Lesson Based Assesment material-2025| ಪಾಠ ಆಧಾರಿತ ಮೌಲ್ಯಾಂಕನ ಸಾಮಗ್ರಿ ಡೌನ್ಲೋಡ್ ಮಾಡಿಕೊಳ್ಳಿ
Lesson Based Assesment material-2025| ಪಾಠ ಆಧಾರಿತ ಮೌಲ್ಯಾಂಕನ ಸಾಮಗ್ರಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
2025-26ನೇ ಶೈಕ್ಷಣಿಕ ಸಾಲಿಗೆ ರಾಜ್ಯ ಪಠ್ಯಕ್ರಮದ ಶಾಲೆಗಳ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಸಿದ್ಧಪಡಿಸಿರುವ ಪಾಠ ಆಧಾರಿತ ಮೌಲ್ಯಾಂಕನ ಪ್ರಶ್ನೆಕೋಠಿಯನ್ನು (LBA) ಬಳಸಿ ವಿದ್ಯಾರ್ಥಿಗಳ ಕಲಿಕಾ ಪ್ರಗತಿ ಸಾಧಿಸುವ ಕುರಿತು.
ಉಲ್ಲೇಖ: ಈ ಕಛೇರಿ ಜ್ಞಾಪನ ಸಂಖ್ಯೆ: DSERT/EVG/ಪಾ.ಆ.ಮೌ (LBA)/2025-26 ದಿ: 21-06-2025
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ. ಇಲಾಖೆಯು ಕಾಲ ಕಾಲಕ್ಕೆ ನೀಡಿರುವ ನಿರ್ದೇಶನದನ್ವಯ 2025-26ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಕರ್ನಾಟಕದಲ್ಲಿ ಪಾಠ ಆಧಾರಿತ ಮೌಲ್ಯಾಂಕನವನ್ನು (Lesson Based Assessment) ಅಳವಡಿಸುವ ಸಂಬಂಧ ರಾಜ್ಯ ಪಠ್ಯಕ್ರಮದ ಶಾಲೆಗಳ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳ ಕಲಿಕೆಯನ್ನು ಸಾಧಿಸಲು ಹಾಗೂ ಪ್ರತಿ ಪಾಠದ ನಂತರ ಮಗುವಿನ ಕಲಿಕೆಯನ್ನು ದೃಢೀಕರಿಸಲು ಪಾಠ ಆಧಾರಿತ ಮೌಲ್ಯಾಂಕನ ಪ್ರಶ್ನೆಕೋಠಿಯನ್ನು ಸಿದ್ಧಪಡಿಸಿ DSERT Website ನಲ್ಲಿ ಅಳವಡಿಸಲಾಗಿದೆ. ಸದರಿ ಸಾಮಗ್ರಿಯನ್ನು ಕಲಿಕಾ ಪ್ರಕ್ರಿಯೆಯಿಂದ ಮೌಲ್ಯಾಂಕನ ಪ್ರಕ್ರಿಯೆಯವರೆಗೆ ಎಲ್ಲಾ ಹಂತದಲ್ಲೂ ನಿರಂತರವಾಗಿ ಬಳಸುವುದು ಅತ್ಯವಶ್ಯಕವಾಗಿದೆ.
1. ಪಾಠ ಆಧಾರಿತ ಮೌಲ್ಯಾಂಕನದ (LBA) ಉದ್ದೇಶಗಳು:
▪️ವಿದ್ಯಾರ್ಥಿಗಳ ಕಲಿಕೆಯನ್ನು ಸುಧಾರಿಸಲು ಹಾಗೂ ಪ್ರತಿ ಪಾಠದ ನಂತರ ಮಗುವಿನ ಕಲಿಕೆಯನ್ನು ದೃಢೀಕರಿಸಿಕೊಳ್ಳುವುದು.
▪️ವಿದ್ಯಾರ್ಥಿಗಳ ಪರೀಕ್ಷಾ ಒತ್ತಡವನ್ನು ಕಡಿಮೆ ಮಾಡುವುದು.
▪️ಮಕ್ಕಳ ಪ್ರಗತಿಯನ್ನು ಗುರುತಿಸುವಲ್ಲಿ ಪರೀಕ್ಷಾ ಅವಲಂಬನೆಯನ್ನು ಕಡಿಮೆ ಮಾಡಿ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವುದು.
▪️ನಿರಂತರ ವಿಶ್ಲೇಷಣೆಯಿಂದ ನಿಗದಿತ ಕಲಿಕಾ ಫಲಗಳ ಗಳಿಕೆಗೆ ಅವಕಾಶ ನೀಡುವುದು.
▪️ವಿವಿಧ ಕಲಿಕಾ ಹಂತದ ವಿದ್ಯಾರ್ಥಿಗಳ ಕಲಿಕೆಗೆ ಹಾಗೂ Inclusive Assessment ಗೆ ಪ್ರೇರಣೆ ನೀಡುವುದು.
▪️ಶಿಕ್ಷಕರ ಮೌಲ್ಯಮಾಪನ ಸಾಮರ್ಥ್ಯವನ್ನು ಹೆಚ್ಚಿಸುವುದು. (ಮೌಖಿಕ, ಪ್ರಾಯೋಗಿಕ, ಸಹವರ್ತಿ ಮೌಲ್ಯಮಾಪನ, ಯೋಜನೆಗಳು, Portfolio, ಸ್ವ-ಮೌಲ್ಯಮಾಪನ ಇತ್ಯಾದಿ…)
ವಿದ್ಯಾರ್ಥಿಗಳ ಕಲಿಕೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವುದು.
ಪ್ರತಿ ಹಂತದ ವಿದ್ಯಾರ್ಥಿಯ ಕಲಿಕೆಯನ್ನು ಪೋಷಕರ ಗಮನಕ್ಕೆ ತರುವುದು.
ಪಾಠ ಆಧಾರಿತ ಮೌಲ್ಯಾಂಕನ ಚೌಕಟ್ಟು, ಸಾಂಪ್ರದಾಯಿಕ ಪರೀಕ್ಷಾ ಕೇಂದ್ರಿತ ಮೌಲ್ಯಮಾಪನದಿಂದ ದೈನಂದಿನ ತರಗತಿ ಕಲಿಕಾ ಪ್ರಕ್ರಿಯೆಯೊಂದಿಗೆ ಸಂಯೋಜಿತವಾದ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನಕ್ಕೆ (CCE) ಪೂರಕವಾಗಿಸುವುದು.
2. ಪಾಠ ಆಧಾರಿತ ಮೌಲ್ಯಾಂಕನದ (LBA) ಪ್ರಶ್ನೆಕೋಠಿಯ ಸ್ವರೂಪ ಹಾಗೂ ಅವುಗಳನ್ನು ಬಳಸುವ ವಿಧಾನ:
▪️ಪ್ರತಿ ಪಾಠದ ಪಠ್ಯ ವಿಷಯ ಹಾಗೂ ಕಲಿವಿನ ಫಲ/ಕಲಿಕಾಂಶಗಳನ್ನು Map ಮಾಡಿಕೊಂಡು, ಉದ್ದಿಷ್ಟಗಳು, ಪ್ರಶ್ನೆಯ ಸ್ಮರೂಪ ಹಾಗೂ ಕಠಿಣತೆಯ ಮಟ್ಟಕ್ಕೆ (Difficulty Level) ಅನುಗುಣವಾಗಿ ಪ್ರಶ್ನೆಗಳನ್ನು ಸಿದ್ದಪಡಿಸಲಾಗಿದೆ.
▪️ಪ್ರತಿ ಪಾಠವನ್ನು ಸಮಗ್ರವಾಗಿ ಪರಿಗಣಿಸಿ 1 ರಿಂದ 7ನೇ ತರಗತಿಯವರೆಗೆ ವಸ್ತುನಿಷ್ಠ ಪ್ರಶ್ನೆಗಳು ಮತ್ತು ವಿವರಣಾತ್ಮಕ ಪ್ರಶ್ನೆಗಳನ್ನು ರಚಿಸಲಾಗಿದೆ.
▪️8 ರಿಂದ 10ನೇ ತರಗತಿಯವರೆಗೆ SSLC ಪ್ರಶ್ನೆ ಪತ್ರಿಕೆ 8 ರಿಂದ 10ನೇ ತರಗತಿಯವರೆಗೆ SSLC ಪ್ರಶ್ನೆ ಪತ್ರಿಕೆ ಮಾದರಿಯಲ್ಲಿ ಅತೀ ಹೆಚ್ಚಿನ ಸಂಖ್ಯೆಯ ಬಹು ಆಯ್ಕೆ ಪ್ರಶ್ನೆಗಳು ಮತ್ತು ವಿವರಣಾತ್ಮಕ ಪ್ರಶ್ನೆಗಳನ್ನು ರಚಿಸಲಾಗಿದೆ.
▪️ ಕಲಿಕಾ ಪ್ರಕ್ರಿಯೆ ಹಾಗೂ ಮೌಲ್ಯಾಂಕನಗಳಲ್ಲಿ ಪ್ರಶ್ನೆ ಕೋಠಿಗಳಲ್ಲಿನ ಪ್ರಶ್ನೆಗಳನ್ನು ಕಡ್ಡಾಯವಾಗಿ ಬಳಸಿಕೊಳ್ಳುವುದು. (FA-1, 2, 3 & 4, SA-1, CCE ៩, ៩ ថ, ជ ಪ್ರಶ್ನೆಪತ್ರಿಕೆಗಳು, ಪೂರ್ವಸಿದ್ಧತಾ ಪರೀಕ್ಷೆಗಳು, ವಾರ್ಷಿಕ ಪರೀಕ್ಷೆ ಇತ್ಯಾದಿ.)
▪️1 ರಿಂದ 5ನೇ ತರಗತಿಗಳಿಗೆ ಎಲ್ಲಾ ರೀತಿಯ ವಸ್ತು ನಿಷ್ಠ ಪ್ರಶ್ನೆಗಳು ಮತ್ತು ವಿವರಣಾತ್ಮಕ ಪ್ರಶ್ನೆಗಳನ್ನು ಒಳಗೊಂಡ 25 ಅಂಕಗಳಿಗೆ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಿ ಪಾಠ ಆಧಾರಿತ ಮೌಲ್ಯಾಂಕನ (Unit Test) ಮಾಡುವುದು.
▪️6 & 7ನೇ ತರಗತಿಗಳಿಗೆ ಎಲ್ಲಾ ರೀತಿಯ ವಸ್ತು ನಿಷ್ಠ ಪ್ರಶ್ನೆಗಳು ಮತ್ತು ವಿವರಣಾತ್ಮಕ ಪ್ರಶ್ನೆಗಳನ್ನು ಒಳಗೊಂಡಂತೆ 20 ಅಂಕಗಳಿಗೆ LBA ಪ್ರಶ್ನೆಕೋಠಿಯ ಹಾಗೂ 05 ಅಂಕಗಳಿಗೆ ಮರುಸಿಂಚನದ ಪ್ರಶ್ನೆಗಳನ್ನು ಆಯ್ಕೆ ಮಾಡಿ, ಒಟ್ಟು 25 ಅಂಕಗಳಿಗೆ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಿ ಪಾಠ ಆಧಾರಿತ ಮೌಲ್ಯಾಂಕನ (Unit Test) ಮಾಡುವುದು.
▪️ಪ್ರತಿ ಪಾಠದ ನಂತರ ವಿದ್ಯಾರ್ಥಿಗಳ ಕಲಿಕೆಯನ್ನು ದೃಢೀಕರಿಸಿಕೊಳ್ಳಲು 8 ರಿಂದ 10ನೇ ತರಗತಿಗಳಿಗೆ 10ನೇ ತರಗತಿ ಪ್ರಶ್ನೆಪತ್ರಿಕೆಯ ಮಾದರಿಯಂತೆ ಎಲ್ಲಾ ರೀತಿಯ ಪ್ರಶ್ನೆಗಳನ್ನೊಳಗೊಂಡ (MCQs, 1, 2, 3, 4 ಮತ್ತು 5 ಅಂಕದ ಪ್ರಶ್ನೆಗಳು) 20 ಅಂಕಗಳಿಗೆ LBA ಪ್ರಶ್ನೆಕೋಠಿಯ ಹಾಗೂ 05 ಅಂಕಗಳಿಗೆ ಮರುಸಿಂಚನದ ಪ್ರಶ್ನೆಗಳನ್ನು ಆಯ್ಕೆ ಮಾಡಿ, ಒಟ್ಟು 25 ಅಂಕಗಳಿಗೆ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಿ ಪಾಠ ಆಧಾರಿತ ಮೌಲ್ಯಾಂಕನ (Unit Test) ಮಾಡುವುದು.
▪️ಪಾಠ ಆಧಾರಿತ ಮೌಲ್ಯಾಂಕನದ ಅಂಕಗಳನ್ನು SATS ತಂತ್ರಾಂಶದಲ್ಲಿ ದಾಖಲಿಸಲು ಅನುವಾಗುವಂತೆ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದ್ದು ಈ ಸಂಬಂಧ ದಿನಾಂಕ: 19-07-2025 ರಂದು ಆಯೋಜಿಸಲಾಗುವ You tube live ಕಾರ್ಯಕ್ರಮದಲ್ಲಿ ಮಾರ್ಗದರ್ಶನ ನೀಡಲಾಗುವುದು.
▪️SATS ನ ವಿಶ್ಲೇಷಣಾ ವರದಿಗನುಗುಣವಾಗಿ ವಿದ್ಯಾರ್ಥಿಗಳ ಕಲಿಕಾ ಸಾಧನೆಯನ್ನು ಆಧರಿಸಿ Average, Below Average & Above Average ವಿದ್ಯಾರ್ಥಿಗಳನ್ನು ಗುರುತಿಸಿಕೊಂಡು ವಿವಿಧ ಚಟುವಟಿಕೆಗಳ ಮೂಲಕ ಪರಿಹಾರ ಬೋಧನೆ ಹಮ್ಮಿಕೊಂಡು ವಿದ್ಯಾರ್ಥಿಗಳ ಕಲಿಕೆಯನ್ನು ಖಾತ್ರಿಪಡಿಸಿಕೊಳ್ಳುವುದು.
▪️ಸ್ಥಳೀಯ ಸಂಪನ್ಮೂಲಗಳು ಹಾಗೂ ಸಮುದಾಯ ಸೇರಿದಂತೆ ಎಲ್ಲಾ ಭಾಗೀದಾರರ ಸಹಕಾರ ಪಡೆದು ಪರಿಹಾರ ಬೋಧನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು.
▪️ತರಗತಿಯ ಎಲ್ಲಾ ವಿದ್ಯಾರ್ಥಿಗಳು ಕಲಿಕಾ ಪ್ರಗತಿ ಸಾಧಿಸುತ್ತಿರುವುದನ್ನು ನಿರಂತರವಾಗಿ ಅನುಪಾಲನೆ ಮಾಡುವುದು.
3. LBA ಅನುಷ್ಠಾನದ ಮೇಲ್ವಿಚಾರಣೆ
ಶಾಲಾ ಹಂತ:
▪️ಮುಖ್ಯ ಶಿಕ್ಷಕರು ತಮ್ಮ ಬೋಧನಾ ವಿಷಯವನ್ನು ಕಡ್ಡಾಯವಾಗಿ ಬೋಧಿಸುವುದು ಹಾಗೂ ಕಲಿಕಾ ಪ್ರಕ್ರಿಯೆ ಹಾಗೂ ಮೌಲ್ಯಾಂಕನದಲ್ಲಿ LBA ಪ್ರಶ್ನೆಕೋಠಿಯನ್ನು ಬಳಸುವುದು.
▪️ಎಲ್ಲಾ ವಿಷಯಗಳ LBA ಪ್ರಶ್ನೆಕೋಠಿಯನ್ನು ಅವಲೋಕಿಸಿ, ಶಿಕ್ಷಕರ ಹಾಗೂ ಅತಿಥಿ ಶಿಕ್ಷಕರ ಪಾಠಗಳನ್ನು ನಿರಂತರವಾಗಿ ವೀಕ್ಷಣೆ ಮಾಡಿ LBA ಪ್ರಶ್ನೆಕೋಠಿ ಬಳಸುತ್ತಿರುವುದನ್ನು ಖಾತರಿ ಮಾಡಿಕೊಂಡು ಮಾರ್ಗದರ್ಶನ ನೀಡುವುದು.
▪️ವಿದ್ಯಾರ್ಥಿಗಳ ಕಲಿಕಾ ಪ್ರಗತಿಯನ್ನು ನಿರಂತರವಾಗಿ ಪೋಷಕರ ಗಮನಕ್ಕೆ ತಂದು ನಿಧಾನ ಕಲಿಕೆ ಮಕ್ಕಳ ಕಲಿಕಾ ಪ್ರಗತಿಗೆ ಪೋಷಕರ ಸಹಕಾರ ಪಡೆಯುವುದು.
▪️ಪೋಷಕರು/ತಾಯಂದಿರ ಸಭೆ, SDMC ಸಭೆಗಳಲ್ಲಿ LBA ಪ್ರಶ್ನೆಕೋಠಿಯ ಬಗ್ಗೆ ಚರ್ಚಿಸಿ ಅರಿವು ಮೂಡಿಸುವುದು.
▪️LBA ಪ್ರಶ್ನೆಕೋಠಿಯನ್ನು ಉತ್ತಮವಾಗಿ ಅನುಷ್ಠಾನ ಮಾಡಿ ಉತ್ತಮ ಫಲಿತಾಂಶ ಪಡೆದ ಶಾಲೆಗಳಲ್ಲಿನ ಉತ್ತಮ ಅಭ್ಯಾಸಗಳನ್ನು ಸಭೆಗಳಲ್ಲಿ ಹಂಚಿಕೊಳ್ಳುವುದು.
▪️LBA ಪುಶ್ನೆಕೋಠಿಯನ್ನು ಯಶಸ್ವಿಯಾಗಿ ಅನುಷ್ಠಾನಿಸುವ ಸಂಬಂಧ, 15 ದಿನಗಳಿಗೊಮ್ಮೆ ಶನಿವಾರ ಶಾಲಾ ಅವಧಿಯ ನಂತರ ಶಿಕ್ಷಕರ ಸಭೆ ಕರೆದು ಪ್ರಗತಿ ಪರಿಶೀಲನೆ ಮಾಡುವುದು
▪️ಮುಖ್ಯ ಶಿಕ್ಷಕರು ತಮ್ಮ Login ನಲ್ಲಿರುವ ವಿಶ್ಲೇಷಣಾ ವರದಿಯನ್ವಯ ತರಗತಿವಾರು, ವಿಷಯವಾರು ಶಿಕ್ಷಕರೊಂದಿಗೆ ಚರ್ಚಿಸಿ ಮಾರ್ಗದರ್ಶನ ನೀಡಿ ಅನುಪಾಲನೆ ಮಾಡುವುದು.
4. ತಾಲ್ಲೂಕು ಹಂತದ ಅಧಿಕಾರಿಗಳು (BEO, BRC, ಸಹಾಯಕ ನಿರ್ದೇಶಕರು ಹಾಗೂ ಸಮಾನಾಂತರ ಹುದ್ದೆಗಳ ಅಧಿಕಾರಿಗಳು)
▪️CRP ಗಳು LBA ಪ್ರಶ್ನೆಕೋಠಿ ಬಳಸುವ ಕುರಿತು ಶನಿವಾರ ಶಾಲಾ ಅವಧಿಯ ನಂತರ ತಮ್ಮ ವ್ಯಾಪ್ತಿಯ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರಿಗೆ Online/Offline ಮೂಲಕ ಮಾಹಿತಿ ಹಂಚಿಕೊಳ್ಳುವುದು.
▪️ಎಲ್ಲಾ ವಿಷಯಗಳ LBA ಪ್ರಶ್ನೆಕೋಠಿಯನ್ನು ಕಡ್ಡಾಯವಾಗಿ ಅವಲೋಕಿಸುವುದು.
▪️ಭೇಟಿ ಸಂದರ್ಭದಲ್ಲಿ ಇದನ್ನು ನಿರಂತರವಾಗಿ ಕಲಿಕಾ ಪ್ರಕ್ರಿಯೆಯಲ್ಲಿ ಬಳಸುತ್ತಿರುವ ಬಗ್ಗೆ ಖಾತರಿ ಪಡಿಸಿಕೊಳ್ಳುವುದು.
▪️ಪ್ರತಿ ಭೇಟಿಯಲ್ಲೂ ವಿದ್ಯಾರ್ಥಿವಾರು ಹಾಗೂ ವಿಷಯವಾರು ಮಾಡಿರುವ ವಿಶ್ಲೇಷಣೆ ಹಾಗೂ ಕೈಗೊಂಡ ಕ್ರಮಗಳ ಬಗ್ಗೆ ಗಮನಿಸಿ ಸೂಕ್ತ ಮಾರ್ಗದರ್ಶನ ನೀಡಿ ಅನುಪಾಲನೆ ಮಾಡುವುದು.
▪️ಶೂನ್ಯ ಫಲಿತಾಂಶ ಪಡೆದ ಶಾಲೆಗಳು, ನಿರಂತರವಾಗಿ ಫಲಿತಾಂಶ ಕಡಿಮೆಯಿರುವ ಶಾಲೆಗಳು, ರಾಜ್ಯ ಫಲಿತಾಂಶಕ್ಕಿಂತ ಕಡಿಮೆ ಫಲಿತಾಂಶ ಪಡೆದಿರುವ ಶಾಲೆಗಳು ಹಾಗೂ ವಿದ್ಯಾರ್ಥಿಗಳ ಪ್ರಗತಿ ಕಡಿಮೆಯಿರುವ ಶಾಲೆಗಳಿಗೆ ನಿರಂತರ ಭೇಟಿ ನೀಡಿ ಕಲಿಕಾ ಪ್ರಗತಿಗೆ ಕ್ರಮವಹಿಸುವುದು.
▪️ಉತ್ತಮ ಕಲಿಕಾ ಪ್ರಗತಿಯಿರುವ ಶಾಲೆಗಳ ಉತ್ತಮ ಅಭ್ಯಾಸಗಳನ್ನು ಇತರೆ ಶಾಲೆಗಳಿಗೆ ಪರಿಚಯಿಸುವುದು.
▪️ದತ್ತು ನೀಡಿರುವ ಶಾಲೆಗಳಿಗೆ ನಿರಂತರವಾಗಿ ಭೇಟಿ ನೀಡಿ SATS ನಲ್ಲಿ ದಾಖಲಿಸಿರುವಂತೆ, ವಿದ್ಯಾರ್ಥಿಗಳ ಕಲಿಕೆಯನ್ನು ಪರಿಶೀಲಿಸಿ, ಮಾರ್ಗದರ್ಶಿಸಿ ಅನುಪಾಲಿಸುವುದು.
▪️ಮೇಲುಸ್ತುವಾರಿ ಅಧಿಕಾರಿಗಳು ಡಯಟ್ ತಾಲ್ಲೂಕು ನೋಡಲ್ ಅಧಿಕಾರಿಗಳ ಉಪಸ್ಥಿತಿಯಲ್ಲಿ ತಾವು ಭೇಟಿ ನೀಡಿದ ಶಾಲೆಗಳ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರ ಸಭೆಯನ್ನು 15 ದಿನಗಳಿಗೊಮ್ಮೆ ಶಾಲಾ ಅವಧಿಯ ನಂತರ Online ಮೂಲಕ ಆಯೋಜಿಸಿ ಪ್ರಗತಿ ಪರಿಶೀಲನೆ ನಡೆಸಿ LBA ಪ್ರಶ್ನೆಕೋಠಿ ಬಳಸಿ ವಿದ್ಯಾರ್ಥಿಗಳ ಕಲಿಕೆ ಪ್ರಗತಿಗೆ ಅಗತ್ಯ ಮಾರ್ಗದರ್ಶನ ನೀಡುವುದು.
▪️BEO, ತಾಲ್ಲೂಕು ನೋಡಲ್, BRC ಮತ್ತು ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ರವರ ಉಪಸ್ಥಿತಿಯಲ್ಲಿ ECO, BRP, BIERT, CRP ರವರ ಪ್ರಗತಿ ಪರಿಶೀಲನಾ ಸಭೆಯನ್ನು ಪ್ರತಿ ತಿಂಗಳು. ನಡೆಸಿ ಸಭಾ ನಡಾವಳಿಯನ್ನು ಡಯಟ್ ಗೆ ಕಳುಹಿಸುವುದು.
5. ಜಿಲ್ಲಾ ಹಂತದ ಅಧಿಕಾರಿಗಳು
(ಉಪನಿರ್ದೇಶಕರು, ಅಭಿವೃದ್ಧಿ ಮತ್ತು ಆಡಳಿತ ಕಛೇರಿಯಲ್ಲಿನ ಎಲ್ಲಾ ಅಧಿಕಾರಿಗಳು, PM Poshan ಕಾರ್ಯಕ್ರಮದ ಶಿಕ್ಷಣಾಧಿಕಾರಿಗಳು ಹಾಗೂ ಜಿಲ್ಲಾ ವಯಸ್ಕರ ಶಿಕ್ಷಣದ ಶಿಕ್ಷಣಾಧಿಕಾರಿಗಳು ಹಾಗೂ ಸಮಾನಾಂತರ ಹುದ್ದೆಗಳ ಅಧಿಕಾರಿಗಳು)
▪️ಡಯಟ್ ನೇತೃತ್ವದಲ್ಲಿ ಜಿಲ್ಲೆಯ ಎಲ್ಲಾ ಹಂತದ ಅನುಷ್ಠಾನಾಧಿಕಾರಿಗಳಿಗೆ LBA ಪ್ರಶ್ನೆಕೋಠಿ ಬಳಸುವ ಕುರಿತು Online/Offline ಮೂಲಕ ಮಾಹಿತಿ ಹಂಚಿಕೊಳ್ಳುವುದು.
▪️ಜಿಲ್ಲಾ ಹಂತದ ಅಧಿಕಾರಿಗಳಿಗೆ ಶಾಲೆಗಳನ್ನು ದತ್ತು ನೀಡಿ ನಿರಂತರ ಭೇಟಿ ಕೈಗೊಂಡು ಮಾರ್ಗದರ್ಶನ ನೀಡುವುದು.
▪️ಎಲ್ಲಾ ಅಧಿಕಾರಿಗಳು ಎಲ್ಲಾ ವಿಷಯಗಳ LBA ಪ್ರಶ್ನೆಕೋಠಿಯನ್ನು ಕಡ್ಡಾಯವಾಗಿ ಅವಲೋಕಿಸುವುದು.
▪️ಭೇಟಿ ಸಂದರ್ಭದಲ್ಲಿ ನಿರಂತರವಾಗಿ ಕಲಿಕಾ ಪ್ರಕ್ರಿಯೆಯಲ್ಲಿ ಮತ್ತು ಮೌಲ್ಯಾಂಕನಕ್ಕಾಗಿ LBA ಬಳಸುತ್ತಿರುವ ಬಗ್ಗೆ ಹಾಗೂ SATS ನಲ್ಲಿ ದಾಖಲಿಸುತ್ತಿರುವ ಬಗ್ಗೆ, ಖಾತರಿಪಡಿಸಿಕೊಳ್ಳುವುದು.
▪️ಪ್ರತಿ ಭೇಟಿಯಲ್ಲೂ ವಿದ್ಯಾರ್ಥಿವಾರು ಹಾಗೂ ವಿಷಯವಾರು ಮಾಡಿರುವ ವಿಶ್ಲೇಷಣೆ ಹಾಗೂ ಕೈಗೊಂಡ ಕ್ರಮಗಳ ಬಗ್ಗೆ ಗಮನಿಸಿ ಸೂಕ್ತ ಮಾರ್ಗದರ್ಶನ ನೀಡುವುದು.
▪️ಪಾಠ ಆಧಾರಿತ ಮೌಲ್ಯಾಂಕನ, ರೂಪಣಾತ್ಮಕ, ಸಂಕಲನಾತ್ಮಕ ಮತ್ತು ಪೂರ್ವಸಿದ್ಧತಾ ಪರೀಕ್ಷೆಗಳಲ್ಲಿ LBA ಪ್ರಶ್ನೆಗಳನ್ನು ಅಳವಡಿಸಿರುವ ಬಗ್ಗೆ ಗಮನಿಸಿ ಪರೀಕ್ಷೆಗಳ ಫಲಿತಾಂಶದ ವಿಶ್ಲೇಷಣೆ ಆಧರಿಸಿ ಫಲಿತಾಂಶ ಸುಧಾರಣೆಗೆ ಕ್ರಮವಹಿಸುವುದು.
▪️ಜಿಲ್ಲಾ ಮತ್ತು ತಾಲ್ಲೂಕು ಹಂತದ ಅನುಷ್ಠಾನಾಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯನ್ನು ಮೌಲ್ಯಾಂಕನಗಳ ವಿಶ್ಲೇಷಣೆ ಆಧರಿಸಿ ಉಪನಿರ್ದೇಶಕರು ಆಡಳಿತ ಮತ್ತು ಅಭಿವೃದ್ಧಿರವರ ನೇತೃತ್ವದಲ್ಲಿ ನಡೆಸಿ, ಪ್ರತಿ ತಿಂಗಳು ಸಭಾ ನಡಾವಳಿಯನ್ನು DSERT ಗೆ ಕಳುಹಿಸುವುದು.
▪️ನಿರ್ದೇಶಕರು, DSERT ರವರ ನೇತೃತ್ವದಲ್ಲಿ ಮೌಲ್ಯಾಂಕನಗಳ ಜಿಲ್ಲಾವಾರು ವಿಶ್ಲೇಷಣೆ ಆಧರಿಸಿ ಎಲ್ಲಾ ಡಯಟ್ ಪ್ರಾಂಶುಪಾಲರುಗಳ ಪ್ರಗತಿ ಪರಿಶೀಲನಾ ಸಭೆಯನ್ನು ಪ್ರತಿ ತಿಂಗಳು ನಡೆಸಿ ಮಾರ್ಗದರ್ಶನ ನೀಡಿ ಅನುಪಾಲನೆ ಮಾಡುವುದು.
▪️ಈ ಮೇಲಿನಂತೆ ಪಾಠ ಆಧಾರಿತ ಮೌಲ್ಯಾಂಕನ ಪ್ರಶ್ನೆಕೋಠಿಯನ್ನು ಬಳಸಿ ಎಲ್ಲಾ ಅಗತ್ಯ ಕ್ರಮ ಕೈಗೊಂಡು ಪ್ರತಿ ವಿದ್ಯಾರ್ಥಿಯು ಕಲಿಕಾ ಪ್ರಗತಿ ಸಾಧಿಸಲು ಕ್ರಮವಹಿಸುವುದು.
CLICK HERE TO DOWNLOAD CIRCULAR

CLICK HERE LESSON BASED ASSESSMENT REPORT