಿ ಅಂತಿಮವಾಗಿ ಪ್ರಕಟವಾದ ದಿನಾಂಕದಿಂದ ಜಾರಿಗೆ ಬರತಕ್ಕದ್ದು.

2. ನಮೂನೆ-1 ರ ತಿದ್ದುಪಡಿ:- ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ನಿಯಮಗಳು, 2016 ರ ನಮೂನೆ- 1 ರ ಕೋಷ್ಟಕದಲ್ಲಿ, ಕ್ರಮ ಸಂಖ್ಯೆ 1 ರ ನಂತರ, ಈ ಕೆಳಗಿನವುಗಳನ್ನು ಸೇರಿಸತಕ್ಕದ್ದು;

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!