MGNREGA:NMMS ನ ದುರುಪಯೋಗವನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮ ಮತ್ತು ಎಲ್ಲಾ ಹಂತಗಳಲ್ಲಿ ಮೇಲ್ವಿಚಾರಣೆಯನ್ನು ಬಲಪಡಿಸುವ ಕುರಿತು ಕೇಂದ್ರ ಸರ್ಕಾರದ ಸೂಚನೆಗಳು ದಿ:17.07.2025

MGNREGA: NMMS ನ ದುರುಪಯೋಗವನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮ ಮತ್ತು ಎಲ್ಲಾ ಹಂತಗಳಲ್ಲಿ ಮೇಲ್ವಿಚಾರಣೆಯನ್ನು ಬಲಪಡಿಸುವ ಕುರಿತು ಕೇಂದ್ರ ಸರ್ಕಾರದ ಸೂಚನೆಗಳು ದಿ:17.07.2025

MGNREGA: ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅನುಷ್ಠಾನ ಮಾಡುವ ಸಮುದಾಯ ಕಾಮಗಾರಿಗಳಲ್ಲಿ ಕೆಲಸ ನಿರ್ವಹಿಸುವ ಜನರ ದೈನಂದಿನ ಹಾಜರಾತಿ ಮತ್ತು ಕಾಮಗಾರಿ ಸ್ಥಳದ ಛಾಯಾಚಿತ್ರಗಳನ್ನು ಸೆರೆ ಹಿಡಿಯಲು NMMS ಮೊಬೈಲ್ ತಂತ್ರಾಂಶವನ್ನು ಕೇಂದ್ರ ಸರ್ಕಾರವು ಹೊರತಂದಿದೆ. NMMS ನಲ್ಲಿ ಆಗುತ್ತಿರುವ ಲೋಪದೋಷಗಳನ್ನು ತಡೆಗಟ್ಟಲು ಕಟ್ಟುನಿಟ್ನಾದ ಮೇಲ್ವಿಚಾರಣೆ ನಡೆಸುವಂತೆ ಪ್ರಗತಿ ಪರಿಶೀಲನಾ ಸಭೆಗಳಲ್ಲಿ, ಇಲಾಖೆಯ ಮಾನ್ಯ ಸಚಿವರು ಹಾಗೂ ಆಯುಕ್ತರು ನಿಯಮಿತವಾಗಿ ಸೂಚನೆಗಳನ್ನು ನೀಡಿರುತ್ತಾರೆ. NMMS ಫೋಟೋ upload ನಲ್ಲಿ ಆಗುತ್ತಿರುವ ವ್ಯತ್ಯಾಸಗಳನ್ನು ಕೇಂದ್ರ ಸರ್ಕಾರವು ಗಮನಿಸಿದ್ದು ಅವುಗಳು ಈ ಕೆಳಗಿನಂತಿವೆ-

1. ಅಪ್ರಸ್ತುತ ಮತ್ತು ಸಂಬಂಧವಿಲ್ಲದ ಛಾಯಾಚಿತ್ರಗಳನ್ನು upload ಮಾಡುತ್ತಿರುವುದು.

2. ಲೈವ್ ಫೋಟೋ ಬದಲು ಫೋಟೋ ಮೇಲೆ ಫೋಟೋ ಸೆರೆಹಿಡಿಯುತ್ತಿರುವುದು.

3. ಕೆಲಸಗಾರರ ಎಣಿಕೆಯಲ್ಲಿ ವ್ಯತ್ಯಾಸವಾಗುತ್ತಿರುವುದು.

4. ಮಹಿಳೆ ಮತ್ತು ಪುರುಷ ಕೆಲಸಗಾರರ ಎಣಿಕೆಯಲ್ಲಿ ವ್ಯತ್ಯಾಸ.

5. ಕೆಲಸಗಾರರು ಒಂದಕ್ಕಿಂತ ಹೆಚ್ಚಿನ Mustor roll ನಲ್ಲಿ ಇರುವುದು.

6. ಬೆಳಗಿನ ಮತ್ತು ಮದ್ಯಾಹ್ನದ ಫೋಟೋಗಳಲ್ಲಿ ಬೇರೆ ಬೇರೆ ಕೆಲಸಗಾರರು ಇರುವುದು.

7. ಮದ್ಯಾಹ್ನದ ಫೋಟೋ upload ಮಾಡದೇ ಇರುವುದು.

ಆದ್ದರಿಂದ, ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ NMMS ಬಳಕೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಕಾಯ್ದುಕೊಳ್ಳಲು, ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು ತಕ್ಷಣದಿಂದ ಜಾರಿಗೆ ಬರುವಂತೆ ಈ ಕೆಳಗಿನ ನಿರ್ದೇಶನಗಳನ್ನು ನೀಡಿದೆ.

A) PHOTO and Attendance AUDIT:
ಎಲ್ಲಾ ಹಂತಗಳಲ್ಲಿ NMMS Photo audit ನ್ನು ಇಂತಿಷ್ಟು ಪ್ರತಿಶತ ಕೈಗೊಳ್ಳಲು ತಿಳಿಸಿದ್ದು, ಮೇಲ್ವಿಚಾರಣೆಗೆ ಅನುಸರಿಸಬೇಕಾದ ವಿಧಾನವನ್ನು ಈ ಕೆಳಗಿನಂತೆ ನೀಡಿದೆ.

1 . ಗ್ರಾಮ ಪಂಚಾಯತಿ/ಅನುಷ್ಠಾನ ಇಲಾಖೆಯ ಮಟ್ಟದಲ್ಲಿ: ಆಯಾ ದಿನದ ಶೇ.100 ರಷ್ಟು ಹಾಜರಾತಿಗಳು ಮತ್ತು ಫೋಟೋಗಳನ್ನು ಅದೇ ದಿನ 14 Signatory officer ಕಡ್ಡಾಯವಾಗಿ ಪರಿಶೀಲಿಸುವುದು.

2.ತಾಲ್ಲೂಕು ಮಟ್ಟದಲ್ಲಿ:

ಕಾರ್ಯಕ್ರಮಾಧಿಕಾರಿಗಳು (ಕಾರ್ಯ ನಿರ್ವಾಹಕ ಅಧಿಕಾರಿಗಳು) ಮತ್ತು ಸಹಾಯಕ ನಿರ್ದೇಶಕರು (ಗ್ರಾ.ಉ) 200 ಅಥವಾ ಶೇ 20 ರಷ್ಟು ಫೋಟೋಗಳನ್ನು Random ಆಗಿ (whichever is lesser) Th+1 day ) ನಲ್ಲಿ ಕಡ್ಡಾಯವಾಗಿ ಪರಿಶೀಲಿಸುವುದು.

3.ಜಿಲ್ಲಾ ಮಟ್ಟದಲ್ಲಿ :

DPC ಯು 30 ಫೋಟೋ, ಜಿಲ್ಲಾ ಹಂತದ ನರೇಗಾ ನೋಡಲ್ ಅಧಿಕಾರಿಗಳು (DS/PD) 100 ಅಥವಾ ಶೇ.10 ರಷ್ಟು ಫೋಟೋಗಳನ್ನು Random ಆಗಿ (whichever is lesser) Th+1 day ನಲ್ಲಿ ಕಡ್ಡಾಯವಾಗಿ ಪರಿಶೀಲಿಸುವುದು. ನರೆಗಾ ಹೊರಗುತ್ತಿಗೆ ಸಿಬ್ಬಂದಿಗಳಾದ ADPC, DMIS, DIEC ರವರುಗಳು 200 ಶೇ.10 ರಷ್ಟು ಫೋಟೋಗಳನ್ನು Random ಆಗಿ (whichever is lesser) Th+1 day ನಲ್ಲಿ ಕಡ್ಡಾಯವಾಗಿ ಪರಿಶೀಲಿಸುವುದು.

4. ರಾಜ್ಯ ಮಟ್ಟದಲ್ಲಿ:

▪️ಆಯುಕ್ತರು 20 ಫೋಟೋಗಳನ್ನು ಮತ್ತು ಇತರೆ ಅಧಿಕಾರಿಗಳು 100 ಅಥವಾ ಶೇ 5ರಷ್ಟು ಫೋಟೋಗಳನ್ನು Random n (whichever is lesser) Tth+2 day ನಲ್ಲಿ ಕಡ್ಡಾಯವಾಗಿ ಪರಿಶೀಲಿಸುವುದು. ನರೇಗಾ ಹೊರಗುತ್ತಿಗೆ ಸಿಬ್ಬಂದಿಗಳು ತಲಾ 200 ಶೇ.5 ರಷ್ಟು ಫೋಟೋಗಳನ್ನು Random ಆಗಿ (whichever is lesser) Tth+2 day)ನಲ್ಲಿ ಕಡ್ಡಾಯವಾಗಿ ಪರಿಶೀಲಿಸುವುದು.

▪️ನರೇಗಾ ತಂತ್ರಾಂಶದಲ್ಲಿ NMMS ಹಾಜರಾತಿ ಮತ್ತು ಫೋಟೋ ಪರಿಶೀಲನಾ Module ಅಭಿವೃದ್ಧಿಯು ಪುಗತಿಯಲ್ಲಿದ್ದು, ಶೀಘ್ರದಲ್ಲಿಯೇ ತಂತ್ರಾಂಶದಲ್ಲಿ ಅಳವಡಿಸಲಾಗುವುದು, ಅಲ್ಲಿಯವರೆಗೂ ಮೇಲೆ ತಿಳಿಸಿರುವ Manual verification ವ್ಯವಸ್ಥೆಯನ್ನು ಕಡ್ಡಾಯವಾಗಿ ಪಾಲಿಸಿ, ದೈನಂದಿನ ವರದಿಯನ್ನು ಆಯುಕ್ತಾಲಯಕ್ಕೆ ಲಗತ್ತಿಸಿರುವ ನಮೂನೆಯಲ್ಲಿ ಸಲ್ಲಿಸಲು ಸೂಚಿಸಿದೆ.

▪️ಜಿಲ್ಲಾಮಟ್ಟದ ವರದಿಯೊಂದಿಗೆ ರಾಜ್ಯಮಟ್ಟದ ಪರಿಶೀಲನಾ ವರದಿಯನ್ನು ಸೇರಿಸಿ ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯಕ್ಕೆ ಪ್ರತಿದಿನದ ಪರಿಶೀಲನಾ ವರದಿಗಳನ್ನು ಸಲ್ಲಿಸಲಾಗುವುದು.

B) ತಪ್ಪಿತಸ್ಥ ಅಧಿಕಾರಿ/ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ:

▪️ದೋಷಪೂರಿತ Photoಗೆ ಕಾರಣರಾದ ಅಧಿಕಾರಿ/ಸಿಬ್ಬಂದಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದು.

C) ಕೈಗೊಂಡ ಶಿಸ್ತು ಕ್ರಮಗಳ ಕುರಿತು ಅನುಪಾಲನ ವರದಿ-

▪️ಕಂಡಿಕೆ (B) ರಲ್ಲಿನ ತಪ್ಪಿತಸ್ಥ ಅಧಿಕಾರಿ/ಸಿಬ್ಬಂದಿಗಳ ವಿರುದ್ಧ ತೆಗೆದುಕೊಂಡ ಕ್ರಮದ ಬಗ್ಗೆ, ಆಯುಕ್ತಾಲಯಕ್ಕೆ ವರದಿ ಸಲ್ಲಿಸುವುದು.

D) NMMS ಮೇಲ್ವಿಚಾರಣ ಕೋಶ –

▪️ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ NMMS ಪರಿಶೀಲನೆಗಾಗಿ Monitoring Cell ಗಳನ್ನು ಸ್ಥಾಪಿಸುವುದು.

▪️ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಈ ಕೆಳಗಿನಂತೆ ಸದಸ್ಯರುಗನ್ನೊಳಗೊಂಡಂತೆ ಪರಿಶೀಲನಾ ಕೋಶವನ್ನು ರಚಿಸುವುದು.

1.ಜಿಲ್ಲಾ ಮಟ್ಟ: CEO, DFO, DS/PD,EE, DD(Agri), DD(Horti), DD (Seri), ADPC, DMIS ಮತ್ತು DIEC

2. ತಾಲ್ಲೂಕ ಮಟ್ಟ: EO, RFO, SADH, AD(Agri), AD(seri), AD(RE), TMIS, TIEC

ಜಿಲ್ಲಾ ನರೇಗಾ ನೋಡಲ್ ಅಧಿಕಾರಿಯಾದ ಉಪ ಕಾರ್ಯದರ್ಶಿಗಳು ಜಿಲ್ಲೆಯಲ್ಲಿನ ದೈನಂದಿನ NMMS ಫೋಟೋ ಪರಿಶೀಲನೆಯನ್ನು ಮೇಲಿನ ಪರಿಶೀಲನಾ ಕೋಶದಲ್ಲಿನ ಅಧಿಕಾರಿ/ಸಿಬ್ಬಂದಿಗಳು ನಿಗದಿತ ಗುರಿಗೆ ತಕ್ಕಂತೆ ಪರಿಶೀಲನೆ ನಡೆಸುವುದನ್ನು ಖಾತ್ರಿ ಪಡಿಸಿಕೊಳ್ಳುವುದು ಮತ್ತು ಪ್ರತಿ ದಿನದ ಪರಿಶೀಲನಾ ವರದಿಗಳನ್ನು ರಾಜ್ಯ ಕಛೇರಿಗೆ ಸಲ್ಲಿಸಲು ಜವಾಬ್ದಾರರಾಗಿರುತ್ತಾರೆ.

E) NMMS ವಿನಾಯಿತಿ :

ಗ್ರಾಮ ಪಂಚಾಯತಿ ಅಥವಾ ಕಾರ್ಯಕ್ರಮ ಅಧಿಕಾರಿಗಳ ಲಾಗಿನ್ ಮೂಲಕ NMMS ವಿನಾಯಿತಿ ಪಡೆಯುವ ಮುನ್ನ ಸೂಕ್ತ ಪುರಾವೆಗಳನ್ನು upload ಮಾಡಲು ನರೇಗಾ ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗಿದೆ. Device not working ಅಥವಾ Network not available ಎಂದು ವಿನಾಯತಿಗಾಗಿ Mobile Screenshot, e-ticket upload ಮಾಡುವುದು ಕಡ್ಡಾಯವಾಗಿದೆ.

F) ಜಿಲ್ಲಾ ಮಟ್ಟದಲ್ಲಿ NMMS ಛಾಯಚಿತ್ರಗಳ Backup ತೆಗೆದುಕೊಳ್ಳಲು Hard disk ಗಳ ಖರೀದಿ:

▪️NMMS ಛಾಯಚಿತ್ರಗಳು ತಂತ್ರಾಂಶದಲ್ಲಿ 15 ದಿನ ಮಾತ್ರ ಲಭ್ಯವಿರುವುದರಿಂದ ಜಿಲ್ಲಾ ಮಟ್ಟದಲ್ಲಿ ತಾಲ್ಲೂಕುವಾರು, ಗ್ರಾಮ ಪಂಚಾಯತಿಯವಾರು ಪ್ರತಿ ಕಾಮಗಾರಿಯ ಪ್ರತಿ ದಿನದ ಛಾಯಚಿತ್ರಗಳನ್ನು Backup ತೆಗೆದುಕೊಳ್ಳುವುದು.

▪️ಇದರಿಂದ ಕೇಂದ್ರ ಸರ್ಕಾರದಿಂದ Monitoring Visit & Social Audit ಸಮಯದಲ್ಲಿ ಅಥವಾ ಇತರ ದೂರುಗಳು ದಾಖಲಾದಲ್ಲಿ ಛಾಯಚಿತ್ರಗಳ ದಾಖಲಾತಿಗಳನ್ನು Backup ನಿಂದ ಒದಗಿಸಬಹುದಾಗಿದೆ.

ಆದ್ದರಿಂದ ಜಿಲ್ಲೆಗಳಲ್ಲಿ NMMS ಛಾಯಚಿತ್ರಗಳನ್ನು Backup ನಿರ್ವಹಿಸಲು GeM Portal ನಿಂದ Hard disk ಗಳನ್ನು ಆಡಳಿತಾತ್ಮಕ ವೆಚ್ಚದಡಿ ಖರೀದಿಸಲು ಸೂಚಿಸಿರುತ್ತಾರೆ.

G) ಮಧ್ಯಾಹ್ನದ ಹಾಜರಾತಿ ಮತ್ತು ಛಾಯಚಿತ್ರಗಳನ್ನು ಕಡ್ಡಾಯಗೊಳಿಸುವ ಕುರಿತು-

▪️ಕ್ಷೇತ್ರಮಟ್ಟದ ಸಿಬ್ಬಂದಿಗಳು ಮದ್ಯಾಹ್ನದ ಹಾಜರಾತಿಯನ್ನು ಕಡ್ಡಾಯವಾಗಿ ದಾಖಲಿಸುವುದು.

ಮುಂದಿನ ದಿನಗಳಲ್ಲಿ ಮದ್ಯಾಹ್ನದ ಹಾಜರಾತಿ ಪಡೆಯದೇ NMR ಪಾವತಿಸುವ ಅಧಿಕಾರಿ/ಸಿಬ್ಬಂದಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು.

ಮಧ್ಯಾಹದ ಹಾಜರಾತಿ ಪಡೆಯದೆ Wage list ಸೃಜನೆ ಮಾಡದ ರೀತಿಯಲ್ಲಿ ತಂತ್ರಾಂಶದಲ್ಲಿ ಬದಲಾವಣೆ ಮಾಡಲಾಗುತ್ತಿದ್ದು, ಶೀಘ್ರದಲ್ಲಿಯೇ Live ಮಾಡಲಾಗುವ ಬಗ್ಗೆ, ಕೇಂದ್ರ ಸರ್ಕಾರವು ತಿಳಿಸಿರುತ್ತದೆ.

1. ಕ್ಷೇತ್ರಮಟ್ಟದ ಸಿಬ್ಬಂದಿಗಳಿಗೆ ತರಬೇತಿ ಆಯೋಜಿಸುವ ಕುರಿತು :

ಕ್ಷೇತ್ರಮಟ್ಟದ ಸಿಬ್ಬಂದಿಗಳಿಗೆ ಜಿಲ್ಲಾ ಪಂಚಾಯತಿಯಿಂದ NMMS ದುರ್ಬಳಕೆಯನ್ನು ತಡೆಗಟ್ಟಲು ಮತ್ತು ತಂತ್ರಾಂಶವನ್ನು ನ್ಯಾಯಯುತವಾಗಿ ಉಪಯೋಗಿಸುವ ಬಗ್ಗೆ ತರಬೇತಿ ನೀಡುವಂತೆ ನಿರ್ದೇಶಿಸಿರುತ್ತಾರೆ.

H. Zero Tolerance ನೀತಿ:

▪️NMMS ನ ದುರುಪಯೋಗ ಮತ್ತು ಅದರಿಂದ ಅಗುತ್ತಿರುವ ಅಕ್ರಮದ ಬಗ್ಗೆ ರಾಜ್ಯ ಕಛೇರಿಗೆ ಸಾಕಷ್ಟು ದೂರುಗಳು ದಾಖಲಾಗುತ್ತಿದೆ. ಮುಂದುವರೆದು, ಕೇಂದ್ರ ಸರ್ಕಾರವು NMMS ಹಾಜರಾತಿಯನ್ನು ಗಂಭೀರವಾಗಿ ಪರಿಗಣಿಸಿದ್ದು, NMMS ಹಾಜರಾತಿಯಲ್ಲಿ ಆಗುತ್ತಿರುವ ಲೋಪದೋಷಗಳನ್ನು ಗಂಭೀರವಾಗಿ ಪರಿಗಣಿಸಿದ್ದು ಅಕ್ರಮವೆಸಗುತ್ತಿರುವ ಸಿಬ್ಬಂದಿಗಳ ವಿರುದ್ಧ ನಿಯಮಾನುಸಾರ ಕ್ರಮ ವಹಿಸುವುದು.

▪️NMMS ವಿಚಾರವಾಗಿ ಕರ್ತವ್ಯಲೋಪ ಮತ್ತು ಆರ್ಥಿಕ ದುರ್ಬಳಕೆಗೆ ಕಾರಣ ಆಗಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.

ಮೇಲ್ಕಂಡ ಕ್ರಮಗಳು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ [MGNREGA]  ಯೋಜನೆಯ ಅನುಷ್ಠಾನದಲ್ಲಿ ವಿಶೇಷವಾಗಿ NMMS ನಡಿ ಪಾರದರ್ಶಕತೆ, ಹೊಣೆಗಾರಿಕೆಯನ್ನು ಪುನರ್ಸ್ಥಾಪಿಸಲು ಮತ್ತು ಸಾರ್ವಜನಿಕ ನಂಬಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು NMMS ಫೋಟೋ ಪರಿಶೀಲನೆಗೆ ರೂಪುರೇಷೆಗಳನ್ನು ನೀಡಿದ್ದು ಅದರಂತೆ ತಪ್ಪದೇ ಪಾಲಿಸಲು ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನಿರ್ದೇಶಿಸಿದೆ. ಈ ಕುರಿತು ಆದೇಶ.

CLICK HERE TO DOWNLOAD 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!