LIC Bima Sakhi Scheme:2024 ಬೀಮಾ ಸಖಿ ಯೋಜನೆಗೆ ಅರ್ಜಿ, ಮಹಿಳೆಯರಿಗೆ ಬಂಪರ್ ಯೋಜನೆ.
LIC: ಮಹಿಳಾ ಸ್ವಾವಲಂಬನೆ ಅದರಲ್ಲೂ ಗ್ರಾಮೀಣ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಉದ್ದೇಶದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಎಲ್‌ಐಸಿ ವಿಮಾ ಸಖಿ (ಬಿಮಾ ಸಖಿ) ಯೋಜನೆಗೆ ಡಿ.9ರಂದು ಚಾಲನೆ ನೀಡಿದರು. ಮುಂದಿನ ಮೂರು ವರ್ಷಗಳಲ್ಲಿ ದೇಶಾದ್ಯಂತ 2 ಲಕ್ಷ ವಿಮಾ ಸಖಿಯರನ್ನು ನೇಮಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ.
ಭಾರತೀಯ ಜೀವ ವಿಮಾ ನಿಗಮದ (LIC) ಯೋಜನೆ ಇದಾಗಿದ್ದು, ಈ ಯೋಜನೆ ಮೂಲಕ ಆರಂಭದಲ್ಲಿ 35 ಸಾವಿರ ಮಹಿಳೆಯರು ಉದ್ಯೋಗಗಕ್ಕೆ ತರಬೇತಿ ಪಡೆಯುವುದರ ಜೊತೆಗೆ ಮಾಸಿಕ ಏಳು ಸಾವಿರ ರೂಪಾಯಿಗಳ ಸ್ಟೈಫಂಡ್ ಕೂಡ ಪಡೆಯಬಹುದಾಗಿದೆ. ಎರಡನೇ ವರ್ಷದಲ್ಲಿ 6 ಸಾವಿರ ರೂ ಮತ್ತು 5 ಸಾವಿರ ರೂ. ಸ್ಟೈಫಂಡ್ ಹೆಚ್ಚಲಿದೆ. ಇದರೊಂದಿಗೆ ವಾರ್ಷಿಕ 24 ಗುರಿ ಸಾಧಿಸಿದವರಿಗೆ ವರ್ಷಕ್ಕೆ 48 ಸಾವಿರ ರೂಪಾಯಿ ಕಮಿಷನ್ ಕೂಡ ದೊರಕಲಿದೆ.
ಮಹಿಳೆಯರು ಎಲ್‌ಐಸಿ ಏಜೆಂಟ್‌ಗಳಾಗಲು ಈ ಯೋಜನೆ ಅವಕಾಶ ಕಲ್ಪಿಸಿದೆ. ಈ ಯೋಜನೆಯ ಮುಖ್ಯ ಉದ್ದೇಶ, ಮಹಿಳೆಯರು ವಿಮಾ ಪಾಲಿಸಿ ಮಾಡುವ ಮೂಲಕ ಭವಿಷ್ಯದ ಭದ್ರತೆಯನ್ನು ಕಲ್ಪಿಸಿಕೊಳ್ಳುವುದು ಆಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ವಿಮೆಗಳು ಅಂದರೆ ಇನ್ನೂರೆನ್ಸ್ ಇದುವರೆಗೂ ಜನರಿಗೆ ತಲುಪುತ್ತಿಲ್ಲ. ಇದೇ ಕಾರಣಕ್ಕೆ ಗ್ರಾಮೀಣ ಪ್ರದೇಶಗಳ ಮಹಿಳೆಯರಿಗೆ ಆದ್ಯತೆ ನೀಡುವ ಯೋಜನೆ ಇದಾಗಿದೆ. ಮಹಿಳಾ ಸ್ವಾವಲಂಬನೆ ಹೆಚ್ಚಿಸಲು ಕೂಡ ಇದು ನೆರವಾಗಲಿದೆ.
LIC ಬೀಮಾ ಸಖಿ ಯೋಜನೆ ಮೂಲಕ ಗ್ರಾಮೀಣ ಮಹಿಳೆಯರಿಗೆ ಸ್ಥಿರ ಆದಾಯ ದೊರಕಲಿದೆ. ಈ ಯೋಜನೆಗೆ ಮುಂದಿನ ದಿನಗಳಲ್ಲಿ 50 ಸಾವಿರ ಮಹಿಳೆಯರನ್ನು ನೇಮಕ ಮಾಡುವ ಸಾಧ್ಯತೆ ಇದೆ. ಈ ಯೋಜನೆಯು ದೇಶಾದ್ಯಂತ ಆರಂಭವಾಗಲಿದೆ. LIC ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು.
ಆಸಕ್ತರು ಡಿಸೆಂಬರ್ 9ರಿಂದ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವಾಗ ಸಮರ್ಪಕವಾಗಿ ದಾಖಲೆ ಪತ್ರಗಳನ್ನು ಸಲ್ಲಿಸಿ. ಮಾಹಿತಿಗಳನ್ನು ಸರಿಯಾಗಿ ನಮೂದಿಸಿ.
ಯಾರೆಲ್ಲ ಅರ್ಜಿ ಸಲ್ಲಿಸಬಹುದು?
“LIC ಬಿಮಾ ಸಖಿ (Micro-Insurance Consultants -MCA) ಎನ್ನುವುದು ಸ್ಟೈಫಂಡರಿ ಸ್ಕೀಮ್ ಆಗಿದೆ. ಮೂರು ವರ್ಷಗಳ ಕಾಲ ಸ್ಟೈಫಂಡ್ ದೊರಕಲಿದೆ. ಈ ಯೋಜನೆಗೆ ಆಯ್ಕೆಯಾದವರನ್ನು ಕಾಯಂ ಉದ್ಯೋಗಿಗಳ ರೀತಿ ನೋಡಲಾಗುವುದಿಲ್ಲ.
ವಯೋಮಿತಿ:
ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಮತ್ತು ಗರಿಷ್ಠ 70 ವರ್ಷವಾಗಿದೆ.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಕನಿಷ್ಠ ವಿದ್ಯಾರ್ಹತೆ 10ನೇ ತರಗತಿಯಾಗಿದೆ.
ಪ್ರತಿ ವರ್ಷದ ಸ್ಟೈಫಂಡರಿ ಅವಧಿಯಲ್ಲೂ ಅಭ್ಯರ್ಥಿಗಳ ಪರ್ಫಾಮೆನ್ಸ್‌ಗೆ ಮಾನದಂಡಗಳು ಇರುತ್ತವೆ. ನಿರ್ದಿಷ್ಟ ಟಾರ್ಗೆಟ್ ಪೂರೈಸಬೇಕು.
ಮೊದಲ ವರ್ಷ 24 ಲೈವ್ಸ್ ಪೂರೈಸಬೇಕು. ಮೊದಲ ವರ್ಷದ ಕಮಿಷನ್ (ಬೋನಸ್ ಕಮಿಷನ್ ಹೊರತುಪಡಿಸಿ) 48 ಸಾವಿರ ರೂಪಾಯಿ ದೊರಕುತ್ತದೆ.
ಈಗಾಗಲೇ LIC ಯಲ್ಲಿ ಕೆಲಸ ಮಾಡುವವರು, ಏಜೆಂಟ್ ಆಗಿರುವವರು ಎಂಸಿಎಗೆ ಅರ್ಜಿ ಸಲ್ಲಿಸುವಂತೆ ಇಲ್ಲ. ಅವರ ಕುಟುಂಬದವರೂ ಅರ್ಜಿ ಸಲ್ಲಿಸುವಂತೆ ಇಲ್ಲ.
ಈಗಾಗಲೇ LIC ಏಜೆಂಟ್ ಆಗಿ ಕೆಲಸ ಮಾಡುತ್ತಿರುವವರು, ಈ ಹಿಂದೆ ಏಜೆಂಟ್ ಆಗಿ ಕೆಲಸ ಮಾಡಿದ್ದವರೂ ಅರ್ಜಿ ಸಲ್ಲಿಸುವಂತೆ ಇಲ್ಲ.
ಅರ್ಜಿ ನಮೂನೆ ಜೊತೆ ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಫೋಟೋ ಲಗತ್ತಿಸಬೇಕು.
ವಯಸ್ಸಿನ ದೃಢೀಕರಣ, ವಿಳಾಸ ದೃಢೀಕರಣ, ಶೈಕ್ಷಣಿಕ ದಾಖಲೆಗಳ ಪ್ರತಿಯನ್ನು ಸ್ವಯಂ ದೃಢೀಕರಿಸಿ ಸಲ್ಲಿಸಬೇಕು.
ಹೆಚ್ಚಿನ ವಿವರ ಹಾಗೂ ಅರ್ಜಿ ಸಲ್ಲಿಸಲು ಭೇಟಿ ನೀಡಬೇಕಾದ ವೆಬ್‌ಸೈಟ್ ವಿಳಾಸ: