MEDICAL COURSE-2024-25: ವೈದ್ಯಕೀಯ ಕೋರ್ಸ್ ಪ್ರವೇಶ ಶುಲ್ಕ ಹೆಚ್ಚಳ.

MEDICAL COURSE-2024-25: ವೈದ್ಯಕೀಯ ಕೋರ್ಸ್ ಪ್ರವೇಶ ಶುಲ್ಕ ಹೆಚ್ಚಳ ಮಾಡಿ ಆದೇಶ

Medical Course: ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿನ ಸ್ನಾತಕೋತ್ತರ (ಎಂಡಿ/ಎಂಎಸ್) ಕೋರ್ಸ್‌ಗಳ ಸೀಟುಗಳಿಗೆ 2024-25ನೇ ಸಾಲಿಗೆ ಪ್ರವೇಶ ಶುಲ್ಕವನ್ನು ಶೇ.10ರಷ್ಟು ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ.

2024-25ನೇ ಸಾಲಿನ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ, ಸರ್ಕಾರಿ ಸ್ವಾಯತ್ತ ವೈದ್ಯಕೀಯ ಕಾಲೇಜುಗಳು, ಕರ್ನಾಟಕ ವೃತ್ತಿಪರ ಕಾಲೇಜುಗಳ ಪ್ರತಿಷ್ಠಾನ (KPCF), ಕರ್ನಾಟಕ ಅಲ್ಪಸಂಖ್ಯಾತರ ವೃತ್ತಿಪರ ಕಾಲೇಜುಗಳ ಸಂಘ (AMPCK) ಹಾಗೂ ಕರ್ನಾಟಕ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತ ಕಾಲೇಜುಗಳ ಸಂಘದ (KRLMPCA) ಅಡಿಯಲ್ಲಿ ಬರುವ ಎಲ್ಲಾ ಕಾಲೇಜುಗಳು ಹಾಗೂ ರಾಜ್ಯದ ಡೀಮ್ಸ್‌ ವಿಶ್ವವಿದ್ಯಾಲಯ ಮತ್ತು ಖಾಸಗಿ ವಿಶ್ವವಿದ್ಯಾಲಯದಡಿ ಬರುವ ವೈದ್ಯಕೀಯ ಕಾಲೇಜುಗಳಲ್ಲಿ 2024- 25ನೇ ಸಾಲಿಗೆ ಪ್ರವೇಶ ಶುಲ್ಕವನ್ನು ಶೇ.10ರಷ್ಟು ಹೆಚ್ಚಳ ಮಾಡಲಾಗಿದೆ.

Medical Course: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್(ಎಂ.ಡಿ/ಎಂ.ಎಸ್)

ಕ್ಲಿನಿಕಲ್

ಹಳೆ ಶುಲ್ಕ ರೂ. 1,00,000/-

ಹೊಸ ಶುಲ್ಕ. 1,10,000/-

ಪ್ಯಾರಾ ಕ್ಲಿನಿಕಲ್:

ಹಳೆ ಶುಲ್ಕ ರೂ.50,000/-,
ಹೊಸ ಶುಲ್ಕ ರೂ. 55,000/-

ಪ್ರೀ ಕ್ಲಿನಿಕಲ್:

ಹಳೆ ಶುಲ್ಕ ರೂ.25,000/-
ಹೊಸ ಶುಲ್ಕ ರೂ. 27,500/-

ರಾಜ್ಯದಲ್ಲಿನ KPCF, KRLMPCA & AMPCK
ಸಂಘಗಳಡಿಯಲ್ಲಿ ಬರುವ ಎಲ್ಲಾ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿನ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ಸೀಟುಗಳಿಗೆ 2024-25ನೇ ಸಾಲಿಗೆ ಪ್ರವೇಶ ಶುಲ್ಕವನ್ನು ಶೇ.10ರಷ್ಟು ಹೆಚ್ಚಿಸಿ ನಿಗದಿಪಡಿಸಲಾದ ಶುಲ್ಕದ ವಿವರ ಕೆಳಗಿನಂತಿರಲಿದೆ.

 Medical Course: ಖಾಸಗಿ ಕೋಟಾ ಅಭ್ಯರ್ಥಿಗಳಿಗೆ

ಕ್ಲಿನಿಕಲ್

ಹಳೆ ಶುಲ್ಕ ರೂ. 12,48,176/-

ಹೊಸ ಶುಲ್ಕ. 13,72,994/-

ಪ್ಯಾರಾ ಕ್ಲಿನಿಕಲ್:

ಹಳೆ ಶುಲ್ಕ ರೂ.3,12,048/-
ಹೊಸ ಶುಲ್ಕ ರೂ. 3,43,253/-

ಪ್ರೀ ಕ್ಲಿನಿಕಲ್:

ಹಳೆ ಶುಲ್ಕ ರೂ.1,56,971/-
ಹೊಸ ಶುಲ್ಕ ರೂ. 1,72,668/-

ಸರ್ಕಾರಿ ಕೋಟಾ ಅಭ್ಯರ್ಥಿಗಳಿಗೆ

ಕ್ಲಿನಿಕಲ್

ಹಳೆ ಶುಲ್ಕ ರೂ. 6,98,280/-

ಹೊಸ ಶುಲ್ಕ ರೂ. 7,68,108/-

ಪ್ಯಾರಾ ಕ್ಲಿನಿಕಲ್:

ಹಳೆ ಶುಲ್ಕ ರೂ.1,74,570/-
ಹೊಸ ಶುಲ್ಕ ರೂ. 1,92,027/-

ಪ್ರೀ ಕ್ಲಿನಿಕಲ್:

ಹಳೆ ಶುಲ್ಕ ರೂ.87,286/-
ಹೊಸ ಶುಲ್ಕ ರೂ. 96,015/-

ರಾಜ್ಯದಲ್ಲಿನ ಡೀಮ್ಸ್ ವಿಶ್ವವಿದ್ಯಾಲಯ ಮತ್ತು ಖಾಸಗಿ ವಿಶ್ವವಿದ್ಯಾಲಯದಡಿ ಬರುವ ವೈದ್ಯಕೀಯ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾದ ಸ್ನಾತಕೋತ್ತರ ಕೋರ್ಸ್(ಎಂ.ಡಿ/ ಎಂ.ಎಸ್)ಗಳ ಸೀಟುಗಳಿಗೆ 2024-25ನೇ ಸಾಲಿಗೆ ಪ್ರವೇಶ ಶುಲ್ಕವನ್ನು ಶೇ.10ರಷ್ಟು ಹೆಚ್ಚಿಸಿ ನಿಗದಿಪಡಿಸಲಾದ ಶುಲ್ಕದ ವಿವರ ಹೀಗಿರಲಿದೆ:

ಕ್ಲಿನಿಕಲ್

ಹಳೆ ಶುಲ್ಕ ರೂ. 6,98,280/-
ಹೊಸ ಶುಲ್ಕ. 7,68,108/-

ಪ್ಯಾರಾ ಕ್ಲಿನಿಕಲ್:

ಹಳೆ ಶುಲ್ಕ ರೂ. 1,74,570/-
ಹೊಸ ಶುಲ್ಕ ರೂ. 1,92,027/-

ಪ್ರೀ ಕ್ಲಿನಿಕಲ್:

ಹಳೆ ಶುಲ್ಕ ರೂ.87,286/-
ಹೊಸ ಶುಲ್ಕ ರೂ. 96,015/-

ವೈದ್ಯಕೀಯ ಸ್ನಾತಕೋತ್ತರ ಪದವಿ (ಎಂಡಿ/ ಎಂಎಸ್) ಕೋರ್ಸ್‌ಗಳಿಗೆ ಶೇ.10 ಶುಲ್ಕ ಹೆಚ್ಚಳ ಮಾಡಲಾಗಿದೆ. ಸರ್ಕಾರಿ ಮತ್ತು ಖಾಸಗಿ ಕೋಟಾ ಸೀಟುಗಳಿಗೆ ಈ ಶುಲ್ಕ ಹೆಚ್ಚಳ ಅನ್ವಯವಾಗಲಿದೆ. ಅದರಂತೆ 2024-25 ಖಾಸಗಿ ಸಾಲಿನ ಕಾಲೇಜಿನಲ್ಲಿ ಖಾಸಗಿ ಕೋಟಾದಡಿ ಕ್ಲಿನಿಕಲ್ ವಿಭಾಗದ ಸೀಟುಗಳಿಗೆ 13.72 ಲಕ್ಷ ರೂ.ಗಳಿದ್ದು, ಪ್ಯಾರಾ ಕ್ಲಿನಿಕಲ್ 3.42 ಲಕ್ಷ ರೂ., ಪ್ರಿ-ಕ್ಲಿನಿಕಲ್‌ಗೆ 1.72 ಲಕ್ಷ ರೂ. ಶುಲ್ಕವಿದೆ. ಸರ್ಕಾರಿ ಕೋಟಾದ ಕ್ಲಿನಿಕಲ್ ಸೀಟಿಗೆ 7.68 ಲಕ್ಷ ರೂ., ಪ್ಯಾರಾ ಕ್ಲಿನಿಕಲ್ 1.92 ಲಕ್ಷ ರೂ. ಮತ್ತು ಪ್ರಿ-ಕ್ಲಿನಿಕಲ್‌ಗೆ 96,015 ರೂ.ಗಳನ್ನು ನಿಗದಿ ಮಾಡಿದೆ.

ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿಯೂ ಶೇ.10 ಶುಲ್ಕ ಹೆಚ್ಚಳ ಮಾಡಲಾಗಿದೆ. ಕ್ಲಿನಿಕಲ್‌ಗೆ 1.10 ಲಕ್ಷ ರೂ. ಪ್ಯಾರಾ ಕ್ಲಿನಿಕಲ್‌ಗೆ 55 ಸಾವಿರ ಮತ್ತು ಪ್ರಿ-ಕ್ಲಿನಿಕಲ್‌ಗೆ 27,500 ರೂ.ಗಳಾಗಿವೆ.

Medical Course: ಆಯ್ಕೆ ದಾಖಲಿಸಲು ಅವಕಾಶ

ಸ್ನಾತಕೋತ್ತರ ವೈದ್ಯ ಕೋರ್ಸ್‌ಗಳ ಸೀಟಿಗೆ ನ.22ರ ಸಂಜೆ 4 ರವರೆಗೆ ಆದ್ಯತಾ ಕ್ರಮದಲ್ಲಿ ಆಪ್ಪನ್ ಎಂಟ್ರಿ ಮಾಡಬಹುದು. ಅಣುಕು ಸೀಟು ಹಂಚಿಕೆ ಫಲಿತಾಂಶವು ನ.23ರ ಸಂಜೆ 4ರ ನಂತರ ಪ್ರಕಟವಾಗಲಿದೆ. ಅಪ್ಪನ್ ಎಂಟ್ರಿ ಬದಲಾಯಿಸಲು ನ.23ರ ಸಂಜೆ 4ರಿಂದ ನ.25ರ ಸಂಜೆ 4ರವರೆಗೆ ಅವಕಾಶವಿರುತ್ತದೆ ಎಂದು ತಿಳಿಸಿದ್ದಾರೆ. ಮೊದಲ ಸುತ್ತಿನ ನೈಜ ಸೀಟು ಹಂಚಿಕೆಯ ಫಲಿತಾಂಶ ನ.26ರ ರಾತ್ರಿ 8ರ ನಂತರ ಪ್ರಕಟವಾಗಲಿದೆ. ಒಟ್ಟು 63 ಕಾಲೇಜುಗಳಲ್ಲಿ 6,310 ಸೀಟುಗಳಿವೆ. ಈ ಪೈಕಿ ಕೆಇಎ ಮೂಲಕ 3,882 ಸೀಟುಗಳು – ಹಂಚಿಕೆಯಾಗಲಿದ್ದು, ಅಖಿಲ ಭಾರತ ಕೋಟಾದಡಿ 2,428 ಸೀಟುಗಳಿರಲಿವೆ.

CLICK HERE MORE INFORMATION

Leave a Comment