LBA You tube live Programme- Dated: 19.07.2025
LBA You tube live Programme- 19.07.2025:ಪಾಠ ಆಧಾರಿತ ಮೌಲ್ಯಾಂಕನದ (LBA) ಪ್ರಶ್ನೆಕೋಠಿ ಬಳಕೆ, ಅನುಷ್ಠಾನ, ಅನುಪಾಲನೆ ಮತ್ತು SATS ನಲ್ಲಿ ದಾಖಲಿಸುವ ಕುರಿತು You tube Live ಕಾರ್ಯಕ್ರಮ ಆಯೋಜಿಸುವ ಬಗ್ಗೆ,
ಮೇಲ್ಕಂಡ ವಿಷಯ ಮತ್ತು ಉಲ್ಲೇಖಕ್ಕೆ ಸಂಬಂಧಿಸಿದಂತೆ, 2025-26ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಕರ್ನಾಟಕದ ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲಿ ಪಾಠ ಆಧಾರಿತ ಮೌಲ್ಯಾಂಕನವನ್ನು (Lesson Based Assessment) ಕಲಿಕಾ ಪ್ರಕ್ರಿಯೆ ಹಾಗೂ ಮೌಲ್ಯಾಂಕನಗಳಲ್ಲಿ ನಿರಂತರವಾಗಿ ಅಳವಡಿಸುವ ಸಂಬಂಧ ಇಲಾಖಾ ನಿರ್ದೇಶನದಂತೆ LBA ಪ್ರಶ್ನೆಕೋಠಿಯನ್ನು ಕನ್ನಡ ಮತ್ತು ಆಂಗ್ಲ ಮಾಧ್ಯಮಗಳಲ್ಲಿ ಸಿದ್ಧಪಡಿಸಲಾಗಿದ್ದು, DSERT Website ನಲ್ಲಿ (https://dsert.karnataka.gov.in/) ಅಳವಡಿಸಲಾಗಿದೆ.
https://dsert.karnataka.gov.in/info-2/Lesson+Based+Assesment+material/kn ಮುಂದುವರೆದು, ಸದರಿ ಪ್ರಶ್ನೆಕೋಠಿಯನ್ನು ಕಲಿಕಾ ಪ್ರಕ್ರಿಯೆ ಹಾಗೂ ಮೌಲ್ಯಾಂಕನಗಳಲ್ಲಿ ನಿರಂತರವಾಗಿ ಬಳಸುವ ಸಂಬಂಧ ಪ್ರಶ್ನೆಕೋಠಿ ಬಳಕೆ, ಅನುಷ್ಠಾನ, ಅನುಪಾಲನೆ ಮತ್ತು SATS ನಲ್ಲಿ ದಾಖಲಿಸುವ ಕುರಿತು ಮಾನ್ಯ ನಿರ್ದೇಶಕರು, DSERT ರವರ ನೇತೃತ್ವದಲ್ಲಿ ದಿನಾಂಕ: 19-07-2025 ರಂದು ಮಧ್ಯಾಹ್ನ 3.00 ಗಂಟೆಗೆ You tube Live ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಉಪನಿರ್ದೇಶಕರು ಆಡಳಿತ ಮತ್ತು ಅಭಿವೃದ್ಧಿ ಕಛೇರಿಯ ಎಲ್ಲಾ ಅಧಿಕಾರಿಗಳು, BEO ಮತ್ತು BRC ಕಛೇರಿಯ ಅಧಿಕಾರಿಗಳು, ರಾಜ್ಯದ ಎಲ್ಲಾ CRP’s ಈ ಕೆಳಗಿನ Link ಬಳಸಿ ಈ ಕಾರ್ಯಕ್ರಮದಲ್ಲಿ ಉಪನಿರ್ದೇಶಕರು ಆಡಳಿತ ಮತ್ತು ಅಭಿವೃದ್ಧಿ ಕಛೇರಿಯ ಎಲ್ಲಾ ಅಧಿಕಾರಿಗಳು, BEO ಮತ್ತು BRC ಕಛೇರಿಯ ಅಧಿಕಾರಿಗಳು, ರಾಜ್ಯದ ಎಲ್ಲಾ CRP’s ಹಾಗೂ 1 ರಿಂದ 10 ನೇ ತರಗತಿಯ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರು ಈ ಕೆಳಗಿನ ಲಿಂಕ್ ಬಳಸಿ https://www.youtube.com/live/3BKUufkCQOA?si= deoOowGJEi3PvwC ಕಡ್ಡಾಯವಾಗಿ ಭಾಗವಹಿಸುವಂತೆ ಉಪನಿರ್ದೇಶಕರು, ಆಡಳಿತ ಮತ್ತು ಅಭಿವೃದ್ಧಿರವರು ಕ್ರಮವಹಿಸಲು ಸೂಚಿಸಿದೆ.
Click here to watch the live program.
Question pepper Kannada subject how many Mark’s in one unit test
Pls send question pepper