KSET EXAM-2025 ಪರಿಷ್ಕೃತ ಕೀ-ಉತ್ತರಗಳು ಇದೀಗ ಪ್ರಕಟ.
KSET EXAM-2025:ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆಸೆಟ್)-2025 ಅನ್ನು ದಿನಾಂಕ:02.11.2025 ರಂದು ನಡೆಸಲಾಗಿದ್ದು, ಪತ್ರಿಕೆ-1 ಮತ್ತು ಪತ್ರಿಕೆ-2ರ ಒಟ್ಟು 33 ವಿಷಯಗಳಿಗೆ ಕೀ ಉತ್ತರಗಳನ್ನು ಕೆಇಎ ವೆಬ್‌ಸೈಟ್‌ನಲ್ಲಿ ದಿನಾಂಕ:04.11.2025 ರಂದು ಪ್ರಕಟಿಸಿ, ಕೀ ಉತ್ತರಗಳಿಗೆ ಆಕ್ಷೇಪಣೆಗಳಿದ್ದಲ್ಲಿ ದಿನಾಂಕ:06.11.2025 ಸಂಜೆ 3.00 ಗಂಟೆಯೊಳಗೆ ಸಲ್ಲಿಸಲು ಕಾಲಾವಕಾಶ ನೀಡಲಾಗಿತ್ತು.
ಅದರಂತೆ, ಈ ಕೆಳಕಂಡ 07 ವಿಷಯಗಳಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಂದ ಯಾವುದೇ ಆಕ್ಷೇಪಣೆಗಳು ಸ್ವೀಕೃತವಾಗಿಲ್ಲದಿರುವುದರಿಂದ ಇವುಗಳ ಕೀ ಉತ್ತರಗಳಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ.

ಉಳಿದಂತೆ ಪತ್ರಿಕೆ-1 ಮತ್ತು 26 ವಿಷಯಗಳ ಬಗ್ಗೆ ಅಭ್ಯರ್ಥಿಗಳಿಂದ ಅಕ್ಷೇಪಣೆಗಳು ಸ್ವೀಕೃತವಾಗಿವೆ. ಸ್ವೀಕೃತವಾದ ಎಲ್ಲಾ ಆಕ್ಷೇಪಣೆಗಳನ್ನು ವಿಷಯ ತಜ್ಞರ ಸಮಿತಿಯು ಪರಿಶೀಲಿಸಿದ್ದು, ವಿಷಯ ತಜ್ಞರ ಸಮಿತಿಯ ಶಿಫಾರಸ್ಸಿನಂತೆ ವಿಷಯವಾರು ಪರಿಷ್ಕೃತ ಕೀ ಉತ್ತರಗಳನ್ನು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.
ಸೂಚನೆ : ಕೆಸೆಟ್-2025ರ ಎಲ್ಲಾ ಪತ್ರಿಕೆಗಳಲ್ಲಿ ಅಭ್ಯರ್ಥಿಗಳಿಂದ ಅಕ್ಷೇಪಣೆಗಳು ಸ್ವೀಕೃತವಾಗಿ, ಪರಿಷ್ಕೃತ ಕೀ ಉತ್ತರಗಳು ಪ್ರಕಟಗೊಂಡ ಪ್ರಶ್ನೆಗಳನ್ನು ಹೊರತುಪಡಿಸಿ, ಉಳಿದೆಲ್ಲಾ ಪ್ರಶ್ನೆಗಳ ಕೀ ಉತ್ತರಗಳು ದಿನಾಂಕ:04.11.2025 ರಂದು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿತವಾದಂತೆಯೇ ಇರುತ್ತವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
SUBJECT NAME: GENERAL STUDIES (PAPER-1)
ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆಸೆಟ್)-2025ರ ಪರೀಕ್ಷೆಗೆ ಸಂಬಂಧಿಸಿದಂತೆ, ಪತ್ರಿಕೆ-1 ಮತ್ತು ಪತ್ರಿಕೆ-2ರ ಕೀ ಉತ್ತರಗಳನ್ನು ಕೆಇಎ ವೆಬ್‌ಸೈಟ್‌ನಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ದಿನಾಂಕ:04.11.2025 ರಂದು ಪ್ರಕಟಿಸಲಾಗಿರುತ್ತದೆ. ಪ್ರಕಟಿಸಿರುವ ಕೀ-ಉತ್ತರಗಳಿಗೆ ಏನಾದರೂ ಆಕ್ಷೇಪಣೆಗಳಿದ್ದಲ್ಲಿ ದಿನಾಂಕ:06.11.2025ರ ಸಂಜೆ 3.00 ಗಂಟೆಯೊಳಗೆ ಸಲ್ಲಿಸಲು ಕಾಲಾವಕಾಶ ನೀಡಲಾಗಿತ್ತು.
ಅದರಂತೆ, ಅಭ್ಯರ್ಥಿಗಳಿಂದ ಸ್ವೀಕೃತಗೊಂಡ ಆಕ್ಷೇಪಣೆಗಳನ್ನು ವಿಷಯ ತಜ್ಞರು ಪರಿಶೀಲಿಸಿದ ನಂತರ ಮೇಲ್ಕಂಡ ಪತ್ರಿಕೆಗೆ ಸಂಬಂಧಿಸಿದಂತೆ ಅಂತಿಮವಾಗಿ ಪರಿಷ್ಕೃತಗೊಂಡಿರುವ ಕೀ ಉತ್ತರ ಈ ಕೆಳಕಂಡಂತಿದೆ.

ವಿಷಯವಾರು ಕೀ ಉತ್ತರ ಈ ಕೆಳಗೆ ನೀಡಲಾಗಿದೆ.
- COMMERCE
- KANNADA
- ECONOMICS
- ENGLISH
- POLITICAL SCIENCE
- HISTORY
- SOCIOLOGY
- GEOGRAPHY
- HINDI
- MANAGEMENT
- EDUCATION
- LIBRARY & INFORMATION SCIENCE
- MASS COMMUNICATION & JOURNALISM
- PSYCHOLOGY
- SOCIAL WORK
- LAW
- SANSKRIT
- PHYSICAL EDUCATION
- URDU
- PUBLIC ADMINISTRATION
- COMPUTER SCIENCE AND APPLICATIONS
- PHYSICAL SCIENCES
- MATHEMATICAL SCIENCES
- CHEMICAL SCIENCES
- LIFE SCIENCE
- WOMEN STUDIES
- GENERAL STUDIES (Paper-1)
ಇದನ್ನೂ ನೋಡಿ…..KASS Empanelled Hospitals” ವಿಭಾಗದಡಿ ಜಿಲ್ಲೆಯವಾರು ಆಸ್ಪತ್ರೆಗಳ ಪಟ್ಟಿ ನೋಡಬಹುದು ಅಥವಾ ಡೌನ್‌ಲೋಡ್ ಮಾಡಬಹುದು.