KAS EXAM-2024: KEY ANSWERS FOR FOR GAZETTED PROBATIONERS PRELIMINARY RE-EXAM HELD ON 29-12-2024
2024 ಡಿಸೆಂಬರ್-29 ರಂದು ನಡೆದಿದ್ದ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಮರುಪರೀಕ್ಷೆಯ (Question Paper) ಪ್ರಶ್ನೆಪತ್ರಿಕೆಗೆ KPSC ಇದೀಗ Official Key Ans. ಪ್ರಕಟಿಸಿದ್ದು, ಆಕ್ಷೇಪಣೆಗಳಿದ್ದರೆ 2025 ಜನವರಿ-22 ರೊಳಗಾಗಿ ಪ್ರತಿ ಪ್ರಶ್ನೆಗೆ 50/- ನಂತೆ ಹಣ ಪಾವತಿಸಿ, ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ.
ಅಭ್ಯರ್ಥಿಗಳಿಗೆ ಸೂಚನೆಗಳು:
ಆಯೋಗವು ದಿನಾಂಕ:29-12-2024ರಂದು ನಡೆಸಿದ 2023-24ನೇ ಸಾಲಿನ ಗೆಜೆಟೆಡ್ ಪ್ರೊಬೆಷನರ್ ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ (ಆರ್.ಪಿ.ಸಿ.ವೃಂದ ಮತ್ತು ಹೈ.ಕ. ವೃಂದ) ಪೂರ್ವಭಾವಿ ಮರುಪರೀಕ್ಷೆಯ ಪತ್ರಿಕೆ-I (ವಿಷಯ ಸಂಕೇತ-589) ಮತ್ತು ಪತ್ರಿಕೆ-II (ವಿಷಯ ಸಂಕೇತ-590)ರ ಕೀ-ಉತ್ತರಗಳನ್ನು ಆಯೋಗದ ಜಾಲತಾಣದಲ್ಲಿ ಪ್ರಕಟಿಸಲಾಗಿರುತ್ತದೆ.
ಅಭ್ಯರ್ಥಿಗಳು ಸದರಿ “ಕೀ ಉತ್ತರಗಳಿಗೆ ಆಕ್ಷೇಪಣೆಗಳನ್ನು ದಿನಾಂಕ:22-01-2025ರಂದು ಸಂಜೆ 5-30 ರೊಳಗಾಗಿ ಪರೀಕ್ಷಾ ನಿಯಂತ್ರಕರು, ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗಸೌಧ, ಬೆಂಗಳೂರು-560001 ಈ ವಿಳಾಸಕ್ಕೆ ಮಾತ್ರ ತಲುಪುವಂತೆ ಕಳುಹಿಸತಕ್ಕದ್ದು. ಆಕ್ಷೇಪಣೆಗಳನ್ನು ಸ್ವೀಕರಿಸುವ ಕೊನೆಯ ದಿನಾಂಕ: 22-01-2025ರ ಸಂಜೆ 5:30 ಆಗಿದ್ದು, ಈ ಅವಧಿಯ ನಂತರ ಸ್ವೀಕೃತವಾಗುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.” ಅಭ್ಯರ್ಥಿಗಳ ಆಕ್ಷೇಪಣೆಗಳು ಅಂಚೆಯ ಮೂಲಕ ಆಯೋಗಕ್ಕೆ ತಲುಪಲು ವಿಳಂಬವಾದಲ್ಲಿ ಕೆ.ಪಿ.ಎಸ್.ಸಿ.ಯು ಜವಾಬ್ದಾರಿಯಾಗಿರುವುದಿಲ್ಲ.
1) ಆಕ್ಷೇಪಣೆಗಳನ್ನು ಕಡ್ಡಾಯವಾಗಿ ಆಯೋಗದ ಜಾಲತಾಣದಲ್ಲಿ ಪ್ರಕಟಿಸಿರುವ ನಮೂನೆಯಲ್ಲಿಯೇ (ಕನ್ನಡ ಅಥವಾ ಇಂಗ್ಲೀಷ್) ಸಲ್ಲಿಸಬೇಕು.
2) ಆಕ್ಷೇಪಣೆಗಳನ್ನು ಸಲ್ಲಿಸುವ ಪ್ರತಿ ಪ್ರಶ್ನೆಗೆ ರೂ.50/-ರಂತೆ ಶುಲ್ಕವನ್ನು (ಐ.ಪಿ.ಓ ಅಥವಾ ಡಿ.ಡಿ. ಮೂಲಕ) ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗಸೌಧ, ಬೆಂಗಳೂರು, ಇವರ ಹೆಸರಿಗೆ ಸಂದಾಯ ಮಾಡಬೇಕು.
3) ಶುಲ್ಕ ಸಂದಾಯ ಮಾಡದ ಆಕ್ಷೇಪಣಾ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
4) ಪ್ರತಿ ಪ್ರಶ್ನೆಯ ಕೀ ಉತ್ತರಕ್ಕೆ ಸಲ್ಲಿಸುವ ಆಕ್ಷೇಪಣೆಗಳಿಗೆ ಪೂರಕವಾಗಿ ಸಲ್ಲಿಸುವ ದಾಖಲೆಗಳಿಗೆ ಸಂಬಂಧಿಸಿದಂತೆ ಲೇಖಕರ ಹೆಸರು, ಪ್ರಕಾಶನದ ಪ್ರತಿ ಇತ್ಯಾದಿ ವಿವರಗಳನ್ನು ಆಕ್ಷೇಪಣೆಗಳೊಂದಿಗೆ ನಿಗದಿತ ನಮೂನೆಯಲ್ಲಿ ನಮೂದಿಸತಕ್ಕದ್ದು.
5) ದಾಖಲೆಗಳನ್ನು ನಿಗದಿತ ನಮೂನೆಯಲ್ಲಿ ಸಲ್ಲಿಸದ ಆಕ್ಷೇಪಣೆಗಳನ್ನು ತಿರಸ್ಕರಿಸಲಾಗುವುದು.
6) ದಾಖಲೆಗಳ ಪ್ರತಿ ಪುಟದ ಮೇಲೆ ಪ್ರಶ್ನೆ ಸಂಖ್ಯೆ ಮತ್ತು ನೋಂದಣಿ ಸಂಖ್ಯೆಯನ್ನು ಕಡ್ಡಾಯವಾಗಿ ಬರೆಯತಕ್ಕದ್ದು.
7) ಆಕ್ಷೇಪಣೆಯೊಂದಿಗೆ ಅಭ್ಯರ್ಥಿಯು ದೃಢೀಕರಿಸಿದ ಪ್ರವೇಶ ಪತ್ರದ ಪ್ರತಿಯನ್ನು ಪರಿಶೀಲನೆಗಾಗಿ ಲಗತ್ತಿಸಬೇಕು.
Paper-1 & 2 ಎರಡೂ ಪತ್ರಿಕೆಗಳ ಕೀ ಉತ್ತರಗಳು & ಎರಡೂ ಪತ್ರಿಕೆಗೆ Objection Format ಎಲ್ಲವೂ ಇಲ್ಲಿ ಒಂದೆಡೆ ನೀಡಲಾಗಿದೆ.
CLICK HERE TO DOWNLOAD KEY ANSWERS WITH OBJECTION FORMAT