Master Mitra

KCSR RULE-32: ಶಾಲಾ ಶಿಕ್ಷಣ ಇಲಾಖೆಯ ಗ್ರೂಪ್-ಬಿ ಮುಖ್ಯ ಶಿಕ್ಷಕರು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳನ್ನು KCSR ನಿಯಮ-32ರಡಿ ಶಿಕ್ಷಣಾಧಿಕಾರಿ ವೃಂದದಲ್ಲಿ ಸ್ವತಂತ್ರ ಪ್ರಭಾರದಲ್ಲಿರಿಸಲು ಕೌನ್ಸಿಲಿಂಗ್ ನಡೆಸುವ ಬಗ್ಗೆ

KCSR RULE-32  ಸ್ವತಂತ್ರ ಪ್ರಭಾರ.

KCSR RULE-32- ಶಾಲಾ ಶಿಕ್ಷಣ ಇಲಾಖೆಯ ಗ್ರೂಪ್-ಬಿ ಮುಖ್ಯ ಶಿಕ್ಷಕರು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳನ್ನು ಕನಾಸೇ ನಿಯಮ-32ರಡಿ ಶಿಕ್ಷಣಾಧಿಕಾರಿ ವೃಂದದಲ್ಲಿ ಸ್ವತಂತ್ರ ಪ್ರಭಾರದಲ್ಲಿರಿಸಲು ಕೌನ್ಸಿಲಿಂಗ್ ನಡೆಸುವ ಬಗ್ಗೆ.

ವಿಷಯಕ್ಕೆ ಸಂಬಂಧಿಸಿದಂತೆ, ಗ್ರೂಪ್-ಬಿ ಮುಖ್ಯ ಶಿಕ್ಷಕರು ಹಾಗೂ ತತ್ಸಮಾನ ವೃಂದದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 78 ಅಧಿಕಾರಿಗಳಿಗೆ ಶಿಕ್ಷಣಾಧಿಕಾರಿ ಹಾಗೂ ತತ್ಸಮಾನ ವೃಂದಕ್ಕೆ ಕರ್ನಾಟಕ ನಾಗರೀಕ ಸೇವಾ ನಿಯಮಗಳು, 1958ರ ನಿಯಮ-32ರಡಿ ಸ್ವತಂತ್ರ ಪ್ರಭಾರದಲ್ಲಿರಿಸಲು ಅನುವಾಗುವಂತೆ, ಖಾಲಿ ಇರುವ ಹುದ್ದೆಗಳನ್ನು ಪರಿಗಣನೆಗೆ ತೆಗೆದುಕೊಂಡು ಪ್ರಾಶಸ್ತ್ರದಂತೆ ಹುದ್ದೆಗಳನ್ನು ಕೌನ್ಸಲಿಂಗ್ ನಡೆಸಿ ಸ್ಥಳ ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸುವಂತೆ ಉಲ್ಲೇಖಿತ ಪತ್ರದಲ್ಲಿ ನಿರ್ದೇಶಿಸಲಾಗಿರುತ್ತದೆ.

ಅದರನ್ವಯ, ಪ್ರಸ್ತುತ ದಿನಾಂಕಕ್ಕೆ ಖಾಲಿ ಇರುವ ಹುದ್ದೆಗಳನ್ನು ಪರಿಗಣಿಸಿ ಸರ್ಕಾರದ ನಿರ್ದೇಶನದಂತೆ ಈ ಪತ್ರದೊಂದಿಗೆ ಅನುಬಂಧಿಸಲಾದ ಅಧಿಕಾರಿಗಳಿಗೆ ಹುದ್ದೆಗಳ ಪ್ರಾಶಸ್ತ್ರದಂತೆ ಸ್ಥಳ ಆಯ್ಕೆ ಮಾಡಿಕೊಳ್ಳಲು ಅನುವಾಗುವಂತೆ ದಿನಾಂಕ: 21.12.2024ರಂದು ಪೂರ್ವಾಹ್ನ 10:30ಕ್ಕೆ ಶಿಕ್ಷಕರ ಕಲ್ಯಾಣ ನಿಧಿ, ಶಿಕ್ಷಕರ ಸಧನ, ಕೆ ಜಿ ರಸ್ತೆ, ಬೆಂಗಳೂರು ಇಲ್ಲಿ ನಡೆಯಲಿರುವ ಕೌನ್ಸಿಲಿಂಗ್ ಪ್ರಕ್ರಿಯೆಗೆ ಕಡ್ಡಾಯವಾಗಿ ಭಾವಚಿತ್ರ ಸಹಿತ ಗುರುತಿನ ದಾಖಲೆಯೊಂದಿಗೆ ಹಾಜರಾಗಲು ತಿಳಿಸಿದ ಬಗ್ಗೆ ಆದೇಶ.

 

CLICK HERE TO DOWNLOAD ORDER

 

Exit mobile version