Karnataka Judicial Service Recruitment Rules 2004 Amendment: ಕರ್ನಾಟಕ ನ್ಯಾಯಾಂಗ ಸೇವಾ ನೇಮಕಾತಿ ನಿಯಮಗಳು 2004 ತಿದ್ದುಪಡಿ ಕರಡು ಪ್ರಕಟ – ಆಕ್ಷೇಪಣೆ ಹಾಗೂ ಸಲಹೆಗಳಿಗೆ ಆಹ್ವಾನ

Karnataka Judicial Service Recruitment Rules 2004 Amendment: ಕರ್ನಾಟಕ ನ್ಯಾಯಾಂಗ ಸೇವಾ ನೇಮಕಾತಿ ನಿಯಮಗಳು 2004 ತಿದ್ದುಪಡಿ ಕರಡು ಪ್ರಕಟ – ಆಕ್ಷೇಪಣೆ ಹಾಗೂ ಸಲಹೆಗಳಿಗೆ ಆಹ್ವಾನ

Karnataka Judicial Service Recruitment Rules 2004 Amendment: ಕರ್ನಾಟಕ ನ್ಯಾಯಾಂಗ ಸೇವಾ ನೇಮಕಾತಿ ನಿಯಮಗಳು 2004ಕ್ಕೆ ಸಂಬಂಧಿಸಿದ ತಿದ್ದುಪಡಿ ಕರಡು ಪ್ರಕಟಿಸಲಾಗಿದೆ. 17-12-2025ರ ಕರ್ನಾಟಕ ಗ್ಯಾಜೆಟ್‌ನಲ್ಲಿ ಪ್ರಕಟಗೊಂಡ ಈ ಕರಡು ಕುರಿತು ಸಾರ್ವಜನಿಕರಿಂದ 15 ದಿನಗಳೊಳಗೆ ಆಕ್ಷೇಪಣೆ ಹಾಗೂ ಸಲಹೆಗಳನ್ನು ಆಹ್ವಾನಿಸಲಾಗಿದೆ. ಸಂಪೂರ್ಣ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

ಅಧಿಸೂಚನೆ

ಕರ್ನಾಟಕ ನ್ಯಾಯಾಂಗ ಸೇವಾ (ನೇಮಕಾತಿ) ನಿಯಮಗಳು, 2004 ನ್ನು ಮತ್ತಷ್ಟು ತಿದ್ದುಪಡಿ ಮಾಡುವುದಕ್ಕೆ ದಿನಾಂಕ: 17.12.2025 ರ ಅಧಿಸೂಚನೆ ಸಂಖ್ಯೆ ಲಾ-ಎಲ್ ಎಸಿ/126/2025 ರಲ್ಲಿ ಪ್ರಕಟಿಸಿರುವ ಈ ಮುಂದಿನ ನಿಯಮಗಳ ಕರಡನ್ನು ಅಧಿಕೃತ ರಾಜ್ಯಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ 15 ದಿನಗಳೊಳಗಾಗಿ ಅದರಿಂದ ಬಾಧಿತರಾಗುವ ಸಂಭವವಿರುವ ಎಲ್ಲಾ ವ್ಯಕ್ತಿಗಳಿಂದ ಆಕ್ಷೇಪಣೆಗಳನ್ನು ಮತ್ತು ಸಲಹೆಗಳನ್ನು ಆಹ್ವಾನಿಸಿ ದಿನಾಂಕ: 17.12.2025 ರ ಕರ್ನಾಟಕ ರಾಜ್ಯಪತ್ರದ ಭಾಗ IV-2 ರಲ್ಲಿ ಪ್ರಕಟಿಸಲಾಗಿರುವುದರಿಂದ;

ಸದರಿ ರಾಜ್ಯಪತ್ರವನ್ನು ದಿನಾಂಕ: 17.12.2025 ರಂದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿರುವುದರಿಂದ; ಮತ್ತು ಸದರಿ ಕರಡು ನಿಯಮಗಳ ಬಗ್ಗೆ ಆಕ್ಷೇಪಣೆ ಮತ್ತು ಸಲಹೆಗಳು ಸ್ವೀಕೃತವಾಗಿದ್ದು ಅವುಗಳನ್ನು ರಾಜ್ಯ ಸರ್ಕಾರವು ಪರಿಗಣಿಸಿರುವುದರಿಂದ;

ಈಗ ಕರ್ನಾಟಕ ರಾಜ್ಯ ನಾಗರಿಕ ಸೇವಾ ಅಧಿನಿಯಮ, 1978 (1990 ರ ಕರ್ನಾಟಕ ಅಧಿನಿಯಮ 14)ರ 8ನೇ ಪ್ರಕರಣದೊಂದಿಗೆ ಓದಲಾದ 3ನೇ ಪ್ರಕರಣದ (1)ನೇ ಉಪ-ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಕಂಡ ನಿಯಮಗಳನ್ನು ರಚಿಸುತ್ತದೆ, ಎಂದರೆ:-

1. ಶೀರ್ಷಿಕೆ ಮತ್ತು ಪ್ರಾರಂಭ.- (1) ಈ ನಿಯಮಗಳನ್ನು ಕರ್ನಾಟಕ ನ್ಯಾಯಾಂಗ ಸೇವಾ (ನೇಮಕಾತಿ) (ತಿದ್ದುಪಡಿ) ನಿಯಮಗಳು, 2025 ಎಂದು ಕರೆಯತಕ್ಕದ್ದು.

(2) ಇವು ಅಧಿಕೃತ ರಾಜ್ಯಪತ್ರದಲ್ಲಿ ಅಂತಿಮವಾಗಿ ಪ್ರಕಟಣೆಗೊಂಡ ದಿನಾಂಕದಿಂದ ಜಾರಿಗೆ ಬರತಕ್ಕದ್ದು.

2. ನಿಯಮ 2ಕ್ಕೆ ಪ್ರತ್ಯಾಯೋಜನೆ.- ಕರ್ನಾಟಕ ನ್ಯಾಯಾಂಗ ಸೇವಾ (ನೇಮಕಾತಿ) ನಿಯಮಗಳು, 2004ರಲ್ಲಿ (ಇನ್ನು ಮುಂದೆ ಇದನ್ನು ಸದರಿ ನಿಯಮಗಳು ಎಂದು ಉಲ್ಲೇಖಿಸಲಾಗಿದೆ), ನಿಯಮ 2ರ ಬದಲಾಗಿ ಈ ಕೆಳಗಿನವುಗಳನ್ನು ಪ್ರತ್ಯಾಯೋಜಿಸತಕ್ಕದ್ದು, ಎಂದರೆ:-

“2. ಪರಿಭಾಷೆಗಳು.-

ಈ ನಿಯಮಗಳಲ್ಲಿ, ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು-

(ಎ) “ದೇಶ” ಎಂದರೆ, ಭಾರತ;

(ಬಿ) “ಸರ್ಕಾರ” ಎಂದರೆ, ಕರ್ನಾಟಕ ಸರ್ಕಾರ;

(ಸಿ) “ರಾಜ್ಯಪಾಲ” ಎಂದರೆ, ಕರ್ನಾಟಕದ ರಾಜ್ಯಪಾಲರು;

(ಡಿ) “ಉಚ್ಚ ನ್ಯಾಯಾಲಯ” ಎಂದರೆ, ಕರ್ನಾಟಕ ಉಚ್ಚ ನ್ಯಾಯಾಲಯ;

(ಇ) “ಉಚ್ಚ ನ್ಯಾಯಾಲಯಗಳು” ಎಂದರೆ, ಭಾರತದಲ್ಲಿನ ಯಾವುದೇ ಉಚ್ಚ ನ್ಯಾಯಾಲಯಗಳು;

(ಎಫ್) “ಎಲ್‌ಡಿಸಿಇ” ಎಂದರೆ, ಸೀಮಿತ ಇಲಾಖಾ ಸ್ಪರ್ಧಾತ್ಮಕ ಪರೀಕ್ಷೆ;

ಜಿ) “ಅಧಿಕಾರಿ” ಎಂದರೆ, ಕರ್ನಾಟಕ ನ್ಯಾಯಾಂಗ ಸೇವೆಯಲ್ಲಿರುವ ಅಧಿಕಾರಿ;

(ಎಚ್) “ಅಧಿಕೃತ ರಾಜ್ಯಪತ್ರ” ಎಂದರೆ, ಕರ್ನಾಟಕ ರಾಜ್ಯಪತ್ರ;

(ಐ) “ನೇಮಕಾತಿ ಪ್ರಾಧಿಕಾರ” ಎಂದರೆ, ಕರ್ನಾಟಕ ಉಚ್ಚ ನ್ಯಾಯಾಲಯ;

(ಜೆ) “ಸೇವೆ” ಎಂದರೆ, ಕರ್ನಾಟಕ ನ್ಯಾಯಾಂಗ ಸೇವೆ; ಮತ್ತು

(ಕೆ) “ರಾಜ್ಯ” ಎಂದರೆ, ಕರ್ನಾಟಕ ರಾಜ್ಯ.”

3. ನಿಯಮ 4ಕ್ಕೆ ತಿದ್ದುಪಡಿ.- ಸದರಿ ನಿಯಮಗಳ 4ನೇ ನಿಯಮದಲ್ಲಿ, ಕೋಷ್ಠಕ ಮತ್ತು ಅದಕ್ಕೆ ಸಂಬಂಧಪಟ್ಟ ನಮೂದುಗಳ ಬದಲಾಗಿ ಈ ಮುಂದಿನ ಕೋಷ್ಠಕವನ್ನು ಪ್ರತ್ಯಾಯೋಜಿಸತಕ್ಕದ್ದು, ಎಂದರೆ:-

Karnataka Judicial Service Recruitment

 

CLICK HERE TO DOWNLOAD COMPLETE NOTIFICATION

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!