Draft Rules: Karnataka Civil Services (Classification, Control and Appeal) (Amendment) Rules, 2025.

Karnataka Civil
Services (Classification, Control and Appeal) (Amendment) Rules, 2025.

 

Karnataka Civil
Services (Classification, Control and Appeal) (Amendment) Rules, 2025.: ಕರ್ನಾಟಕ ರಾಜ್ಯ ನಾಗರಿಕ ಸೇವಾ ಅಧಿನಿಯಮ, 1978 (1990ರ ಕರ್ನಾಟಕ ಅಧಿನಿಯಮ 14)ರ 8ನೇ ಪ್ರಕರಣದೊಂದಿಗೆ ಓದಲಾದ, 3ನೇ ಪ್ರಕರಣದಲ್ಲಿ (1)ನೇ ಉಪ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ನ್ನು ಮತ್ತಷ್ಟು ತಿದ್ದುಪಡಿ ಮಾಡುವ ಈ ಮುಂದಿನ ನಿಯಮಗಳ ಕರಡನ್ನು ಸದರಿ ಅಧಿನಿಯಮ 3 ನೇ ಪ್ರಕರಣದ (2)ನೇ ಉಪ ಪ್ರಕರಣ (ಎ) ಖಂಡದ ಮೂಲಕ ಅಗತ್ಯಪಡಿಸಲಾದಂತೆ, ಅದು ಅಧಿಕೃತ ರಾಜ್ಯ ಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ ಹದಿನೈದು ದಿನಗಳ ತರುವಾಯ ಪರಿಗಣನೆಗೆ ತೆಗೆದುಕೊಳ್ಳಲಾಗುವುದೆಂದು ಈ ಮೂಲಕ ತಿಳಿಸಲಾಗಿದೆ.

 

ಸದರಿ ಕರಡು ಅಧಿಸೂಚನೆಗೆ ಸಂಬಂಧಿಸಿದಂತೆ, ಮೇಲೆ ನಿಗದಿಪಡಿಸಿದ ಅವಧಿಯು ಮುಕ್ತಾಯವಾಗುವುದಕ್ಕೆ ಮೊದಲು ಯಾರೇ ವ್ಯಕ್ತಿಯಿಂದ ಸ್ವೀಕರಿಸಬಹುದಾದ ಯಾವುದೇ ಆಕ್ಷೇಪಣೆ ಮತ್ತು ಸಲಹೆಯನ್ನು ರಾಜ್ಯ ಸರ್ಕಾರವು ಪರಿಗಣಿಸುವುದು. ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಸರ್ಕಾರದ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ವಿಧಾನಸೌಧ, ಬೆಂಗಳೂರು-560001 ಇವರಿಗೆ ಕಳುಹಿಸಬಹುದು.

 

ಕರಡು ನಿಯಮಗಳು

 

1.ಶೀರ್ಷಿಕೆ ಮತ್ತು ಪ್ರಾರಂಭ:- (1) ಈ ನಿಯಮಗಳನ್ನು ಕರ್ನಾಟಕ ನಾಗರಿಕ ಸೇವಾ

 

(ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) (ತಿದ್ದುಪಡಿ) ನಿಯಮಗಳು, 2024 ಎಂದು ಕರೆಯತಕ್ಕದ್ದು.

 

(2) ಅವುಗಳು 1ನೇ ಜುಲೈ 2022 ರಿಂದ ಜಾರಿಗೆ ಬಂದಿವೆ ಎಂದು ಭಾವಿಸತಕ್ಕದ್ದು.

 

2.5 ನೇ ನಿಯಮದ ತಿದ್ದುಪಡಿ:- ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು

 

ಮೇಲ್ಮನವಿ) ನಿಯಮಗಳು, 1957ರ (ಇಲ್ಲಿ ಇನ್ನು ಮುಂದೆ ಸದರಿ ನಿಯಮಗಳೆಂದು ಉಲ್ಲೇಖಿಸಲಾಗಿದೆ) 5 ನೇ ನಿಯಮದಲ್ಲಿ (3)ನೇ ಉಪನಿಯಮದ ಬದಲಾಗಿ ಈ ಮುಂದಿನದನ್ನು ಪ್ರತಿಸ್ಥಾಪಿಸತಕ್ಕದ್ದು:-

 

“3. ರಾಜ್ಯ ಸಿವಿಲ್ ಸೇವೆಗಳು

 

(ಎ ) ಸಮೂಹ “ಎ” ಯು ರೂ . 83700-1900-85600-2300-99400-2700-115600-3100-134200-3500-155200 ರ ಮತ್ತು ಅದಕ್ಕೂ ಮೇಲ್ಪಟ್ಟ ವೇತನ ಶ್ರೇಣಿಗಳನ್ನು ಹೊಂದಿರುವ ಹುದ್ದೆಗಳನ್ನು ಒಳಗೊಂಡಿರತಕ್ಕದ್ದು.

 

(ಬಿ ) ಸಮೂಹ “ಬಿ ” ಯು ರೂ 65950-1650-74200-1900-85600-2300-99400-2700-115600-3100-124900ರ ಮತ್ತು ಅದಕ್ಕೂ ಮೇಲ್ಪಟ್ಟ ವೇತನ ಶ್ರೇಣಿಗಳನ್ನು ಆದರೆ, ರೂ.83700-1900-85600-2300-99400-2700-115600-3100-134200-3500-155200 ಕ್ಕಿಂತ ಕೆಳಗಿನ ವೇತನ ಶ್ರೇಣಿಗಳನ್ನು ಒಳಗೊಂಡಿರತಕ್ಕದ್ದು.

 

(ಬಿ ) ಸಮೂಹ “ಬಿ ” ಯು ರೂ 34100-800-35700-900-39300-1000-43300-1125-47800-1250-52800-1375-58300-1500-64300-1650-676000 ವೇತನ ಶ್ರೇಣಿಗಿಂತ ಮೇಲ್ಪಟ್ಟ ವೇತನ ಶ್ರೇಣಿಗಳನ್ನು ಆದರೆ ರೂ 65950-1650-74200-1900-85600-2300-99400-2700-115600-3100-124900 ಕ್ಕಿಂತ ಕೆಳಗಿನ ವೇತನ ಶ್ರೇಣಿಯನ್ನು ಹೊಂದಿರುವ, ಆದರೆ, ಅನುಸೂಚಿ-IV ರಲ್ಲಿನಿರ್ದಿಷ್ಟಪಡಿಸಿರುವ ಹುದ್ದೆಗಳನ್ನು ಹೊರತುಪಡಿಸಿದ ಹುದ್ದೆಗಳನ್ನು ಒಳಗೊಂಡಿರತಕ್ಕದ್ದು.

 

(ಡಿ) ಸಮೂಹ “ಡಿ” ಯು ಅನುಸೂಚಿ- IV ರಲ್ಲಿ ನಿರ್ದಿಷ್ಟಪಡಿಸಿರುವ ಹುದ್ದೆಗಳನ್ನು ಮತ್ತು ರೂ. 27000-650-29600-725-32500-800-35700-900-39300-1000-43300-1125-46675 ಕ್ಕಿಂತ ಮೇಲ್ಪಟ್ಟ ವೇತನ ಶ್ರೇಣಿಗಳನ್ನು ಆದರೆ ರೂ 34100-800-35700-900-39300-1000-43300-1125-47800-1250-52800-1375-58300-1500-64300-1650-67600 ಕ್ಕಿಂತ ವೇತನ ಶ್ರೇಣಿಯನ್ನು ಹೊಂದಿರುವ ಹುದ್ದೆಗಳನ್ನು ಒಳಗೊಂಡಿರತಕ್ಕದ್ದು.

 

ವಿವರಣೆ: ಈ ಉಪನಿಯಮದ ಉದ್ದೇಶಗಳಿಗಾಗಿ “ವೇತನ ಶ್ರೇಣಿ” ಎಂದರೆ ಕರ್ನಾಟಕ ಸಿವಿಲ್ ಸೇವಾ (ಪರಿಷ್ಕೃತ ವೇತನ) ನಿಯಮಗಳು, 2024 ರಲ್ಲಿ ಮತ್ತು ಅದಕ್ಕೆ ಸಂಬಂಧಿಸಿದ ಆದೇಶಗಳಲ್ಲಿ ಹೇಳಿರುವ ವಿವಿಧ ಹುದ್ದೆಗಳಿಗೆ ಸಂಬಂಧಿಸಿದಂತೆ ನಿಗದಿಪಡಿಸಿದ ಪರಿಷ್ಕೃತ ವೇತನ ಶ್ರೇಣಿ.

 

3.9ನೇ ನಿಯಮದ ತಿದ್ದುಪಡಿ: ಸದರಿ ನಿಯಮಗಳ 9ನೇ ನಿಯಮದ (2)ನೇ ಉಪನಿಯಮದಲ್ಲಿ i) (ಬಿಬಿ) ಖಂಡದಲ್ಲಿ “90500 – 123300 ರೂ.ಗಳಿಗಿಂತ ಕಡಿಮೆಯಿಲ್ಲದ’ ಎಂಬ ಪದಗಳಿಗೆ ಮತ್ತು ಅಂಕಿಗಳಿಗೆ ಬದಲಾಗಿ “ರೂ.144700 197200ಗಳಿಗಿಂತ ಕಡಿಮೆಯಿಲ್ಲದ” ಎಂಬ ಪದಗಳನ್ನು ಮತ್ತು ಅಂಕಿಗಳನ್ನು ಮತ್ತು “ರೂ.56800-99600ಗಳಿಗಿಂತ ಹೆಚ್ಚಲ್ಲದ” ಎಂಬ ಪದಗಳಿಗೆ ಮತ್ತು ಅಂಕಿಗಳಿಗೆ ಬದಲಾಗಿ “ರೂ. 90200 -159200ಗಳಿಗಿಂತ ಹೆಚ್ಚಲ್ಲದ” ಎಂಬ ಪದಗಳನ್ನು ಮತ್ತು ಅಂಕಿಗಳನ್ನು ಪ್ರತಿಸ್ಥಾಪಿಸತಕ್ಕದ್ದು.

 

(ii) (ಬಿಬಿಬಿ) ಖಂಡದಲ್ಲಿ 90500 – 123300ರೂ.ಗಳಿಗಿಂತ ಕಡಿಮೆ” ಎಂಬ ಪದಗಳಿಗೆ ಮತ್ತು ಅಂಕಿಗಳಿಗೆ ಬದಲಾಗಿ “ರೂ. 144700 -197200ಗಳಿಗಿಂತ ಕಡಿಮೆ” ಎಂಬ ಪದಗಳನ್ನು ಮತ್ತು ಅಂಕಿಗಳನ್ನು ಪ್ರತಿಸ್ಟಾಪಿಸತಕ್ಕದ್ದು.

 

(iii) (ಬಿಬಿಬಿ-1) ಖಂಡದಲ್ಲಿ -74400 -109600ರ ವೇತನ ಶ್ರೇಣಿಯಲ್ಲಿರುವ” ಎಂಬ ಪದಗಳಿಗೆ ಮತ್ತು ಅಂಕಿಗಳಿಗೆ ಬದಲಾಗಿ “ರೂ. 118700-175200ರ ವೇತನ ಶ್ರೇಣಿಯಲ್ಲಿರುವ ಎಂಬಪದಗಳನ್ನು ಮತ್ತು ಅಂಕಿಗಳನ್ನು ಪ್ರತಿಸ್ಥಾಪಿಸತಕ್ಕದ್ದು.

 

4.10ನೇ ನಿಯಮದ ತಿದ್ದುಪಡಿ: ಸದರಿ ನಿಯಮಗಳ 10ನೇ ನಿಯಮದ (8)ನೇ ಉಪ ನಿಯಮದಲ್ಲಿನ ಕ್ರಮ ಸಂಖ್ಯೆ (10) ರಲ್ಲಿನ 74400-109600 ಎಂಬ ಅಂಕಿಗಳ ಬದಲಾಗಿ 118700-175200 ಎಂಬ ಅಂಕಿಗಳನ್ನು ಪ್ರತಿಷ್ಠಾಪಿಸತಕ್ಕದ್ದು.

CLICK  HERE TO DOWNLOAD DRAFT RULES

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

error: Content is protected !!