Karnataka Gram Swaraj and Panchayat Raj (Gram Panchayat Office Procedure Manual) Rules, 2024 Draft Rules.
Karnataka Gram Swaraj and Panchayat ರಾಜ್ :ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 (1993ರ ಕರ್ನಾಟಕ ಅಧಿನಿಯಮ ಸಂಖ್ಯೆ 14)ರ ಪ್ರಕರಣ 311 ರ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯತ್ ಕಛೇರಿ ಕಾರ್ಯವಿಧಾನ ಕೈಪಿಡಿ) ನಿಯಮಗಳು, 2024ರ ಕರಡನ್ನು ಇದರಿಂದ ಬಾಧಿತರಾಗುವ ಎಲ್ಲಾ ವ್ಯಕ್ತಿಗಳ ಮಾಹಿತಿಗಾಗಿ ಸದರಿ ಅಧಿನಿಯಮದ ಪ್ರಕರಣ 311 ರಲ್ಲಿ ನಿಗದಿಪಡಿಸಿದಂತೆ ಪ್ರಕಟಿಸಲಾಗಿದೆ ಮತ್ತು ಈ ಮೂಲಕ ಆಕ್ಷೇಪಣೆ ಮತ್ತು ಸಲಹೆಗಳನ್ನು ಆಹ್ವಾನಿಸಿ, ಸದರಿ ಆಕ್ಷೇಪಣೆ ಮತ್ತು ಸಲಹೆಗಳನ್ನು ಈ ನಿಯಮಗಳು ಕರ್ನಾಟಕ ರಾಜ್ಯ ಪತ್ರದಲ್ಲಿ ಪಕಟಿತವಾದ ದಿನಾಂಕದಿಂದ ಹದಿನೈದು ದಿನಗಳೊಳಗಾಗಿ ಕಳುಹಿಸಲು ಸೂಚಿಸಲಾಗಿದೆ.
ನಿಗದಿಪಡಿಸಿದ ಅವಧಿಯು ಮುಕ್ತಾಯವಾಗುವ ಮೊದಲು ಸದರಿ ಕರಡಿಗೆ ಸಂಬಂಧಿಸಿದಂತೆ ಯಾವೊಬ್ಬ ವ್ಯಕ್ತಿಯಿಂದ ರಾಜ್ಯ ಸರ್ಕಾರವು ಸ್ವೀಕರಿಸಬಹುದಾದ ಆಕ್ಷೇಪಣೆ ಮತ್ತು ಸಲಹೆಗಳನ್ನು, ರಾಜ್ಯ ಸರ್ಕಾರವು ಪರಿಗಣಿಸುವುದು. ಆಕ್ಷೇಪಣೆಗಳನ್ನು ಅಥವಾ ಸಲಹೆಗಳನ್ನು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬಹುಮಹಡಿಗಳ ಕಟ್ಟಡ, 3ನೇ ಹಂತ, 3ನೇ ಮಹಡಿ, ಡಾ|| ಅಂಬೇಡ್ಕರ್ ವೀದಿ, ಬೆಂಗಳೂರು-01, ಇವರಿಗೆ ಕಳುಹಿಸಲು ಕೋರಲಾಗಿದೆ.
ಕರಡು ನಿಯಮಗಳು
1.ಹೆಸರು ಮತ್ತು ಪ್ರಾರಂಭಿಕ:
1) ಈ ನಿಯಮಗಳನ್ನು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯತ್ ಕಛೇರಿ ಕಾರ್ಯವಿಧಾನ ಕೈಪಿಡಿ) ನಿಯಮಗಳು, 2024 ಎಂದು ಕರೆಯತಕ್ಕದ್ದು
2) ಇವು ರಾಜ್ಯಪತ್ರದಲ್ಲಿ ಅಂತಿಮವಾಗಿ ಪ್ರಕಟಿಸಿದ ದಿನಾಂಕದಿಂದ ಜಾರಿಗೆ ಬರುತ್ತದೆ.
2) ಪರಿಭಾಷೆಗಳು:
- ಅಧ್ಯಕ್ಷರು: ಎಂದರೆ ಗ್ರಾಮ ಪಂಚಾಯಿತಿ ಅಧ್ಯಕ್ಷರು.
- ಉಪಾಧ್ಯಕ್ಷರು ಎಂದರೆ ಗ್ರಾಮ ಪಂಚಾಯತಿ ಉಪಾಧ್ಯಕ್ಷರು.
- ಪಂಚಾಯಿತಿ ಅಭಿವೃದ್ಧಿ ಅಧಿಕಾರಿ: ಎಂದರೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ
- ಕಾರ್ಯದರ್ಶಿ: ಎಂದರೆ ಗ್ರಾಮ ಪಂಚಾಯತಿ ಕಾರ್ಯದರ್ಶಿ (ಗ್ರೇಡ್1 ಅಥವಾ ಗ್ರೇಡ್ 2).
- ದ್ವಿತೀಯ ದರ್ಜೆ ಲೆಕ್ಕ ಸಹಾಯಕರು: ಎಂದರೆ ಗ್ರಾಮ ಪಂಚಾಯಿತಿ ದ್ವಿತೀಯ ದರ್ಜೆ ಲೆಕ್ಕ ಸಹಾಯಕರು.
- ಅಧಿನಿಯಮ: ಎಂದರೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993.
- ಗ್ರಾಮಪಂಚಾಯಿತಿ: ಎಂದರೆ ಅಧಿನಿಯಮದ ಪ್ರಕರಣ ನಾಲ್ಕರಲ್ಲಿ ರಚಿತವಾದ ಗ್ರಾಮ ಪಂಚಾಯಿತಿ.
- ಸಾಮಾನ್ಯಸಭೆ: ಎಂದರೆ ಅಧಿನಿಯಮದ 52ನೇ ಪ್ರಕರಣದಡಿ ಕರೆಯಲಾಗುವ ಸಭೆ.
- ಸ್ಥಾಯಿ ಸಮಿತಿ: ಎಂದರೆ ಅಧಿನಿಯಮದ ಪ್ರಕರಣ 61ರಡಿ ರಚಿಸಲಾಗಿರುವ ಸಮಿತಿಗಳು.
- ಉಪ ಸಮತಿ: ಎಂದರೆ ಅಧಿನಿಯಮದ ಪ್ರಕರಣ 61(ಎ)ರಡಿ ರಚಿಸಲಾಗಿರುವ ಸಮಿತಿಗಳು.
- ಗ್ರಾಮ ಸಭೆ: ಎಂದರೆ ಅಧಿನಿಯಮದ ಪ್ರಕರಣ3(ಇ) ರಡಿ ಕರೆಯಲಾಗುವ ಸಭೆ.
- ವಾರ್ಡ್ ಸಭೆ:ಎಂದರೆ ಪ್ರಕರಣ 3(ಸಿ) ರಡಿ ಕರೆಯಲಾಗುವ ಸಭೆ.
- ಜನವಸತಿ ಸಭೆ:ಎಂದರೆ ಪ್ರಕರಣ 3(ಬಿ) ರಡಿ ಕರೆಯಲಾಗುವ ಸಭೆ.
- ಗ್ರಾಮ ಪಂಚಾಯಿತಿ ಸಿಬ್ಬಂದಿ:ಎಂದರೆ ಅಧಿನಿಯಮದ ಪ್ರಕರಣ 112 ರಡಿ ಸೃಜಿಸಲಾದ ಹುದ್ದೆಗಳ ಎದುರು ನೇಮಕವಾದ ಸಿಬ್ಬಂದಿಗಳು.
- ಕಟ್ಟಡ ಪರವಾನಗಿ:ಎಂದರೆ ಅಧಿನಿಯಮ ಪ್ರಕರಣ 64 ರಡಿ ನೀಡಲಾಗುವ ಪರವಾನಗಿ.
- ಕಾರ್ಖಾನೆ ಸ್ಥಾಪಿಸಲು ಅನುಮತಿ:ಎಂದರೆ ಅಧಿನಿಯಮ ಪ್ರಕರಣ 66 ರಡಿ ನೀಡಲಾಗುವ ಅನುಮತಿ.
- ವಾಣಿಜ್ಯ ಪರವಾನಗಿ: ಎಂದರೆ ಅಧಿನಿಯಮ ಪ್ರಕರಣ 68 ಮತ್ತು 69 ರಡಿ ನೀಡಲಾಗುವ ಪರವಾನಗಿ.
- ಇ-ಸ್ವತ್ತು: ಎಂದರೆ ಕರ್ನಾಟಕ ಪಂಚಾಯತ್ ರಾಜ್ (ಗ್ರಾಮ ಪಂಚಾಯಿತಿ ಆಯವ್ಯಯ ಮತ್ತು ಲೆಕ್ಕಪತ್ರ) ನಿಯಮಗಳು, 2006 ರಡಿ ಹೊರಡಿಸಿರುವ ಆದೇಶದಂತೆ ನೀಡಲಾಗುವ ತೆರಿಗೆ ಬೇಡಿಕೆ ಪತ್ರ.
- ಮುಟೇಷನ್: ಎಂದರೆ ಆಸ್ತಿ ವಹಿಯಲ್ಲಿ ಮಾಲೀಕನ ಹೆಸರು ಬದಲಾವಣೆ.
ವಿವಿಧ ಶಾಖೆಗಳು:
- 1.ಆಡಳಿತ ಶಾಖೆ: ಕಛೇರಿ– ಸಾಮಾನ್ಯ ಆಡಳಿತ, ಸಿಬ್ಬಂದಿ ವಿಷಯಗಳು, ಸಭೆಗಳು- ಸಾಮಾನ್ಯಸಭೆ, ಸ್ಥಾಯಿ ಸಮಿತಿ ಸಭೆ, ಕೆಡಿಪಿ ಸಭೆ, ಗ್ರಾಮ ಸಭೆ, ವಾರ್ಡ್ ಸಭೆ, ಜನವಸತಿ ಸಭೆ, ಸಭಾ ನಡವಳಿಗಳು ಇತ್ಯಾದಿ.
- 2.ಯೋಜನೆ ಮತ್ತು ಅಭಿವೃದ್ಧಿ ಶಾಖೆ: ದೂರದೃಷ್ಟಿ ಯೋಜನೆ, ಸಮಗ್ರ ಸಹಭಾಗಿ ವಾರ್ಷಿಕ ಕ್ರಿಯಾಯೋಜನೆ ತಯಾರಿಕೆ, ಯೋಜನೆಗಳ ಅನುಷ್ಠಾನ, ಮೇಲ್ವಿಚಾರಣೆ.
- 3.ಹಣಕಾಸು ಮತ್ತು ಲೆಕ್ಕಪತ್ರ ಶಾಖೆ:ಸ್ವಂತ ಸಂಪನ್ಮೂಲ ಸಂಗ್ರಹ – ತೆರಿಗೆ ನಿರ್ಧರಣೆ, ವಸೂಲಾತಿ, ಪರಿಷ್ಕರಣೆ, ಆಯವ್ಯಯ ತಯಾರಿಕೆ, ಖರ್ಚು ವೆಚ್ಚಗಳ ನಿರ್ವಹಣೆ, ಲೆಕ್ಕಪತ್ರ ನಿರ್ವಹಣೆ, ಲೆಕ್ಕಪರಿಶೋಧನೆ ಹಾಗೂ ಅನುಪಾಲನಾ ಕ್ರಮಗಳು, ಇತ್ಯಾದಿ.
- 4.ಸೇವಾ ಶಾಖೆ: ಬಾಪೂಜಿ ಸೇವಾ ಕೇಂದ್ರದ ಮೂಲಕ ನೀಡುವ ಸೇವೆಗಳು, ಇ-ಸ್ವತ್ತು ಸೇವೆಗಳು, ಸ್ವಚ್ಛತೆ, ಬೀದಿ ದೀಪಗಳು, ಕುಡಿಯುವ ನೀರು, ಆರೋಗ್ಯ, ಶಿಕ್ಷಣ, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇತ್ಯಾದಿ ಸೇವೆಗಳ ನಿರ್ವಹಣೆ
ಷರಾ–
1.ಮೇಲಿನ ಕ್ರಮ ಸಂಖ್ಯೆ: 1 ರಿಂದ 4 ರ ನಿರ್ವಹಣೆಯಲ್ಲಿ ಪಂಚತಂತ್ರ ಹಾಗೂ ಇನ್ನಿತರ ತಂತ್ರಾಂಶಗಳ ನೆರವನ್ನು ಪಡೆಯುವುದು.
2.ಪ್ರತಿಯೊಂದು ವಿಷಯಗಳಿಗೆ ಸಂಬಂಧಿಸಿದ ವಹಿಗಳನ್ನು ನಿರ್ವಹಿಸುವುದು.
3.ನಿಯಮಾನುಸಾರ ನಿಯತ ಕಾಲಿಕೆಗಳನ್ನು ಸೂಕ್ತ ಕಾಲದಲ್ಲಿ ರವಾನಿಸುವುದರ ಬಗ್ಗೆ ಖಾತರಿಪಡಿಸುವುದು.
4.ಮೇಲಿನ ಕ್ರಮಸಂಖ್ಯೆ: ರಿಂದ 4 ರಲ್ಲಿ ನಿರ್ದಿಷ್ಟಪಡಿಸಿದ ವಿಷಯಗಳನ್ನು ಹೊರತುಪಡಿಸಿ ಇತರ ವಿಷಯಗಳನ್ನು ಪಂಚಾಯತಿ ಅಭಿವೃದ್ಧಿ ಅಧಿಕಾರಿಯು ತನ್ನ ವಿವೇಚನಾನುಸಾರ ಸೂಕ್ತವೆನಿಸಿದ ಶಾಖೆಗಳಿಗೆ ಹಂಚಿಕೆ ಮಾಡುವುದು.
ತ್ರೀಪಾರ್ಶ್ವಕ ಸೂಚಕಾಕ್ಷರ Trilateral Index)
ಕಛೇರಿ ಕೆಲಸದ ಏಕರೂಪತೆಯನ್ನು ಸಾಧಿಸುವ ಸಲುವಾಗಿ ಇಲಾಖಾ ಮುಖ್ಯಸ್ಥರು ತಮ್ಮ ಇಲಾಖೆಯಲ್ಲಿ ಬಳಸುವ ಬಗ್ಗೆ, ಸೂಚ್ಯಾಕ್ಷರಗಳನ್ನು ನಿಗದಿ ಮಾಡಿರುತ್ತಾರೆ. ಪ್ರತಿಯೊಂದು ಉಪಭಾಗವನ್ನು ಮೂರು ಅಕ್ಷರಗಳನ್ನು ಹೊಂದಿರುವ ಸೂಚ್ಯಾಕ್ಷರಗಳ ಮುಖೇನ ಗುರುತಿಸಲಾಗುತ್ತದೆ. ಇವುಗಳನ್ನು ತ್ರಿಪಾರ್ಶ್ವಕ ಸೂಚ್ಯಾಕ್ಟರ ಎಂದು ಕರೆಯಲಾಗುವುದು. ಒಂದು ಇಲಾಖೆಗೆ ಸಂಬಂಧಿಸಿದ ನಮ್ಮ ರಾಜ್ಯದ ಎಲ್ಲಾ ಕಛೇರಿಗಳೂ ಇವೇ ಸೂಚ್ಯಾಕ್ಷರಗಳನ್ನು ಬಳಸಬೇಕು.
III.ಗ್ರಾಮ ಪಂಚಾಯಿತಿ ಸ್ವರೂಪ
IV.ಅಧ್ಯಕ್ಷರು/ಅಧಿಕಾರಿ/ಸಿಬ್ಬಂದಿಗಳ ಜವಾಬ್ದಾರಿಗಳು
1.ಗ್ರಾಮ ಪಂಚಾಯಿತಿಯ ಕಾರ್ಯನಿರ್ವಾಹಕ ಮುಖ್ಯಸ್ಥರು ಅಧ್ಯಕ್ಷರು
- ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದಲ್ಲಿ ನೀಡಲಾಗಿರುವ ಎಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸುವುದು.
- ಅಧ್ಯಕ್ಷರು ಗ್ರಾಮ ಪಂಚಾಯತಿಯ ಕಾರ್ಯನಿರ್ವಾಹಕ ಮುಖ್ಯಸ್ಥರಾಗಿ ತಮಗೆ ಸಲ್ಲಿಕೆಯಾಗುವ ಎಲ್ಲಾ ಕಡತಗಳನ್ನು ನಿಯಮಾನುಸಾರ ಕಾಲಮಿತಿಯಲ್ಲಿ ಇತ್ಯರ್ಥಗೊಳಿಸುವುದು.
- ಗ್ರಾಮ ಪಂಚಾಯತಿಯಲ್ಲಿ ಕಾರ್ಯನಿರ್ವಹಿಸುವ ಸರ್ಕಾರಿ ನೌಕರರನ್ನು ಒಳಗೊಂಡಂತೆ ಗ್ರಾಮ ಪಂಚಾಯತಿ ನೌಕರರ ಕಾರ್ಯಗಳ ಮೇಲೆ ಮೇಲ್ವಿಚಾರಣೆ ನಡೆಸತಕ್ಕದ್ದು ಮತ್ತು ನಿಯಂತ್ರಣವನ್ನು ಹೊಂದಿರತಕ್ಕದ್ದು.
- ಕಚೇರಿ ಮುಖ್ಯಾಧಿಕಾರಿ- ಪಂಚಾಯಿತಿ ಅಭಿವೃದ್ಧಿ ಅಧಿಕಾರಿ.
ಅಧ್ಯಕ್ಷರ ಸಾಮಾನ್ಯ ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಒಳಪಟ್ಟು :
- ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ ಮತ್ತು ಅದರಡಿಯಲ್ಲಿ ರಚಿತವಾಗಿರುವಂತಹ ನಿಯಮಗಳು, ಆದೇಶಗಳು ಹಾಗೂ ಸುತ್ತೋಲೆಗಳಲ್ಲಿ ನೀಡಲಾಗಿರುವ ಎಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸುವುದು.
- ಗ್ರಾಮ ಪಂಚಾಯಿತಿಗೆ ಸ್ವೀಕೃತಗೊಳ್ಳುವ ಎಲ್ಲಾ ಪತ್ರ/ಮನವಿ/ಅರ್ಜಿಗಳ ಮೇಲೆ ನಿಯಮಾನುಸಾರ ಕಾಲ ಮಿತಿಯಲ್ಲಿ ಸೂಕ್ತ ಕ್ರಮ ಜರುಗಿಸಿ ರವಾನಿಸಿರುವ ಬಗ್ಗೆ ಖಾತರಿಪಡಿಸಿಕೊಳ್ಳುವುದು.
- ಗ್ರಾಮ ಪಂಚಾಯಿತಿ ಕಛೇರಿಯಲ್ಲಿರುವ ಅಧೀನ ಅಧಿಕಾರಿ/ ಸಿಬ್ಬಂದಿಗಳು ಅವರುಗಳ ಕರ್ತವ್ಯವನ್ನು ಸಕಾಲಿಕವಾಗಿ ನಿರ್ವಹಿಸುತ್ತಿರುವುದನ್ನು ಖಾತರಿಪಡಿಸಿಕೊಳ್ಳುವುದು.
- ಕಾಗದ ಪತ್ರಗಳ ಜೋಡಣೆ ಸಮರ್ಪಕವಾಗಿರುವ ಬಗ್ಗೆ, ಅಗತ್ಯ ಕ್ರಮಕೈಗೊಳ್ಳುವುದು
- ಹಣಕಾಸು, ಲೆಕ್ಕಪರಿಶೋಧನೆ ಮತ್ತು ಯೋಜನಾ ಸ್ನಾಯಿಸಮಿತಿಯ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುವುದು.
- ಹಣಕಾಸು, ಲೆಕ್ಕಪರಿಶೋಧನೆ ಮತ್ತು ಯೋಜನಾ ಸ್ಥಾಯಿಸಮಿತಿಯ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುವುದು.
- ಇತರೆ ಸ್ಥಾಯಿ ಸಮಿತಿಯ ಕಾರ್ಯಸೂಚಿಯ ಕುರಿತಂತೆ ಅಧ್ಯಕ್ಷರೊಂದಿಗೆ ಪಂಚಾಯಿತಿ
- ಅಭಿವೃದ್ಧಿ ಅಧಿಕಾರಿರವರು ಚರ್ಚಿಸಿ ಅಂತಿಮಗೊಳಿಸುವುದು ಮತ್ತು ಇತರೆ ಸ್ಥಾಯಿ
- ಸಮಿತಿಗಳಲ್ಲಿ ಭಾಗವಹಿಸುವ ಅಧಿಕಾರವನ್ನು ಹೊಂದಿರುತ್ತಾರೆ.
- ಎಲ್ಲಾ ಸ್ಥಾಯಿ ಸಮಿತಿಗಳ ಕಾರ್ಯಸೂಚಿಗಳನ್ನು ಸಂಬಂಧಪಟ್ಟ ಅಧ್ಯಕ್ಷರೊಂದಿಗೆ ಚರ್ಚಿಸಿ ಅನುಮೋದನೆ ಪಡೆದು ಅಂತಿಮಗೊಳಿಸಬೇಕು.
- ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳು ಸೂಚಿಸುವ ಕೆಲಸಗಳನ್ನು ನಿರ್ವಹಿಸುವುದು.
- ಅಧೀನ ಸಿಬ್ಬಂದಿಗಳಿಗೆ ಕೆಲಸ ಕಾರ್ಯಗಳ ಕಾರ್ಯಹಂಚಿಕೆಯನ್ನು ಮಾಡುವುದು.
- ಸರ್ಕಾರವು ಕಾಲಕಾಲಕ್ಕೆ ಗ್ರಾಮ ಪಂಚಾಯತಿಗೆ ವಹಿಸುವ ಕಾರ್ಯಹಂಚಿಕೆ ಜವಾಬ್ದಾರಿಗಳನ್ನು ಅಧೀನ ಸಿಬ್ಬಂದಿಗಳ ಲಭ್ಯತೆ ಮೇರೆಗೆ ಸ್ಥಳೀಯ ಅಗತ್ಯತೆಗನುಗುಣವಾಗಿ ಕಛೇರಿ ಆದೇಶದ ಮೂಲಕ ನಿರ್ದಿಷ್ಟಪಡಿಸುವುದು.
- ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಎಲ್ಲಾ ರೀತಿಯ ಕಾಮಗಾರಿಗಳನ್ನು ಸ್ಥಳ ಪರಿಶೀಲಿಸಿ ಮೇಲ್ವಿಚಾರಣೆ ಮಾಡುವುದು.
- ಗ್ರಾಮ ಪಂಚಾಯತಿಯಲ್ಲಿ ಮೇಲೆ ತಿಳಿಸಿರುವ ಶಾಖೆಗಳನ್ನು ತನ್ನ ಅಧೀನ ಸಿಬ್ಬಂದಿಗಳಿಗೆ ಕಾರ್ಯಹಂಚಿಕೆ ಮಾಡುವುದು.
- ಸರ್ಕಾರ/ಇಲಾಖೆಯು ಕಾಲಕಾಲಕ್ಕೆ ಸೂಚಿಸುವಂತೆ ಮಾಹಿತಿ/ದಾಖಲೆಗಳನ್ನು ಪಂಚತಂತ್ರ 2.0 ತಂತ್ರಾಂಶದಲ್ಲಿ ಆರೋಹಿಸುವುದು.
ಗ್ರಾಮ ಪಂಚಾಯತಿ ಕಾರ್ಯದರ್ಶಿ (ಗ್ರೇಡ್-1/2):
ಅಧ್ಯಕ್ಷರ ಸಾಮಾನ್ಯ ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಒಳಪಟ್ಟು :
- ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ ಮತ್ತು ಅದರಡಿಯಲ್ಲಿ ರಚಿತವಾಗಿರುವಂತಹ ನಿಯಮಗಳು, ಆದೇಶಗಳು ಹಾಗೂ ಸುತ್ತೋಲೆಗಳಲ್ಲಿ ನೀಡಲಾಗಿರುವ ಎಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸುವುದು.
- ಗ್ರಾಮ ಪಂಚಾಯಿತಿಗೆ ಸ್ವೀಕೃತಗೊಳ್ಳುವ ಎಲ್ಲಾ ಪತ್ರ/ಮನವಿ/ಅರ್ಜಿಗಳಲ್ಲಿ ತನ್ನ ಶಾಖೆಗೆ ಸಂಬಂಧಿಸಿದವುಗಳ ಮೇಲೆ ನಿಯಮಾನುಸಾರ ಕಾಲಮಿತಿಯಲ್ಲಿ ಸೂಕ್ತ ಕ್ರಮ ಜರುಗಿಸಿರುವ ಬಗ್ಗೆ ಖಾತರಿಪಡಿಸಿಕೊಳ್ಳುವುದು.
- ಕಛೇರಿಯಲ್ಲಿ ಇತ್ಯರ್ಥವಾಗದೆ ಇರುವ ಪತ್ರ/ಕಡತಗಳ ಬಗ್ಗೆ ಸಂಬಂಧಿಸಿದ ವಿಷಯ ನಿರ್ವಾಹಕರಿಗೆ ಸಲಹೆ ಸೂಚನೆಗಳನ್ನು ನೀಡಿ ಇತ್ಯರ್ಥಗೊಳಿಸುವುದು.
- ನಿಯಮಾನುಸಾರ ನಿಯತಕಾಲಿಕೆಗಳನ್ನು ಸೂಕ್ತಕಾಲದಲ್ಲಿ ರವಾನಿಸುವುದರ ಬಗ್ಗೆ ಖಾತರಿಪಡಿಸುವುದು.
- ಸಾಮಾನ್ಯ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿಸಮಿತಿಗಳಿಗೆ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುವುದು.
- ವಿವಿಧ ಸಭೆಗಳ ನಡವಳಿಕೆ ಪುಸ್ತಕಗಳನ್ನು ನಿರ್ವಹಿಸುವುದು.
- ಸ್ವೀಕೃತಿಗೊಂಡ ಪತ್ರ/ಅರ್ಜಿ/ಮನವಿಗಳನ್ನು ವಿಷಯ ನಿರ್ವಾಹಕರ ವಹಿಯಲ್ಲಿ ದಾಖಲಿಸಿಕೊಳ್ಳುವುದು.
- ಪ್ರತಿಯೊಂದು ವಿಷಯಕ್ಕೆ ಪ್ರತ್ಯೇಕ ವಿಷಯ ಸಂಖ್ಯೆಯನ್ನು ನೀಡಿ ಆದ್ಯತೆಗೆ ಅನುಸಾರವಾಗಿ
- ಕಡತವನ್ನು ಟಿಪ್ಪಣಿಯೊಂದಿಗೆ ಸಮುಚಿತ ಮಾರ್ಗದ ಮೂಲಕ ಮುಖ್ಯಾಧಿಕಾರಿ/ಕಛೇರಿ ಕಾರ್ಯನಿರ್ವಾಹಕ ಮುಖ್ಯಸ್ಥರು/ಸಭೆಗೆ ಮಂಡಿಸುವುದು. ಕಛೇರಿ
- ಅಗತ್ಯವಿದ್ದಲ್ಲಿ ಸ್ಥಳ ಪರಿಶೀಲನೆ ಮಾಡಿ ಸಮುಚಿತ ಮಾರ್ಗದ ಮೂಲಕ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತರುವುದು.
- ವಿಷಯಕ್ಕೆ ಸಂಬಂಧಿಸಿದ ದಾಖಲೆಗಳ ಅಧಿಕಾರಿ (custodian of records) ಜವಾಬ್ದಾರಿಯನ್ನು ನಿರ್ವಹಿಸುವುದು.(ದಾಖಲೆಗಳನ್ನು ವಶದಲ್ಲಿ/ಸುಪರ್ದಿಯಲ್ಲಿಟ್ಟು ಕೊಳ್ಳುವುದು).
- ಕಾರ್ಯಾಲಯದ ಆದೇಶದಂತೆ ಸಂಪೂರ್ಣ ಪ್ರಭಾರವನ್ನು ಪಡೆಯುವುದು ಮತ್ತು ವರ್ಗಾವಣೆ ಸಂದರ್ಭದಲ್ಲಿ ಸಂಪೂರ್ಣ ಪ್ರಭಾರವನ್ನು ವಹಿಸುವುದು.
- ಪಂಚಾಯತಿ ಅಭಿವೃದ್ಧಿ ಅಧಿಕಾರಿಯು ಮಾಡುವ ಕಾರ್ಯಹಂಚಿಕೆಯ ಜವಾಬ್ದಾರಿಗಳನ್ನು ನಿರ್ವಹಿಸುವುದು.
- ಸರ್ಕಾರ/ಇಲಾಖೆಯು ಕಾಲಕಾಲಕ್ಕೆ ಸೂಚಿಸುವಂತೆ ಮಾಹಿತಿ/ದಾಖಲೆಗಳನ್ನು ಪಂಚತಂತ್ರ 2.0 ತಂತ್ರಾಂಶದಲ್ಲಿ ಆರೋಹಿಸುವುದು.
ದ್ವಿತೀಯ ದರ್ಜೆ ಲೆಕ್ಕ ಸಹಾಯಕರು:
ಅಧ್ಯಕ್ಷರ ಸಾಮಾನ್ಯ ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಒಳಪಟ್ಟು :
- ಕರ್ನಾಟಕ ಗ್ರಾಮಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ ಮತ್ತು ಅದರಡಿಯಲ್ಲಿ ರಚಿತವಾಗಿರುವಂತಹ ನಿಯಮಗಳು, ಆದೇಶಗಳು ಹಾಗೂ ಸುತ್ತೋಲೆಗಳಲ್ಲಿ ನೀಡಲಾಗಿರುವ ಎಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸುವುದು.
- ಗ್ರಾಮ ಪಂಚಾಯಿತಿಗೆ ಸ್ವೀಕೃತಗೊಳ್ಳುವ ಎಲ್ಲಾ ಪತ್ರ/ಮನವಿ/ಅರ್ಜಿಗಳಲ್ಲಿ ತನ್ನ ಶಾಖೆಗೆ ಸಂಬಂಧಿಸಿದವುಗಳ ಮೇಲೆ ನಿಯಮಾನುಸಾರ ಕಾಲಮಿತಿಯಲ್ಲಿ ಸೂಕ್ತ ಕ್ರಮ ಜರುಗಿಸಿರುವ ಬಗ್ಗೆ ಖಾತರಿಪಡಿಸಿಕೊಳ್ಳುವುದು.
- ವಾರ್ಷಿಕ ಆಯವ್ಯಯವನ್ನು ಸಿದ್ದಪಡಿಸುವುದು, ಕೆಟಿಪಿಪಿ ನಿಯಮದಂತೆ ಟೆಂಡರ್/ಟೆಂಡರ್ ನಿರ್ವಹಣೆ.
- ಗ್ರಾಮ ಪಂಚಾಯಿತಿ ಆಯವ್ಯಯ ಮತ್ತು ಲೆಕ್ಕಪತ್ರಗಳ ನಿಯಮದಂತೆ ನಿರ್ದಿಷ್ಟಪಡಿಸಿರುವ ದಾಖಲೆ ಮತ್ತು ವಹಿಗಳನ್ನು ನಿರ್ವಹಿಸುವುದು.
- ಸ್ವೀಕೃತಿಗೊಂಡ ಪತ್ರ/ಅರ್ಜಿ/ಮನವಿಗಳನ್ನು ವಿಷಯ ನಿರ್ವಾಹಕರ ವಹಿಯಲ್ಲಿ ದಾಖಲಿಸಿಕೊಳ್ಳುವುದು.
- ಪ್ರತಿಯೊಂದು ವಿಷಯಕ್ಕೆ ಪ್ರತ್ಯೇಕ ವಿಷಯ ಸಂಖ್ಯೆಯನ್ನು ನೀಡಿ ಆದ್ಯತೆಗೆ ಅನುಸಾರವಾಗಿ ಕಡತವನ್ನು ಟಿಪ್ಪಣಿಯೊಂದಿಗೆ ಸಮುಚಿತ ಮಾರ್ಗದ ಮೂಲಕ ಕಛೇರಿ ಮುಖ್ಯಾಧಿಕಾರಿ/ಕಛೇರಿ ಕಾರ್ಯನಿರ್ವಾಹಕ ಮುಖ್ಯಸ್ಥರು/ಸಭೆಗೆ ಮಂಡಿಸುವುದು. ಅಗತ್ಯವಿದ್ದಲ್ಲಿ ಸ್ಥಳ ಪರಿಶೀಲನೆ ಮಾಡಿ ಸಮುಚಿತ ಮಾರ್ಗದ ಮೂಲಕ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತರುವುದು.
- ಲೆಕ್ಕ ಶಾಖೆಯ ವಿಷಯಗಳಿಗೆ ಸಂಬಂಧಿಸಿದಂತೆ ದಾಖಲೆಗಳ ಅಧಿಕಾರಿ (custodian of records) ಜವಾಬ್ದಾರಿಯನ್ನು ನಿರ್ವಹಿಸುವುದು.
- ಕಾರ್ಯಾಲಯದ ಆದೇಶದಂತೆ ಸಂಪೂರ್ಣ ಪ್ರಭಾರವನ್ನು ಪಡೆಯುವುದು ಮತ್ತು ವರ್ಗಾವಣೆ ಸಂದರ್ಭದಲ್ಲಿ ಸಂಪೂರ್ಣ ಪ್ರಭಾರವನ್ನು ವಹಿಸುವುದು.
- ಅಭಿಲೇಖಾಲಯ ನಿರ್ವಹಣೆ ಜವಾಬ್ದಾರಿಯನ್ನು ನಿರ್ವಹಿಸುವುದು.
- ಪಂಚಾಯತಿ ಅಭಿವೃದ್ಧಿ ಅಧಿಕಾರಿಯು ಮಾಡುವ ಕಾರ್ಯಹಂಚಿಕೆಯ ಜವಾಬ್ದಾರಿಗಳನ್ನು ನಿರ್ವಹಿಸುವುದು.
- ಸರ್ಕಾರ/ಇಲಾಖೆಯು ಕಾಲಕಾಲಕ್ಕೆ ಸೂಚಿಸುವಂತೆ ಮಾಹಿತಿ/ದಾಖಲೆಗಳನ್ನು ಪಂಚತಂತ್ರ 2.0 ತಂತ್ರಾಂಶದಲ್ಲಿ ಆರೋಹಿಸುವುದು.
5.ಕರವಸೂಲಿಗಾರ
- ಆಡಳಿತ ಮತ್ತು ಸೇವೆಗಳ ವಿಷಯಗಳಿಗೆ ಸಂಬಂಧಿಸಿದ ಕಾರ್ಯನಿರ್ವಹಣೆಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ/ಕಾರ್ಯದರ್ಶಿ/ದ್ವಿ.ದ.ಲೆ.ಸಹಾಯಕರವರಿಗೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುವುದು.
- ಪಂಚಾಯತಿ ಅಭಿವೃದ್ಧಿ ಅಧಿಕಾರಿಯು ಮಾಡುವ ಕಾರ್ಯಹಂಚಿಕೆಯ ಜವಾಬ್ದಾರಿಗಳನ್ನು ನಿರ್ವಹಿಸುವುದು.
6.ಕ್ಲರ್ಕ್ ಕಂ ಡೇಟಾ ಎಂಟ್ರಿ ಆಪರೇಟರ್
- ಆಡಳಿತ ಮತ್ತು ಸೇವೆಗಳ ವಿಷಯಗಳಿಗೆ ಸಂಬಂಧಿಸಿದ ಕಾರ್ಯನಿರ್ವಹಣೆಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ/ಕಾರ್ಯದರ್ಶಿ/ದ್ವಿ.ದ.ಲೆ.ಸಹಾಯಕರವರಿಗೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುವುದು.
- ಪಂಚಾಯತಿ ಅಭಿವೃದ್ಧಿ ಅಧಿಕಾರಿಯು ಮಾಡುವ ಕಾರ್ಯಹಂಚಿಕೆಯ ಜವಾಬ್ದಾರಿಗಳನ್ನು ನಿರ್ವಹಿಸುವುದು.
7.ವಾಟರ್ ಮ್ಯಾನ್ /ನೀರುಗಂಟಿ
- ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ತನಗೆ ವಹಿಸಿದ ಪ್ರದೇಶದಲ್ಲಿ ನೀರು ಸರಬರಾಜು ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸುವುದು.
- ಗ್ರಾಮ ಪಂಚಾಯಿತಿ ವಹಿಸಬಹುದಾದ ಬಹು ಉದ್ದೇಶಿತ ಕಾರ್ಯಗಳ ನಿರ್ವಹಣೆ.
- ಪಂಚಾಯತಿ ಅಭಿವೃದ್ಧಿ ಅಧಿಕಾರಿಯು ಮಾಡುವ ಕಾರ್ಯಹಂಚಿಕೆಯ ಜವಾಬ್ದಾರಿಗಳನ್ನು ನಿರ್ವಹಿಸುವುದು.
6.ಸ್ವಚ್ಛತಾಗಾರರು
- ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸುವುದು.
- ಸದರಿ ಪ್ರದೇಶದಲ್ಲಿ ಉತ್ಪಾದನೆಯಾಗುವಂತಹ ಒಣಕಸ ಹಾಗೂ ಹಸಿ ಕಸವನ್ನು ವಿಂಗಡಿಸಿ, ಕಸವನ್ನು ಘನ ತ್ಯಾಜ್ಯ ವಿಲೆವಾರಿ ಘಟಕಕ್ಕೆ ರವಾನಿಸುವುದು/ ಮೇಲ್ವಿಚಾರಣೆ ಮಾಡುವುದು.
- ಪಂಚಾಯತಿ ಅಭಿವೃದ್ಧಿ ಅಧಿಕಾರಿಯು ಮಾಡುವ ಕಾರ್ಯಹಂಚಿಕೆಯ ಜವಾಬ್ದಾರಿಗಳನ್ನು ನಿರ್ವಹಿಸುವುದು.
9.ಗ್ರಂಥಾಲಯ ಮೇಲ್ವಿಚಾರಕರು.
- ಕಾಲಕಾಲಕ್ಕೆ ನಿಯಮಗಳಲ್ಲಿ ನಿರ್ದಿಷ್ಟ ಪಡಿಸಿರುವ ವಹಿಗಳನ್ನು ನಿರ್ವಹಿಸುವುದು.
- ಸರ್ಕಾರ ಕಾಲಕಾಲಕ್ಕೆ ಹೊರಡಿಸುವ ಕಾರ್ಯ ಹಂಚಿಕೆಯ ಜವಾಬ್ದಾರಿಗಳನ್ನು ಕಾಲಮಿತಿಯಲ್ಲಿ ನಿರ್ವಹಿಸುವುದು.
V. ತ್ರಿಪಾರ್ಶ್ವಕ ಸೂಚಕಾಕ್ಷರ (Trilateral Index)
ಕಛೇರಿ ಕೆಲಸದ ಏಕರೂಪತೆಯನ್ನು ಸಾಧಿಸುವ ಸಲುವಾಗಿ ಇಲಾಖಾ ಮುಖ್ಯಸ್ಥರಿಂದ ತಮ್ಮ ಇಲಾಖೆಯಲ್ಲಿ ಬಳಸುವ ಬಗ್ಗೆ ಸೂಚಕಾಕ್ಷರಗಳನ್ನು ನಿಗದಿಪಡಿಸಲಾಗುತ್ತದೆ. ಪ್ರತಿಯೊಂದು ಉಪಭಾಗವನ್ನು ಮೂರು ಅಕ್ಷರಗಳನ್ನು ಹೊಂದಿರುವ ಸೂಚಕಾಕ್ಷರದ ಮುಖೇನ ಗುರುತಿಸಲಾಗುತ್ತದೆ. ಇವುಗಳನ್ನು ತ್ರಿಪಾರ್ಶ್ವಕ ಸೂಚಕಾಕ್ಷರ ಎಂದು ಕರೆಯಲಾಗುವುದು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದ ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್ ಕಛೇರಿಗಳೂ ಇವೇ ಸೂಚಕಾಕ್ಷರಗಳನ್ನು ಬಳಸುವುದು.
ಕಡತಗಳಿಗೆ ತ್ರಿಪಾರ್ಶ್ವಕ ಸೂಚಕಾಕ್ಷರ (Trilateral Index) ನೀಡುವುದು
ಕಡತ ಸಂಖ್ಯೆ ಸರಳೀಕರಣಗೊಳಿಸಲು ಮೊದಲು ರಾಜ್ಯದಲ್ಲಿರುವ ಎಲ್ಲಾ 5951 ಗ್ರಾಮ ಪಂಚಾಯಿತಿಗಳಿಗೆ ತ್ರಿಪಾರ್ಶ್ವಕ ಸೂಚಕಾಕ್ಷರ (Trilateral Index)ವನ್ನು ಅಧಿಕೃತವಾಗಿ ದೃಢೀಕರಿಸಬೇಕು. ಹೀಗೆ ಗೊತ್ತುಪಡಿಸಿದ ಅಕ್ಷರವೇ ಸಂಬಂಧಿಸಿದ ಗ್ರಾಮ ಪಂಚಾಯಿತಿಯ ಪ್ರತಿ ಕಡತದ ಸಂಖ್ಯೆಯು ಅಂತಹ ತ್ರಿಪಾರ್ಶ್ವಕ ಸೂಚಕಾಕ್ಷರ (Trilateral Index) ದಿಂದಲೇ ಪ್ರಾರಂಭಗೊಳ್ಳುವುದು ಕಡ್ಡಾಯವಾಗಿರಬೇಕು.
ಉದಾಹರಣೆಗೆ:
ಪ್ರತಿ ಜಿಲ್ಲೆಯಲ್ಲಿರುವ ಎಲ್ಲಾ ಗ್ರಾಮ ಪಂಚಾಯಿತಿಗಳ ಮೊದಲ ಅಕ್ಷರ ಆ ಜಿಲ್ಲೆಯ ಹೆಸರನ್ನು ಸೂಚಿಸುವಂತಿರಬೇಕು (ಉದಾ:ಮೈಸೂರು ಜಿಲ್ಲೆ-ಮೈ). ನಂತರದ ಅಕ್ಷರ ತಾಲ್ಲೂಕನ್ನು ಸೂಚಿಸಬೇಕು (ಉದಾ:ಪಿರಿಯಾಪಟ್ಟಣ ತಾಲ್ಲೂಕು-ಪಿ). ಕೊನೆಯಲ್ಲಿ ಗ್ರಾಮ ಪಂಚಾಯಿತಿಯ ಹೆಸರಿನ ಮೊದಲ ಅಕ್ಷರ ಇರಬೇಕು (ಉದಾ: ಭುವನಹಳ್ಳಿ ಗ್ರಾಮ ಪಂಚಾಯಿತಿ – ‘ಭು’)
ಅಂದರೆ ಮೈಸೂರು ಜಿಲ್ಲೆ, ಪಿರಿಯಾಪಟ್ಟಣ ತಾಲ್ಲೂಕು, ಭುವನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಿರ್ವಹಿಸುವ ಪ್ರತೀ ಕಡತದ ಸಂಖ್ಯೆಯು ‘ಮೈಪಿಭು’ ತ್ರಿಪಾರ್ಶ್ವಕ ಸೂಚಕಾಕ್ಷರ (Trilateral Index) ದಿಂದ ಪ್ರಾರಂಭಗೊಳ್ಳಬೇಕು.
ಜಿಲ್ಲೆಗಳನ್ನು ಸೂಚಿಸುವ ಮೊದಲನೇ ಅಕ್ಷರವನ್ನು ಹಾಗೂ ತಾಲ್ಲೂಕುಗಳನ್ನು ಸೂಚಿಸುವ ಎರಡನೇ ಅಕ್ಷರವನ್ನು ಈ ಕೆಳಕಂಡ ಕೋಷ್ಟಕದಲ್ಲಿ ನೀಡಲಾಗಿರುತ್ತದೆ. ಗ್ರಾಮ ಪಂಚಾಯಿತಿಗಳನ್ನು ಸೂಚಿಸುವ ಪ್ರತ್ಯೇಕ ಒಂದು ಅಕ್ಷರವನ್ನು ಸಂಬಂಧಪಟ್ಟ ಜಿಲ್ಲಾ ಪಂಚಾಯಿತಿ ಅಭಿಪ್ರಾಯಿಸುವ ಒಂದು ಅಕ್ಷರದಿಂದ ಗುರುತಿಸಬಹುದು.
ಹೀಗೆ ಮಾಡುವುದರಿಂದ, ಅದರಲ್ಲೂ ರಾಜ್ಯದಲ್ಲಿರುವ ಎಲ್ಲಾ 5951 ಗ್ರಾಮ ಪಂಚಾಯ್ತಿಗಳಿಗೆ ತ್ರಿಪಾರ್ಶ್ವಕ ಸೂಚಕಾಕ್ಷರ (Trilateral Index)ವನ್ನು, ಪ್ರತಿ ಗ್ರಾಮ ಪಂಚಾಯ್ತಿಯ ಆಡಳಿತದಲ್ಲಿ ವ್ಯವಹರಿಸುವ ವಿಷಯಗಳನ್ನು ಅಥವಾ ವಿಷಯಗಳ ಭಾಗಗಳನ್ನು ತ್ರಿಪಾರ್ಶ್ವಕ ಸೂಚಕಾಕ್ಷರ (Trilateral Index)ದ ಮೂಲಕ ನಿರ್ದಿಷ್ಟಪಡಿಸಿ ಕನ್ನಡ ಮತ್ತು ಆಂಗ್ಲಭಾಷೆಯಲ್ಲಿ ರಾಜ್ಯಸರ್ಕಾರವೇ ಅಧಿಕೃತವಾಗಿ ಅಧಿಸೂಚಿಸಿದಲ್ಲಿ ಗ್ರಾಮ ಪಂಚಾಯಿತಿಗಳು ನಿರ್ವಹಿಸುವ ಕಡತಗಳಿಗೆ ಕೇವಲ ಸಂಖ್ಯೆಯನ್ನು ಮಾತ್ರ ನೀಡುವ ಕೆಲಸ ಉಳಿಯುತ್ತದೆ. ಒಂದು ವೇಳೆ e-Office ಮೂಲಕ ಕಡತ ನಿರ್ವಹಣೆಯಾದಲ್ಲಿ ಕಡತಗಳಿಗೆ ಸಂಖ್ಯೆ ನೀಡುವ ಕೆಲಸವೂ System auto generation ಮೂಲಕ ಆಗುತ್ತದೆ.
ಇದರಿಂದ ರಾಜ್ಯಾದಾದ್ಯಂತ ಎಲ್ಲಾ ಗ್ರಾಮ ಪಂಚಾಯಿತಿಗಳನ್ನು e-Office ಮೂಲಕ ವ್ಯವಹರಣೆಗೆ ಒಳಪಡಿಸಲು ಅನುಕೂಲವಾಗುತ್ತದೆ.
ಮೇಲಿನ ಎಲ್ಲಾ ವಿಷಯಗಳನ್ನು ಒಂದು ಉದಾಹರಣೆಯ ಮೂಲಕ ಕೆಳಕಂಡಂತೆ ವಿವರಿಸಬಹುದು.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕು ಭುವನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಿರ್ವಹಿಸಬಹುದಾದ ಕಡತಗಳ ಸಂಖ್ಯೆಯನ್ನು ಕೆಳಕಂಡಂತೆ ವಿವರಿಸಬಹುದು. (ಕಡತ ಸಂಖ್ಯೆಯನ್ನು 123 ಎಂದು ಉದಾಹರಣೆಗಾಗಿ ನೀಡಿದೆ ಅಂದರೆ 123 ಎಂಬುದು ವಿಷಯವಹಿ(Case registerನಲ್ಲಿರುವ ಒಂದು ಸಂಖ್ಯೆ)
ಗ್ರಾಮ ಪಂಚಾಯಿತಿ ಹಂತದಲ್ಲಿ ಹೊಂದಬಹುದಾದ ಮಾದರಿ ಶಾಖೆಗಳು:
ಆಡಳಿತಶಾಖೆ-(ಆಶಾ)
-ಸಿಬ್ಬಂದಿ ಸೇವಾ ವಿಷಯಗಳು (ವೇತನ), ಚುನಾವಣೆ, ನ್ಯಾಯಾಲಯದ ಪ್ರಕರಣಗಳು, ಸಾರ್ವಜನಿಕ ಕುಂದುಕೊರತೆ ನಿವಾರಣಾ ವಿಷಯಗಳು, ಮಾಹಿತಿಹಕ್ಕು, ಗ್ರಂಥಾಲಯ (ಅರಿವುಕೇಂದ್ರ), ಚುನಾಯಿತಿ ಪ್ರತಿನಿಧಿಗಳಿಗೆ ಸಂಬಂಧಿಸಿದ ವಿಷಯಗಳು ಹಾಗೂ ಇನ್ನಿತರೆ ಸಾಮಾನ್ಯ ಆಡಳಿತ ವಿಷಯಗಳು.
ಯೋಜನೆ ಮತ್ತು ಅಭಿವೃದ್ಧಿ (ಯೋಷಿಅ)
ದೂರದೃಷ್ಟಿ ಯೋಜನೆ. ವಾರ್ಷಿಕ ಕ್ರಿಯಾ ಯೋಜನೆಗಳು (GPDP/IPAAP), ಸಭೆಗಳು (ಸಾಮಾನ್ಯ ಸಭೆ, ವಿಶೇಷ ಸಭೆ, ಸ್ಥಾಯಿಸಮಿತಿ, ಜನವಸತಿ/ವಾರ್ಡ್/ಗ್ರಾಮ ಸಭೆ ಇತ್ಯಾದಿ), ಅಭಿವೃದ್ಧಿ, ಯೋಜನೆಗಳ ಅನುಷ್ಠಾನ, ಕೂಸಿನಮನೆ ನಿರ್ವಹಣೆ ಮತ್ತು ಯೋಜನೆ ಹಾಗೂ ಅಭಿವೃದ್ಧಿಗೆ ಸಂಬಂಧಿಸಿದ ಇತರೆ ವಿಷಯಗಳು.
ಹಣಕಾಸು ಮತ್ತು ಲೆಕ್ಕಪತ್ರ ನಿರ್ವಹಣೆ (ಹಲೆನಿ)-
ಆಯವ್ಯಯ, ಸ್ವಂತ ಸಂಪನ್ಮೂಲ ವಿಷಯಗಳು, ಲೆಕ್ಕಪತ್ರ ನಿರ್ವಹಣೆ, ಖರೀದಿ ಪ್ರಕ್ರಿಯೆಗಳು/ಸಂಗ್ರಹಣೆ, ಲೆಕ್ಕಪರಿಶೋಧನೆ, ಅನುಪಾಲನಾವರದಿ, ಮತ್ತು ಹಣಕಾಸು ವಿಷಯಕ್ಕೆ ಸಂಬಂಧಿಸಿದ ಇನ್ನಿತರೆ ಎಲ್ಲಾ ವಿಷಯಗಳು.
ಸೇವೆಗಳು– ಬಾಪೂಜಿ ಸೇವಾಕೇಂದ್ರ (ಸಕಾಲಸೇವೆಗಳು), ಸಿಟಿಜನ್ ಚಾರ್ಟರ್.
ಸಂಪೂರ್ಣ ಕರಡು ಅಧಿಸೂಚನೆ ವೀಕ್ಷಿಸಲು- CLICK HERE