LBA YouTube live Programme – Dated:19.07.2025 Key Points
LBA YouTube live Programme – Dated:19.07.2025 Key Points: ಈ ದಿನದ LBA ಕುರಿತಾದ ಯುಟ್ಯೂಬ್ ಲೈವ್ನ ಮುಖ್ಯಾಂಶಗಳು
▪️ಶಿಕ್ಷಕರು ಇನ್ನು ಮುಂದೆ ಕೈಬರಹದಲ್ಲಿ ಲೆಸೆನ್ ಪ್ಲಾನ್ ಬರೆಯುವ ಪ್ರಮೇಯವಿಲ್ಲ.
▪️ ಸ್ಯಾಟ್ಸ್ ನಲ್ಲಿ ಶಿಕ್ಷಕರು ತಮ್ಮ ಲೆಸೆನ್ ಪ್ಲಾನ್ ಅನ್ನ ನಮೂದಿಸಬಹುದು ಅದು ಸಹ ಬಹಳ ಸುಲಭವಿದೆ ಆದರೆ ಸ್ವಲ್ಪ ಅಭ್ಯಾಸವಾಗಬೇಕು ಅಷ್ಟೇ
▪️ಪ್ರತಿ ಘಟಕದ ನಂತರ ಪಾಠ ಆಧಾರಿತ ಘಟಕ ಪರೀಕ್ಷೆಯನ್ನು ಮಾಡಿ ಅದರ ಅಂಕಗಳನ್ನು ಸ್ಯಾಟ್ಸ್ ನಲ್ಲಿ ಎಂಟ್ರಿ ಮಾಡಬೇಕು.
▪️ಪ್ರತಿಯೊಬ್ಬ ಶಿಕ್ಷಕರಿಗೂ sats ನಲ್ಲಿ ಲಾಗಿನ್ ಆಗಲು ಅವರವರ ಕೆಜಿಐಡಿ ನಂಬರ್ ಮೂಲಕ ಲಾಗಿನ್ ಆಗಬೇಕು.
▪️KGID ಸಂಖ್ಯೆ ಹಾಕಿದಾಗ EEDS ನಲ್ಲಿ ರಿಜಿಸ್ಟರ್ ಆಗಿರುವ ಮೊಬೈಲ್ ಸಂಖ್ಯೆಗೆ OTP ಬರುತ್ತದೆ ಅದನ್ನು ಹಾಕಿದ ನಂತರ ಲಾಗಿನ್ ಆಗುತ್ತದೆ.
▪️SATS ನಲ್ಲಿ ಪ್ರತಿ ಘಟಕದ ಅಂಕಗಳನ್ನು ನಮೂದು ಮಾಡುವುದು ಸುಲಭ ಏಕೆಂದರೆ ಅದರಲ್ಲಿ ಪಾಠದ ಹೆಸರು ವಿದ್ಯಾರ್ಥಿಗಳ ಹೆಸರು ಈಗಾಗಲೇ ಫೆಚ್ ಆಗಿರುತ್ತದೆ.
▪️ಮತ್ತು LBA ಗಳಲ್ಲಿ ಪ್ರತಿ ಘಟಕಗಳಲ್ಲಿ ಪ್ರಶ್ನೆಗಳನ್ನು ಸೇರಿಸಲು ಆಗಸ್ಟ್ ಅಂತ್ಯದವರಿಗೆ ಅವಕಾಶವಿದೆ.
▪️ಯಾವುದೇ ಶಿಕ್ಷಕರು ಹೊಸ ಹೊಸ ಪ್ರಶ್ನೆಗಳನ್ನು ಡಿಎಸ್‌ಸಿಆರ್‌ಟಿ ಇಮೇಲ್ ಗೆ ಕಳುಹಿಸಿದರೆ ಆ ಪ್ರಶ್ನೆಗಳನ್ನು ಪ್ರಶ್ನೆ ಕೋಟಿಯಲ್ಲಿ ಸೇರಿಸುತ್ತಾರೆ.
▪️ಇದೊಂದು ಬಹಳ ವಿನೂತನವಾದ ತಾಂತ್ರಿಕವಾಗಿ ಬಹಳ ಮುಂದುವರೆದ ಪ್ರಕ್ರಿಯೆಯಾಗಿದ್ದು ನಾವೆಲ್ಲರೂ ಸಕಾರಾತ್ಮಕವಾಗಿ ಭಾಗವಹಿಸೋಣ.
LBA ಗೆ ಸಂಭವಿಸಿದಂತೆ ಶಿಕ್ಷಕರು ಯಾವುದೇ ಸಂದೇಹ ಇದ್ದಲ್ಲಿ ಈ ಕೆಳಗಿನ ನಂಬರ್ ಗೆ ವಾಟ್ಸಪ್ ಮುಖಾಂತರ ಪ್ರಶ್ನೆಯನ್ನು ಕೇಳಿದರೆ ಉತ್ತರ ಸಿಗುತ್ತದೆ.
WHATSAPP ಸಂಖ್ಯೆ: 948785855
LBA ಗೆ ಸಂಭವಿಸಿದಂತೆ ಶಿಕ್ಷಕರು ಯಾವುದೇ ಡೌಟ್ ಗಳಿದ್ದರೆ ಈ ಕೆಳಗಿನ E-mail ಇಡಿ ಮೂಲಕ ಪ್ರಶ್ನೆ ಅಥವಾ ನಿಮ್ಮ ಸಮಸ್ಯೆಗಳನ್ನು ಕೇಳಿ ಪರಿಹಾರ ಕಂದುಕೊಳ್ಳಬಹುದು.
E-Mail ಸಂಖ್ಯೆ: DSERT mail ID- evg.kardsert@gmail.com
