KSET-2025: ಪರಿಶಿಷ್ಟ ಜಾತಿ (SC-A, SC-B, SC-C) ಅಭ್ಯರ್ಥಿಗಳ ಅರ್ಹತಾಪಟ್ಟಿ ಪ್ರಕಟ
KSET-2025: ಪರಿಶಿಷ್ಟ ಜಾತಿ (SC-A, SC-B, SC-C) ಅಭ್ಯರ್ಥಿಗಳ ಅರ್ಹತಾಪಟ್ಟಿ ಪ್ರಕಟವಾಗಿದೆ.
ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ-2025 (ಕೆಸೆಟ್-2025) ಗೆ ಸಂಬಂಧಿಸಿದಂತೆ ದಿನಾಂಕ: 21.11.2025 ರಂದು ವಿಷಯವಾರು ಮತ್ತು ಪ್ರವರ್ಗವಾರು ತಾತ್ಕಾಲಿಕ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿತ್ತು.
ನಂತರ ಅರ್ಹ ಅಭ್ಯರ್ಥಿಗಳಿಗೆ ದಿನಾಂಕ 29.11.2025 ರಿಂದ 06.12.2025ರವರೆಗೆ ಮೂಲ ದಾಖಲೆಗಳ ಪರಿಶೀಲನೆಗೆ ಕರೆಯಲಾಗಿತ್ತು ಹಾಗೂ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಆರ್.ಡಿ ಸಂಖ್ಯೆಯುಳ್ಳ SC-A/SC-B/SC-C ಒಳಮೀಸಲಾತಿ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಿ ದಿನಾಂಕ 08.12.2025 ಮತ್ತು 09.12.2025 ರಂದು ದಾಖಲಾತಿ ಪರಿಶೀಲನೆಗೆ ಹಾಜರಾಗುವಂತೆ ತಿಳಿಸಲಾಗಿತ್ತು.
ಮುಂದುವರೆದು, ಮೂಲ ದಾಖಲೆಗಳ ಪರಿಶೀಲನೆಗೆ ಗೈರು ಹಾಜರಾದ ಅಭ್ಯರ್ಥಿಗಳಿಗೆ ದಿನಾಂಕ 11.12.2025 ಮತ್ತು 12.12.2025 ರಂದು ಮೂಲ ದಾಖಲೆಗಳ ಪರಿಶೀಲನೆಗೆ ಅವಕಾಶ ನೀಡಲಾಗಿತ್ತು. ಅಲ್ಲದೆ ತಾತ್ಕಾಲಿಕ ಅರ್ಹ ಪಟ್ಟಿಯಲ್ಲಿ ಹೆಸರಿದ್ದು, ಪ್ರಸ್ತುತ ಸ್ನಾತಕೋತ್ತರ ಪದವಿಯನ್ನು ಅಭ್ಯಾಸ ಮಾಡುತ್ತಿರುವ (Pursuing PG Degree) ಪರಿಶಿಷ್ಟ ಅಭ್ಯರ್ಥಿಗಳು SC-A/SC-B/SC-C ಒಳಮೀಸಲಾತಿ ಜಾತಿ ಪ್ರಮಾಣ ಪತ್ರವನ್ನು ಪಡೆದು ಸಲ್ಲಿಸಲು ದಿನಾಂಕ 22.12.2025 ರಿಂದ 24.12.2025 ರವರೆಗೆ ಅವಕಾಶ ನೀಡಲಾಗಿತ್ತು.
ಸದರಿ ಪ್ರಕಟಣೆಯಲ್ಲಿ ಗೈರು ಹಾಜರಾದ ಮತ್ತು SC-A/SC-B/SC-C ಒಳಮೀಸಲಾತಿ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸದ ಅಭ್ಯರ್ಥಿಗಳನ್ನು ಅರ್ಹತಾ ಪಟ್ಟಿಯಿಂದ ಕೈಬಿಡಲಾಗುವುದು ಎಂದು ಸ್ಪಷ್ಟವಾಗಿ ತಿಳಿಸಲಾಗಿತ್ತು.
ಆದಾಗ್ಯೂ ಗೈರು ಹಾಜರಾದ ಹಾಗೂ SC-A/SC-B/SC-C ಒಳಮೀಸಲಾತಿ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸದ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶವಾಗಿ ದಿನಾಂಕ 23.01.2026 ರಂದು ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾಗುವಂತೆ ತಿಳಿಸಿ SC-A/SC-B/SC-C ಒಳಮೀಸಲಾತಿ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಲು ತಿಳಿಸಲಾಗಿತ್ತು.
ಈ ಪ್ರಕ್ರಿಯೆಯಲ್ಲಿ ಪರಿಶಿಷ್ಟ ಜಾತಿಯ SC-A/SC-B/SC-C ಒಳಮೀಸಲಾತಿಯ ಕೆಲವೊಂದು ಅಭ್ಯರ್ಥಿಗಳು ಅವರು ಅರ್ಹರಾಗಿರುವ ಒಳಮೀಸಲಾತಿಗೆ ಸಂಬಂಧಿಸಿದ ಜಾತಿ ಪ್ರಮಾಣ ಪತ್ರಗಳನ್ನು ಸಲ್ಲಿಸಿರುವುದಿಲ್ಲ.
ಬದಲಾಗಿ ತಾವು ಒಳಮೀಸಲಾತಿಯನ್ನು ತಪ್ಪಾಗಿ ನಮೂದಿಸಿದ್ದು, ಒಳಮೀಸಲಾತಿಗೆ ಬದಲಾವಣೆ ಮಾಡಲು ಕೋರಿ, ತಾವು ಅರ್ಹರಿರುವ ಉಪಜಾತಿಗೆ ಸೇರುವ ಅರ್ಹತಾ ಪಟ್ಟಿಯಲ್ಲಿ ಪರಿಗಣಿಸಿ ಕೆಸೆಟ್ ಪ್ರಮಾಣ ಪತ್ರವನ್ನು ನೀಡುವಂತೆ ಕೋರಿರುತ್ತಾರೆ. ಈ ಹಿನ್ನಲೆಯಲ್ಲಿ ಸದರಿ ಅಭ್ಯರ್ಥಿಗಳನ್ನು ತಪ್ಪಾಗಿ ನಮೂದಿಸಿರುವ ಉಪಜಾತಿಯ ಅರ್ಹತಾ ಪಟ್ಟಿಯಿಂದ ಕೈಬಿಡಬೇಕಾಗಿರುತ್ತದೆ.
ಇದಲ್ಲದೆ ಹಲವು ಬಾರಿ ಮೂಲ ದಾಖಲೆಗಳ ಪರಿಶೀಲನೆಗೆ ಅವಕಾಶ ನೀಡಿದಾಗ್ಯೂ ಅರ್ಹತಾ ಪಟ್ಟಿಯಲ್ಲಿರುವ ಪರಿಶಿಷ್ಟ ಜಾತಿಯ ಕೆಲವು ಅಭ್ಯರ್ಥಿಗಳು SC-A/SC-B/SC-C ಒಳಮೀಸಲಾತಿಯ ಪ್ರಮಾಣ ಪತ್ರಗಳನ್ನು ಹಾಜರು ಪಡಿಸಿರುವುದಿಲ್ಲ. ಇಂತಹ ಅಭ್ಯರ್ಥಿಗಳನ್ನೂ ಸಹ ಅರ್ಹತಾ ಪಟ್ಟಿಯಿಂದ ಕೈಬಿಡಬೇಕಾಗಿರುತ್ತದೆ.
ಈ ಕಾರಣಗಳಿಂದ ಮೇಲೆ ವಿವರಿಸಿರುವ ಅಭ್ಯರ್ಥಿಗಳನ್ನು ಅರ್ಹತಾ ಪಟ್ಟಿಯಿಂದ ಕೈಬಿಟ್ಟು, ಅದರಿಂದ ಉಂಟಾಗುವ ಖಾಲಿ ಸ್ಥಾನಗಳಿಗೆ ಮೆರಿಟ್ ಆಧಾರದ ಮೇಲೆ ಒಳಮೀಸಲಾತಿ ತಿದ್ದುಪಡಿಕೋರಿ ಸಲ್ಲಿಸಿದ ಮನವಿಗಳನ್ನು ಪರಿಶೀಲಿಸಿ ಲಭ್ಯವಿರುವ ಖಾಲಿ ಸ್ಥಾನಗಳಿಗೆ ಯುಜಿಸಿ-ಎನ್ ಇಟಿ ನಿಯಮಾನುಸಾರ ಅರ್ಹ ಅಭ್ಯರ್ಥಿಗಳನ್ನು ಪರಿಗಣಿಸಿ ಪ್ರಕಟಿಸಲಾಗಿದೆ.
ಮೇಲಿನ ಕಾರಣಗಳಿಂದಾಗಿ ಅರ್ಹತಾ ಪಟ್ಟಿಯಿಂದ ಕೈಬಿಡಲಾಗಿರುವ ವಿಷಯವಾರು ಮತ್ತು ಪ್ರವರ್ಗವಾರು ಪಟ್ಟಿಯನ್ನು ಅನುಬಂಧ-1 ಮತ್ತು 2 ರಲ್ಲಿ ಪ್ರಕಟಿಸಲಾಗಿದೆ.
ಇದರೊಂದಿಗೆ ಬದಲಾವಣೆಗೊಂಡು ಹೊಸದಾಗಿ ಅರ್ಹರಾಗುವ ವಿಷಯವಾರು ಮತ್ತು ಪ್ರವರ್ಗವಾರು ಅಭ್ಯರ್ಥಿಗಳ ಪಟ್ಟಿಯನ್ನು ಅನುಬಂಧ-3 ರಲ್ಲಿ ಪ್ರಕಟಿಸಲಾಗಿದೆ.
