KREIS: WEIGHTAGE TEACHERS KREIS TET EXAM NOTIFICATION OUT-2025
KREIS: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿರುವ ಶಿಕ್ಷಣ ಸಂಸ್ಥೆಗಳಲ್ಲಿ ಸೇವಾ ಕೃಪಾಂಕದ ಮೇಲೆ ನೇಮಕಾತಿ ಹೊಂದಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಟಿಇಟಿ (ಶಿಕ್ಷಕರ ಅರ್ಹತಾ ಪರೀಕ್ಷೆ) ಮಾದರಿಯ ಅರ್ಹತಾ ಪರೀಕ್ಷೆ ನಿಗದಿಯಾಗಿದೆ. ಇದಕ್ಕಾಗಿ ಸಂಘವು ಅಧಿಸೂಚನೆ ಹೊರಡಿಸಿದೆ.
ಸಂಘದ ಅಧೀನದ ಶಿಕ್ಷಣ ಸಂಸ್ಥೆಗಳಲ್ಲಿ ಈ ಹಿಂದೆ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡು, ಬಳಿಕ ಸೇವಾ ಕೃಪಾಂಕದ ಆಧಾರದಲ್ಲಿ ಕಾಯಂ ಸೇವೆ ಸಲ್ಲಿಸುತ್ತಿರುವ ಅಭ್ಯರ್ಥಿಗಳಲ್ಲಿ ಹಲವರು ಸಾಮಾನ್ಯ ಟಿಇಟಿಯಲ್ಲಿ ಅರ್ಹತೆ ಗಳಿಸಿದ್ದಾರೆ. ಆದರೆ, ಈವರೆಗೂ ಟಿಇಟಿಯಲ್ಲಿ ಅರ್ಹತೆ ಗಳಿಸದ ಅಭ್ಯರ್ಥಿಗಳನ್ನು ಗುರಿಯಾಗಿಸಿಕೊಂಡು ಈ ಪರೀಕ್ಷೆ ನಡೆಸಲಾಗುತ್ತದೆ. ಇದರಲ್ಲಿ ಅರ್ಹತೆ ಪಡೆದ ನಂತರವೇ ಅವರ ಪರಿವೀಕ್ಷಣಾ ಅವಧಿಯನ್ನು ಘೋಷಿಸಲಾಗುತ್ತದೆ. ಈ ಪರೀಕ್ಷೆಯು ಬೋಧಕರ ಕಾಯಂ ಪೂರ್ವ ಅವಧಿ ಘೋಷಣೆಗೆ ಮಾತ್ರ ಮಾನ್ಯತೆ ಹೊಂದಿದೆ ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.
▪️ಪರಿವೀಕ್ಷಣಾ ಅವಧಿ ಘೋಷಣೆಗೆ ಅರ್ಹತೆ ಪಡೆಯುವುದು ಕಡ್ಡಾಯ.
▪️ಎರಡು ಬಾರಿ ಮಾತ್ರ ಕಾಲಾವಕಾಶ ನೀಡಲು ಸಂಘದ ತೀರ್ಮಾನ.
ಪರೀಕ್ಷೆ ಸ್ವರೂಪ:
ಆ.24ರ ಬೆಳಗ್ಗೆ 10.30ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಸ್ವರೂಪ ಪರೀಕ್ಷೆ ನಡೆಸಲಾಗುತ್ತದೆ. 6ರಿಂದ 10ನೇ ತರಗತಿ ಬೋಧಿಸುವ ಶಿಕ್ಷಕರಿಗಾಗಿ ಪರೀಕ್ಷೆ ನಡೆಯಲಿದ್ದು, ಒಟ್ಟು 150 ಅಂಕಗಳಿಗೆ 150 ಪ್ರಶ್ನೆಗಳಿಗೆ ಉತ್ತರಿಸಬೇಕಿರುತ್ತದೆ. ಋಣಾತ್ಮಕ ಮೌಲ್ಯಮಾಪನ ಇರುವುದಿಲ್ಲ ಎಂದು ತಿಳಿಸಲಾಗಿದೆ. ಭಾಷೆ-1 ಹಾಗೂ ಭಾಷೆ-2 ವಿಷಯಗಳು ತಲಾ 30 ಅಂಕಗಳನ್ನು ಹೊಂದಿದ್ದು, ಕಡ್ಡಾಯವಾಗಿವೆ. ಶಿಶು ವಿಕಸನ ಹಾಗೂ ಬೋಧನಾ ಕ್ರಮ 30 ಅಂಕ, ಗಣಿತ ಮತ್ತು ವಿಜ್ಞಾನ ವಿಷಯಗಳು ವಿಜ್ಞಾನ ಶಿಕ್ಷಕರಿಗಾಗಿ ಹಾಗೂ ಸಮಾಜ ಪಾಠಗಳು ಮತ್ತು ಸಮಾಜ ವಿಜ್ಞಾನ ವಿಷಯಗಳು ಸಮಾಜ ವಿಜ್ಞಾನ ಶಿಕ್ಷಕರಿಗಾಗಿದ್ದು, ತಲಾ 60 ಪ್ರಶ್ನೆಗಳನ್ನು 60 ಅಂಕಗಳಿಗೆ ಬಹುಆಯ್ಕೆ ಮಾದರಿ ಪ್ರಶ್ನೆ ಕೇಳಲಾಗುತ್ತದೆ. ಶಿಕ್ಷಕರು ಕನಿಷ್ಠ ಶೇ.60 ಅರ್ಹತಾ ಅಂಕಗಳನ್ನು ಪಡೆಯಬೇಕು. ಪರಿಶಿಷ್ಟರು ಹಾಗೂ ಅಂಗವಿಕಲರಿಗೆ ಶೇ.55 ಅರ್ಹತಾ ಅಂಕಗಳನ್ನು ನಿಗದಿ ಮಾಡಲಾಗಿದೆ.
ನೇಮಕಾತಿ ಹಿನ್ನೆಲೆ:
ವಸತಿ ಶಾಲೆ ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿಗಾಗಿ ವೃಂದ ನೇಮಕಾತಿ ನಿಯಮಗಳನ್ನು ರೂಪಿಸಿ 2011ರಲ್ಲಿ ಕೇಂದ್ರಿಕೃತ ದಾಖಲಾತಿ ಘಟಕದ ಮೂಲಕ 5,227 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗಿತ್ತು. ಈ ವೇಳೆ 2005ರಿಂದ 2011ರವೆಗೆ ಹೊರ ಗುತ್ತಿಗೆ ಏಜೆನ್ಸಿಗಳ ಮೂಲಕ ಕಾರ್ಯನಿರ್ವಹಿಸಿದ ಶಿಕ್ಷಕರಿಗೆ ಒಂದು ವರ್ಷಕ್ಕೆ ಶೇ.5ರಷ್ಟು ಕೃಪಾಂಕ ನೀಡಿ ಕಾಯಂಗೊಳಿಸುವಂತೆ ಹೈಕೋರ್ಟ್ ಆದೇಶಿಸಿತ್ತು. ಅದರಂತೆ ಸೇವಾ ಕೃಪಾಂಕದಡಿಯಲ್ಲಿ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿದೆ.
ಶೈಕ್ಷಣಿಕ ಗುಣಮಟ್ಟವನ್ನು ಕಾಯ್ದುಕೊಳ್ಳಲು ಸಂಘವು ನಡೆಸುವ ಪರೀಕ್ಷೆಯಲ್ಲಿ ಅರ್ಹತೆ ಗಳಿಸುವುದು ಕಡ್ಡಾಯ ಎಂದು ನೇಮಕಾತಿ ವೇಳೆ ಷರತ್ತು ವಿಧಿಸಿ ಆದೇಶವನ್ನು ಹೊರಡಿಸಲಾಗಿತ್ತು. ಕಲಬುರಗಿ ಪೀಠದಲ್ಲಿ ದಾಖಲಾಗಿದ್ದ ಇನ್ನೊಂದು ಅರ್ಜಿಯಲ್ಲಿ ಆರು ತಿಂಗಳೊಳಗಾಗಿ ಪರೀಕ್ಷೆ ನಡೆಸಲು ಆದೇಶಿಸಲಾಗಿದೆ. ಅಂತೆಯೇ, ಈ ಪರೀಕ್ಷೆಯಲ್ಲಿ ಅರ್ಹತೆ ಪಡೆಯಲು ಶಿಕ್ಷಕರಿಗೆ ಎರಡು ಬಾರಿ ಮಾತ್ರ ಕಾಲಾವಕಾಶ ನೀಡಲು ಸಂಘದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ಪಿ.ಎಸ್. ಕಾಂತರಾಜು ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
▪️ಅರ್ಜಿ ಸಲ್ಲಿಕೆಗೆ ಕೊನೆಯ ದಿನ : ಆ.12
▪️ಪ್ರವೇಶಪತ್ರ ಬಿಡುಗಡೆ: ಅ.20
▪️ಪರೀಕ್ಷೆ ದಿನಾಂಕ: ಆ.24
▪️ಪರೀಕ್ಷಾ ಸ್ಥಳ: ಎಂಡಿಆರ್‌ಎಸ್, (ಎಸ್‌ಟಿ-6) ಕುಂದಾಣ, ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ.
ಅರ್ಜಿ ಸಲ್ಲಿಕೆ:
ವಸತಿ ಶಾಲೆಯ ಪ್ರಾಂಶುಪಾಲರ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಸೇವಾ ಕೃಪಾಂಕದಡಿಯಲ್ಲಿ ನೇಮಕಾತಿ ಹೊಂದಿದ ಶಿಕ್ಷಕರಿಗೆ ತಿಳಿಸಲಾಗಿದೆ.
▪️ಅಧಿಸೂಚನೆ- CLICK HERE
▪️ಅರ್ಜಿ ಸಲ್ಲಿಕೆ ಲಿಂಕ್- CLICK HERE
1 thought on “KREIS: WEIGHTAGE TEACHERS KREIS TET EXAM NOTIFICATION OUT-2025,ವಸತಿ ಶಿಕ್ಷಣ ಸಂಸ್ಥೆ ಬೋಧಕರಿಗೆ ಟಿಇಟಿ ಅಧಿಸೂಚನೆ ಪ್ರಕಟಿಸಿದ ಸಂಘ ಸೇವಾ ಕೃಪಾಂಕದ ಶಿಕ್ಷಕರಿಗೆ ಅನ್ವಯ.”