LBA – FAQs: ಪಾಠ ಆಧಾರಿತ ಮೌಲ್ಯಾಂಕನ ಪ್ರಶ್ನೆಕೋಠಿಗೆ ಸಂಬಂಧಿಸಿದ ಪ್ರಶ್ನೆಗಳು-2025
LBA – LBA-FAQs (Frequently Asked Questions)
1. LBA ಪ್ರಶ್ನೆಕೋಠಿಯನ್ನು DSERT Website ನಿಂದ Download ಮಾಡುವುದು ಹೇಗೆ?
ಉತ್ತರ: https://dsert.karnataka.gov.in/ ಸೇವೆಗಳು ಮತ್ತು ಯೋಜನೆಗಳು ಪಾಠ ಆಧಾರಿತ ಮೌಲ್ಯಾಂಕನ ಸಾಮಗ್ರಿ – https://dsert.karnataka.gov.in/info-2/Lesson+Based+Assesment+material/kn
2.ಈಗಾಗಲೇ ಮುಗಿದಿರುವ ಪಾಠಗಳಿಗೆ LBA ಅಂಕಗಳನ್ನು SATS ನಲ್ಲಿ ದಾಖಲಿಸಬೇಕೆ?
ಉತ್ತರ: ಹೌದು.
3. ತೃತೀಯ ಭಾಷೆಗೆ LBA ಸಿದ್ಧಪಡಿಸಲಾಗಿದೆಯೇ?
ಉತ್ತರ: ಹಿಂದಿ ತೃತೀಯ ಭಾಷೆಗೆ ಮಾತ್ರ ಸಿದ್ಧಪಡಿಸಲಾಗಿದೆ.
4. Bilingual ತರಗತಿಗಳಿಗೆ LBA ಅನ್ವಯಿಸುತ್ತದೆಯೇ?
ಉತ್ತರ: ಹೌದು, 1 ರಿಂದ 3ನೇ ತರಗತಿಯವರೆಗೆ LBA ಪ್ರಶ್ನೆಕೋಠಿ ಸಿದ್ಧಪಡಿಸಿದ ಮತ್ತು 4 ರಿಂದ 7ನೇ ತರಗತಿಯವರೆಗೆ ಸಿದ್ಧಪಡಿಸುವ ಪ್ರಕ್ರಿಯೆ ನಡೆಯುತ್ತಿದೆ.
5. ಪಠ್ಯಾಧಾರಿತ ಮೌಲ್ಯಾಂಕನಕ್ಕೆ ಎಲ್ಲಾ ಪ್ರಶ್ನೆಗಳನ್ನು LBA ಪ್ರಶ್ನೆಕೋಠಿಯಿಂದ ಕೇಳಬೇಕೆ?
ಉತ್ತರ: ಹೌದು, ಕಲಿಕಾ ಪ್ರಕ್ರಿಯೆಯಿಂದ ಮೌಲ್ಯಾಂಕನ ಪ್ರಕ್ರಿಯೆಯವರೆಗೆ ನಿರಂತರವಾಗಿ ಈ ಪ್ರಶ್ನೆಕೋಠಿಯಲ್ಲಿನ ಪ್ರಶ್ನೆಗಳು ಬಳಕೆಯಾಗಬೇಕು. ಉದ್ದಿಷ್ಟವಾರು ಮತ್ತು ಪ್ರಶ್ನೆಗಳ ಕಠಿಣತೆಯ ಮಟ್ಟಕ್ಕನುಗುಣವಾಗಿ LBAಯಿಂದಪ್ರಶ್ನೆಗಳನ್ನು ಆಯ್ಕೆ ಮಾಡಿಕೊಂಡು ಪ್ರಶ್ನೆಪತ್ರಿಕೆಯನ್ನು ತಾವೇ ರಚಿಸಿಕೊಳ್ಳಬೇಕು.
6. FLN ಮಕ್ಕಳಿಗೆ LBA ಮಾಡುವುದು ಹೇಗೆ?
ಉತ್ತರ: ಎರಡನ್ನು ಹೊಂದಾಣಿಕೆ ಮಾಡಿಕೊಂಡು ಇತರೆ ಮಕ್ಕಳಿಗೆ ಮಾಡುವಂತೆಯೇ ಮಾಡುವುದು. ಅವರು ಗಳಿಸಿದ ಅಂಕಗಳನ್ನು SATS ನಮೂದಿಸುವುದು.
7 . ಉರ್ದು ಮಾಧ್ಯಮಕ್ಕೆ LBA ಪ್ರಶ್ನೆಕೋಠಿಯನ್ನು ಒದಗಿಸಲು ಕೋರಿದೆ.
ಉತ್ತರ: ರಚನೆ ಮತ್ತು ಭಾಷಾಂತರ ಪ್ರಕ್ರಿಯೆ ನಡೆಯುತ್ತಿದ್ದು, ಆದಷ್ಟು ಬೇಗ ಲಭ್ಯಗೊಳಿಸಲಾಗುವುದು.
8. ಪ್ರತಿ ಪಾಠಕ್ಕೂ ಬ್ಲೂಪ್ರಿಂಟ್ ಪ್ರಕಾರ ಪ್ರಶ್ನೆ ಪತ್ರಿಕೆ ತಯಾರು ಮಾಡಬೇಕಾ?
▪️ಎಲ್ಲಾ ರೀತಿಯ ಪ್ರಶ್ನೆಗಳನ್ನೊಳಗೊಂಡಂತೆ ಪ್ರಶ್ನೆಪತ್ರಿಕೆ ರಚಿಸಬೇಕು
▪️ ಒಂದರಿಂದ ಐದನೇ ತರಗತಿಯವರೆಗೆ 10 ಲಿಖಿತ 5 ಮೌಖಿಕ
▪️6 ರಿಂದ 10ನೇ ತರಗತಿಯವರೆಗೆ 20 ಲಿಖಿತ
▪️ಮರು ಸಿಂಚನ ಕಾರ್ಯಕ್ರಮ ಅನ್ವಯಿಸುವ ಜಿಲ್ಲೆಗಳು LBA ಯಿಂದ 15 ಅಂಕಗಳ ಪ್ರಶ್ನೆಗಳು ಮತ್ತು ಮರುಸಿಂಚನದಿಂದ 5 ಅಂಕಗಳ ಪ್ರಶ್ನೆಗಳು ಒಟ್ಟು 20 ಅಂಕಗಳಿಗೆ ಪ್ರಶ್ನೆಪತ್ರಿಕೆ ಸಿದ್ಧಪಡಿಸುವುದು.
▪️ಈ ಕಾರ್ಯಕ್ರಮ ಅನ್ವಯಿಸದ ಜಿಲ್ಲೆಗಳು 20 ಅಂಕಗಳಿಗೆ ಪ್ರಶ್ನೆಗಳನ್ನು LBA ಯಿಂದ ಪರಿಗಣಿಸುವುದು.
9. ರೂಪಣಾತ್ಮಕ ಮೌಲ್ಯಾಂಕನ (FA) ಮತ್ತು ಸಂಕಲನಾತ್ಮಕ ಮೌಲ್ಯಾಂಕನಗಳನ್ನು (SA) ಮಾಡುವ ಅವಶ್ಯಕತೆ ಇದೆಯೇ?
ಉತ್ತರ: ಹೌದು, FA & SA ಗಳನ್ನು ಮಾಡುವುದರಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಹಿಂದಿನ ವರ್ಷಗಳಲ್ಲಿದ್ದಂತೆ ಮಾಡುವುದು ಹಾಗೂ ಇಲಾಖೆಯಿಂದ ನೀಡಿರುವ ಮೌಲ್ಯಾಂಕನ (ಸುತ್ತೋಲೆಯಂತೆ ಕ್ರಮವಹಿಸುವುದು.
(ಸಂಖ್ಯೆ: E-29933/DSERT/EVG/1-10/ ಮೌಲ್ಯಾಂಕನ 2025-26 ದಿನಾಂಕ:17-07-2025)
10. LBA ಅಂಕಗಳನ್ನು SSLC ಆಂತರಿಕ ಮೌಲ್ಯಾಂಕನಕ್ಕೆ ಪರಿಗಣಿಸಲಾಗುತ್ತದೆಯೇ?
ಉತ್ತರ: ಇಲ್ಲ, ಉಳಿದಂತೆ ಹಿಂದಿನ ಸಾಲಿನಂತೆಯೇ ಮುಂದುವರೆಯುತ್ತದೆ.
11. LBA ಮಾಡುವಾಗ ಮಕ್ಕಳು ಗೈರುಹಾಜರಿ ಹಾಗೂ ನಿರಂತರ ಗೈರುಹಾಜರಿ ಆದರೆ ಮಕ್ಕಳ ಡೇಟಾ ಎಂಟ್ರಿ ಮಾಡುವುದು ಹೇಗೆ?
ಉತ್ತರ: ಗೈರು ಹಾಜರಾದ ಮಕ್ಕಳಿಗೆ AB ಎಂದು ನಮೂದಿಸುವುದು.
12. LBA ಖಾಸಗಿ ಶಾಲೆಗೆ ಇದೆಯಾ?
ಉತ್ತರ: LBA ಕರ್ನಾಟಕ ರಾಜ್ಯ ಪಠ್ಯಕ್ರಮದ ಎಲ್ಲಾ ಶಾಲೆಗಳಿಗೂ ಅನ್ವಯಿಸುತ್ತದೆ.
13. ಎಲ್ಲಾ ತರಗತಿಗಳ ಎಲ್ಲಾ ಹಂತದ ಮೌಲ್ಯಾಂಕನಗಳಿಗೆ LBA ಪ್ರಶ್ನೆಕೋಠಿಯ ಪ್ರಶ್ನೆಗಳನ್ನು ಪರಿಗಣಿಸಬೇಕೆ?
ಉತ್ತರ: ಹೌದು
14. LBA ಮತ್ತು Lesson Plan, SATS ತಂತ್ರಾಂಶದಲ್ಲಿ ದಾಖಲಿಸುವುದು ಶಿಕ್ಷಕರಿಗೆ ಹೊರೆಯಲ್ಲವೇ?
ಉತ್ತರ: ಹೊರೆಯಲ್ಲ. ಈ ಹಿಂದೆಯೂ ಘಟಕ ಪರೀಕ್ಷೆಗಳನ್ನು ನಿರ್ವಹಿಸಿ ಪ್ರತ್ಯೇಕ ಪುಸ್ತಕಗಳಲ್ಲಿ ನಿರ್ವಹಿಸಲಾಗುತ್ತಿತ್ತು. ಈಗ ಅದನ್ನೇ SATS ತಂತ್ರಾಂಶದಲ್ಲಿ ನಮೂದಿಸಿದರೆ ಸಾಕು. ಅದನ್ನೇ ಪ್ರಿಂಟ್ ತೆಗೆದು ಇಟ್ಟುಕೊಳ್ಳಬಹುದು. ಇದು Teacher friendly ಆಗಿದ್ದು, ದಾಖಲಿಸಿದ LBA ಅಂಕಗಳಿಗನುಗುಣವಾಗಿ ಹಲವಾರು ರೀತಿಯ ವಿಶ್ಲೇಷಣಾ ವರದಿಯನ್ನು ಪಡೆದು ಮಕ್ಕಳ ಕಲಿಕೆ ಸಾಧಿಸಲು ಕಾರ್ಯತಂತ್ರಗಳನ್ನು ರೂಪಿಸಬಹುದು ಹಾಗೂ ಬರವಣಿಗೆ ಕೆಲಸ ಕಡಿಮೆಯಾಗಿ, ಕಲಿಕೆಯನ್ನು ಅನುಕೂಲಿಸಲು ಹೆಚ್ಚಿನ ಸಮಯ ಲಭ್ಯವಾಗುತ್ತದೆ.
15. SATS ನಲ್ಲಿ LBA ಅಂಕಗಳನ್ನು ವಿಭಾಗವಾರು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆಯೇ?
ಉತ್ತರ: ಹೌದು
16. LBA ಮಾದರಿ ಪ್ರಶ್ನೆಪತ್ರಿಕೆ ಯಾವಾಗ ನೀಡುತ್ತೀರಿ?
ಉತ್ತರ: DSERT Website ನಲ್ಲಿ ಲಭ್ಯವಿದೆ.
17. ಪಾಠ ಆಧಾರಿತ ಮೌಲ್ಯಾಂಕವನ್ನು 25 ಅಂಕಗಳಿಗೆ ಬದಲಾಗಿ 10 ಅಂಕಗಳಿಗೆ ಲಿಖಿತ & 10 ಅಂಕಗಳಿಗೆ ಮೌಖಿಕ ಒಟ್ಟು 20 ಅಂಕಗಳಿಗೆ ಮಾಡಲು ಅವಕಾಶವಿದೆಯೇ
▪️1 ರಿಂದ 5ನೇ ತರಗತಿಯವರೆಗೆ 10 ಲಿಖಿತ ಮತ್ತು 5 ಮೌಖಿಕ
▪️6 ರಿಂದ 10ನೇ ತರಗತಿಯವರೆಗೆ 20 ಲಿಖಿತ
▪️ಮರು ಸಿಂಚನ ಕಾರ್ಯಕ್ರಮ ಅನ್ವಯಿಸುವ ಜಿಲ್ಲೆಗಳು LBA ಯಿಂದ 15 ಅಂಕಗಳ ಪ್ರಶ್ನೆಗಳು ಮತ್ತು ಮರುಸಿಂಚನದಿಂದ 5 ಅಂಕಗಳ ಪ್ರಶ್ನೆಗಳು ಒಟ್ಟು 20 ಅಂಕಗಳಿಗೆ ಪ್ರಶ್ನೆಪತ್ರಿಕೆ ಸಿದ್ದಪಡಿಸುವುದು.
▪️ಈ ಕಾರ್ಯಕ್ರಮ ಅನ್ವಯಿಸದ ಜಿಲ್ಲೆಗಳು 20 ಅಂಕಗಳಿಗೆ ಪ್ರಶ್ನೆಗಳನ್ನು LBA ಯಿಂದ ಪರಿಗಣಿಸುವುದು.
18. ಭಾಷೆಯಲ್ಲಿ ಪ್ರತಿ LBA ಗೆ ಒಂದು ಪಾಠ ಮತ್ತು ಒಂದು ಪದ್ಯವನ್ನು ಸೇರಿಸಿ ಪರಿಗಣಿಸಬಹುದೇ?
ಉತ್ತರ: ಇಲ್ಲ
19. ಎಲ್ಲಾ ತರಗತಿಗಳ ಸಮಾಜ ವಿಜ್ಞಾನ ವಿಷಯಗಳಲ್ಲಿ ಪಾಠಗಳ ಸಂಖ್ಯೆ ಹೆಚ್ಚಾಗಿದ್ದು. (10th-33, 9th-33, 8th 30, 7th-33, 6th-30) 2 ಅಥವಾ 3 ಪಾಠಗಳನ್ನು ಸೇರಿಸಿ LBA ಮಾಡಬಹುದೇ?
ಉತ್ತರ: ಇಲ್ಲ
SATS issues:
A. SATS ತಂತ್ರಾಂಶದಲ್ಲಿ Login ಆಗಲು OTP ENTRY ಮಾಡಲು ಆಗುತ್ತಿಲ್ಲ?
ಉತ್ತರ: EEDS & SATS ನಲ್ಲಿ ಮಾಹಿತಿ Update ಮಾಡಿದ್ದಲ್ಲಿ ENTRY ಮಾಡಬಹುದು.
B. LBA ಅಂಕ ದಾಖಲಿಸಲು ಅನುದಾನಿತ ಶಿಕ್ಷಕರಿಗೆ SATS Login ID ಯಾವುದು?
ಉತ್ತರ: HRMS ಸಂಖ್ಯೆಯು login ID ಆಗಿರುತ್ತದೆ.
C. Lesson plan & LBA ದಾಖಲಿಸಲು Mobile ನಲ್ಲಿ ಅವಕಾಶವಿದೆಯೇ?
ಉತ್ತರ: Mobile ನಲ್ಲಿ ಅವಕಾಶವಿದೆ.
D. ವಿದ್ಯಾರ್ಥಿಗಳ ಪೂರ್ಣ ಹೆಸರು LBA ನಲ್ಲಿ ಬರುತ್ತಿಲ್ಲ.
ಉತ್ತರ: ಕ್ರಮವಹಿಸಲಾಗಿದೆ.