Maulana Azad Model Schools Admission: ಮೌಲಾನಾ ಆಜಾದ್ ಮಾದರಿ ಶಾಲೆಗಳ ಪ್ರವೇಶ-2025-26 ಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಸಂಪೂರ್ಣ ಮಾಹಿತಿಯನ್ನು ಓದಿ ಪ್ರವೇಶಕ್ಕೆ ಅರ್ಜಿ ಸಲ್ಲಿಕೆ ಮಾಡಿ
Maulana Azad Model Schools Admission: ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧೀನದಲ್ಲಿ 250 ಮೌಲಾನಾ ಆಜಾದ್ ಮಾದರಿ ಶಾಲೆಗಳು ಕಾರ್ಯನಿರ್ವಹಿಸುತ್ತಿರುತ್ತವೆ. ಸದರಿ ಶಾಲೆಗಳಲ್ಲಿ 6ನೇ ತರಗತಿಯ ಪ್ರವೇಶಾತಿಗೆ ಸುಮಾರು 15000 ಸೀಟುಗಳು ಲಭ್ಯವಿದ್ದು, ಸದರಿ ಸೀಟುಗಳಿಗೆ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಲು ಅನುಸರಿಸಬೇಕಾದ ಪ್ರವೇಶ ಪರೀಕ್ಷೆ, ವಿದ್ಯಾರ್ಥಿಗಳ ಸಂಖ್ಯೆ, ವರ್ಗವಾರು ಮೀಸಲಾತಿ, ವಿಶೇಷ ವರ್ಗಗಳಿಗೆ ಮೀಸಲಾತಿ ಹಾಗೂ ಪರೀಕ್ಷೆ ಮಾರ್ಗಸೂಚಿ ಈ ಕೆಳಕಂಡ ನಿಬಂಧನೆ / ಷರತ್ತು / ಮಾರ್ಗಸೂಚಿಗಳನ್ನು ಅನುಸರಿಸಬೇಕಾಗಿರುತ್ತದೆ.
2. ಪ್ರವೇಶಾತಿ ಸಂಖ್ಯೆ :
ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೌಲಾನಾ ಆಜಾದ್ ಮಾದರಿ ಶಾಲೆಗಳಲ್ಲಿ ಸಾಮಾನ್ಯವಾಗಿ 6ನೇ ತರಗತಿಯ ಪ್ರವೇಶಾತಿ ಸಂಖ್ಯೆಯು ಈ ಕೆಳಗಿನಂತಿರುತ್ತದೆ.
ಶಾಲೆಯ ಹೆಸರು: ಮೌಲಾನಾ ಆಜಾದ್ ಮಾದರಿ ಶಾಲೆ
ಪ್ರತಿ ಶಾಲೆಗೆ 6ನೇ ತರಗತಿಗೆ ಮಂಜೂರಾದ ವಿದ್ಯಾರ್ಥಿಗಳ ಸಂಖ್ಯೆ- 60
3. ವರ್ಗವಾರು ಮೀಸಲಾತಿ ಹಂಚಿಕೆ :
ಸರ್ಕಾರದ ಆದೇಶಗಳನ್ವಯ ಮಂಜೂರಾಗಿರುವ ವಿವಿಧ ವಸತಿ ಶಾಲೆಗಳಿಗೆ 6ನೇ ತರಗತಿಗೆ ಆಯ್ಕೆ ಮಾಡಿ ದಾಖಲು ಮಾಡುವಲ್ಲಿ ಪ್ರತಿ ವರ್ಗದ ವಸತಿ ಶಾಲೆಯು ಅನುಸರಿಸಬೇಕಾದ ಮೀಸಲಾತಿ ವಿವರ ಕೆಳಕಂಡಂತೆ ಇರುವುದು. ಸದರಿ ಮೀಸಲಾತಿಯನ್ನು 6ನೇ ತರಗತಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ದಾಖಲಾತಿ ಮಾಡಿಕೊಳ್ಳುವಾಗ ತಪ್ಪದೇ ಅನುಷ್ಠಾನಗೊಳಿಸುವುದು.
a) ಮೌಲಾನಾ ಆಜಾದ್ ಮಾದರಿ ಶಾಲೆಗಳು :-
(1) ಪ್ರತಿ ಶಾಲೆಗೆ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ : 60
(2) ಮೀಸಲಾತಿ ಅಲ್ಪಸಂಖ್ಯಾತರು : 75% (45 ವಿದ್ಯಾರ್ಥಿಗಳು)
(3) ಇತರೆ ವರ್ಗದ ಮೀಸಲಾತಿ: 25% (15 ವಿದ್ಯಾರ್ಥಿಗಳು)
(4) ಹೆಣ್ಣು ಮಕ್ಕಳಿಗೆ 50% ಸ್ಥಾನಗಳನ್ನು ಮೀಸಲಿರಿಸಲಾಗಿದೆ.
ಪ್ರವೇಶ ಪ್ರಕ್ರಿಯೆ :-

1. ಮೌಲಾನಾ ಆಜಾದ್ ಮಾದರಿ ಶಾಲೆಗಳ 2025-26ನೇ ಶೈಕ್ಷಣಿಕ ಸಾಲಿನ 6ನೇ ತರಗತಿ ಪ್ರವೇಶಕ್ಕಾಗಿ ಅರ್ಹ ಅಭ್ಯರ್ಥಿಗಳು ಸೇವಾ ಸಿಂಧು ಪೋರ್ಟಲ್ Website : https://sevasindhuservices.karnataka.gov.in ನಲ್ಲಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವುದು.
2. ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೌಲಾನಾ ಆಜಾದ್ ಮಾದರಿ ಶಾಲೆಗಳಲ್ಲಿ 6ನೇ ತರಗತಿಯ ಪ್ರವೇಶಾತಿಗೆ ಸಂಬಂಧಿಸಿದಂತೆ, ಜಿಲ್ಲಾ ಅಧಿಕಾರಿಗಳು, ಮುಖ್ಯೋಪಾಧ್ಯಾಯರು ಮತ್ತು ತಾಲ್ಲೂಕು ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿಗಳು, ಸದರಿ ಶಾಲೆಗಳ ಶಿಕ್ಷಕರು. ಮಾಹಿತಿ ಕೇಂದ್ರದ ಸಿಬ್ಬಂದಿಗಳು ಮತ್ತು ಇತರೆ ಸಿಬ್ಬಂದಿಗಳ ಮೂಲಕ ಎಲ್ಲಾ ಸ್ಥಳೀಯ ಸಂಸ್ಥೆಗಳು ಹಾಗೂ ಇತರೆ ಅಂಗ ಸಂಸ್ಥೆಗಳ ಸಹಯೋಗದೊಂದಿಗೆ ಪ್ರತಿ ಗ್ರಾಮ ಮತ್ತು ಪಟ್ಟಣಗಳಿಗೆ ಭೇಟಿ ನೀಡಿ ಮನೆ-ಮನೆ ಪ್ರಚಾರ ಕಾರ್ಯಗಳನ್ನು ಕೈಗೊಂಡು ಮೌಲಾನಾ ಆಜಾದ್ ಮಾದರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸುವಂತೆ ಪ್ರಚಾರ ಮಾಡುವುದು, ಸದರಿ ಶೈಕ್ಷಣಿಕ ವರ್ಷದಲ್ಲಿ ತಮ್ಮ ವ್ಯಾಪ್ತಿಯ ಎಲ್ಲಾ ಮೌಲಾನಾ ಆಜಾದ್ ಮಾದರಿ ಶಾಲೆಗಳಲ್ಲಿ ಶೇ.100% ದಾಖಲಾತಿಯನ್ನು ಪಡೆಯಲು ಜಿಲ್ಲಾ ಅಧಿಕಾರಿಗಳು, ಮುಖ್ಯೋಪಾಧ್ಯಾಯರು ಮತ್ತು ತಾಲ್ಲೂಕು ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿಗಳು, ಅಗತ್ಯ ಕ್ರಮವಹಿಸುವುದು.
3. ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು :
(1) ಅಭ್ಯರ್ಥಿಯು ಸರ್ಕಾರದಿಂದ ಅನುಮೋದಿಸಲ್ಪಟ್ಟ ಶಾಲೆಯಿಂದ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು/ಉತ್ತೀರ್ಣರಾಗಿರಬೇಕು. ದಾಖಲೆಗಳ ಪರಿಶೀಲನೆಯ ಸಂದರ್ಭದಲ್ಲಿ ಅಂಕಪಟ್ಟಿಯನ್ನು ಹೊಂದಿರಬೇಕು.
(2) ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
(3) 10 ರಿಂದ 13 ವಯೋಮಾನದವರಾಗಿರಬೇಕು.
4. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ವಿಧಾನ :
ಪೋಷಕರು/ವಿದ್ಯಾರ್ಥಿಗಳು ನೇರವಾಗಿ ಅರ್ಜಿಗಳನ್ನು ಸೇವಾಸಿಂದು ಪೋರ್ಟಲ್ ಮೂಲಕ ಅರ್ಜಿಯನ್ನು https://sevasindhuservices.karnataka.gov.in ಮೂಲಕ ಸಲ್ಲಿಸಬಹುದು.
5. ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು :
1. ವಿದ್ಯಾರ್ಥಿಯ ಎಸ್.ಎ.ಟಿ.ಎಸ್ ಸಂಖ್ಯೆ
2. ವಿದ್ಯಾರ್ಥಿಯ ಇತ್ತೀಚಿನ ಭಾವಚಿತ್ರ
3. ಜಾತಿ ಮತ್ತು ಆದಾಯ ಪ್ರಮಾಣ ಪತ್ರ
4. ವಿದ್ಯಾರ್ಥಿಯ ಅಂಗವಿಕಲ ಪ್ರಮಾಣ ಪತ್ರ
6. ಪ್ರವೇಶ ಪರೀಕ್ಷೆ ವಿಧಾನ :
(1) ಮೌಲಾನಾ ಆಜಾದ್ ಮಾದರಿ ಶಾಲೆಗಳ ಮಂಜೂರಾತಿ ವಿದ್ಯಾರ್ಥಿಗಳ ಸಂಖ್ಯೆಗಿಂತ ಹೆಚ್ಚು ಅರ್ಜಿಗಳು ಬಂದಲ್ಲಿ ಮಾತ್ರ ಜಿಲ್ಲಾ ಮಟ್ಟದಲ್ಲಿ ಪ್ರವೇಶ ಪರೀಕ್ಷೆಯನ್ನು ನಡೆಸಲಾಗುವುದು. ಇಲ್ಲದಿದ್ದಲ್ಲಿ ನಿಯಮಾನುಸಾರ ಮೆರಿಟ್ ಮತ್ತು ರೋಸ್ಟರ್ ಪದ್ಧತಿ ಅನುಸಾರ ನೇರವಾಗಿ ದಾಖಲಾತಿ ಪ್ರಕ್ರಿಯೆಯನ್ನು ಕೈಗೊಳ್ಳುವುದು.
(2) ಪ್ರವೇಶ ಪರೀಕ್ಷೆಯನ್ನು ಅಗತ್ಯವಿದ್ದಲ್ಲಿ ಮಾತ್ರ ಜಿಲ್ಲಾ ಹಂತದಲ್ಲಿಯೇ ನಿಯಮಾನುಸಾರ ನಡೆಸಲು ಸಂಬಂಧಪಟ್ಟ ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ರವರು ಕ್ರಮ ಕೈಗೊಳ್ಳುವುದು.
(3) ಆಯ್ಕೆಗೆ ಪ್ರವೇಶ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳೇ ನೇರ ಮಾನದಂಡವಾಗಿರುತ್ತದೆ.
(4) ಪ್ರವೇಶ ಪರೀಕ್ಷೆಯು 100 ಅಂಕಗಳ ಬಹು ಆಯ್ಕೆ ಮಾದರಿಯಲ್ಲಿರುತ್ತದೆ.
(5) ಪ್ರಶ್ನೆ ಪತ್ರಿಕೆಯು ಕನ್ನಡ, ಉರ್ದು ಮತ್ತು ಇಂಗ್ಲೀಷ್ ಭಾಷೆಯಲ್ಲಿದ್ದು, 100 ಅಂಕದ 100 ಪ್ರಶ್ನೆಗಳನ್ನು ಒಳಗೊಂಡಿದ್ದು, ಸದರಿ ಪ್ರಶ್ನೆಗಳನ್ನು ಉತ್ತರಿಸಲು 120 ನಿಮಿಷ ಕಾಲಾವಕಾಶ ನೀಡುವುದು.
(6) ಶೇ.90% ಪ್ರಶ್ನೆಗಳು 4 ಮತ್ತು 5 ನೇ ತರಗತಿಯ ಪಠ್ಯಾಧಾರಿತವಾಗಿರುತ್ತದೆ.
(7) ನಿಗಧಿ ಪಡಿಸಿದ ಮಂಜೂರಾತಿ ಸಂಖ್ಯೆಗಿಂತ ಹೆಚ್ಚಿನ ಅರ್ಜಿಗಳು ಸ್ವೀಕೃತವಾದರೆ ಮಾತ್ರ ಪ್ರವೇಶ ಪರೀಕ್ಷೆಗಳನ್ನು ನಡೆಸಲಾಗುವುದು.
7. ಖಾಲಿ ಉಳಿದ ಸ್ಥಾನಗಳ ಭರ್ತಿ:
(1) ಬಾಲಕ ಸ್ಥಾನ ಖಾಲಿ ಉಳಿದರೆ, ಅದೇ ವರ್ಗದ ಬಾಲಕಿಗೆ ಅವಕಾಶ ಕಲ್ಪಿಸುವುದು.
(2) ಬಾಲಕಿ ಸ್ಥಾನ ಖಾಲಿ ಉಳಿದರೆ, ಅದೇ ವರ್ಗದ ಬಾಲಕರಿಗೆ ಅವಕಾಶ ಕಲ್ಪಿಸುವುದು.
(3) ಸರ್ಕಾರದ ಆದೇಶದ ಮೀಸಲಾತಿಯನ್ವಯ ಶೇ.75:25 ರಂತೆ ಅಲ್ಪಸಂಖ್ಯಾತರ ಮತ್ತು ಹಿಂದುಳಿದ ವರ್ಗ ಎಸ್.ಸಿ/ಎಸ್.ಟಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಸುವುದು.

9. ಮೌಲಾನಾ ಆಜಾದ್ ಮಾದರಿ ಶಾಲೆಗಳ ನಿರ್ವಹಣೆ :
250 ಮೌಲಾನಾ ಆಜಾದ್ ಮಾದರಿ ಶಾಲೆಗಳನ್ನು 60 ಸಂಖ್ಯಾಬಲದೊಂದಿಗೆ 6ನೇ ತರಗತಿಯಿಂದ ಆಂಗ್ಲ ಮಾಧ್ಯಮದಲ್ಲಿ ಪ್ರಾರಂಭಿಸಲು ಸರ್ಕಾರದ ಮಂಜೂರಾತಿ ನೀಡಿ ಆದೇಶಿಸಿದೆ.
10. ಮೌಲಾನಾ ಆಜಾದ್ ಮಾದರಿ ಶಾಲೆಗಳಲ್ಲಿ ಸಿಗುವ ಸೌಲಭ್ಯಗಳು :
(1) ಪ್ರತಿ ವಿದ್ಯಾರ್ಥಿಗೆ ಉಚಿತ ಊಟ ಮತ್ತು ವಸತಿ ಸೌಲಭ್ಯದೊಂದಿಗೆ ಉಚಿತ ಶಿಕ್ಷಣ
(2) ಪ್ರತಿ ವಿದ್ಯಾರ್ಥಿಗೆ ಸಮವಸ್ತ್ರ, ಬೂಟು, ಕಾಲುಚೀಲ ಪೂರೈಕೆ.
(3) ಪ್ರತಿ ವಿದ್ಯಾರ್ಥಿಗೆ ಪಠ್ಯ ಪುಸ್ತಕ ಮತ್ತು ಲೇಖನ ಸಾಮಗ್ರಿ ನೀಡಿಕೆ.
(4) ಸದರಿ ಶಾಲೆಗಳಲ್ಲಿ ವೈದ್ಯಕೀಯ ಸೌಲಭ್ಯ. ಪ್ರಯೋಗ ಶಾಲೆ ಉಪಕರಣ, ಭೋಧನಾ ಸಲಕರಣೆ, ಕ್ರೀಡಾ ಸಾಮಗ್ರಿ, ಗ್ರಂಥಾಲಯಗಳನ್ನು ಒದಗಿಸಲಾಗುತ್ತಿದೆ.
(5) ಪ್ರತಿ ಶಾಲೆಯ ವಸತಿ ನಿಲಯಕ್ಕೆ ದಿನಪತ್ರಿಕೆಗಳ ಪೂರೈಕೆ.
(6) ಇ-ಲರ್ನಿಂಗ್ ಪದ್ಧತಿ
(7) ನಾಯಕತ್ವದ ತರಬೇತಿ
(8) ವ್ಯಕ್ತಿತ್ವ ವಿಕಸನ ತರಬೇತಿ
(9) ವೃತ್ತಿ ಮಾರ್ಗದರ್ಶನ
(10) ಸ್ಪಧಾತ್ಮಕ ಪರೀಕ್ಷೆಗಳ ಅರಿವು
(11) ಸ್ಪೋಕನ್ ಇಂಗ್ಲೀಷ್ ಕಾರ್ಯಕ್ರಮ
(11) ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಹೆಚ್ಚು ಅಂಗ ಗಳಿಸುವ ಸಲುವಾಗಿ ನಿರ್ದೇಶನಾಲಯದ ವತಿಯಿಂದ ಉಚಿತವಾಗಿ ಕಲಿಕಾ ಮಾರ್ಗದರ್ಶಿ ಕೈಪಿಡಿಗಳು, ಮಾದರಿ ಪ್ರಶೋತ್ತರ ಕೈಪಿಡಿಗಳು, ಅಭ್ಯಾಸ ಪುಸ್ತಕಗಳು, ಮುಂತಾದ ಹೆಚ್ಚುವರಿ ಸೌಲಭ್ಯಗಳನ್ನು ಒಗಸಿಸಲಾಗುವುದು.
(12) ಜೆ.ಇ.ಇ. /ಎನ್.ಇ.ಇ.ಟಿ / ಸಿ.ಎಲ್.ಎ.ಟಿ ಪರೀಕ್ಷೆಗಳಿಗೆ ತರಬೇತಿ ನೀಡಲಾಗುವುದು.
(13) ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಲಾಗುವುದು.
11. ವಿಶೇಷ ಸೂಚನೆ :
ದಾಖಲಾತಿ ಆಂದೋಲನದಲ್ಲಿ ಮೌಲಾನಾ ಆಜಾದ್ ಮಾದರಿ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು, ತಾಲ್ಲೂಕು ವಿಸ್ತರಣಾಧಿಕಾರಿಗಳು ವ್ಯಾಪಕ ಪ್ರಚಾರವನ್ನು ಕೈಗೊಳ್ಳುವುದರ ಮೂಲಕ ಶಾಲಾ ದಾಖಲಾತಿಯನ್ನು ಹೆಚ್ಚಿಸುವುದು.
ಈ ಮೇಲ್ಕಂಡಂತೆ 2025-26ನೇ ಸಾಲಿನ ಶಾಲಾ ವಾರ್ಷಿಕ ಚಟುವಟಿಕೆಗಳ ನಿರ್ವಹಣೆಗಾಗಿ ಶಿಕ್ಷಣ ಇಲಾಖೆಯ ಮಾರ್ಗಸೂಚಿಗಳನ್ವಯ ಹಾಗೂ ನಿರ್ದೇಶನಾಲಯದ ಶೈಕ್ಷಣಿಕ ಕ್ರಿಯಾ ಯೋಜನೆಯನ್ನು ಪ್ರತ್ಯೇಕವಾಗಿ ನೀಡಲಾಗುವುದು.
ಈ ಮೇಲ್ಕಂಡಂತೆ ಶೈಕ್ಷಣಿಕ ದಾಖಲಾತಿ ಆಂದೋಲನ ಅವಧಿಗಳನ್ನು ನಿಗಧಿಪಡಿಸಿದ್ದು, ಅದರಂತೆ ಅಗತ್ಯ ಪೂರಕ ಸಿದ್ಧತೆಗಳನ್ನು ಮತ್ತು ಮುಂಜಾಗೃತಾ ಕ್ರಮಗಳನ್ನು ಕೈಗೊಂಡು, ಯಶಸ್ವಿಗೊಳಿಸಲು ಸೂಚಿಸಿದೆ.
ಈ ಮಾರ್ಗಸೂಚಿಯು ಕಾಲಕಾಲಕ್ಕೆ ಇಲಾಖೆ, ಸರ್ಕಾರ ಮತ್ತು ಆಯಾ ಜಿಲ್ಲಾಡಳಿತಗಳು ಹೊರಡಿಸುವ ಮಾರ್ಗಸೂಚಿಗಳಂತೆ ಬದಲಾವಣೆಗೆ ಒಳಪಟ್ಟಿರುತ್ತದೆ.
ನಿರ್ದೇಶಕರು, ಅಲ್ಪಸಂಖ್ಯಾತರ ನಿರ್ದೇಶನಾಲಯ, ಬೆಂಗಳೂರು.
CLICK HERE TO DOWNLOAD NOTIFICATION
CLICK HERE TO DOWNLOAD USER MANUAL