KGID NEW NOTIFICATION RELEASED
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕಡ್ಡಾಯ ಜೀವ ವಿಮಾ [ KGID] ಕನಿಷ್ಠ ಮಾಸಿಕ ಮೊಬಲಗನ್ನು ನಿಗದಿ ಮಾಡಿ ರಾಜ್ಯ ಸರ್ಕಾರ ಆದೇಶವನ್ನು ಪ್ರಕಟಿಸಿದೆ.ವೇತನ ಶ್ರೇಣಿಗನುಗುಣವಾಗಿ ವಿಮಾ ಕಂತು ನಿಗದಿ ಮಾಡಿ ಇದೀಗ ಅಧಿಸೂಚನೆ ಹೊರಡಿಸಿದೆ.
ಕರ್ನಾಟಕ ನಾಗರೀಕ ಸೇವಾ (ಪರಿಷ್ಕೃತ ವೇತನ) ನಿಯಮಗಳು 2022 ರನ್ವಯ ಕರ್ನಾಟಕ ಸರ್ಕಾರಿ ನೌಕರರು ಪಾವತಿಸಬೇಕಾದ ಕನಿಷ್ಠ ಮಾಸಿಕ ವಿಮಾ ಕಂತಿನ ದರದ ನಿಗದಿಪಡಿಸಿದ ಬಗ್ಗೆ.
ಕರ್ನಾಟಕ ರಾಜ್ಯ ಸಿವಿಲ್ ಸೇವಾ ಅಧಿನಿಯಮ, 1978 ರ (1990 ರ ಕರ್ನಾಟಕ ಅಧಿನಿಯಮ 14) ರ 3 ನೇ ಪ್ರಕರಣದ (2) ನೇ ಉಪ ಪ್ರಕರಣದ ಪರಂತುಕದೊಡನೆ ಓದಿಕೊಂಡು ಅದೇ 3 ನೇ ಪ್ರಕರಣದ (1)ನೇ ಉಪ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಮೂಲಕ ಕರ್ನಾಟಕ ಸರ್ಕಾರಿ ನೌಕರರ (ಕಡ್ಡಾಯ ಜೀವ ವಿಮಾ) ನಿಯಮಗಳು, 1958 ಕ್ಕೆ ಮತ್ತಷ್ಟು ತಿದ್ದುಪಡಿ ಮಾಡಲು ಈ ಕೆಳಕಂಡ ನಿಯಮಗಳನ್ನು ಈ ಮೂಲಕ ರಚಿಸಿದೆ, ಅಂದರೆ:-
1) ಶೀರ್ಷಿಕೆ ಮತ್ತು ಪ್ರಾರಂಭ:- (1) ಈ ನಿಯಮಗಳನ್ನು ಕರ್ನಾಟಕ ಸರ್ಕಾರಿ ನೌಕರರ (ಕಡ್ಡಾಯ ಜೀವ ವಿಮಾ) (ತಿದ್ದುಪಡಿ) ನಿಯಮಗಳು, 2024 ಎಂದು ಕರೆಯತಕ್ಕದ್ದು.
(2) ಈ ನಿಯಮಗಳು 2024 ರ ಅಗಸ್ಟ್ ಒಂದನೇ ದಿನಾಂಕದಿಂದ ಜಾರಿಗೆ ಬಂದಿರುವುದಾಗಿ ಭಾವಿಸತಕ್ಕದ್ದು.
ನಿಯಮ 8 ರ ತಿದ್ದುಪಡಿ:- ಕರ್ನಾಟಕ ಸರ್ಕಾರಿ ನೌಕರರ (ಕಡ್ಡಾಯ ಜೀವ ವಿಮಾ) ನಿಯಮಗಳು 1958 ರ, ನಿಯಮ 8 ರ ‘ಕೋಷ್ಟಕ’ ದಲ್ಲಿ ಮತ್ತು ಅದಕ್ಕೆ ಸಂಬಂಧಪಟ್ಟ ನಮೂದುಗಳನ್ನು ಈ ಕೆಳಕಂಡಂತೆ ಪ್ರತಿಸ್ಥಾಪಿಸತಕ್ಕದ್ದು, ಅಂದರೆ:
ಯಾವ ಶ್ರೇಣಿಗೆ ಎಷ್ಟು ಕಂತು? ಇಲ್ಲಿದೆ ಸಂಪೂರ್ಣ ಮಾಹಿತಿ.
ಕ್ರ.ಸಂ | ವೇತನ ಶ್ರೇಣಿ (ರೂ.ಗಳಲ್ಲಿ) | ಕನಿಷ್ಠ ಮಾಸಿಕ ವಿಮಾ ಕಂತಿನ ಮೊಬಲಗು (ರೂ.ಗಳಲ್ಲಿ) |
01 | 27000-46675 | 2300 |
02 | 29600-52800 | 2580 |
03 | 31775-61300 | 2910 |
04 | 34100-67600 | 3180 |
05 | 37500-76100 | 3550 |
06 | 41300-81800 | 3850 |
07 | 44425-83700 | 4000 |
08 | 49050-92500 | 4420 |
09 | 54175-99400 | 4800 |
10 | 58300-107500 | 5180 |
11 | 61300-112900 | 5440 |
12 | 65950-124900 | 5960 |
13 | 69250-134200 | 6360 |
14 | 72550-141200 | 6680 |
15 | 78000-148200 | 7070 |
16 | 83700-155200 | 7470 |
17 | 90200-159200 | 7790 |
18 | 97100-163200 | 8130 |
19 | 107500-167200 | 8580 |
20 | 112900-171200 | 8880 |
21 | 118700-175200 | 9180 |
22 | 131100-188200 | 9980 |
23 | 144700-197200 | 10680 |
24 | 155200-226200 | 11920 |
25 | 167200-241200 | 12760 |